ಪುತ್ತೂರು

ಅಬುಧಾಬಿ ‘ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ ಅಧ್ಯಕ್ಷರಾಗಿ ಪುತ್ತೂರಿನ ಮಿತ್ರಂಪಾಡಿ ಜಯರಾಮ ರೈ ಆಯ್ಕೆ

ಪುತ್ತೂರು: ಯುಎಇ ನ ಅಬುಧಾಬಿಯಲ್ಲಿರುವ ಪ್ರತಿಷ್ಠಿತ ‘ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ (ಐ.ಎಸ್ .ಸಿ.) ಅಧ್ಯಕ್ಷರಾಗಿ ಪುತ್ತೂರಿನ ಮಿತ್ರಂಪಾಡಿ ಜಯರಾಮ ರೈ ಆಯ್ಕೆಯಾಗಿದ್ದಾರೆ. ಜಯರಾಮ ರೈಯವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಸಲ್ಪಡುವ ಗ್ರಾಮ ಸಾಹಿತ್ಯ ಸಂಭ್ರಮದ ಮಹಾಪೋಷಕರಾಗಿದ್ದಾರೆ. ಜಗತ್ತಿನ ನಂ.1 ಅನಿವಾಸಿ ಭಾರತೀಯ ಸಂಸ್ಥೆಯ ಚುನಾವಾಣೆಯಲ್ಲಿ ಅತೀ ಹೆಚ್ಚು ಮತಗಳ ಅಂತರದ ಗೆಲವು ಸಾಧಿಸಿದ ಹೆಮ್ಮೆ ಅವರದ್ದು. ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದನೆ ಸಲ್ಲಿಸಿದೆ.

ಅಬುಧಾಬಿ ‘ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್’ ಅಧ್ಯಕ್ಷರಾಗಿ ಪುತ್ತೂರಿನ ಮಿತ್ರಂಪಾಡಿ ಜಯರಾಮ ರೈ ಆಯ್ಕೆ Read More »

ಸಿಬಿಎಸ್‌ಇ ಹತ್ತನೆಯ ತರಗತಿ ಫಲಿತಾಂಶ |100% ಫಲಿತಾಂಶ | ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯ ವಿದ್ಯಾರ್ಥಿಗಳು 2023-24ನೇ ಸಾಲಿನ ಹತ್ತನೆಯ ತರಗತಿ ಪರೀಕ್ಷೆಗಳಲ್ಲಿ ದಾಖಲೆಯ ಫಲಿತಾಂಶ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳೂ ತೇರ್ಗಡೆಯಾಗಿ ಸಂಸ್ಥೆ ನೂರು ಶೇಕಡಾ ಫಲಿತಾಂಶ ದಾಖಲಿಸಿದೆ. 17 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದರೆ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ತಾಲೂಕಿನ ಮೊದಲ ಎಂಟು ರ್ಯಾಂಕ್‌ ಗಳನ್ನು ಅಂಬಿಕಾ ವಿದ್ಯಾಲಯ ತನ್ನದಾಗಿಸಿಕೊಂಡಿದೆ. ಶ್ರೀಲಕ್ಷ್ಮೀ ಎಸ್.ಸಿ. 96.2% ಫಲಿತಾಂಶ ಪಡೆದು ತಾಲೂಕಿಗೆ ಪ್ರಥಮ, ಜಸ್ವಿತ್

ಸಿಬಿಎಸ್‌ಇ ಹತ್ತನೆಯ ತರಗತಿ ಫಲಿತಾಂಶ |100% ಫಲಿತಾಂಶ | ತಾಲೂಕಿನ ಮೊದಲ ಎಂಟು ಸ್ಥಾನಗಳನ್ನು ಬಾಚಿಕೊಂಡ ಅಂಬಿಕಾ ವಿದ್ಯಾರ್ಥಿಗಳು Read More »

ಎನ್‍ ಎಸ್‍ ಎಸ್‍ ಶಿಬಿರಗಳು ಬದುಕಿನ ಶಿಕ್ಷಣಕ್ಕೆ ಪೂರಕ | ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಶಿವರಾಮ ಪಿ.

