ಪುತ್ತೂರು

ವೀರಮಂಗಲ ಕುಮಾರಧಾರ ನದಿಯಲ್ಲಿ ಮರಳು ದಂಧೆ | ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರು ಅವಬೃತ ಸ್ನಾನಕ್ಕೆ ತೆರಳುವ ವೀರಮಂಗಲ ಕುಮಾರಧಾರ ನದಿಯಲ್ಲಿ ಅವ್ಯಾಹತವಾಗಿ ಮರಳು ತೆಗೆದು ರಾಶಿ ಹಾಕಲಾಗಿದ್ದು, ಇದೀಗ ಸ್ಥಳೀಯ ಜನರ ವಿರೋಧಕ್ಕೆ ಕಾರಣವಾಗಿದೆ. ಶ್ರೀ ಮಹಾಲಿಂಗೇಶ್ವರ ದೇವರು ಜಳಕ ಮಾಡುವ ಸ್ಥಳದಿಂದಲೇ ಮರಳುಗಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನದಿಯ ಎರಡೂ ಬದಿಗಳಲ್ಲಿ ಲೋಡುಗಟ್ಟಲೆ ಮರಳು ರಾಶಿ ಹಾಕಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಳು ರಾಶಿ ಹಾಕಿದರೂ ಸಂಬಂಧ ಪಟ್ಟ ಅಧಿಕಾರಿಗಳು ಇನ್ನೂ ಗಮನಹರಿಸದಿರುವುದು ದುರಾದೃಷ್ಟ. ಈ ಕುರಿತು ಭೂವಿಜ್ಞಾನ ಮತ್ತು ಗಣಿ ಇಲಾಖೆಯ […]

ವೀರಮಂಗಲ ಕುಮಾರಧಾರ ನದಿಯಲ್ಲಿ ಮರಳು ದಂಧೆ | ಎಚ್ಚೆತ್ತುಕೊಳ್ಳದ ಅಧಿಕಾರಿಗಳು Read More »

ಶಾಲೆ ಹೊರತು ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು | 159 ವರ್ಷಗಳ ಇತಿಹಾಸ ಹೊಂದಿರುವ ನೆಲ್ಲಿಕಟ್ಟೆ ಶಾಲಾ ಎಸ್‍.ಡಿ.ಎಂ.ಸಿ, ಪೋಷಕರಿಂದ ಆಗ್ರಹ

ಪುತ್ತೂರು: ಸುಮಾರು 159 ವರ್ಷಗಳ ಇತಿಹಾಸವಿರುವ ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಕಟ್ಟಡವಲ್ಲದೆ ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು ಎಂದು ಶಾಲಾ ಎಸ್‍. ಡಿ.ಎಂ.ಸಿ, ಮಕ್ಕಳ ಪೋಷಕರು ಹಾಗೂ ಸ್ಥಳೀಯರು ಬುಧವಾರ ಸಭೆ ಸೇರಿ ಆಗ್ರಹಿಸಿದರು. ಈ ಶಾಲಾ ಆವರಣದಲ್ಲಿ ಬೇರೆ ಸರಕಾರಿ ಕಟ್ಟಡ ನಿರ್ಮಾಣಕ್ಕೆ ಹುನ್ನಾರ ನಡೆಯುತ್ತಿದ್ದು, ಈ ನೆಪವಿಟ್ಟುಕೊಂಡು ರಾತ್ರಿ ಶಾಲಾ ಆವರಣದಲ್ಲಿ ತಡರಾತ್ರಿ ವರೆಗೂ ಬೇರೆ ಬೇರೆ ಚಟುವಟಿಕೆಗಳು ನಡೆಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದರ ಜತೆಗೆ ಶಾಲಾ ಕಟ್ಟಡ ಹೊರತುಪಡಿಸಿ

ಶಾಲೆ ಹೊರತು ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು | 159 ವರ್ಷಗಳ ಇತಿಹಾಸ ಹೊಂದಿರುವ ನೆಲ್ಲಿಕಟ್ಟೆ ಶಾಲಾ ಎಸ್‍.ಡಿ.ಎಂ.ಸಿ, ಪೋಷಕರಿಂದ ಆಗ್ರಹ Read More »

