ಪುತ್ತೂರು

ಏಕ – ಕಾಯರ್ತಡಿ ರಸ್ತೆಯಲ್ಲಿ ಬರೆ ಕುಸಿತ

ಪುತ್ತೂರು : ಭಾರೀ ಮಳೆಯಿಂದಾಗಿ  ಚಿಕ್ಕಮುಡ್ನೂರಿನ ಏಕ – ಕಾಯರ್ತಡಿ ರಸ್ತೆಯಲ್ಲಿ  ಬರೆ  ಕುಸಿದ ಘಟನೆ ಸಂಭವಿಸಿದೆ. ಏಕ – ಕಾಯರ್ತಡಿ ರಸ್ತೆ ಸಮೀಪದ ಬರೆ ಕುಸಿದಿದ್ದು, ರಸ್ತೆ ಅಪಾಯದಲ್ಲಿದೆ. ತಕ್ಷಣ ತಹಶೀಲ್ದಾರರು ಭೇಟಿ ನೀಡಿ ಸೂಕ್ತ ವ್ಯವಸ‍್ಥೆ ಕಲ್ಪಿಸುವಂತೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್.ಕೆಮ್ಮಾಯಿ ಆಗ್ರಹಿಸಿದ್ದಾರೆ.

ಏಕ – ಕಾಯರ್ತಡಿ ರಸ್ತೆಯಲ್ಲಿ ಬರೆ ಕುಸಿತ Read More »

ತೆಂಕಿಲ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ | ಸಂಚಾರ ಬಂದ್

ಪುತ್ತೂರು : ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ತೆಂಕಿಲದಲ್ಲಿ ಇಂದು ಮುಂಜಾನೆ ಗುಡ್ಡ ಕುಸಿದಿದೆ. ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಬದಲಿ ರಸ್ತೆಯಾಗಿ ಪುತ್ತೂರು ಪೇಟೆ ಬಳಸಿ ವಾಹನ ಸಂಚರಿಸಬೇಕಾಗಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲದಲ್ಲಿ ಆಗಾಗ ಗುಡ್ಡ ಕುಸಿಯುತ್ತಲೇ ಇದ್ದು, ಇದೀಗ ಭಾರಿ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ. ಈಗಾಗಲೇ ನಗರಸಭೆ ಅಧಿಕಾರಿಗಳು, ಪೊಲೀಸರು ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ತೆಂಕಿಲ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ | ಸಂಚಾರ ಬಂದ್ Read More »

ಭಾರೀ ಮಳೆ : ಮನೆಯಂಗಳಕ್ಕೆ ನುಗ್ಗಿದ ನೀರು

 ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪುನಾಚ  ಗ್ರಾಮದ  ಬಾಲ ಕುಮೇರಿಯ, ತೀರ್ಥರಾಮ್ ಗೌಡ ಇವರ ಕೃಷಿ ತೋಟಕ್ಕೆ, ಮನೆ ಅಂಗಳಕ್ಕೆ, ನುಗ್ಗಿದ ನೀರು, ಮನೆ ಮಂದಿ ಅಪಾಯದಿಂದ ಪಾರಾಗಿ ,ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.  ಬಂಟ್ವಾಳ ತಹಸಿಲ್ದಾರ್ ಗೆ ಕರೆ ಮಾಡಿ ಪರಿಹಾರ  ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ.  ಈ ಸಂದರ್ಭದಲ್ಲಿ  ಪುನಾಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ  ಹರಿಪ್ರಸಾದ್ ಯಾದವ್, ಕಾರ್ಯದರ್ಶಿ ದಯಾನಂದ ಉಜಿರೆಮಾರ್, ಪಂಚಾಯತ್ ಅಧ್ಯಕ್ಷೆ

ಭಾರೀ ಮಳೆ : ಮನೆಯಂಗಳಕ್ಕೆ ನುಗ್ಗಿದ ನೀರು Read More »

ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿ 58ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ | ಚಪ್ಪರ ಮುಹೂರ್ತ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ, ಪುತ್ತೂರು ಇದರ 58ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸೆ.07ರಿಂದ ಸೆ.10ರವರೆಗೆ ಶ್ರೀ ಗಣೇಶೋತ್ಸವ ನಾಲ್ಕು ದಿನಗಳ ಕಾಲ ನಡೆಯಲಿದ್ದು, ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್‍.ಭಟ್‍ ವೈದಿಕ ವಿದಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಎಂ.ಕೆ. ಪ್ರಸಾದ್, ಅಧ್ಯಕ್ಷ ಸುಧೀಂದ್ರ

ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿ 58ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ | ಚಪ್ಪರ ಮುಹೂರ್ತ Read More »

ಶ್ರೀಕೃಷ್ಣ ಲೋಕ : ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ವಿವೇಕಾನಂದ ಶಿಶು ಮಂದಿರದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆಯಲಿರುವ ಶ್ರೀ ಕೃಷ್ಣಲೋಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಇದರ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಪುತ್ತೂರಿನ ಹೃದಯ ಭಾಗದಲ್ಲಿರುವ ವಿವೇಕಾನಂದ ಶಿಶು ಮಂದಿರವು ನಂದಗೋಕುಲದಂತೆ ಬೆಳಗಲಿ, ಶ್ರೀಕೃಷ್ಣಲೋಕ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಜರುಗಲಿ ಎಂದು