ಪುತ್ತೂರು: ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲ ಶಿಕ್ಷಣದೊಂದಿಗೆ ಬದುಕಿಗೆ ಪೂರಕವಾದ ಅಂಶಗಳು ಬಹುಮುಖ್ಯ. ಎನ್.ಎಸ್.ಎಸ್  ಶಿಬಿರದಿಂದ ಬದುಕಿಗೆ ಪೂರಕವಾದ ಶಿಕ್ಷಣವನ್ನು ಪಡೆಯಬಹುದು ಎಂದು ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ. ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ನಡೆದ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತ್ವದ

ಎನ್‍ ಎಸ್‍ ಎಸ್‍ ಶಿಬಿರಗಳು ಬದುಕಿನ ಶಿಕ್ಷಣಕ್ಕೆ ಪೂರಕ | ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಶಿವರಾಮ ಪಿ. Read More »

ನೂಜಿ ಮರಳುಗಾರಿಕೆ ಪ್ರಕರಣ | ಜಿಲ್ಲಾಧ್ಯಕ್ಷರನ್ನು ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಸಮರಕ್ಕೆ ಮರಳು ವ್ಯಾಪಾರಸ್ಥರ ಸಂಘ ನಿರ್ಧಾರ

ಪುತ್ತೂರು: ಮರಳುಗಾರಿಕೆ ವಿಚಾರದಲ್ಲಿ ಮರಳು ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಮೆದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತೇಜೋವಧೆ ಮಾಡುತ್ತಿರುವುದನ್ನು ಸಂಘ ಖಂಡಿಸಿದ್ದು, ಈ ಕುರಿತು ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ಮಾಡುವ ಕುರಿತು ನಿರ್ಧರಿಸಲಾಗಿದೆ ಎಂದು ಮರಳು ವ್ಯಾಪಾರಸ್ಥರ ಸಂಘ ತಿಳಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಂಘ, ಕುದ್ಮಾರು ಗ್ರಾಮದ ನೂಜಿ ಎಂಬಲ್ಲಿ ಇತ್ತೀಚೆಗೆ ಚೆನ್ನಪ್ಪ ಗೌಡ, ಅಶೋಕ ಹಾಗೂ ಇತರರಿಗೆ ಸಂಬಂಧಿಸಿದಂತೆ ತಮ್ಮ ವರ್ಗ ಜಮೀನಿನಲ್ಲಿ ಪರವಾನಿಗೆ

ನೂಜಿ ಮರಳುಗಾರಿಕೆ ಪ್ರಕರಣ | ಜಿಲ್ಲಾಧ್ಯಕ್ಷರನ್ನು ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಸಮರಕ್ಕೆ ಮರಳು ವ್ಯಾಪಾರಸ್ಥರ ಸಂಘ ನಿರ್ಧಾರ Read More »

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಲಸಿರಿ ಅಧಿಕಾರಿಗಳ ಸಭೆ | ಸಭೆಗೆ ಕಡಿವಾಣ ಹಾಕಿದ ಅಧಿಕಾರಿಗಳು

ಪುತ್ತೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಲಸಿರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಬಂದು ಸಭೆ ನಿಲ್ಲಿಸಿದ ಘಟನೆ ಇಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅವರು ಜಲಸಿರಿ ಅಧಿಕಾರಿಗಳು ಹಾಗೂ ಪಂಪ್ ಆಪರೇಟರ್‍ ಗಳನ್ನು ಕರೆಸಿ ಶಾಸಕರ ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿದ್ದರು. ಸಭೆ ಆರಂಭಗೊಂಡು ಜಲಸಿರಿ ಅಧಿಕಾರಿಗಳು ಕುಡಿಯುವ ನೀರಿನ ಪೂರೈಕೆಯಲ್ಲಿರುವ ಸಮಸ್ಯೆಗಳನ್ನು ಸಭೆಯಲ್ಲಿ ವಿವರಿಸುತ್ತಿದ್ದಂತೆ ತಹಶೀಲ್ದಾರ್ ಕುಂಞಿ ಅಹಮ್ಮದ್ ಹಾಗೂ ಇಲೆಕ್ಷನ್ ಕಮಿಷನ್ ಗೆ ಸಂಬಂಧಿಸಿದ ಅಧಿಕಾರಿಗಳು

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಲಸಿರಿ ಅಧಿಕಾರಿಗಳ ಸಭೆ | ಸಭೆಗೆ ಕಡಿವಾಣ ಹಾಕಿದ ಅಧಿಕಾರಿಗಳು Read More »