ಫೆ.24,25,26 : ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ಅರ್ಪಿಸುವ ಸಾಂಸ್ಕೃತಿಕ ಕಲಾ ಸಂಭ್ರಮ ‘ಕಲೋಪಾಸನಾ-2024’ | ಮೂರು ದಿನಗಳ ಕಾಲ ಮೇಳೈಸಲಿದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಪುತ್ತೂರು: ನಗರದ ಹೊರವಲಯದ ಪರ್ಲಡ್ಕದಲ್ಲಿರುವ ಕಾರ್ಯಾಚರಿಸುತ್ತಿರುವ ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ಅರ್ಪಿಸುವ ಸಾಂಸ್ಕೃತಿಕ ಕಲಾ ಸಂಭ್ರಮ ‘ಕಲೋಪಾಸನಾ-2024’ ಫೆ.24, 25 ಹಾಗೂ 26 ರಂದು ಮೂರು ದಿನಗಳ ಕಾಲ ಸಂಜೆ ಹೊತ್ತಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾರಸಿಕರ ಮನ ಸೆಳೆಯಲಿದೆ ಎಂದು ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ 20ನೇ ವರ್ಷದ ಸಾಂಸ್ಕೃತಿಕ ಕಲಾ ಸಂಭ್ರಮ ಇದಾಗಿದ್ದು, ಕಳೆದ 19

ಫೆ.24,25,26 : ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್‍ ಸೆಂಟರ್ ಅರ್ಪಿಸುವ ಸಾಂಸ್ಕೃತಿಕ ಕಲಾ ಸಂಭ್ರಮ ‘ಕಲೋಪಾಸನಾ-2024’ | ಮೂರು ದಿನಗಳ ಕಾಲ ಮೇಳೈಸಲಿದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು Read More »

ಫೆ.24 : ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ 13ನೇ ಸರಣಿ ಕಾರ್ಯಕ್ರಮ

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಮಹಾಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗದ  ಸಂಯೋಜನೆಯಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ ಅಂಗವಾಗಿ ಗ್ರಾಮ ಸಾಹಿತ್ಯ ಸಂಭ್ರಮ – 2024 13ನೇ ಸರಣಿ ಕಾರ್ಯಕ್ರಮ ಫೆ.24 ಶನಿವಾರ ಬೆಳಗ್ಗೆ 10 ರಿಂದ ನಿಡ್ಪಳ್ಳಿ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ 8ನೇ ತರಗತಿ

ಫೆ.24 : ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನದ 13ನೇ ಸರಣಿ ಕಾರ್ಯಕ್ರಮ Read More »

ಶಕ್ತೀ ವಂದನಾ ಕಾರ್ಯಕ್ರಮ

ವಿಟ್ಲ: ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತೀ ವಂದನಾ ಕಾರ್ಯಕ್ರಮ ವಿಟ್ಲ ಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಜೀವಿನಿ ತಾಲೂಕು ನಿರ್ವಹಣಾ ಘಟಕ ಮೇಲ್ವಿಚಾರಕಿ ದೀಕ್ಷಿತಾ, ಎಂ.ಬಿ.ಕೆ ಸೌಮ್ಯ ಹಾಗೂ ಧರ್ಮಸ್ಥಳ ಗ್ರಾಮ ಅಭಿವೃದ್ದಿ ಸೇವಾ ಪ್ರತಿನಿಧಿ ಯಶೋಧ ಅವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪುನೀತ್ ಮಾಡತ್ತಾರ್ ಅಧ್ಯಕ್ಷತೆ ವಹಿಸಿದ್ದರು, ಪುತ್ತೂರು ಮಂಡಲ ಶಕ್ತೀವಂದನಾ ಪ್ರಮುಖ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹರಿಪ್ರಸಾದ್ ಯಾದವ್, ಗ್ರಾಪಂ.ಉಪಾಧ್ಯಕ್ಷೆ ರೋಹಿಣಿ, ಸೊಸೈಟಿ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ಗ್ರಾಪಂ.ಸದಸ್ಯರಾದ

ಶಕ್ತೀ ವಂದನಾ ಕಾರ್ಯಕ್ರಮ Read More »

ಟಿಪ್ಪರ್-ಆಕ್ಟಿವಾ ಡಿಕ್ಕಿ : ಆಕ್ಟಿವಾ ಸವಾರನಿಗೆ ಗಾಯ !

