ಪುತ್ತೂರು

ಅಕ್ಷಯ ಕಾಲೇಜಿನಲ್ಲಿ ‘ರೆಸ್ಯೂಮ್ ರೈಟಿಂಗ್ ಮತ್ತು ಇಂಟರ್ ವ್ಯೂ ಪ್ರಿಪೆರೇಶನ್’ ಕಾರ್ಯಾಗಾರ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೆಸ್ಯೂಮ್ ರೈಟಿಂಗ್ ಮತ್ತು ಇಂಟರ್ ವ್ಯೂ ಪ್ರಿಪೆರೇಶನ್’ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಡಾ. ಶ್ರೀಶ ಭಟ್, ವಿದ್ಯಾರ್ಥಿಗಳಿಗೆ ರೆಸ್ಯೂಮ್ ರೈಟಿಂಗ್ ಕುರಿತು ಮಾಹಿತಿ ನೀಡಿ, ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳ ರೆಸ್ಯೂಮ್ ಹೇಗಿರಬೇಕು, ಯಾವೆಲ್ಲ ವಿಷಯಗಳನ್ನು ಒಳಗೊಂಡಿರಬೇಕು, ವಿದ್ಯಾರ್ಥಿಗಳು ಮಾಡುವಂತಹ ತಪ್ಪುಗಳು, […]

ಅಕ್ಷಯ ಕಾಲೇಜಿನಲ್ಲಿ ‘ರೆಸ್ಯೂಮ್ ರೈಟಿಂಗ್ ಮತ್ತು ಇಂಟರ್ ವ್ಯೂ ಪ್ರಿಪೆರೇಶನ್’ ಕಾರ್ಯಾಗಾರ Read More »

ಸಂಟ್ಯಾರ್ ನಲ್ಲಿ ಭೀಕರ ಅಪಘಾತ | ಹತ್ತಕ್ಕೂ ಹೆಚ್ಚು ವಾಹನಗಳಿಗೆ ಜಖಂ

ಪುತ್ತೂರು : ಸರಣಿ ಅಪಘಾತಗಳು ನಡೆದಿ ಪರಿಣಾಮ 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಇಂದು ಸಂಜೆ ಸಂಟ್ಯಾರ್ ನಲ್ಲಿ ನಡೆದಿದೆ. ಪಾಣಾಜೆ – ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತ್ತಿದ್ದ ಕಾರೊಂದು ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ

ಸಂಟ್ಯಾರ್ ನಲ್ಲಿ ಭೀಕರ ಅಪಘಾತ | ಹತ್ತಕ್ಕೂ ಹೆಚ್ಚು ವಾಹನಗಳಿಗೆ ಜಖಂ Read More »

ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ | ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಕೇಂದ್ರ ಸರಕಾರ ಅನುಷ್ಠಾನಗೊಳಿಸಿರುವ 2024-25ನೇ ಸಾಲಿನ ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಆರ್ಥಿಕ ರಕ್ಷಣೆ ನೀಡುತ್ತಾ ಬಂದಿದೆ. ಪ್ರಕೃತ ಹಂಗಾಮು ಮುಂಗಾರಿಗೆ ರಾಜ್ಯ ಸರಕಾರದ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜೂನ್‍ ತಿಂಗಳಲ್ಲಿ ರೈತರ ವಿಮೆ ಪ್ರೀಮಿಯಂ ಕಂತು ಕಟ್ಟಲು

ಪ್ರಧಾನಮಂತ್ರಿ ಫಸಲ್ ವಿಮೆ ಹಾಗೂ ಹವಾಮಾನ ಆಧಾರಿತ ಫಸಲ್ ವಿಮೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಮನವಿ | ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾಜಿ ಶಾಸಕ ಸಂಜೀವ ಮಠಂದೂರು Read More »

ನಾಳೆ ವಿದ್ಯುತ್ ಕಟ್ | ಎಲ್ಲೆಲ್ಲಿ ಕರೆಂಟಿಲ್ಲ ?

