ಪುತ್ತೂರು

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಉತ್ಸವ’ ಕ್ಕೆ ಚಾಲನೆ | ಫೆ.29 ರ ತನಕ ನಡೆಯಲಿದೆ ಕರಿಮಣಿ ಉತ್ಸವ

ಪುತ್ತೂರು:ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್‌ರಸ್ತೆ ಮುಳಿಯ ಜ್ಯುವೆಲ್ಸ್‌ನಲ್ಲಿ 15 ದಿನಗಳ ಕಾಲ ನಡೆಯಲಿರುವ `ಕರಿಮಣಿ ಉತ್ಸವ’ಕ್ಕೆ ಫೆ.16 ರಂದು ಚಾಲನೆ ನೀಡಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾ ಕರಿಮಣಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಾಂಗಲ್ಯದಲ್ಲಿ ಮಂಗಲ ಶಬ್ಧವಿದೆ. ಮಂಗಲವನ್ನು ಕರುಣಿಸುವಂತ ದ್ರವ್ಯದಿಂದ ತಯಾರಿಸಲ್ಪಟ್ಟ ವಿಶೇಷ ಚಿನ್ನದಿಂದ ತಯಾರಿಸಿದ ಕರಿಮಣಿ ಧಾರಣೆ ಮಾಡಿದರೆ ಸೌಭಾಗ್ಯ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮಂಗಳಸೂತ್ರವನ್ನು ಧರಿಸಿದಾಗಲೇ ಮುತ್ತೈದೆಭಾಗ್ಯದ ಜೊತೆಗೆ ಗೃಹಿಣಿಗೆ ಸಂಸ್ಕಾರ ದೊರೆಯುತ್ತದೆ. ಇಂತಹ ಕರಿಮಣಿಗಳು ಮುಳಿಯದಲ್ಲಿ […]

ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಉತ್ಸವ’ ಕ್ಕೆ ಚಾಲನೆ | ಫೆ.29 ರ ತನಕ ನಡೆಯಲಿದೆ ಕರಿಮಣಿ ಉತ್ಸವ Read More »

ಕೂಲಿ ಕಾರ್ಮಿಕ ಜಾರಪ್ಪ ನಾಯ್ಕ ನೇಣು ಬಿಗಿದು ಆತ್ಮಹತ್ಯೆ !

ವಿಟ್ಲ: ಕೂಲಿ ಕಾರ್ಮಿಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕುಂಟುಕುಡೇಲು ಎಂಬಲ್ಲಿ ಇಂದು ನಡೆದಿದೆ. ಕೂಲಿ ಕಾರ್ಮಿಕ ಜಾರಪ್ಪ ನಾಯ್ಕ(60) ಆತ್ಮಹತ್ಯೆ ಮಾಡಿಕೊಂಡವರು. ಜಾರಪ್ಪ ನಾಯ್ಕ ಅವರು ಎಂದಿನಂತೆ ಸ್ಥಳೀಯರೊಬ್ಬರ ಮನೆಯ ತೋಟದ ಕೆಲಸಕ್ಕೆ  ತೆರಳಿದ್ದರು. ಆದರೆ ಕೆಲಸಕ್ಕೆ ಎಷ್ಟು ಹೊತ್ತಾದರೂ ಬಾರದ ಹಿನ್ನಲೆಯಲ್ಲಿ ಮನೆಯವರಲ್ಲಿ ವಿಚಾರಿಸಿದ್ದರು. ಬಳಿಕ ಹುಡುಕಾಡಿದಾಗ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ವಿಟ್ಲ ಪೋಲೀಸರು ಸ್ಥಳಕ್ಕೆ ಆಗಮಿಸಿ ಮೃತ ಶರೀರವನ್ನು

ಕೂಲಿ ಕಾರ್ಮಿಕ ಜಾರಪ್ಪ ನಾಯ್ಕ ನೇಣು ಬಿಗಿದು ಆತ್ಮಹತ್ಯೆ ! Read More »