ಪುತ್ತೂರು: ಆಕ್ಟಿವಾ ಹಾಗೂ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಕ್ಟಿವಾ ಸವಾರ ಗಾಯಗೊಂಡ ಘಟನೆ ದರ್ಬೆ ಬೈಪಾಸ್ ಸರ್ಕಲ್ ಬಳಿ ನಡೆದಿದೆ. ದಿವಾಕರ ಮಡಿವಾಳ ಗಾಯಗೊಂಡ ಆಕ್ಟಿವಾ ಸವಾರ. ಅಪಘಾತ ನಡೆದ ತಕ್ಷಣ ಗಾಯಾಳುವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಟಿಪ್ಪರ್-ಆಕ್ಟಿವಾ ಡಿಕ್ಕಿ : ಆಕ್ಟಿವಾ ಸವಾರನಿಗೆ ಗಾಯ ! Read More »

ವಿಕಿಪೀಡಿಯ ಜ್ಞಾನವನ್ನು ತಿಳಿದುಕೊಳ್ಳುವ ಜೊತೆ ಹಂಚುವ ಕೆಲಸ ಮಾಡುತ್ತಿದೆ : ದುರ್ಗಾ ಪ್ರಸನ್ನ

ಪುತ್ತೂರು:  ಮಾಹಿತಿ ಎಲ್ಲಿಂದ, ಯಾವ ಮೂಲದಿಂದ ಹಂಚುತ್ತೇವೆ ಎನ್ನುವುದನ್ನು ತಿಳಿಯುವುದು ಮುಖ್ಯ. ಅಕ್ಷರ ದೋಷಗಳ ತಿದ್ದುಪಡಿ ಮಾಡುವುದು, ಸರಳಭಾಷೆಯಲ್ಲಿ ವಿಷಯವನ್ನು ತಲುಪಿಸುವ ಕೆಲಸ ಎಂದು ಆಧುನಿಕ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ಸಹಾಯಕವಾಗಿದೆ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಪಕಿ  ದುರ್ಗಾ ಪ್ರಸನ್ನ  ಹೇಳಿದರು. ಅವರು ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಐ ಕ್ಯೂ ಎ ಸಿ ಇದರ ಆಶ್ರಯದಲ್ಲಿ ನಡೆದ ವಿಕಿಪೀಡಿಯ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿಕಿಪೀಡಿಯ ಜ್ಞಾನ

ವಿಕಿಪೀಡಿಯ ಜ್ಞಾನವನ್ನು ತಿಳಿದುಕೊಳ್ಳುವ ಜೊತೆ ಹಂಚುವ ಕೆಲಸ ಮಾಡುತ್ತಿದೆ : ದುರ್ಗಾ ಪ್ರಸನ್ನ Read More »

ಫೆ.22: ಸುಲ್ತಾನ್ ಡೈಮಂಡ್ & ಗೋಲ್ಡ್ ಪುತ್ತೂರು ಶೋರೂಂ ಶುಭಾರಂಭ | ಉದ್ಘಾಟನೆ ಮಾಡಲಿದ್ದಾರೆ ಖ್ಯಾತ ಚಿತ್ರನಟಿ ಪ್ರಿಯಾಮಣಿ