ಪುತ್ತೂರು: ಎನ್ಎಚ್-75 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಮಿತ್ತ ಮೇ 28 ರಂದು ವಿದ್ಯುತ್ ನಿಲುಗಡೆ ಮಾಡಲಾಗುವುದು. 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಾಂಚನ ಮತ್ತು 110/33/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ ಫೀಡರ್ನಲ್ಲಿ ಮೇ 28 ಮಂಗಳವಾರ ಪೂರ್ವಾಹ್ನ 10:00 ರಿಂದ ಅಪರಾಹ್ನ 5:00 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರ & 110/33/11ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ನಿಂದ

ನಾಳೆ ವಿದ್ಯುತ್ ಕಟ್ | ಎಲ್ಲೆಲ್ಲಿ ಕರೆಂಟಿಲ್ಲ ? Read More »

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ ಶಿಪ್ ‘ಅಲ್ಟಿಮೇಟ್ ಟ್ರೋಫಿ -2024′

ಪುತ್ತೂರು: ಕ್ರೀಡೆ ಎನ್ನುವುದು ನಮ್ಮ ಸದೃಢ ಆರೋಗ್ಯಕ್ಕೆ ಬಹಳ ಸಹಕಾರಿ. ದೇಹಕ್ಕೆ ಸಮರ್ಪಕವಾದ ವ್ಯಾಯಾಮ ಸಿಕ್ಕಾಗ ನಮ್ಮ ಮಾನಸಿಕ ಆರೋಗ್ಯವು ಕೂಡಾ ವೃದ್ಧಿಯಾಗುತ್ತದೆ. ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಉಪ್ಪಿನಂಗಡಿ ಎಸ್‌ ಬಿ ಐ ಬ್ಯಾಂಕ್ ನಿವೃತ್ತ ಉದ್ಯೋಗಿ ಜಿ. ಕೆ ಪೂವಪ್ಪ ಹೇಳಿದರು. ಅವರು ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಮತ್ತು ವಿವೇಕಾನಂದ ಕಾಲೇಜು (ಸ್ವಾಯತ್ತ) ಸಂಯುಕ್ತ ಆಶ್ರಯದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪುರುಷರ

ವಿವೇಕಾನಂದ ಕಾಲೇಜಿನಲ್ಲಿ ಖೋಖೋ ಚಾಂಪಿಯನ್ ಶಿಪ್ ‘ಅಲ್ಟಿಮೇಟ್ ಟ್ರೋಫಿ -2024′ Read More »

ಹಲಸು ಮತ್ತು ಹಣ್ಣು ಮೇಳದ ಸಮಾರೋಪ

ಪುತ್ತೂರು: ಹಲಸಿನ ಹಣ್ಣಿನ ಉದ್ದಿಮೆಗಳನ್ನು ನಡೆಸುವ ನಿಟ್ಟಿನಲ್ಲಿ ಸಾಧ್ಯತೆಗಳು ಬಹಳಷ್ಟಿವೆ. ಇದಕ್ಕೆ ಉದ್ಯಮಶೀಲತೆಯ ಜತೆಗೆ ಪ್ರಯತ್ನಶೀಲತೆ ಬೇಕಾಗಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅಭಿಪ್ರಾಯಪಟ್ಟರು. ಅವರು ಪುತ್ತೂರು ನವತೇಜ, ಜೆಸಿಐ, ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಅಡಿಕೆ ಪತ್ರಿಕೆ ಸಹಯೋಗದಲ್ಲಿ ಮೂರು ದಿನಗಳ ಕಾಲ ಜೈನಭವನದಲ್ಲಿ ನಡೆದ ಹಲಸು ಮತ್ತು ಹಣ್ಣು ಮೇಳದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು. ಹಲಸಿನ ಹಣ್ಣಿನ ಪೂರೈಕೆಯಲ್ಲಿ ತ್ರಿಪುರ ಪ್ರಥಮ ಸ್ಥಾನವಿದ್ದರೆ, ಕರ್ನಾಟಕ ದ್ವಿತೀಯ ಸ್ಥಾನವಿದೆ. ಆದರೆ ಹಲಸಿಹಣ್ಣಿನ ಉತ್ಪನ್ನಗಳ

ಹಲಸು ಮತ್ತು ಹಣ್ಣು ಮೇಳದ ಸಮಾರೋಪ Read More »

