ಪುತ್ತೂರು

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅನಾಜೆ ಶಾಖೆಯಲ್ಲಿ ಗಣಹೋಮ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅನಾಜೆ ಶಾಖೆಯಲ್ಲಿ ಗಣಪತಿ ಹೋಮ ಇಂದು ಬೆಳಿಗ್ಗೆ ನಡೆಯಿತು. ಅರ್ಚಕ  ರಾಧಾಕೃಷ್ಣ ಶಗ್ರಿತ್ತಾಯ ವೈದಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನವೀನ್ ಡಿ, ಉಪಾಧ್ಯಕ್ಷೆ ಪವಿತ್ರ ಕೆ. ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ್ ಎಚ್., ನಿರ್ದೇಶಕ ನಮಿತ ಸೇರಾಜೆ, ಶಿವ ಪ್ರಸಾದ್, ಜಯರಾಮ್ ಪೂಜಾರಿ, ಬಾಬು ಶೆಟ್ಟಿ, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯೆ ವಸಂತಿ ಗಂಡಿ, ಅನಾಜೆ ಹಾಲು  ಉತ್ಪಾದಕರ ಸಂಘದ ಅಧ್ಯಕ್ಷ ಹರ್ಷ […]

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅನಾಜೆ ಶಾಖೆಯಲ್ಲಿ ಗಣಹೋಮ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಎನ್‍ ಎಸ್‍ ಎಸ್‍ ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಪ್ರಶಿಕ್ಷಣ ಕಾರ್ಯಕ್ರಮ | ಎನ್. ಎಸ್. ಎಸ್. ವಿದ್ಯಾರ್ಥಿಗಳನ್ನು ಸಮಾಜಮುಖಿಗಳನ್ನಾಗಿ ಮಾಡುವ ಅದ್ಬುತ ವೇದಿಕೆ : ಡಾ. ಲಕ್ಷ್ಮೀನಾರಾಯಣ ಕೆ.ಎಸ್.

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024-25ನೇ ಸಾಲಿನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಶಿಕ್ಷಣ ಕಾರ್ಯಕ್ರಮ ಮಹಾವಿದ್ಯಾಲಯದ ಸುಜ್ಞಾನ  ದೀಪಿಕಾ ಸಭಾಂಗಣದಲ್ಲಿ ನಡೆಯಿತು. ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿ(ಸ್ವಾಯತ್ತ)ನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಕಾರ್ಯಕ್ರಮ ಉದ್ಘಾಟಿಸಿ, ಎನ್.ಎಸ್.ಎಸ್.ನ ಹುಟ್ಟು, ಬೆಳವಣಿಗೆ, ಕಾರ್ಯಕ್ರಮಗಳ ರೂಪುರೇಷೆ ಹಾಗೂ ವಿದ್ಯಾರ್ಥಿಗಳು ಯಾವ ರೀತಿ ಈ ಘಟಕದಲ್ಲಿ ತಮ್ಮನ್ನು ತಾವು ತೊಡಗಿಸಬಹುದು ಎಂಬುದನ್ನು ವಿವರಿಸಿದರು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಓದು

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಎನ್‍ ಎಸ್‍ ಎಸ್‍ ಘಟಕದ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ, ಪ್ರಶಿಕ್ಷಣ ಕಾರ್ಯಕ್ರಮ | ಎನ್. ಎಸ್. ಎಸ್. ವಿದ್ಯಾರ್ಥಿಗಳನ್ನು ಸಮಾಜಮುಖಿಗಳನ್ನಾಗಿ ಮಾಡುವ ಅದ್ಬುತ ವೇದಿಕೆ : ಡಾ. ಲಕ್ಷ್ಮೀನಾರಾಯಣ ಕೆ.ಎಸ್. Read More »

