ಅರುಣ್ ಕುಮಾರ್ ಪುತ್ತಿಲ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ | ಆತ್ಮೀಯವಾಗಿ ಬರಮಾಡಿಕೊಂಡ ಬಿಜೆಪಿ ಪ್ರಮುಖರು
ಪುತ್ತೂರು: ಬಿಜೆಪಿ ಜತೆ ಪುತ್ತಿಲ ಪರಿವಾರ ವಿಲೀನಗೊಂಡ ಬೆನ್ನಲ್ಲೇ ಅರುಣ್ ಕುಮಾರ್ ಪುತ್ತಿಲ ಪುತ್ತೂರು ಬಿಜೆಪಿ ಕಚೇರಿಗೆ ಭಾನುವಾರ ಭೇಟಿ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಪುತ್ತಿಲರನ್ನು ಸ್ವಾಗತಿಸಿದರು. ಪುತ್ತಿಲರ ಜತೆ ಪ್ರಸನ್ನ ಕುಮಾರ್ ಮಾರ್ತ, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ ಸಹಿತ ಹಲವಾರು ಮಂದಿ ಇದ್ದರು. ಬಿಜೆಪಿ ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ಜಿಲ್ಲಾ ಬಿಜೆಪಿ ಪ್ರಮುಖರಾದ ಬೂಡಿಯಾರ್ ರಾಧಾಕೃಷ್ಣ […]