ಎಲ್ಲರ ಮನಸ್ಸನ್ನು ಅರಿಯುವ ಮನಸ್ಸು ಕೇಶವರದ್ದು | ಎಸ್‍.ಆರ್.ಕೆ. ಲ್ಯಾಡರ್ಸ್‍ ನ ರಜತ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ | ಕೃಷಿಕ ಕೃಷಿ ಉದ್ದಿಮೆದಾರನಾಗಬೇಕು ಎಂಬುದನ್ನು ತನ್ನ ಸಾಧನೆ ಮೂಲಕ ಸಮಾಜಕ್ಕೆ ತೋರಿಸಿದ್ದಾರೆ : ಸಂಜೀವ ಮಠಂದೂರು | ಕೇಶವ ಅಮೈಯವರ ಸಂಶೋಧನಾ ವಿಭಾಗ ಬಹಳ ಸ್ಟ್ರಾಂಗ್ ಆಗಿದೆ : ಡಾ.ಮೋಹನ್ | ಕೇಶವ ಅಮೈಯವರು ತನ್ನ ಸುತ್ತಮುತ್ತಲಿನ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುವ ಮುಂದಾಳು  : ಡಾ.ಪ್ರಸನ್ನ ಹೆಬ್ಬಾರ್ | ಎಲ್ಲರನ್ನೂ ಮುಂದೆ ತರುವ ಮನಸ್ಸು ಕೇಶವರದ್ದು : ಸುರೇಶ್ ಬೈಲು | ದೇವರು ಕೇಶವರ ಜೊತೆಗಿದ್ದಾರೆ ಎಂಬುದಕ್ಕೆ ಎರಡು ಮಾತಿಲ್ಲ: ಅರವಿಂದ್ ಬೋಳಾರ್ | ಇದು ಸಾಧನೆಯ ಸಮಾವೇಶವಲ್ಲ. ಸಹಕಾರ ನೀಡಿದವರಿಗೆ ಕೃತಜ್ಞತಾಭಾವದ ಸಮಾವೇಶ : ಕೇಶವ ಅಮೈ

ಕಡಬ: ಖ್ಯಾತ ಕೃಷಿ ಯಂತ್ರೋಪಕರಣಗಳ ಸಂಸ್ಥೆ ಎಸ್‍.ಆರ್.ಕೆ. ಲ್ಯಾಡರ್ಸ್ ರಜತ ಸಂಭ್ರಮದ ಸಮಾರೋಪ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಶನಿವಾರ ಸಂಜೆ ಕೊಯಿಲ ಗ್ರಾಮದ ಕಲಾಯಿಗುತ್ತುವಿನಲ್ಲಿ ನಡೆಯಿತು. ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪಾಲ್ಗೊಂಡು ಮಾತನಾಡಿ, ಕೇಶವರಂತಹ ಸಾಧಕರನ್ನು ಗೌರವಿಸಲು ಬಂದಿದ್ದೇವೆ. ಇದು ಅವರ ಉದ್ಯಮದಲ್ಲಿ ಹೆಗಲಿಗೆ ಹೆಗಲು ಕೊಟ್ಟವರನ್ನು ಗೌರವಿಸುವ ಕಾರ್ಯಕ್ರಮವಾಗಿದೆ. ಸಾಮಾನ್ಯರಲ್ಲಿ ಅಸಮಾನ್ಯ ವ್ಯಕ್ತಿ ಎಲ್ಲರ ಮನಸ್ಸನ್ನು ಅರಿಯುವ ಮನಸ್ಸು ಕೇಶವರದ್ದು. ರೈತ ದೇಶದ ಬೆನ್ನೆಲುಬು. ಅಂತಹ ರೈತನ

ಎಲ್ಲರ ಮನಸ್ಸನ್ನು ಅರಿಯುವ ಮನಸ್ಸು ಕೇಶವರದ್ದು | ಎಸ್‍.ಆರ್.ಕೆ. ಲ್ಯಾಡರ್ಸ್‍ ನ ರಜತ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ | ಕೃಷಿಕ ಕೃಷಿ ಉದ್ದಿಮೆದಾರನಾಗಬೇಕು ಎಂಬುದನ್ನು ತನ್ನ ಸಾಧನೆ ಮೂಲಕ ಸಮಾಜಕ್ಕೆ ತೋರಿಸಿದ್ದಾರೆ : ಸಂಜೀವ ಮಠಂದೂರು | ಕೇಶವ ಅಮೈಯವರ ಸಂಶೋಧನಾ ವಿಭಾಗ ಬಹಳ ಸ್ಟ್ರಾಂಗ್ ಆಗಿದೆ : ಡಾ.ಮೋಹನ್ | ಕೇಶವ ಅಮೈಯವರು ತನ್ನ ಸುತ್ತಮುತ್ತಲಿನ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸುವ ಮುಂದಾಳು  : ಡಾ.ಪ್ರಸನ್ನ ಹೆಬ್ಬಾರ್ | ಎಲ್ಲರನ್ನೂ ಮುಂದೆ ತರುವ ಮನಸ್ಸು ಕೇಶವರದ್ದು : ಸುರೇಶ್ ಬೈಲು | ದೇವರು ಕೇಶವರ ಜೊತೆಗಿದ್ದಾರೆ ಎಂಬುದಕ್ಕೆ ಎರಡು ಮಾತಿಲ್ಲ: ಅರವಿಂದ್ ಬೋಳಾರ್ | ಇದು ಸಾಧನೆಯ ಸಮಾವೇಶವಲ್ಲ. ಸಹಕಾರ ನೀಡಿದವರಿಗೆ ಕೃತಜ್ಞತಾಭಾವದ ಸಮಾವೇಶ : ಕೇಶವ ಅಮೈ Read More »

