ಪುತ್ತೂರು

ಜು.18ರಿಂದ ಆ.3 : ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

ಪುತ್ತೂರು: ತಾಲೂಕು ಪಂಚಾಯತ್  ಮತ್ತು ಪುತ್ತೂರು ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಜಂಟಿ ಆಶ್ರಯದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ ಜು.18ರಿಂದ ಆ.3ರವರೆಗೆ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಶಿಬಿರವನ್ನು ಪುತ್ತೂರು ತಾಲೂಕು ಪಂಚಾಯತ್ ನ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಪುತ್ತೂರು ನಗರಸಭೆ ಪೌರಾಯುಕ್ತ ಮಧು ಯಸ್. ಮನೋಹರ್ ಭಾಗವಹಿಸಲಿದ್ದಾರೆ. ನೆಮ್ಮದಿ ವೆಲ್ನೆಸ್ ಸೆಂಟರ್ ಮಾಲಕ ಪ್ರಭಾಕರ್ ಸಾಲಿಯಾನ್ ಶಿಬಿರದ ಕುರಿತು ಮಾಹಿತಿ ನೀಡಲಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ವೆರಿಕೋಸ್ […]

ಜು.18ರಿಂದ ಆ.3 : ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ Read More »

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿ ಕಾರ್ಯಾಗಾರ

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುವುದು ಸ್ಪಷ್ಟವಾಗಿರಬೇಕು. ಸ್ಪಷ್ಟವಾದ ಗುರಿ ರೂಪಿಸಿಕೊಂಡು ಕಲಿಕೆಯು ಮುಗಿದ ನಂತರ ನಾವು ಯಾವ ಹಾದಿಯಲ್ಲಿ ಮುಂದುವರೆಯಬೇಕು ಎಂದು  ನಿರ್ಧರಿಸಿಕೊಂಡಿರಬೇಕು.  ಯಾವ ಪದವಿ ಪಡೆದುಕೊಳ್ಳುತ್ತೇವೆ ಎಂಬುವುದಕ್ಕಿಂತ ಅದು ನಮ್ಮ ಮೇಲೆ ಯಾವ ರೀತಿಯಾದ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಮುಖ್ಯ.  ನಮ್ಮ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಹೇಳಿದರು. ಅವರು  ವಿವೇಕಾನಂದ  ಕಲಾ, ವಿಜ್ಞಾನ  ಮತ್ತು ವಾಣಿಜ್ಯ ಮಹಾವಿದ್ಯಾಲಯ

ವಿವೇಕಾನಂದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಮಾಹಿತಿ ಕಾರ್ಯಾಗಾರ Read More »

ನಗರಸಭೆ ಮತದಾರರಲ್ಲದ ಚಿದಾನಂದ ರೈ ನಗರಸಭೆಗೆ ನಾಮನಿರ್ದೇಶನ  | ಬಿಜೆಪಿ ಸದಸ್ಯರಿಂದ ಜಿಲ್ಲಾಧಿಕಾರಿಗೆ ಆಕ್ಷೇಪಣಾ ಮನವಿ

ಪುತ್ತೂರು: ಗ್ರಾಮಾಂತರ ಬೂತ್ ಸಂಖ್ಯೆ135 ರಲ್ಲಿ ಕ್ರಮ.ಸಂಖ್ಯೆ 254 ರಲ್ಲಿ‌ಮತದಾನದ ಹಕ್ಕು ಇರುವ ಚಿದಾನಂದ ರೈವರನ್ನು ನಗರಸಭೆಗೆ ನಾಮನಿರ್ದೇಶನ ಮಾಡಿದ ಬಗ್ಗೆ ಬಿಜೆಪಿ‌ ಸದಸ್ಯರಿಂದ ಪೌರಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಆಕ್ಷೇಪ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತ ಅವಧಿ ಮುಗಿದಿದ್ದು, ಎರಡನೇ ಅವಧಿಗೆ ಮೀಸಲಾತಿ ನಿಗದಿಯಾಗಿರುವುದರಿಂದ ಜಿಲ್ಲಾಧಿಕಾರಿಗಳು ಪುತ್ತೂರು ನಗರಸಭೆಗೆ ಆಡಳಿತಾಧಿಕಾರಿಯಾಗಿದ್ದಾರೆ. ಹೀಗಿದ್ದು ನಗರಸಭೆಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು, ಈ ಪೈಕಿ ಚಿದಾನಂದ ರೈ ಗ್ರಾಮಾಂತರ ಮತದಾರರಾಗಿದ್ದು, ನಗರಸಭೆ ಮತದಾರರಲ್ಲ. ಆದ್ದರಿಂದ ಅವರನ್ನು