ಭಾರೀ ಗಾಳಿ ಮಳೆ : ಉರ್ಲಾಂಡಿಯಲ್ಲಿ ಮನೆ ಮೇಲೆ ಬಿದ್ದ ಮರ

ಪುತ್ತೂರು: ಭಾನುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ನಗರದ ಬಪ್ಪಳಿಗೆ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಸೀಟು ಹಾರಿಹೋಗಿದ್ದು, ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದು, ಸಿಂಗಾಣಿಯ ಕಮಲ ಅವರ ಮನೆಗೆ ತಾತ್ಕಾಲಿಕವಾಗಿ ಶಾಸಕರು ಟರ್ಪಾಲ್ ಹಾಕಿಸಿದ್ದಾರೆ. ಉರ್ಲಾಂಡಿಗೆ ಭೇಟಿ ನೀಡಿದ ಶಾಸಕರು ಮನೆ ಮೇಲೆ ಬಿದ್ದಿರುವ ಮರವನ್ನು ತಕ್ಷಣ ತೆರವು ಮಾಡುವಂತೆ ಸೂಚನೆ

ಭಾರೀ ಗಾಳಿ ಮಳೆ : ಉರ್ಲಾಂಡಿಯಲ್ಲಿ ಮನೆ ಮೇಲೆ ಬಿದ್ದ ಮರ Read More »

ಶಂಕರ ಭಗವತ್ಪಾದರ ವಿಚಾರಗಳಿಂದ ನಮ್ಮ ಬದುಕು ಔನ್ನತ್ಯಕ್ಕೆ : ಅಂಬಿಕಾ ಕ್ಯಾಂಪಸ್‌ನಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ವಿದ್ವಾನ್ ಕೃಷ್ಣರಾಜ ಭಟ್

ಪುತ್ತೂರು: ಜಗದ್ಗುರು ಶಂಕರಾಚಾರ್ಯರ ವ್ಯಕ್ತಿತ್ವವನ್ನು ಮಾತಿನಲ್ಲಿ ಕಟ್ಟಿಕೊಡುವ ಶಕ್ತಿ ಸಾಮಾನ್ಯ ಮನುಷ್ಯರಲ್ಲಿಲ್ಲ. ಆದರೆ ಅವರ ಬಗೆಗೆ ತಿಳಿದುಕೊಂಡ ಅಲ್ಪಾತಿ ಅಲ್ಪ ವಿಚಾರಗಳನ್ನಾದರೂ ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ನಮ್ಮ ವ್ಯಕ್ತಿತ್ವದಲ್ಲಿನ ದೋಷಗಳು ನಿವಾರಣೆಯಾಗುವಲ್ಲಿ ಸಹಕಾರಿಯಾಗುತ್ತದೆ. ಒಳ್ಳೆಯ ವಿಚಾರಗಳ ಅಧ್ಯಯನ, ಪ್ರಸರಣ ನಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಶೃಂಗೇರಿಯ ಶ್ರೀ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಪಾಠಶಾಲೆಯ ವ್ಯಾಕರಣ ಶಾಸ್ತ್ರ ವಿದ್ವಾಂಸ ವಿದ್ವಾನ್ ಕೃಷ್ಣರಾಜ ಭಟ್ಟ ಹೇಳಿದರು. ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಭಾನುವಾರ

ಶಂಕರ ಭಗವತ್ಪಾದರ ವಿಚಾರಗಳಿಂದ ನಮ್ಮ ಬದುಕು ಔನ್ನತ್ಯಕ್ಕೆ : ಅಂಬಿಕಾ ಕ್ಯಾಂಪಸ್‌ನಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ವಿದ್ವಾನ್ ಕೃಷ್ಣರಾಜ ಭಟ್ Read More »

ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಅನುದಾನ: ಅಶೋಕ್ ರೈ |ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿ ಸಭೆ

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಮಹಿಳಾ ಪ ಪೂ ಕಾಲೇಜಿನ ಅಭಿವೃದ್ಧಿ ಸಮಿತಿ ಸಭೆ ಶನಿವಾರ ಕಾಲೇಜಿನಲ್ಲಿ ನಡೆಯಿತು. ಶಾಸಕ ಅಶೋಕ್ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದು, ಕಾಲೇಜಿಗೆ ಈ ಬಾರಿ ಪಿಯು ಪರೀಕ್ಷೆಯಲ್ಲಿ ಶೇ. 100 ಪಲಿತಾಂಶ ಬಂದಿದ್ದು ಇದಕ್ಕಾಗಿ ಶಿಕ್ಷಕ ವೃಂದವನ್ನು, ಅಭಿವೃದ್ಧಿ ಸಮಿತಿಯವರನ್ನು ಶಾಸಕರು ಅಭಿನಂದಿಸಿದರು. ಕಾಲೇಜಿನಲ್ಲಿ ತರಗತಿ ಕೊಠಡಿ ಕೊರತೆ, ಪ್ರಯೋಗಾಲಯ ಕೊಠಡಿ ಕೊರತೆ, ಪೀಠೋಪಕರಣಗಳ ಕೊರತೆ, ಆಟದ ಮೈದಾನದ ಕೊರತೆ, ರಸ್ತೆ ಸಂಪರ್ಕ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಿನ್ಸಿಪಾಲರು ಶಾಸಕರ ಗಮನಕ್ಕೆ

ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಅನುದಾನ: ಅಶೋಕ್ ರೈ |ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿ ಸಭೆ Read More »

ಮೆಡಿಕಲ್ ಪ್ರತಿನಿಧಿಗಳು ಸಂಗ್ರಹಿಸಿದ ಮೊತ್ತ ಹಸ್ತಾಂತರ

ಪುತ್ತೂರು: ಇತ್ತೀಚೆಗೆ ಆಕಸ್ಮಿಕವಾಗಿ ಮರಣ ಹೊಂದಿದ ಸಂತೋಷ್ ಗೌಡ ಅವರಿಗೆ ಮೆಡಿಕಲ್ ಪ್ರತಿನಿಧಿಗಳು ಸೇರಿ ಸಂಗ್ರಹಿಸಲಾದ ಮೊತ್ತವನ್ನು ಹಸ್ತಾಂತರಿಸಲಾಯಿತು. ಸಂತೋಷ್ ಗೌಡ ನ ಮನೆಗೆ ತೆರಳಿ ಮೆಡಿಕಲ್ ಪ್ರತಿನಿಧಿಗಳು ಸಂಗ್ರಹಿಸಿದ ಒಟ್ಟು ಮೊತ್ತದಲ್ಲಿ 10000 ರೂಪಾಯಿ ನಗದು ಹಾಗೂ 1,53,277 ರೂಪಾಯಿಯ ಚೆಕ್ ನ್ನು ಅವರ ತಾಯಿಗೆ ಅಕ್ಕನ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಈ ಹಣವನ್ನು ಸಂತೋಷರ ತಾಯಿಯ ಹೆಸರಿನಲ್ಲಿ ಠೇವಣಿ ಇಡಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.

ಮೆಡಿಕಲ್ ಪ್ರತಿನಿಧಿಗಳು ಸಂಗ್ರಹಿಸಿದ ಮೊತ್ತ ಹಸ್ತಾಂತರ Read More »

ರಸ್ತೆ ಬದಿ ನಿಲ್ಲಿಸಿದ್ದ ಕಾರು ಚಲಾಯಿಸಿದ ಬುದ್ಧಿಮಾಂದ್ಯ ಯುವಕ : ನಾಲ್ಕೈದು ವಾಹನಗಳಿಗೆ ಡಿಕ್ಕಿ

ಪುತ್ತೂರು: ಯುವಕನೋರ್ವ ನಿಲ್ಲಿಸಿದ್ದ ಓಮ್ನಿ ಕಾರೊಂದನ್ನು ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯೆ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಸಂಪ್ಯದಲ್ಲಿ ನಡೆದಿದೆ. ಕುಂಬ್ರ ಸೇತುವೆಯ ಬಳಿ ವಾಹನ ಚಾಲಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆಯೂ ನಡೆಯಿತು.. ಬುದ್ದಿಮಾಂದ್ಯ ಯುವಕ ಕೈಯ್ಯಲ್ಲಿ ಕೋಲೊಂದನ್ನು ಹಿಡಿದು ಮಧ್ಯಾಹ್ನದ ವೇಳೆ ಸಂಪ್ಯದಲ್ಲಿ ರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ. ಸಂಜೆ ವೇಳೆ ಈತ ಯಾರೋ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮ ನಾಲ್ಕೈದು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ರಸ್ತೆ ಬದಿ ನಿಲ್ಲಿಸಿದ್ದ ಕಾರು ಚಲಾಯಿಸಿದ ಬುದ್ಧಿಮಾಂದ್ಯ ಯುವಕ : ನಾಲ್ಕೈದು ವಾಹನಗಳಿಗೆ ಡಿಕ್ಕಿ Read More »

error: Content is protected !!
Scroll to Top