ಮನೆಗೆ ನುಗ್ಗಿದ ಕಳ್ಳರು ಡಿವಿಆರ್ ಹೊತ್ತೊಯ್ದರು

ವಿಟ್ಲ : ಮನೆಗೆ ನುಗ್ಗಿದ ಕಳ್ಳರು ಒಂದು ಲಕ್ಷ ರೂ. ಮೌಲ್ಯದ ವಾಚ್ ಜತೆಗೆ ಡಿವಿಆರ್ ಹಪತ್ತೊಯ್ದ ಘಟನೆ ವಿಟ್ಲ ಪರ್ತಿಪಾಡಿನಲ್ಲಿ ನಡೆದಿದೆ. ವಿಟ್ಲ ಪಡೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಎಂ.ಕೆ.ಖಲೀಲ್ ಎಂಬವರ ಮನೆಗೆ ಕನ್ನ ಹಾಕಿದ್ದಾರೆ. ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಹ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದರು. ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಅನುಮಾನದಿಂದ ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ

ಮನೆಗೆ ನುಗ್ಗಿದ ಕಳ್ಳರು ಡಿವಿಆರ್ ಹೊತ್ತೊಯ್ದರು Read More »

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024

ಪುತ್ತೂರು: ಒಂದು ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆಗ ಅವುಗಳಿಗೆಲ್ಲ ಯೋಚಿಸಿ ಪರಿಹಾರವನ್ನು ಕಂಡುಕೊಂಡು ಮುಂದುವರೆಯುವ ಶಕ್ತಿ ನಮ್ಮಲ್ಲಿರಬೇಕು. ಉದ್ಯಮ ಕ್ಷೇತ್ರಕ್ಕೆ ಕೌಶಲ್ಯವೆನ್ನುವುದು ಅತ್ಯಗತ್ಯ. ಬದಲಾವಣೆಗೆ ನಾವು ಹೊಂದಿಕೊಂಡು ನಮ್ಮ ಕೆಲಸದಲ್ಲಿ ಹೊಸತನವನ್ನು ಕಂಡು ಯಶಸ್ವಿಗೊಳ್ಳಬೇಕು ಅದಕ್ಕಾಗಿ ನಿರಂತರವಾದ ಕಲಿಕೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದು ಮಾಸ್ಟರ್ ಪ್ಲಾನರಿಯ ಆಕಾಶ್ ಎಸ್. ಕೆ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ)ದ  ವಾಣಿಜ್ಯ ವಿಭಾಗ, ಕಾಮರ್ಸ್ ಅಸೋಸಿಯೇಷನ್ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ

ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಫೆಸ್ಟ್ ಏಕತ್ರ -2024 Read More »

ಎಸ್‍ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದಲ್ಲಿ ಮೇಳೈಸುತ್ತಿರುವ ಕುಣಿತ ಭಜನೆ | ಮಾಲಕರ ತಾಯಿ ರಾಮಕ್ಕ ಅವರಿಂದ ದೀಪ ಬೆಳಗಿಸಿ ಚಾಲನೆ

ಕಡಬ: ಎಸ್‍.ಆರ್.ಕೆ. ಲ್ಯಾಡರ್ಸ್‍ ಸಂಸ್ಥೆಯ ರಜತ ಸಂಭ್ರಮದ ಸಮಾರೋಪ ಸಮಾರಂಭದ ಅಂಗವಾಗಿ ನಡೆಯುವ ಕುಣಿತ ಭಜಣೆ ಕಾರ್ಯಕ್ರಮದಲ್ಲಿ ಎಸ್‍ ಆರ್ ಕೆ ಲ್ಯಾಡರ್ಸ್ ಮಾಲಕರಾದ ಕೇಶವ ಅಮೈ ಅವರ ತಾಯಿ ರಾಮಕ್ಕ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ರಜತ ಸಂಭ್ರಮದ ಅಂಗವಾಗಿ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೇಶವ ಅಮೈ ಅವರ ಕುಟಂಬಸ್ಥರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಎಸ್‍ ಆರ್ ಕೆ ಲ್ಯಾಡರ್ಸ್ ಸಂಸ್ಥೆಯ ರಜತ ಸಂಭ್ರಮದಲ್ಲಿ ಮೇಳೈಸುತ್ತಿರುವ ಕುಣಿತ ಭಜನೆ | ಮಾಲಕರ ತಾಯಿ ರಾಮಕ್ಕ ಅವರಿಂದ ದೀಪ ಬೆಳಗಿಸಿ ಚಾಲನೆ Read More »

error: Content is protected !!
Scroll to Top