ಪುತ್ತೂರು

ಹೊರ ಜಿಲ್ಲೆಗಳಿಂದ ಬಂದ ಜೆಸಿಬಿ ಅಸಂಘಟಿತರನ್ನು ಓಡಿಸುವ ಬೆದರಿಕೆ | ಇಂತಹಾ ಘಟನೆ ಮರುಕಳಿಸಿದರೆ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ಹಾಕಲು ಸರಕಾರಕ್ಕೆ ಆಗ್ರಹ : ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಹೊರ ಜಿಲ್ಲೆಯಿಂದ ಅಂದರೆ ಘಟ್ಟ ಪ್ರದೇಶದಿಂದ ಬಂದು ಜೆಸಿಬಿ, ಹಿಟಾಚಿ ಇಟ್ಟುಕೊಂಡು ಕೆಲಸ ಮಾಡುತ್ತಿರುವವರ ಮೇಲೆ ಸ್ಥಳೀಯವಾಗಿ ಕೆಲವೊಂದು ವ್ಯಕ್ತಿಗಳು ದಬ್ಬಾಳಿಕೆ ಮಾಡುವ ಮೂಲಕ ಒಂದು ರೀತಿಯ ಗೊಂದಲ ಉಂಟು ಮಾಡುತ್ತಿದ್ದು, ಇಂತಹಾ ಘಟನೆಗಳು ಮುಂದಿನ ದಿನಗಳಲ್ಲಿ ಪುನಾರಾವರ್ತನೆಯಾದಲ್ಲಿ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ. ಅವರು ಈ ಕುರಿತು ಹೊರ ಜಿಲ್ಲೆಯಿಂದ ಬಂದ ಜೆಸಿಬಿ ಮಾಲಕರು ಹಾಗೂ ಆಪರೇಟರ್‍ಗಳಿಗೆ […]

ಹೊರ ಜಿಲ್ಲೆಗಳಿಂದ ಬಂದ ಜೆಸಿಬಿ ಅಸಂಘಟಿತರನ್ನು ಓಡಿಸುವ ಬೆದರಿಕೆ | ಇಂತಹಾ ಘಟನೆ ಮರುಕಳಿಸಿದರೆ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ಹಾಕಲು ಸರಕಾರಕ್ಕೆ ಆಗ್ರಹ : ಕಾವು ಹೇಮನಾಥ ಶೆಟ್ಟಿ Read More »

ಪಂಜಳದಲ್ಲಿ ಅತೀ ಶೀಘ್ರ ಅಂತರಾಷ್ಟ್ರೀಯ ಗುಣಮಟ್ಟದ ಜೇನು ಸಂಸ್ಕರಣಾ ಘಟಕ ಉದ್ಘಾಟನೆ | ಪುತ್ತೂರಿನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯಿಂದ ಲೋಗೋ ಅನಾವರಣ.

ಪುತ್ತೂರು: 2020ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಲ್ಲಿ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಸ್ಥಾಪಿತಗೊಂಡ ಗ್ರಾಮಜನ್ಯ ರೈತ ಉತ್ಪಾದಕರ ಸಂಸ್ಥೆಯ ನೂತನ ಲೋಗೋ ನ.28ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಅನಾವರಣಗೊಳಿಸಲಾಯಿತು. ಲೋಗೋ ಅನಾವರಣಕ್ಕೂ ಮುಂಚಿತವಾಗಿ ಸಂಸ್ಥೆಯ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೃಹತ್ ಕಲ್ಪನೆ ಇಟ್ಟುಕೊಂಡಿದ್ದೇವೆ. ಸಣ್ಣ ಹೆಜ್ಜೆ ಈಗಷ್ಟೆ ಇಟ್ಟಿದ್ದೇವೆ. ಈ ನಿಟ್ಟಿನಲ್ಲಿ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಟ್ಟದ ಜೇನು ಸಂಸ್ಕರಣಾ ಘಟಕ ಅತಿ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ.

ಪಂಜಳದಲ್ಲಿ ಅತೀ ಶೀಘ್ರ ಅಂತರಾಷ್ಟ್ರೀಯ ಗುಣಮಟ್ಟದ ಜೇನು ಸಂಸ್ಕರಣಾ ಘಟಕ ಉದ್ಘಾಟನೆ | ಪುತ್ತೂರಿನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯಿಂದ ಲೋಗೋ ಅನಾವರಣ. Read More »

ಸಾರ್ವಜನಿಕರಿಗೆ ಹಾದು ಹೋಗಲು ಭೂಗತ ಕಾಲುದಾರಿ ಬಗ್ಗೆ ಸಂಜೀವ ಮಠಂದೂರು ನೇತ್ರತ್ವದಲ್ಲಿ ಇಂಜಿನಿಯರ್ಗೆ ಮನವಿ ಸಲ್ಲಿಕೆ

