ಏ.15 : ಪುತ್ತೂರಿನಲ್ಲಿ ಮೇಳೈಸಲಿದೆ “ಪುತ್ತೂರ ಹಬ್ಬ” | ಟೈಮ್ & ಟೈಡ್ ಆಯೋಜನೆ, ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನ ರ್ ನೊಂದಿಗೆ ಶ್ರೀ ಮಂಜುನಾಥ ಇಲೆಕ್ಟ್ರೋನಿಕ್ಸ್ & ಫರ್ನಿಚರ್ಸ್ ಪ್ರಸ್ತುತಪಡಿಸಲಿದೆ
ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೇಟೆ ಸವಾರಿ ಹಾಗೂ ಕಟ್ಟೆ ಪೂಜೆ ಪ್ರಯುಕ್ತ ದರ್ಬೆ ಶ್ರೀ ಮಂಜುನಾಥೇಶ್ವರ ಇಲೆಕ್ಟ್ರೋನಿಕ್ಸ್ & ಫರ್ನೀಚರ್ಸ್ ಪ್ರಸ್ತುತಪಡಿಸುವ “ಪುತ್ತೂರ ಹಬ್ಬ” ಎಂಬ ಬೃಹತ್ ಮನರಂಜನಾ ಕಾರ್ಯಕ್ರಮವನ್ನು ಏ.15 ಸೋಮವಾರ ಸಂಜೆ 6.30ರಿಂದ ಟೈಮ್ & ಟೈಡ್ ಇವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಆಯೋಜಿಸಲಿದೆ. ಪುತ್ತೂರು ನಗರದ ಇತಿಹಾಸದಲ್ಲಿಯೇ ಬೃಹತ್ ಮಟ್ಟದ ಪ್ರಥಮ ಕಾರ್ಯಕ್ರಮ ಇದಾಗಿದ್ದು, ಪುತ್ತೂರಿನ ಬನ್ನೂರು ಜೋಡುಕಟ್ಟೆ ಮೈದಾನದಲ್ಲಿ ಜರಗಲಿದೆ. […]










