ಪುತ್ತೂರು

ರಾತ್ರಿ  ನಿಲ್ಲಿಸಿದ್ದ ಎರಡು ಲಾರಿಯಿಂದ ಬ್ಯಾಟರಿ ಕಳವು

ಪುತ್ತೂರು : ಕೊಡಿಪಾಡಿ ಶ್ರೀ ಜನಾರ್ದನ ದೇವಾಲಯದ ಬಳಿ ರಾತ್ರಿ ನಿಲ್ಲಿಸಿದ್ದ ಎರಡು ಲಾರಿಗಳಿಂದ ಬ್ಯಾಟರಿ ಕಳವಾದ ಬಗ್ಗೆ ವರದಿಯಾಗಿದೆ. ಎರಡು ಲಾರಿಯ ಚಾಲಕರು ಕೊಡಿಪಾಡಿ ಪರಿಸರದವರಾಗಿದ್ದ ಕಾರಣ ಎಂದಿನಂತೆ ಎಂ ಡಿ ಕನ್ಸಟ್ರಂಕ್ಷನ್ ಲಾರಿಯನ್ನು ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಲಾಗಿತ್ತು. ಲಾರಿ ಸಂಖ್ಯೆ KA 02 AD 4271 ಹಾಗೂ ΚΑ 19 0 3224. ಮರುದಿನ ಬೆಳಿಗ್ಗೆ ಲಾರಿ ಬಳಿ ನೋಡುವಾಗ ಬ್ಯಾಟರಿ ನಾಪತ್ತೆಯಾಗಿದ್ದು ಕಂಡುಬಂದಿದೆ. ಸುಮಾರು ನಲ್ವತ್ತು ಸಾವಿರಾರು ಬೆಲೆ ಅಂದಾಜಿಸಲಾಗಿದೆ. ಲಾರಿ […]

ರಾತ್ರಿ  ನಿಲ್ಲಿಸಿದ್ದ ಎರಡು ಲಾರಿಯಿಂದ ಬ್ಯಾಟರಿ ಕಳವು Read More »

 ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಸಭೆ

ಉಪ್ಪಿನಂಗಡಿ : ದೇಹ ಹಾಗೂ ದೇವಸ್ಥಾನಕ್ಕೆ ಅವಿನಾಭವ ಸಂಬಂಧವಿದ್ದು, ಮನ ಶುದ್ದಿ, ಕರ್ಮ ಶುದ್ಧಿ, ಭಾವ ಶುದ್ಧಿ ಭಗವಂತ ಆರಾಧನೆಯಿಂದ ಸಾಧ್ಯವಾಗುತ್ತದೆ. ದೀಪದ ಜ್ಯೋತಿ ನಂದದಂತೆ ಹಾಗೂ ವ್ಯಗ್ರವಾಗದಂತೆ ನಾವು ಹೇಗೆ ನೋಡಿಕೊಳ್ಳುತ್ತೇವೋ ಅದೇ ರೀತಿ ದೇವಸ್ಥಾನಗಳನ್ನು ನಾವು ನೋಡಿಕೊಳ್ಳಬೇಕು. ಎಂದು ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ತಿಳಿಸಿದರು. ಮುಂಬರುವ ಡಿಸೆಂಬರ್‌ನಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿರುವ ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.21ರಂದು ನಡೆದ ಭಕ್ತರ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ

 ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಸಭೆ Read More »

ನಗರ ಠಾಣಾ ಎ ಎಸ್ ಐ ಸುಂದರ ಕಾನಾವು ನಿಧನ

ಪುತ್ತೂರು : ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನರಾದರು. ಮೂರು ದಿನಗಳ ಹಿಂದೆ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರು ಪಡೀಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಎ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಸೇವೆಗೆ ಸೇರಿದ ಸುಂದರ ಅವರು ಬಳಿಕ ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆ ಸಲ್ಲಿಸಿ ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿಗೊಂಡು ಅಲ್ಲಿಂದ ಬಂಟ್ವಾಳ

ನಗರ ಠಾಣಾ ಎ ಎಸ್ ಐ ಸುಂದರ ಕಾನಾವು ನಿಧನ Read More »

ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಬೂಡಿಯಾರು ಹೊಸಮನೆ : ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪೂಜೆಯ ಪೂರ್ವ ಭಾವಿ ಸಭೆ ಜು.21 ರಂದು ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಪ್ರೀತಮ್ ಪುತ್ತುರಾಯ ರು ಪೂಜೆ ಯ ರೂಪುರೇಷೆ ಗಳ ಬಗ್ಗೆ ತಿಳಿಸಿದರು. ಶ್ರೀ ವರಮಹಾಲಕ್ಷ್ಮಿ ಪೂಜೆಯ ಅಧ್ಯಕ್ಷರಾದ ಭವ್ಯ ರಾಘವೇಂದ್ರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸಿ ಟಿ ಸುರೇಶ್, ಕಾರ್ಯದರ್ಶಿ ಜಯಂತ್ ಶೆಟ್ಟಿ ಕಂಬಳತಡ್ಡ, ಹಾಗೂ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ | ಆಮಂತ್ರಣ ಪ್ರತಿಕೆ ಬಿಡುಗಡೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವದ ವತಿಯಿಂದ ಸೆ.7 ರಿಂದ 10 ರ ತನಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜರುಗಲಿರುವ ಗಣೇಶೋತ್ಸವ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಜು.21 ರಂದು ಆದರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಸಮಿತಿ ಗೌರವಾಧ್ಯಕ್ಷ ಡಾ. ಎಂ ಕೆ ಪ್ರಸಾದ್, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ,ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ನೀಲಂತ್ ಬೊಳುವಾರು, ಶ್ರೀನಿವಾಸ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ | ಆಮಂತ್ರಣ ಪ್ರತಿಕೆ ಬಿಡುಗಡೆ Read More »

ಶ್ರೀ ಕಾಳಿಕಾಂಬ ಯಕ್ಷಗಾನ ಸಂಘಕ್ಕೆ 50ನೇ ವರ್ಷ | ಸರಣಿ ಕಾರ್ಯಕ್ರಮದಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ

ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀಮಹಾಭಾರತ ಸರಣಿಯಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ನಿತೀಶ್ ಕುಮಾರ್. ವೈ, ಸುರೇಶ್ ರಾವ್. ಬಿ., ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ, ಅರ್ಥಧಾರಿಗಳಾಗಿ ಅಂಬಾ ಪ್ರಸಾದ್ ಪಾತಾಳ(ದ್ರೌಪದೀ), ಗುಡ್ಡಪ್ಪ ಬಲ್ಯ(ಕೌರವ), ಶ್ರೀಧರ ಎಸ್. ಪಿ ಸುರತ್ಕಲ್ (ಧರ್ಮರಾಯ), ಹರೀಶ ಆಚಾರ್ಯ ಬಾರ್ಯ (ಶ್ರೀಕೃಷ್ಣ,), ಪುಷ್ಪಲತಾ ಎಂ, (ಭೀಷ್ಮ), ಶ್ರುತಿ

ಶ್ರೀ ಕಾಳಿಕಾಂಬ ಯಕ್ಷಗಾನ ಸಂಘಕ್ಕೆ 50ನೇ ವರ್ಷ | ಸರಣಿ ಕಾರ್ಯಕ್ರಮದಲ್ಲಿ ದುರ್ವಾಸಾತಿಥ್ಯ ತಾಳಮದ್ದಳೆ Read More »

ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋ ಚಿತ್ರಿಕರಣಕ್ಕೆ ಯತ್ನ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಪ್ಪಿನಂಗಡಿ: ಅನ್ಯಧರ್ಮದ ವ್ಯಕ್ತಿಯೊಬ್ಬ ಮಹಿಳೆಯ ಸ್ನಾನ ಮಾಡುತ್ತಿದ್ದ ವೇಳೆ ವಿಡಿಯೋ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ನಡೆದಿದೆ. ಪೆರಿಯಡ್ಕ ನಿವಾಸಿ ರೆಹಮಾನ್ ಎಂಬಾತನನ್ನು ಗ್ರಾಮಸ್ಥರು ಹಿಡಿದರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭ ಠಾಣೆಯಲ್ಲಿ ಅನೇಕ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆ ಸ್ನಾನ ಮಾಡುತ್ತಿದ್ದ ವೇಳೆ ವೀಡಿಯೋ ಚಿತ್ರಿಕರಣಕ್ಕೆ ಯತ್ನ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು Read More »

