ಪುತ್ತೂರು

ಸಂಸದ ಕ್ಯಾ.ಬ್ರಿಜೇಶ್‍ ಚೌಟರನ್ನು ಭೇಟಿಯಾದ ಪುತ್ತೂರು ಬಿಜೆಪಿ, ಗ್ರಾಮಾಂತರ ಮಂಡಲ ಪದಾಧಿಕಾರಿಗಳು

ಪುತ್ತೂರು: ಬಿಜೆಪಿ ಗ್ರಾಮಾಂತರ ಹಾಗೂ ನಗರ ಮಂಡಲಕ್ಕೆ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರು ಸಹಿತ ಇನ್ನಿತರ ಪದಾಧಿಕಾರಿಗಳು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಭೇಟಿ ಮಾಡಿದರು. ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನ ಕುಮಾರ್ ಮಾರ್ತ ಭೇಟಿ ಮಾಡಿ ಸಂಸದರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ನಿತೇಶ್‍ ಕುಮಾರ್ ಶಾಂತಿವನ, ಜಯಶ್ರೀ ಎಲ್‍. […]

ಸಂಸದ ಕ್ಯಾ.ಬ್ರಿಜೇಶ್‍ ಚೌಟರನ್ನು ಭೇಟಿಯಾದ ಪುತ್ತೂರು ಬಿಜೆಪಿ, ಗ್ರಾಮಾಂತರ ಮಂಡಲ ಪದಾಧಿಕಾರಿಗಳು Read More »

ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 42ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ಸವಣೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಸವಣೂರಿನಲ್ಲಿ ನಡೆಯಿತು. ಸಮಿತಿ ಗೌರವಾಧ್ಯಕ್ಷರಾದ ಕೆ. ಸೀತಾರಾಮ ರೈ ಸವಣೂರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಮೆದು,  ಉಪಾಧ್ಯಕ್ಷ ರಾಘವ ಗೌಡ ಗುರುಪುತ್ತಾರು, ಜೊತೆ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ನಡುಬೈಲು, ಕೋಶಧಿಕಾರಿ ರಾಮಕೃಷ್ಣ ಪ್ರಭು, ಸದಸ್ಯರಾದ ಸುಂದರ ರೈ ಸವಣೂರು, ಸಂಜೀವ ಪೂಜಾರಿ ಅಗರಿ, ಗಂಗಾಧರ ಪೆರಿಯಡ್ಕ, ವೆಂಕಪ್ಪ

ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 42ನೇ ವರ್ಷದ ಶ್ರೀ ಗಣೇಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಸಮರ್ಪಣಾ ಮಹಿಳಾ ಸೇವಾ ಸಂಸ್ಥೆ ವರಮಹಾಲಕ್ಷ್ಮೀ ಪೂಜಾ ಸಮಿತಿ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸಕೇಂದ್ರ ಪುತ್ತೂರು ಘಟಕದ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ಆ.16ರಂದು ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ವೇ ಮೂ ಹರಿಪ್ರಸಾದ ವೈಲಾಯ ಅವರ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಎಚ್ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ

ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

ನಾಳೆ ಪುತ್ತೂರಿನಲ್ಲಿಯೂ ವೈದ್ಯಕೀಯ ಸೇವೆಗಳು ಭಾಗಶಃ ಬಂದ್ | ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‍ ಘೋಷಣೆ