ಡಾ. ಚಿನ್ನಪ್ಪ ಗೌಡರಿಗೆ ಡಾ. ಜಿ.ಶಂ.ಪ ತಜ್ಞ ಪ್ರಶಸ್ತಿ

ಮಂಗಳೂರು: 2023ನೇ ಸಾಲಿನ ಡಾ. ಜಿ.ಶಂ.ಪ ತಜ್ಞ ಪ್ರಶಸ್ತಿಯನ್ನು ಡಾ. ಕೆ. ಚಿನ್ನಪ್ಪ ಗೌಡ ಅವರಿಗೆ ಘೋಷಿಸಲಾಗಿದೆ. ಜನಪದ ಆರಾಧನೆಯ ‘ಮಧ್ಯಂತರ ಜಗತ್ತು’ ಮತ್ತು ಅದರ ‘ಸಂಕೀರ್ಣ ಪಠ್ಯ’, ಜಾನಪದದ ಅರ್ಥ ಮತ್ತು ಕಾರ್ಯಗಳ ವಿವೇಚನೆ, ಜಾನಪದ ಪ್ರಕಾರವೊಂದರ ಪ್ರದರ್ಶನ ಸಂದರ್ಭದ ಆಚೆಗಿರುವ ವಿವರಗಳ ಪರಿಕಲ್ಪನೆಗಳನ್ನು ವಿವರಿಸಿ ಜಾನಪದ ಅಧ್ಯಯನದಲ್ಲಿ ವಿಶೇಷವಾಗಿ ತೊಡಗಿಸಿಕೊಂಡವರು ಡಾ. ಕೆ.ಚಿನ್ನಪ್ಪ ಗೌಡ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿನ್ನಪ್ಪ ಗೌಡ ಅವರು ಭೂತಾರಾಧನೆಯ ಅತ್ಯಂತ ಪ್ರಾಚೀನವೂ ವಿಶಿಷ್ಟವೂ ಆದ ‘ಜಾಲಾಟ’ದ

ಡಾ. ಚಿನ್ನಪ್ಪ ಗೌಡರಿಗೆ ಡಾ. ಜಿ.ಶಂ.ಪ ತಜ್ಞ ಪ್ರಶಸ್ತಿ Read More »

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ತೆರಳಿದ್ದ ವಿದ್ಯಾರ್ಥಿಗೆ ಅನ್ಯಾಯ | ಶಿಕ್ಷಣ ಸಂಸ್ಥೆ ವಿರುದ್ಧ ಮರಾಠಿ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆಯ ನಿರ್ಧಾರ

ಪುತ್ತೂರು : ರಾಷ್ಟ್ರ ಮಟ್ಟದ ಕ್ರೀಡಾಕೂಟ ಕ್ಕೆ ಭಾಗಿಯಾಗಲು ತೆರಳಿದ್ದ ವಿದ್ಯಾರ್ಥಿ ಗೆ ಅನ್ಯಾಯ ಮಾಡಲಾಗಿದೆ ಎಂದು ಮರಾಠಿ ಸಂರಕ್ಷಣಾ ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ್‍ ನಾಯ್ಕ್ ಆರೋಪಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ವಿರುದ್ಧ ಸಮಿತಿ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಖಾಸಗಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದರು. ಮಧ್ಯ ಪ್ರದೇಶದಲ್ಲಿ ಅಖಿಲ ಭಾರತೀಯ ವಿದ್ಯಾಭಾರತಿ ಪ್ರಾಂತೀಯ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕಿದ್ದ ವಿದ್ಯಾರ್ಥಿಯನ್ನು ಕ್ರೀಡೆಯಲ್ಲಿ ಭಾಗಿಯಾಗಲು

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ತೆರಳಿದ್ದ ವಿದ್ಯಾರ್ಥಿಗೆ ಅನ್ಯಾಯ | ಶಿಕ್ಷಣ ಸಂಸ್ಥೆ ವಿರುದ್ಧ ಮರಾಠಿ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆಯ ನಿರ್ಧಾರ Read More »

ಸವಣೂರು ಕೆನರಾ ಬ್ಯಾಂಕ್‍ ಶಾಖೆಯಲ್ಲಿ ಸೇವಾ ನ್ಯೂನತೆ | ಸರಿಪಡಿಸುವಂತೆ ಆಗ್ರಹಿಸಿ ಗ್ರಾಹಕರಿಂದ ಪ್ರತಿಭಟನೆ