ಒಕ್ಕಲಿಗ ಗೌಡ ಮಹಿಳಾ ಸಂಘದಿಂದ ವಿಜೃಂಭಿಸಿದ ‘ಆಟಿ ಹಬ್ಬ-2024’ | ಗಮನ ಸೆಳೆದ ತುಳುನಾಡಿನ ಸಂಸ್ಕೃತಿ ಬಿಂಬಿಸುವ, ಆಟಿ ತಿಂಗಳ ವಿಶೇಷ ಖಾದ್ಯಗಳು

ಪುತ್ತೂರು: ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಹಯೋಗದಲ್ಲಿ ‘ಆಟಿ ಹಬ್ಬ-2024’ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳಾದ ಚೆನ್ನೆಕಾಯಿ ಹೆಕ್ಕುವುದು, ಅಡಿಕೆ ಹಾಳೆಯಲ್ಲಿ ಕೂತು ಎಳೆಯುವುದು, ಜನಪದ ಗೀತೆ, ಮದರಂಗಿ, ಶೋಭಾನೆ ಹಾಡು, ತೆಂಗಿನ ಕಾಯಿ ಹೊರಳಿಸುವುದು ಸಹಿತ ವಿವಿಧ ಬಗೆ ಆಟಿ ತಿನಸುಗಳನ್ನು ಮಾಡುವ ಸ್ಪರ್ಧಾ

ಒಕ್ಕಲಿಗ ಗೌಡ ಮಹಿಳಾ ಸಂಘದಿಂದ ವಿಜೃಂಭಿಸಿದ ‘ಆಟಿ ಹಬ್ಬ-2024’ | ಗಮನ ಸೆಳೆದ ತುಳುನಾಡಿನ ಸಂಸ್ಕೃತಿ ಬಿಂಬಿಸುವ, ಆಟಿ ತಿಂಗಳ ವಿಶೇಷ ಖಾದ್ಯಗಳು Read More »

ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಯುವಕ ಸನ್ಮಿತ್ ಶವ ಪತ್ತೆ

ಪುತ್ತೂರು: ಹರಿಯುತ್ತಿರುವ ಸರ್ವೆ ಸಮೀಪದ ಗೌರಿ ಹೊಳೆಯಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಭಾನುವಾರ ಪತ್ತೆಯಾಗಿದೆ.   ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರ ಗೌಡ ಎಂಬವರ ಪುತ್ರ, ಮುಕ್ರಂಪಾಡಿಯ ಇಂಡಸ್ಟ್ರಿಯೊಂದರಲ್ಲಿ ಉದ್ಯೋಗಿಯಾಗಿರುವ ಸನ್ಮಿತ್ (21) ಎಂಬಾತ ಶುಕ್ರವಾರ ರಾತ್ರಿ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಹೊಳೆ ಸಮೀಪ ಆತನ ಬೈಕ್, ಚಪ್ಪಲಿ, ಪರ್ಸ್, ಮೊಬೈಲ್ ಪತ್ತೆಯಾಗಿತ್ತು. ಇದೀಗ ಪೊಲೀಸರು, ಅಗ್ಮಿಶಾಮಕ ದಳ ಹಾಗೂ ಸ್ಥಳೀಯರ ಕಾರ್ಯಾಚರಣೆಯಿಂದ ಮೃತದೇಹ ಪತ್ತೆಯಾಗಿದೆ. ಸನ್ಮಿತ್ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕೆ

ಹೊಳೆಗೆ ಹಾರಿ ನಾಪತ್ತೆಯಾಗಿದ್ದ ಯುವಕ ಸನ್ಮಿತ್ ಶವ ಪತ್ತೆ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ !

ವಿಟ್ಲ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದ ಘಟನೆ ವಿಟ್ಲ ಚಂದಳಿಕೆ ತಿರುವಿನಲ್ಲಿ ಇಂದು ನಡೆದಿದೆ. ಅತೀ ವೇಗವಾಗಿ ಕಾರು ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ತಿರುವಿನಲ್ಲಿ ಚಲಿಸುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದಿದೆ. ತಕ್ಷಣ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ! Read More »

error: Content is protected !!
Scroll to Top