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ?: ಅಶ್ವಿನ್ ಎಲ್. ಶೆಟ್ಟಿ| ಭಾಗ -5

ಕರ್ನಾಟಕದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಏನು ಹೇಳಿತ್ತೆಂದರೆ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲೂ 75% ವರೆಗೆ ಮೀಸಲಾತಿಯನ್ನು ಕೊಡಲು ಬಯಸುತ್ತೇವೆ ಎಂದು ತಾತ್ಕಾಲಿಕ ಮೀಸಲಾತಿಯನ್ನು ನಾನು ಬೆಂಬಲಿಸುತ್ತೇನೆ ಏಕೆಂದರೆ ಇದೀಗ ದೇಶದಲ್ಲಿ ಸಹಾಯ ಮಾಡುವ ಅವಶ್ಯಕತೆಯಿದೆ. ಹಿಂದಿನ ಜಾತಿ, ಈ ಮೀಸಲಾತಿಗಳು ಬೇಕು, ಆದರೆ ಇಂದು ನಾವು ದೇಶವನ್ನು ಆರ್ಥಿಕವಾಗಿ ಹೇಗೆ ಬೆಳೆಸಬಹುದು ಎಂಬುದರ ಕುರಿತು ಆಲೋಚನೆಯನ್ನು ಮಾಡಬೇಕಾಗುತ್ತದೆ. ಪ್ರತಿಯೊಂದು ಜಾತಿಯು  ಆರ್ಥಿಕವಾಗಿ ಒಂದು ಹಂತವನ್ನು ತಲುಪಿದ ನಂತರ ಅವರಿಗೆ ಮೀಸಲಾತಿಯ  ಅವಶ್ಯಕತೆ ಇರುವುದಿಲ್ಲ. ಹಾಗೆಯೇ

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ?: ಅಶ್ವಿನ್ ಎಲ್. ಶೆಟ್ಟಿ| ಭಾಗ -5 Read More »

ಕೊಯಿಲ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನಕ್ಕೆ ಆಗ್ರಹ | ಸಿಐಟಿಯುನಿಂದ ಸರ್ಕಾರಕ್ಕೆ ಮನವಿ

ಪುತ್ತೂರು: ಪುತ್ತೂರು ತಾಲೂಕಿನ ಕೊಯಿಲ ಪಶು ಸಂವರ್ಧನ ತರಬೇತಿ ಕೇಂದ್ರ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ನೀಡಬೇಕು. ಭದ್ರತೆ ಇಲ್ಲದ ವ್ಯವಸ್ಥೆಯಲ್ಲಿ ದುಡಿಯುವ ಈ ಕಾರ್ಮಿಕರಿಗೆ ಯಾವುದೇ ಸವಲತ್ತುಗಳಿಲ್ಲ. ಕೇಂದ್ರ ಸರ್ಕಾರ ಈ ಗುತ್ತಿಗೆ ಆಧಾರಿತ ಕಾರ್ಮಿಕ ಪದ್ದತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಸಿಐಟಿಯು ವತಿಯಿಂದ ಶುಕ್ರವಾರ ಪುತ್ತೂರು ಸಹಾಯಕ ಆಯುಕ್ತರ ಮೂಲಕ ಮನವಿ ನೀಡಲಾಯಿತು. ಇದರ

ಕೊಯಿಲ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನಕ್ಕೆ ಆಗ್ರಹ | ಸಿಐಟಿಯುನಿಂದ ಸರ್ಕಾರಕ್ಕೆ ಮನವಿ Read More »