ಶ್ರೀಕೃಷ್ಣ ಲೋಕ : ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಲಾಭಾಂಶ ಪಡೆಯಲು ಸಂಘದ ನಿಯಮಗಳನ್ನು ಪಾಲಿಸಬೇಕು- ಅಚ್ಚುತ ಮೂಡೆತ್ತಾಯ | ನವೋದಯ ಒಕ್ಕೂಟದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹಧನ, ನವೋದಯ ಗುಂಪುಗಳಿಗೆ ಲಾಭಾಂಶ ವಿತರಣೆ

ಕಾವು: ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರದೊಂದಿಗೆ ನವೋದಯ ಒಕ್ಕೂಟದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹಧನ, ಹಾಗೂ ನವೋದಯ ಗುಂಪುಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ನಿಯಮ ನಿಭಂದನೆಗಳನ್ನು ಸರಿಯಾಗಿ ಪಾಲಿಸಿದಲ್ಲಿ ಅನೇಕ ಸೌಲಭ್ಯಗಳ ಜೊತೆಗೆ ಲಾಭಾಂಶವನ್ನು

ಲಾಭಾಂಶ ಪಡೆಯಲು ಸಂಘದ ನಿಯಮಗಳನ್ನು ಪಾಲಿಸಬೇಕು- ಅಚ್ಚುತ ಮೂಡೆತ್ತಾಯ | ನವೋದಯ ಒಕ್ಕೂಟದ ವತಿಯಿಂದ ಮಕ್ಕಳಿಗೆ ಪುಸ್ತಕ ವಿತರಣೆ, ಪ್ರೋತ್ಸಾಹಧನ, ನವೋದಯ ಗುಂಪುಗಳಿಗೆ ಲಾಭಾಂಶ ವಿತರಣೆ Read More »

ವಿಟ್ಲದ ವ್ಯಕ್ತಿ ನಾಪತ್ತೆ

ವಿಟ್ಲ: ವಿಟ್ಲದ ನೆಕ್ಕಿಲಾರು ನಿವಾಸಿಯೊಬ್ಬರು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ ಎಂದು ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ. ಸಂಘಕ್ಕೆ ಹಣ ಕಟ್ಟಲೆಂದು ಮನೆಯಿಂದ ಹೋದ ಹೇಮಂತ್ (37)  ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಹೇಮಂತ್ ಎಂಬವರು ಜುಲೈ 22ರಂದು ನೆಕ್ಕಿಲಾರು ಮನೆಯಿಂದ ಸಂಘಕ್ಕೆ ಹಣ ಕಟ್ಟಲು ಹೋದವರು ಮನೆಗೆ ಬಾರದೇ ಇದ್ದು ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತದೆ. ಸಂಬಂಧಿಕರಲ್ಲಿ ವಿಚಾರಿಸಿದಾಗ ಎಲ್ಲಿಯೂ ಹೇಮಂತ್ ಪತ್ತೆಯಾಗಿಲ್ಲ.ಹೇಮಂತ್ ರವರು 5 ವರೆ ಅಡಿ ಎತ್ತರವಿದ್ದು, ಕನ್ನಡ, ತುಳು

ವಿಟ್ಲದ ವ್ಯಕ್ತಿ ನಾಪತ್ತೆ Read More »

ಅಂಬಿಕಾ ಸಿಬಿಎಸ್‍ ಇ ವಿದ್ಯಾಲಯದಿಂದ ‘ಆಟಿದ ಬೆನ್ನಿಡ್ ಕೇಸರ್ದ ಗೊಬ್ಬು’

ಪುತ್ತೂರು: ಬಪ್ಪಳಿಗೆ ಅಂಬಿಕಾ ಸಿಬಿಎಸ್‍ ಇ ವಿದ್ಯಾಲಯದ ವತಿಯಿಂದ ‘ಆಟಿದ ಬೆನ್ನಿಡ್ ಕೇಸರ್ದ ಗೊಬ್ಬು’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿಪರ ಕೃಷಿಕ ಮಾಧವ ಗೌಡ ಕಾಂತಿಲ ಮಾತನಾಡಿ, ಇಂದಿನ ಕಾಲಘಟ್ಟದ ಕೃಷಿ ಕಾರ್ಯದಲ್ಲಿ ಗಣನೀಯ ಬದಲಾವಣೆ ಕಂಡಿದ್ದು, ಈ ಬದಲಾವಣೆಯು ಮಾನವರ ಆರೋಗ್ಯದ ಮೇಲೂ ಪ್ರಭಾವ ಬೀರಿದೆ. ಆದುದರಿಂದ ಆಧುನಿಕ ತಂತ್ರಜ್ಞಾನದ ಜೊತೆಗೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಪಾಲನೆಯೂ ಅವಶ್ಯಕ ಎಂದರು. ಅಂಬಿಕಾ ಸಮೂಹ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟೋಜ ಮಾತನಾಡಿ, ಕೋರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲೂ

ಅಂಬಿಕಾ ಸಿಬಿಎಸ್‍ ಇ ವಿದ್ಯಾಲಯದಿಂದ ‘ಆಟಿದ ಬೆನ್ನಿಡ್ ಕೇಸರ್ದ ಗೊಬ್ಬು’ Read More »

ಸುವರ್ಣ ಪ್ರತಿಭೆ : ಆಪ್ತ ಚಂದ್ರಮತಿ ಮುಳಿಯ

ಬದುಕಿಗೆ ನಮ್ಮಲ್ಲಿರುವ ಜ್ಞಾನ ಕೌಶಲ್ಯಗಳು ದಾರಿದೀಪವಾಗುತ್ತವೆ. ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅಂತಹ ಸುವರ್ಣ ಪ್ರತಿಭೆ ಪುತ್ತೂರು ವಿವೇಕಾನಂದ ಸೆಂಟ್ರಲ್ ಶಾಲಾ 9ನೇ ತರಗತಿಯ ಕು.ಆಪ್ತ ಚಂದ್ರಮತಿ ಮುಳಿಯ. ಮಡಿಕೇರಿ, ಪುತ್ತೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಪಡೆದಿರುವ ಕು.ಆಪ್ತ 6ನೇ ತರಗತಿಯಲ್ಲಿರುವಾಗಲೇ ವಿವಿಧ ವಿಜ್ಞಾನ ಯೋಜನೆಗಳಲ್ಲಿ ತೊಡಗಿಸಿ ಏನಾದರೊಂದು ಸಾಧನೆ ಮಾಡಬೇಕೆಂಬ ಕನಸು ಹೊಂದಿರುವ ಪ್ರತಿಭಾವಂತೆ. ಕು.ಆಪ್ತ ಚಂದ್ರಮತಿ ಮುಳಿಯ, ಆಫ್ರಿಕಾದ “ಟುನೀಷಿಯಾ ಅಸೋಸಿಯೇಷನ್ ಫಾರ್ ದಿ ಫ್ಯೂಚರ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ

ಸುವರ್ಣ ಪ್ರತಿಭೆ : ಆಪ್ತ ಚಂದ್ರಮತಿ ಮುಳಿಯ Read More »

ಆ.5 ರಿಂದ ಪ್ರತಿಷ್ಠಿತ ‘ರಾಧಾ’ಸ್’ ಸಿಲ್ಕ್ಸ್ & ಟೆಕ್ಸ್ ಟೈಲ್ ಹಾಗೂ ರೆಡಿಮೇಡ್ ಫ್ಯಾಮಿಲಿ ಶೋರೂಂನಲ್ಲಿ ‘ಮಾನ್ಸೂನ್ ಮೇಳ’ ಆರಂಭ

ಪುತ್ತೂರು: ಇಲ್ಲಿಯ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ರಾಧಾ’ಸ್’ ಸಿಲ್ಕ್ಸ್ & ಟೆಕ್ಸ್ ಟೈಲ್ ಹಾಗೂ ರೆಡಿಮೇಡ್‍ಫ್ಯಾಮಿಲಿ ಶೋರೂಂನಲ್ಲಿ ಈ ಬಾರಿ ಮಾನ್ಸೂನ್ ಸೇಲ್‍‘ಮಾನ್ಸೂನ್ ಮೇಳ’ ಆ.5 ರಿಂದ ಆರಂಭಗೊಳ್ಳಲಿದೆ.ಮಾನ್ಸೂನ್ ಮೇಳದ ಅಂಗವಾಗಿ ಪ್ರತಿ ದಿನ ಹೊಸ ಸಂಗ್ರಹದೊಂದಿಗೆ ಅತೀ ಕಡಿಮೆ ಬೆಲೆಯಲ್ಲಿ ಸಾರೀ, ರೆಡಿಮೇಡ್ ಬಟ್ಟೆಗಳನ್ನು ಗ್ರಾಹಕರಿಗೆ ಒದಗಿಸಲಾಗುವುದು. ಪುತ್ತೂರಿನ ಫ್ಯಾಶನ್ ಲೋಕದ ಅತಿ ದೊಡ್ಡ ಉತ್ಸವ ಇದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಆ.5 ರಿಂದ ಪ್ರತಿಷ್ಠಿತ ‘ರಾಧಾ’ಸ್’ ಸಿಲ್ಕ್ಸ್ & ಟೆಕ್ಸ್ ಟೈಲ್ ಹಾಗೂ ರೆಡಿಮೇಡ್ ಫ್ಯಾಮಿಲಿ ಶೋರೂಂನಲ್ಲಿ ‘ಮಾನ್ಸೂನ್ ಮೇಳ’ ಆರಂಭ Read More »

error: Content is protected !!
Scroll to Top