ನಗರಸಭೆ ಮತದಾರರಲ್ಲದ ಚಿದಾನಂದ ರೈ ನಗರಸಭೆಗೆ ನಾಮನಿರ್ದೇಶನ  | ಬಿಜೆಪಿ ಸದಸ್ಯರಿಂದ ಜಿಲ್ಲಾಧಿಕಾರಿಗೆ ಆಕ್ಷೇಪಣಾ ಮನವಿ Read More »

ಶೇಖರ್ ರಾವ್ ನಿಧನ

ಪುತ್ತೂರು: ಬಪ್ಪಳಿಗೆ ರಾಗಿಕುಮೇರಿ ನಿವಾಸಿ ಶೇಖರ್ ರಾವ್ (74) ಹೃದಯಘಾತದಿಂದ ಮಂಗಳವಾರ ನಿಧನರಾದರು. ಪುತ್ತೂರಿನ ಭಾರತ್ ಶೋ ರೂಮ್ ನಲ್ಲಿ ಸೆಕ್ಯೂರಿಟಿ ಆಗಿ ಹಲವು ವರ್ಷದಿಂದ ಕೆಲಸ ಮಾಡುತಿದ್ದರು. ಮಂಗಳವಾರ ಮಧ್ಯಾಹ್ನ ಹೃದಯಘಾತದಿಂದ ನಿಧನ ಹೊಂದಿದರು. ಮೃತರಿಗೆ ಪತ್ನಿ,ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

ಶೇಖರ್ ರಾವ್ ನಿಧನ Read More »

ಅಕ್ಷಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ

ಪುತ್ತೂರು : ಪುತ್ತೂರಿನ ಸಂಪ್ಯದಲ್ಲಿ ಕಾರ್ಯಾಚರಿಸುತಿರುವ ಅಕ್ಷಯ ಕಾಲೇಜಿನಲ್ಲಿ ಭಾರತ್ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್  ಮಂಗಳೂರು ಇವರ ಸಹಯೋಗದಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ “ಎಲೈಟ್ “ ಇಂಟೀರಿಯರ್ ಡಿಸೈನ್ ಅಸೋಸಿಯೇಷನಿಂದ ಒಂದು ತಿಂಗಳ “Auto Desk -3DS Max & 3D Rendering” ಕೋರ್ಸ್ ನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ (BASE) ಅಕಾಡೆಮಿಯ ಸಿಇಓ ನವೀನ ಗುರುರಾಜ್, ಅಡ್ಮಿನ್ ಸುಧಾ ಜಯರಾಮ್, ಟ್ರೈನರ್ ದೀಪ್ತಿ , ಕೋರ್ಸ್ ನ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಕಾರ್ಯಕ್ರಮದಲ್ಲಿ

ಅಕ್ಷಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ Read More »

ಆಲಡ್ಕ ಶ್ರೀ‌ ಸದಾಶಿವ ದೇವಸ್ಥಾನದ ಗೇಟ್ ಉದ್ಘಾಟನೆ, ಪುಷ್ಪವನ ಲೋಕಾರ್ಪಣೆ

ಪುತ್ತೂರು: ಆಲಡ್ಕ‌ಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಮುಖ್ಯ ಗೇಟ್ ಮತ್ತು ಪುಷ್ಪವನದ  ಉದ್ಘಾಟನೆ ಇಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆಲಡ್ಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ಇದರಲ್ಲಿ ಉಳಿಕೆಯಾದ ಹಣವನ್ನು‌ ದೇವಸ್ಥಾನದ ಕಾರ್ಯಕ್ಕೆ ಬಳಕೆ ಮಾಡಲಾಗಿದೆ. ಆಲಡ್ಕ ದೇವಸ್ಥಾನದಲ್ಲಿರುವ ವ್ಯವಸ್ಥಾಪನಾ ಸಮಿತಿ ಮತ್ತು ಭಕ್ತರು ಹಾಗೂ ಬ್ರಹ್ಮಕಲಶ ಸಮಿತಿ ಉತ್ತಮ ಕೆಲಸ ಮಾಡಿರುವುದು ಎಲ್ಲರಿಗೂ‌ ಮಾದರಿಯಾಗಿದೆ ಎಂದು ಹೇಳಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಇಲ್ಲಿನ

ಆಲಡ್ಕ ಶ್ರೀ‌ ಸದಾಶಿವ ದೇವಸ್ಥಾನದ ಗೇಟ್ ಉದ್ಘಾಟನೆ, ಪುಷ್ಪವನ ಲೋಕಾರ್ಪಣೆ Read More »