ಪೆರ್ನೆ ನೇಂಜದಲ್ಲಿ ಸರ್ಪ ಸಂಸ್ಕಾರ

ಪೆರ್ನೆ: ಕಳೆದ ಕೆಲವು ದಿನಗಳ ಹಿಂದೆ ಪೆರ್ನೆ ಜೀವನ್ ಜ್ಯೋತಿ ಅಂಗಡಿ ಮುಂಭಾಗದ ನೇಂಜ ಮಾರ್ಗದಲ್ಲಿ ಆಕಸ್ಮಿಕ ದುರ್ಮರಣಕ್ಕೀಡಾದ ನಾಗರ ಹಾವಿನ ಬಗ್ಗೆ ಪರಿಸರ ಕಲ್ಯಾಣ, ದೋಷ ತಡೆಗಾಗಿ ಸರ್ಪ ಸಂಸ್ಕಾರ ಪಿಂಡ ಪ್ರಧಾನ ಕ್ರಿಯೆ ಶುಕ್ರವಾರ ನಡೆಯಿತು. ವಿದ್ವಾಂಸರಾದ ಕಶೆಕೋಡಿ ಸೂರ್ಯನಾರಾಯಣ ಭಟ್  ನೇತೃತ್ವದಲ್ಲಿ ಬೆಳಿಗ್ಗೆ 8:00 ಗಂಟೆಗೆ ಆರಂಭಿಸಿ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ನಂತರ ಅನ್ನ ಪ್ರಸಾದ ಸ್ವೀಕಾರದೊಂದಿಗೆ  ಸಂಪನ್ನಗೊಂಡಿತು. ಈ ಪುಣ್ಯ ಕ್ರಿಯೆಯಲ್ಲಿ ಗ್ರಾಮಸ್ಥರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ನೆ ವಲಯ ಮೇಲ್ವಿಚಾರಕರು

ಪೆರ್ನೆ ನೇಂಜದಲ್ಲಿ ಸರ್ಪ ಸಂಸ್ಕಾರ Read More »

ಮಾ.3-4: ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ, ಪ್ರತಿಷ್ಠಾ ವರ್ಧಂತಿ

ಪುತ್ತೂರು: ಬನ್ನೂರು ಗ್ರಾಮದ ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ ಹಾಗೂ ಪ್ರತಿಷ್ಠಾವರ್ಧಂತಿ ಮಾ.3 ಹಾಗೂ 4 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ಮಾ.3 ಭಾನುವಾರ ವೇ. ಮೂ. ಮಿತ್ತೂರು ತಿರುಮಲೇಶ್ವರ ಭಟ್ಟರ ನೇತೃತ್ವದಲ್ಲಿ ಮೂಡಪ್ಪಸೇವೆ ನಡೆಯಲಿದೆ. ಸಂಜೆ 4 ರಿಂದ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ, ರಾತ್ರಿ 7 ರಿಂದ ಸಂಕಲ್ಪ, ಮೂಡಪ್ಪ ಸಮರ್ಪಣೆ, ರಾತ್ರಿ 9 ರಿಂದ ರಂಗಪೂಜೆ, ಕಲ್ಪೋಕ್ತ

ಮಾ.3-4: ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಮೂಡಪ್ಪ ಸೇವೆ, ಪ್ರತಿಷ್ಠಾ ವರ್ಧಂತಿ Read More »

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ |ಉಗ್ರಾಣ ಮುಹೂರ್ತ, ಪಾಕಶಾಲೆ, ಕಾರ್ಯಾಲಯ ಉದ್ಘಾಟನೆ

ಪುತ್ತೂರು : ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲಿಸಲ್ಪಡುವ ಏಕೈಕ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೊತ್ಸವಕ್ಕೆ ಇಂದು ವೈಭವದ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಫೆ.16ರಂದು ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕಶಾಲೆ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ ,ಗೊನೆ ಮುಹೂರ್ತ ನೆರವೇರಿತು. ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಅರ್ಚಕರಾದ ಶ್ರೀನಿವಾಸ್‌ ಹೆಬ್ಬಾರ್‌ ,ಪ್ರವೀಣ್‌ ಭಟ್‌ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.ಬಳಿಕ ಉಗ್ರಾಣ ಮುಹೂರ್ತದ ದೀಪ ಪ್ರಜ್ವಲನೆಯನ್ನು ಪೆರುವಾಜೆ