ಪುತ್ತೂರು: ವಿಶ್ವಾಸಾರ್ಹ ಆಭರಣ ಬ್ರಾಂಡ್ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ನ 10ನೇ ಶಾಖೆ ಪುತ್ತೂರಿನ ಏಳ್ಮುಡಿಯಲ್ಲಿರುವ ರಾಮ್‍ ರಾಜ್ ಕಾಟನ್ ಎದುರುಗಡೆ ನೂತನವಾಗಿ ನಿರ್ಮಾಣಗೊಂಡಿರುವ ತಾಜ್ ಟವರ್ಸ್‍ ನಲ್ಲಿ  ಫೆ.22 ಗುರುವಾರ ಶುಭಾರಂಭಗೊಳ್ಳಲಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಜನಪ್ರಿಯ ಚಿತ್ರನಟಿ ಪ್ರಿಯಾಮಣಿ ಅವರಿಂದ ಮಳಿಗೆ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭಾಗವಹಿಸಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ವೈವಿಧ್ಯಮಯ ವಜ್ರದ ಸಂಗ್ರಹವನ್ನು ಅನಾವರಣ ಗೊಳಿಸಲಿದ್ದಾರೆ. ಸ್ಥಳೀಯ ನಗರಸಭಾ ಸದಸ್ಯೆ

ಫೆ.22: ಸುಲ್ತಾನ್ ಡೈಮಂಡ್ & ಗೋಲ್ಡ್ ಪುತ್ತೂರು ಶೋರೂಂ ಶುಭಾರಂಭ | ಉದ್ಘಾಟನೆ ಮಾಡಲಿದ್ದಾರೆ ಖ್ಯಾತ ಚಿತ್ರನಟಿ ಪ್ರಿಯಾಮಣಿ Read More »

ಮಾರಕಾಸ್ತ್ರದೊಂದಿಗೆ ಕಾರಿನಲ್ಲಿ ತಿರುಗುತ್ತಿದ್ದ ನಾಲ್ವರ ಬಂಧನ | ಪ್ರಕರಣ ದಾಖಲು

ಪುತ್ತೂರು: ಮಾರಕಾಸ್ತ್ರದೊಂದಿಗೆ ತಡ ರಾತ್ರಿ ಕಾರಿನಲ್ಲಿ ತಿರುಗಾಡುತ್ತಿದ್ದ ನಾಲ್ವರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಗೋಳ್ತಮಜಲು ನಿವಾಸಿ ಕಿಶೋರ್ (36), ಪುತ್ತೂರು ತಾಲೂಕಿನ ಕಬಕ ಗ್ರಾಮದ ಮನೋಜ್ (23), ಆಶಿಕ್ (28) ಹಾಗೂ ಪಡ್ನೂರು ಗ್ರಾಮದ ಸನತ್ ಕುಮಾರ್ (24) ಬಂಧಿತ ವ್ಯಕ್ತಿಗಳು. ಸೋಮವಾರ ತಡರಾತ್ರಿ ಪೊಲೀಸ್ ನಿರೀಕ್ಷಕ ಸತೀಶ್ ಜೆ.ಜೆ. ಸಿಬ್ಬಂದಿಗಳೊಂದಿಗೆ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ವೃತ್ತದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಮಾರಕಾಸ್ತ್ರ ಪತ್ತೆಯಾಗಿದೆ.

ಮಾರಕಾಸ್ತ್ರದೊಂದಿಗೆ ಕಾರಿನಲ್ಲಿ ತಿರುಗುತ್ತಿದ್ದ ನಾಲ್ವರ ಬಂಧನ | ಪ್ರಕರಣ ದಾಖಲು Read More »

ಕಬಡ್ಡಿ ಪಂದ್ಯಾಟ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡ ಚಾಂಪಿಯನ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮ್ಯಾಟ್ ಅಂಕಣದಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ಮಂಗಳೂರು ವಿಭಾಗದ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಅತ್ಯುತ್ತಮ ನಿರ್ವಹಣೆ ನೀಡಿದ ವಿವೇಕಾನಂದ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ ತಂಡ ತುಮಕೂರಿನಲ್ಲಿ ಫೆ.28 ಹಾಗೂ 29 ರಂದು

ಕಬಡ್ಡಿ ಪಂದ್ಯಾಟ | ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡ ಚಾಂಪಿಯನ್ Read More »

error: Content is protected !!
Scroll to Top