ಸವಣೂರು : ಕೆನರಾ ಬ್ಯಾಂಕ್ ಸವಣೂರು ಶಾಖೆಯಲ್ಲಿ ನಡೆಯುತ್ತಿರುವ ಸೇವಾ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಬ್ಯಾಂಕ್ ಎದುರು ಗ್ರಾಹಕರಿಂದ ಪ್ರತಿಭಟನೆ ಇಂದು ನಡೆಯಿತು. ಸವಣೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸರಿಯಾದ ಸೇವೆ ದೊರಕದೆ ಗ್ರಾಹಕರು ಪರದಾಡುವಂತಾಗಿದೆ. ಹಲವಾರು ಬಾರಿ ಬ್ಯಾಂಕ್‌ನ ಶಾಖಾಧಿಕಾರಿಗಳು, ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಸೇವೆಯಲ್ಲಿ ಯಾವುದೇ ಸುಧಾರಣೆ ಆಗಿರುವುದಿಲ್ಲ. ಹಿರಿಯ ಗ್ರಾಹಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸವಣೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಗುಣಮಟ್ಟದ ಗ್ರಾಹಕ ಸ್ನೇಹಿ

ಸವಣೂರು ಕೆನರಾ ಬ್ಯಾಂಕ್‍ ಶಾಖೆಯಲ್ಲಿ ಸೇವಾ ನ್ಯೂನತೆ | ಸರಿಪಡಿಸುವಂತೆ ಆಗ್ರಹಿಸಿ ಗ್ರಾಹಕರಿಂದ ಪ್ರತಿಭಟನೆ Read More »

ವಕ್ಫ್ ಹೆಸರಲ್ಲಿ ಭೂಮಿ ಕಬಳಿಕೆ ಹುನ್ನಾರ ಸಿದ್ಧರಾಮಯ್ಯರ ಕುಮ್ಮಕ್ಕಿನಿಂದ ನಡೆಯುತ್ತಿದೆ : ವಿಶ್ವೇಶ್ವರ ಭಟ್‍ ಬಂಗಾರಡ್ಕ | ವಕ್ಫ್ ಹೆಸರಲ್ಲಿ ರೈತರ ಭೂಮಿ, ದೇವಸ್ಥಾನ, ಬೆಂಗಳೂರಿನ ವಿಧಾನಸೌಧಕ್ಕೂ ಅಪಾಯ ಕಾದಿದೆ : ಸಂಜೀವ ಮಠಂದೂರು | ಪುತ್ತೂರಿನಲ್ಲಿ ರೈತ ವಿರೋಧಿ ಕಾಂಗ್ರೆಸ್‍ ಸರಕಾರದ ಲ್ಯಾಂಡ್‍ ಜಿಹಾದ್‍ ಹಾಗೂ ವಕ್ಫ್ ಅಕ್ರಮವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ

ಪುತ್ತೂರು: ಸಿದ್ಧರಾಮಯ್ಯ ನೇತೃತ್ವದ ಸರಕಾರ ಮತಬ್ಯಾಂಕ್‍ ಗಾಗಿ ಮುಸ್ಲಿಂರ ತುಷ್ಠೀಕರಣ ಮಾಡುವ ಮೂಲಕ ಭಾರತೀಯ ಜನತಾ ಪಾರ್ಟಿಯನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುವ ಹುನ್ನಾರು ನಡೆಸುತ್ತಿರುವುದರ ಜತೆಗೆ ವಕ್ಫ್ ಹೆಸರಲ್ಲಿ ಬಡವರ ಭೂಮಿಯನ್ನು ಕಬಳಿಸುವ ಪ್ರಯತ್ನದಲ್ಲಿದೆ ಎಂದು ಬಿಜೆಪಿ ರಾಜ್ಯ ಪದಾಧಿಕಾರಿ ವಿಶ್ವೇಶ್ವರ ಭಟ್‍ ಬಂಗಾರಡ್ಕ ಆರೋಪಿಸಿದರು. ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಹಾಗೂ ಗ್ರಾಮಾಂತರ ಮಂಡಲದ ವತಿಯಿಂದ ದರ್ಬೆ ವೃತ್ತದ ಬಳಿ ರೈತ ವಿರೋಧಿ ಕಾಂಗ್ರೆಸ್‍ ಸರಕಾರದ ಲ್ಯಾಂಡ್‍ ಜಿಹಾದ್‍ ಹಾಗೂ ವಕ್ಫ್ ಅಕ್ರಮವನ್ನು