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ |ಉಗ್ರಾಣ ಮುಹೂರ್ತ, ಪಾಕಶಾಲೆ, ಕಾರ್ಯಾಲಯ ಉದ್ಘಾಟನೆ Read More »

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರಥಸಪ್ತಮಿ ಆಚರಣೆ

ಪುತ್ತೂರು:  ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರಥಸಪ್ತಮಿ ಆಚರಣೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ, ಪ್ರತೀ ವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುವ ಸೂರ್ಯ ತನ್ನ ಮೂಲಕ ಭುವಿಯ ನಿವಾಸಿಗಳಿಗೆ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ಮೇಘಮಾಸ, ಶುಕ್ಲ ಪಕ್ಷ, ಸಪ್ತಮಿಯಾದ ಇಂದು ರಥಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ಆರೋಗ್ಯದಾಯಿ. ವೈಜ್ಞಾನಿಕವಾಗಿ ಇದು ಸತ್ಯ. ಈತನ ಕಿರಣಗಳಲ್ಲಿ ವಿಟಮಿನ್ ” ಡಿ ” ಹೇರಳವಾಗಿದೆ ಹಾಗೂ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರಥಸಪ್ತಮಿ ಆಚರಣೆ Read More »

ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಪುತ್ತೂರು: ವಿದ್ಯಾಸಂಸ್ಥೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸುವವರು ಹಿರಿಯ ವಿದ್ಯಾರ್ಥಿಗಳಾಗಿದ್ದು, ಅವರೇ ಕಾಲೇಜಿನ ರಾಯಭಾರಿಗಳಾಗಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಕಾಲೇಜಿಗೆ ಭೇಟಿ ನೀಡಿ ತಮ್ಮಿಂದಾದ ಸಹಾಯವನ್ನು ನೀಡುತ್ತಾ ಬಂದಿದ್ದಾರೆ. ಸಂಸ್ಥೆಯ ಬೆಳವಣಿಗೆ ದೃಷ್ಟಿಯಿಂದ ಹಿರಿಯ ವಿದ್ಯಾರ್ಥಿಗಳ ಸಂಘ ಬಹಳ ಅಗತ್ಯ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಗಣಪತಿ ಭಟ್ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ 2000-03 ರ ಸಾಲಿನ ಕಲಾ ಪದವಿ ವಿದ್ಯಾರ್ಥಿಗಳು ಆಯೋಜಿಸಿದ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ

ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ Read More »

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪುತ್ತೂರಿನಲ್ಲಿ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮ

ಪುತ್ತೂರು: ಸಮಾಜದಲ್ಲಿ ಜಾತಿಪದ್ಧತಿಯಂತಹ ದುಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದ ದಾರ್ಶನಿಕರು ಮಾನವ ಜನ್ಮಕ್ಕೆ ಅಭೂತಪೂರ್ವ ಚಿಂತನೆಗಳನ್ನು ನೀಡುವ ಮೂಲಕ ಈ ಸಮಾಜದಲ್ಲಿ ಒಂದಾಗಿ ಬದುಕಬೇಕು ಎನ್ನುವ ಪಾಠ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಾವು ನಡೆದುಕೊಳ್ಳಬೇಕಾಗಿದೆ ಎಂದು ಪುತ್ತೂರು ತಹಶೀಲ್ದಾರ್ ಪುರಂದರ ಅವರು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ಆಡಳಿತ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪುತ್ತೂರಿನಲ್ಲಿ ಸಂತ ಸೇವಾಲಾಲ್ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣಾ ಕಾರ್ಯಕ್ರಮ Read More »

error: Content is protected !!
Scroll to Top