ಪುತ್ತೂರು: ಕೋಲ್ಕತ್ತಾದ ಆರ್ ಜಿ ಆರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆ ಮೇಲೆ ನಡೆದ ಅತ್ಯಾಚಾರ, ಹತ್ಯೆ ಹಾಗೂ ಈ ಘಟನೆಯ ಬಗೆಗಿನ ಸಾಕ್ಷಿ ನಾಶದ ದುರುದ್ದೇಶ ಇಟ್ಟುಕೊಂಡು ಆಸ್ಪತ್ರೆಯ ಮೇಲೆ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ದುಷ್ಕರ್ಮಿಗಳು ನಡೆಸಿದ ಧಾಳಿಯನ್ನು ಖಂಡಿಸಿ ಆ.17 ನಾಳೆ  ಬೆಳಗ್ಗೆ 6:00 ಗಂಟೆಯಿಂದ ಆ.18ರ ಬೆಳಗ್ಗೆ 6:00ರ ವರೆಗೆ ರಾಷ್ಟ್ರವ್ಯಾಪ್ತಿ ವೈದ್ಯಕೀಯ ಸೇವೆಗಳನ್ನು ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ ರಾಷ್ಟೀಯ ಶಾಖೆ ಘೋಷಿಸಿದೆ. ಅದರಂತೆ ಪುತ್ತೂರಿನಲ್ಲಿಯೂ ವೈದ್ಯಕೀಯ

ನಾಳೆ ಪುತ್ತೂರಿನಲ್ಲಿಯೂ ವೈದ್ಯಕೀಯ ಸೇವೆಗಳು ಭಾಗಶಃ ಬಂದ್ | ಇಂಡಿಯನ್ ಮೆಡಿಕಲ್ ಅಸೋಸಿಯೇಶನ್‍ ಘೋಷಣೆ Read More »

ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ

ಪುತ್ತೂರು: ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಗೌಡವ ಯುವ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಹಯೋಗದೊಂದಿಗೆ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇಂದು ನಡೆಯಿತು. ಪೂಜೆಯ ಅಂಗವಾಗಿ ಬೆಳಿಗ್ಗೆ ವಿಶ್ರಾಂತ ಪ್ರಾಧ್ಯಾಪಕಿ ಲೀಲಾವತಿ ಎಂ. ನೇರಳ ಧಾರ್ಮಿಕ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಬೆಳ್ಯಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಸಂಧ್ಯಾ ಶಶಿಧರ್, ಸಮಿತಿಯ

ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ Read More »

ಸ್ಕೂಟರ್-ಗೂಡ್ಸ್  ವಾಹನ ಡಿಕ್ಕಿ | ಸ್ಕೂಟರ್ ಸವಾರ ಗಂಭೀರ

ಪುತ್ತೂರು: ಸ್ಕೂಟರ್ ಗೆ ಗೂಡ್ಸ್ ವಾಹನ ಡಿಕ್ಕಿ ಹೋಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಸಂಪ್ಯ ಮಸೀದಿ ಬಳಿ ಇಂದು ನಡೆದಿದೆ. ಸ್ಕೂಟರ್ ಸವಾರರನ್ನು ದರ್ಬೆ ಸಂತ‌ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಗಳೆಂದು ಗುರುತಿಸಲಾಗಿದೆ. ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಗೂಡ್ಸ್ ವಾಹನ‌ವನ್ನು ತಮಿಳುನಾಡು ಮೂಲದ್ದು ಎಂದು‌ ಗುರುತಿಸಲಾಗಿದೆ.

ಸ್ಕೂಟರ್-ಗೂಡ್ಸ್  ವಾಹನ ಡಿಕ್ಕಿ | ಸ್ಕೂಟರ್ ಸವಾರ ಗಂಭೀರ Read More »

ಕುದ್ಮಾರು ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವ

ಕುದ್ಮಾರು : ದ.ಕ.ಜಿ.ಪಂ.ಸ.ಉ.ಹಿ ಪ್ರಾ ಶಾಲೆ ಕುದ್ಮಾರು ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪೂರ್ವಾಹ್ನ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ನವ್ಯ ಅನ್ಯಾಡಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸ್ವಾತಂತ್ರ್ಯ ಹೋರಾಟಗಾರರ ಚದ್ಮವೇಷದೊಂದಿಗೆ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಸಾಗಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಪಾರ್ವತಿ ಮರಕ್ಕಡ ವಹಿಸಿದ್ದರು. ವೇದಿಕೆಯಲ್ಲಿ ದತ್ತಿನಿಧಿ ದಾನಿಗಳಾದ  ಶೂರಪ್ಪ ಗೌಡ ಪಟ್ಟೆತ್ತಾನ, ಆನಂದ ಗೌಡ, ರಂಜಿತ್ ಮುದ್ಯಾ, ಮೇದಪ್ಪ ಗೌಡ ಕುವೆತ್ತೋಡಿ, ರೇವತಿ,