ವಕ್ಫ್ ಹೆಸರಲ್ಲಿ ಭೂಮಿ ಕಬಳಿಕೆ ಹುನ್ನಾರ ಸಿದ್ಧರಾಮಯ್ಯರ ಕುಮ್ಮಕ್ಕಿನಿಂದ ನಡೆಯುತ್ತಿದೆ : ವಿಶ್ವೇಶ್ವರ ಭಟ್‍ ಬಂಗಾರಡ್ಕ | ವಕ್ಫ್ ಹೆಸರಲ್ಲಿ ರೈತರ ಭೂಮಿ, ದೇವಸ್ಥಾನ, ಬೆಂಗಳೂರಿನ ವಿಧಾನಸೌಧಕ್ಕೂ ಅಪಾಯ ಕಾದಿದೆ : ಸಂಜೀವ ಮಠಂದೂರು | ಪುತ್ತೂರಿನಲ್ಲಿ ರೈತ ವಿರೋಧಿ ಕಾಂಗ್ರೆಸ್‍ ಸರಕಾರದ ಲ್ಯಾಂಡ್‍ ಜಿಹಾದ್‍ ಹಾಗೂ ವಕ್ಫ್ ಅಕ್ರಮವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆ | ವಿದ್ಯಾರ್ಥಿ ಪರಿಷತ್ ಎಂಬುದು ಎಲ್ಲಾ ವಿದ್ಯಾರ್ಥಿಗಳ ಧ್ವನಿಯಾಗಿದೆ: ಡಾ. ಶ್ರೀಪತಿ ಕಲ್ಲೂರಾಯ

ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ 2024-25ರ ಸಾಲಿನ ವಿದ್ಯಾರ್ಥಿ ಪರಿಷತ್ ನ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ‘ಪರಿಚಯೋತ್ಸವ’ ಕಾರ್ಯಕ್ರಮ ನಡೆಯಿತು. ವಿವೇಕಾನಂದ  ಕಾಲೇಜಿ(ಸ್ವಾಯತ್ತ)ನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಪ್ರತಿಯೊಂದು ಕಾಲೇಜಿನಲ್ಲಿ ರಚನೆಯಾಗುವ ವಿದ್ಯಾರ್ಥಿ ಪರಿಷತ್ ಎಂಬುದು ವಿದ್ಯಾರ್ಥಿಗಳ ಧ್ವನಿಯಾಗಿದೆ. ಕಾಲೇಜಿನ ಎಲ್ಲಾ ವಿದ್ಯಾರ್ಥಿ ಸಮುದಾಯದ ನಿರೀಕ್ಷೆಗಳು ಈ ವಿದ್ಯಾರ್ಥಿ ಪರಿಷತ್ ನ ವಿದ್ಯಾರ್ಥಿ ನಾಯಕರ ಮೇಲಿರುತ್ತದೆ. ಜೊತೆಗೆ ವಿದ್ಯಾರ್ಥಿ ಪರಿಷತ್ ಎನ್ನುವುದು

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಉದ್ಘಾಟನೆ | ವಿದ್ಯಾರ್ಥಿ ಪರಿಷತ್ ಎಂಬುದು ಎಲ್ಲಾ ವಿದ್ಯಾರ್ಥಿಗಳ ಧ್ವನಿಯಾಗಿದೆ: ಡಾ. ಶ್ರೀಪತಿ ಕಲ್ಲೂರಾಯ Read More »

ವಿಟ್ಲ ಶಾಂತಿನಗರದಲ್ಲಿ ಬ್ರಹ್ಮಶ್ರೀ ಶಾಮಿಯಾನ & ಸರ್ವೀಸಸ್ ಶುಭಾರಂಭ

ಬಂಟ್ವಾಳ: ಬ್ರಹ್ಮಶ್ರೀ ಶಾಮಿಯಾನ & ಸರ್ವೀಸಸ್ ಬಂಟ್ವಾಳ ತಾಲೂಕಿನ ವಿಟ್ಲ ಶಾಂತಿನಗರದಲ್ಲಿರುವ ನೂತನ ಕಟ್ಟಡದಲ್ಲಿ ಶನಿವಾರ ಶುಭಾರಂಭಗೊಂಡಿತು. ಶುಭಾರಂಭದ ಪ್ರಯುಕ್ತ ಬೆಳಿಗ್ಗೆ  10.30 ಕ್ಕೆ ಗಣಪತಿ ಹವನ ಮತ್ತು ಲಕ್ಷ್ಮೀ ಪೂಜೆ ನಡೆಯಿತು. ಬಳಿಕ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಪುಂಡಿಕಾಯಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ದ.ಕ.ಜಿಲ್ಲಾ ಶಾಮಿಯಾನ