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನೀರು | ವಾಹನ ಸವಾರರಿಂದ ಪರದಾಟ

 ಕಡಬ : ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಓಡ್ಲ ಎಂಬಲ್ಲಿ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದ್ದು ವಾಹನ ಚಾಲಕರು ಸೇರಿದಂತೆ ಸಾರ್ವಜನಿಕರು ಪರದಾಡುವಂತಾಗಿದೆ. ರಾಜ್ಯ ಹೆದ್ದಾರಿ ರಸ್ತೆಯನ್ನು ಸ್ಥಳೀಯ ವ್ಯಕ್ತಿಯೋರ್ವರು ಅಕ್ರಮವಾಗಿ ಅಗೆದು, ಮಣ್ಣನ್ನು ಚರಂಡಿ ಮೇಲೆ ಹಾಕಿದ ಕಾರಣ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯಲಾಗದೆ ರಸ್ತೆಯಲ್ಲೇ ಹರಿಯುತ್ತಿದೆ. ನಿರಂತರವಾಗಿ ಸುರಿಯುವ ಮಳೆಯಿಂದಾಗಿ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತ್ತಿದೆ. ರಸ್ತೆ ತೋಡಿನಂತಾಗಿದ್ದು, ಮುಂದೆ ಅಪಾಯಕಾರಿ ತಿರುವು ಇದ್ದು, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಈ ಕುರಿತು

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ನೀರು | ವಾಹನ ಸವಾರರಿಂದ ಪರದಾಟ Read More »

ನಾಳೆ (ಜು.17) : ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಭತ್ತದ ಸಸಿ ನಾಟಿ ಕಾರ್ಯಕ್ರಮ

ಪುತ್ತೂರು: ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಕಬಕ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಗೌಡ ಮಹಿಳಾ ಸಂಘ ಹಾಗೂ ಒಕ್ಕಲಿಗ ಯುವ ಸಂಘದ ಸಹಕಾರದೊಂದಿಗೆ ಭತ್ತದ ಸಸಿ ನಾಟಿ ಕಾರ್ಯಕ್ರಮ ಜು.17 ರಂದು ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶೇವಿರೆ ತಿಮ್ಮಪ್ಪ ಗೌಡರ ಗದ್ದೆಯಲ್ಲಿ ನಾಟಿ ಕಾರ್ಯಕ್ರಮ ನಡೆಯಲಿದೆ. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜು.17) : ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಭತ್ತದ ಸಸಿ ನಾಟಿ ಕಾರ್ಯಕ್ರಮ Read More »

ಪುತ್ತೂರು ನಗರಸಭೆಗೆ ನಾಲ್ವರು ನಾಮ ನಿರ್ದೇಶಿತ ಸದಸ್ಯರ ನೇಮಕ

ಪುತ್ತೂರು: ದ.ಕ.ಜಿಲ್ಲೆಯ ಪುತ್ತೂರು ನಗರಸಭೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ. ರಾಜ್ಯ ಸರಕಾರ ಈ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಚಿಕ್ಕಮುಡ್ನೂರಿನ ಚಿದಾನಂದ ರೈ, ಬಲ್ನಾಡು ನಿವಾಸಿ ಶರೀಫ್‍ ಪಿ, ಬನ್ನೂರಿನ ಶಾರದ ಅರಸ್ ಹಾಗೂ ಪರ್ಲಡ್ಕ ನಿವಾಸಿ ಅಹ್ಮದ್ ಬಷೀರ್ ಅವರನ್ನು ನೇಮಕ ಮಾಡಿದೆ.

ಪುತ್ತೂರು ನಗರಸಭೆಗೆ ನಾಲ್ವರು ನಾಮ ನಿರ್ದೇಶಿತ ಸದಸ್ಯರ ನೇಮಕ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಎರಡು ರ್ಯಾಂಕ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನಡೆಸಿದ 2023-24ನೇ ಶೈಕ್ಷಣಿಕ ಸಾಲಿನ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 2  ರ್ಯಾಂಕ್‍ ಗಳನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕೇಶವ ಪ್ರಜ್ವಲ್.ಪಿ 9.38 ಸಿಜಿಪಿಎ ಅಂಕಗಳೊಂದಿಗೆ 3ನೇ ರ್ಯಾಂಕ್‍ ಹಾಗೂ ಕೆ.ಪಲ್ಲವಿ 9.33 ಸಿಜಿಪಿಎ ಅಂಕಗಳೊಂದಿಗೆ 5ನೇ ರ್‍ಯಾಂಕ್ ಗಳಿಸಿಕೊಂಡಿದ್ದಾರೆ. ಸಿವಿಲ್ ಇಂಜಿನಿಯರಿಂಗ್  ವಿಭಾಗ ಮುಖ್ಯಸ್ಥ ಪ್ರೊ.ಪ್ರಶಾಂತ್ ಹಾಗೂ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆಯನ್ನು

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಎರಡು ರ್ಯಾಂಕ್ Read More »

error: Content is protected !!
Scroll to Top