ಕುದ್ಮಾರು ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವ Read More »

 ಆ.18 : ರಕ್ತದಾನ ಶಿಬಿರ, ರಕ್ತ ವರ್ಗೀಕರಣ ಕಾರ್ಯಕ್ರಮ

ಪುತ್ತೂರು: ಐಕ್ಯ ಕಲಾ-ಸೇವಾ ಟ್ರಸ್ಟ್ ನೇತೃತ್ವದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್, ಪ್ರಗತಿ ಪ್ಯಾರ ಮೆಡಿಕಲ್ ಸೈನ್ಸ್ ಸಹಯೋಗದಲ್ಲಿ ಕೆಮ್ಮಿಂಜೆ ವಲಯ ಭೂಮಿಕಾ ಒಕ್ಕೂಟ ಹಾಗೂ ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವ ಬಳಗದ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ರಕ್ತ ವರ್ಗೀಕರಣ ಕಾರ್ಯಕ್ರಮ ಆ.18 ಭಾನುವಾರ ಮೊಟ್ಟೆತ್ತಡ್ಕ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ. ಶಾಸಕರ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.   ಮುಖ್ಯ ಅತಿಥಿಗಳಾಗಿ ಡಾ.ಸುರೇಶ್‍ಪುತ್ತೂರಾಯ, ಪ್ರಗತಿ ಕಾಲೇಜು ಆಫ್‍ಪ್ಯಾರ ಮೆಡಿಕಲ್ ಸೈನ್ಸ್ ಆಡಳಿತಾಧಿಕಾರಿ ಪ್ರೀತಾ

 ಆ.18 : ರಕ್ತದಾನ ಶಿಬಿರ, ರಕ್ತ ವರ್ಗೀಕರಣ ಕಾರ್ಯಕ್ರಮ Read More »

ಮಕ್ಕಳ ಮನೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

ಪುತ್ತೂರು: ಬೊಳುವಾರಿನಲ್ಲಿರುವ ಮಕ್ಕಳ ಮನೆ ಶಾಲೆಯಲ್ಲಿ 78ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಶಿಕ್ಷಕಿ ಸತ್ಯಪೂರ್ಣ ನೆರವೇರಿಸಿದರು. ಧ್ವಜಾರೋಹಣದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಕ್ಕಳ ಪೋಷಕರು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ಸಿಹಿತಿಂಡಿ ವಿತರಿಸಿ ಸಂಭ್ರಮಿಸಲಾಯಿತು.

ಮಕ್ಕಳ ಮನೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ Read More »

ಎಕ್ಕಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

ಎಕ್ಕಡ್ಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ವಿನಯ್ ಪಾಂಬಾರು ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಸಂತ್ ಕುಮಾರ್ ದುಗ್ಗಲ, ಯತೀಂದ್ರ ಕೊಚ್ಚಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಯಶೋಧ, ರೂಪಶ್ರೀ ,ಕೊಳ್ತಿಗೆ ಸಿಎ ಬ್ಯಾಂಕ್‌ ಸಿಬ್ಬಂದಿ ಸುಬ್ಬಯ್ಯ ನಾಯ್ಕ ಕೆ. ಹಾಗೂ ದಾನಿಗಳಾದ ಸತೀಶ್ ಪಾಂಬರು ಉಪಸ್ಥಿತರಿದ್ದರು.

ಎಕ್ಕಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ Read More »

error: Content is protected !!
Scroll to Top