ವಿಟ್ಲ ಶಾಂತಿನಗರದಲ್ಲಿ ಬ್ರಹ್ಮಶ್ರೀ ಶಾಮಿಯಾನ & ಸರ್ವೀಸಸ್ ಶುಭಾರಂಭ Read More »

ದೀಕ್ಷಿತ್ – ರಕ್ಷಿತಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ

ಪುತ್ತೂರು: ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಮನೆ ಯಶೋದಾ ಮತ್ತು ಗಂಗಾಧರ ಗೌಡರ ಪುತ್ರ ದೀಕ್ಷಿತ್ ಅವರ ವಿವಾಹ ನಿಶ್ಚಿತಾರ್ಥ ಕಡಬ ತಾಲೂಕಿನ ಎಣ್ಮೂರು ಗ್ರಾಮದ ಹೇಮಳ ಕೂರಂಬೇಲು ಭುವನೇಶ್ವರಿ ಮತ್ತು ಬಾಲಕೃಷ್ಣ ಗೌಡರ ಪುತ್ರಿ ರಕ್ಷಿತಾ ಅವರೊಂದಿಗೆ ಕೆಮ್ಮಲೆ ಹೇಮಳದಲ್ಲಿರುವ ಭ್ರಮರಾಂಬಿಕ ನಿಲಯದಲ್ಲಿ ಇಂದು ನಡೆಯಿತು. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ವಿವಾಹ ಸಮಾರಂಭ ಫೆ.16, 2025 ನೇ ಶನಿವಾರ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ದೀಕ್ಷಿತ್ – ರಕ್ಷಿತಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ Read More »

ಚಾಲಕನ ನಿದ್ರೆಯ ಮಂಪರಿನಲ್ಲಿ ಪ್ರಪಾತಕ್ಕೆ ಬಿದ್ದ ಕಾರು | ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು

ಪುತ್ತೂರು: ಸಂಟ್ಯಾರ್ ಪಾಣಾಜೆ ಹೆದ್ದಾರಿಯ ಕೈಕಾರ ಎಂಬಲ್ಲಿ ಚಾಲಕನಿಗೆ ನಿದ್ದೆ ಮಂಪರು ಆವರಿಸಿ ಹತೋಟಿ ತಪ್ಪಿದ ಕಾರು ರಸ್ತೆ ಅಂಚಿನಲ್ಲಿದ್ದ 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಶನಿವಾರ ತಡರಾತ್ತಿ ಈ ಘಟನೆ ನಡೆದಿದ್ದು, ಪ್ರಪಾತಕ್ಕೆ ಕಾರು ಉರುಳಿ ಬಿದ್ದರೂ, ಯಾವುದೇ ಆಪಾಯಗಳಿಲ್ಲದೇ ಚಾಲಕ ಪಾರಾಗಿದ್ದಾನೆ. ಕಾರು ಕಾಸರಗೋಡು ಜಿಲ್ಲೆಯ ಬದಿಯಡ್ಕ ಬಳಿಯ ಡಾ. ಚಂದ್ರಶೇಖರ್ ಅವರ ಪುತ್ರ ಡಾ. ವಿವೇಕ್ ಅವರಿಗೆ ಸೇರಿದಾಗಿದೆ. ರಾತ್ರಿ ಬದಿಯಡ್ಕದಿಂದ ಅವರು ಪುತ್ತೂರಿಗೆ ಕಾರ್ಯ ನಿಮಿತ್ತ ಬರುತ್ತಿದ್ದರು. ಬಳಕ್ಕೆ

ಚಾಲಕನ ನಿದ್ರೆಯ ಮಂಪರಿನಲ್ಲಿ ಪ್ರಪಾತಕ್ಕೆ ಬಿದ್ದ ಕಾರು | ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು Read More »

error: Content is protected !!
Scroll to Top