ಪುತ್ತೂರು : ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರ  ಬೇಡಿಕೆ ಮೇರೆಗೆ ಸಾರ್ವಜನಿಕರಿಗೆ ಹಾದು ಹೋಗಲು ಭೂಗತ ಕಾಲುದಾರಿ ಹಾಗೂ ಸರ್ವಿಸ್ ರಸ್ತೆಯ ಡಾಮರೀಕರಣ  ಬಗ್ಗೆ ಮನವಿ ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕೆ.ಎನ್.ಆರ್ ಕನ್ಸ್ಟ್ರಕ್ಷನ್ ಇಂಜಿನಿಯರ್‌ಗಳಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮೂಲಕ ಮನವಿ ನೀಡಲಾಯಿತು.  ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಪ್ರಶಾಂತ್ ಎನ್ ನೆಕ್ಕಿಲಾಡಿ,ಹರೀಶ್

ಸಾರ್ವಜನಿಕರಿಗೆ ಹಾದು ಹೋಗಲು ಭೂಗತ ಕಾಲುದಾರಿ ಬಗ್ಗೆ ಸಂಜೀವ ಮಠಂದೂರು ನೇತ್ರತ್ವದಲ್ಲಿ ಇಂಜಿನಿಯರ್ಗೆ ಮನವಿ ಸಲ್ಲಿಕೆ Read More »

ಹಿಂದೂ ಕಾರ್ಯಕರ್ತರ ಮೇಲೆ‌ ದಬ್ಬಾಳಿಕೆ ನಡೆಸಿದರೆ ಯಾವುದೇ ಹೋರಾಟಕ್ಕೂ ಸಿದ್ಧ :  ಕಿಶೋರ್ ಕುಮಾರ್

ಪುತ್ತೂರು : ರಾಜ್ಯ ಸರಕಾರವು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ. ಉಡುಪಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ನಾಯಕರ ಮೇಲೆ ಸುಮೊಟೋ ಕೇಸ್ ದಾಖಲಿಸಿರುವ ಕುರಿತು ಮಾತನಾಡಿರುವ ಕಿಶೋರ್ ಕುಮಾರ್, ರಾಜ್ಯದಲ್ಲಿ ಆಡಳಿತ ಸರಕಾರವು ಆಡಳಿತಕ್ಕೆ ಬಂದಾಗಿನಿಂದ ನಿರಂತರವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಗುರಿಯಾಗಿರಿಸಿ ಕೇಸು ದಾಖಲಿಸುವುದು, ಗಡಿಪಾರು, ಗೂಂಡಾ ಕಾಯ್ದೆ ಹೇರುವ ಮೂಲಕ

ಹಿಂದೂ ಕಾರ್ಯಕರ್ತರ ಮೇಲೆ‌ ದಬ್ಬಾಳಿಕೆ ನಡೆಸಿದರೆ ಯಾವುದೇ ಹೋರಾಟಕ್ಕೂ ಸಿದ್ಧ :  ಕಿಶೋರ್ ಕುಮಾರ್ Read More »

ಪಿಕಪ್ ಚಾಲಕ ಲೋಕೇಶ್‍ ಕಲ್ಕಾರ್ ನಿಧನ

ಪುತ್ತೂರು: ಶಾಂತಿಗೋಡು ಗ್ರಾಮದ ಕಲ್ಕಾರ್ ನಿವಾಸಿ ಲೋಕೇಶ್‍ ಕಲ್ಕಾರ್ ಬುಧವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಸೀತಾ-ರಾಮಣ್ಣ ಗೌಡ ದಂಪತಿ ಪುತ್ರರಾಗಿರುವ ಲೋಕೇಶ್‍ ಕಲ್ಕಾರ್ ಸ್ವಂತ ಪಿಕಪ್ ಹೊಂದಿದ್ದು, ಚಾಲಕರಾಗಿದ್ದರು. ಮೃತರು ತಂದೆ, ತಾಯಿ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪಿಕಪ್ ಚಾಲಕ ಲೋಕೇಶ್‍ ಕಲ್ಕಾರ್ ನಿಧನ Read More »

ಕೆಮ್ಮಾಯಿ ಕೃಷ್ಣನಗರ 140 ನೇ ಬಿಜೆಪಿ ಬೂತ್ ಅಧ್ಯಕ್ಷರಾಗಿ ದಯಾನಂದ ಗೌಡ ಕೆಮ್ಮಾಯಿ, ಕಾರ್ಯದರ್ಶಿಯಾಗಿ ರವಿ ಆಚಾರ್ಯ ಕೃಷ್ಣನಗರ ಆಯ್ಕೆ.

ಪುತ್ತೂರು: ಚಿಕ್ಕಮುಡ್ನೂರು ಬಿಜೆಪಿ ಬೂತ್ ಸಂಖ್ಯೆ 140 ರ ನೂತನ ಅಧ್ಯಕ್ಷರಾಗಿ ದಯಾನಂದ ಗೌಡ ಕೆಮ್ಮಾಯಿ, ಕಾರ್ಯದರ್ಶಿಯಾಗಿ ರವಿ ಆಚಾರ್ಯ ಕೃಷ್ಣನಗರ ಆಯ್ಕೆಯಾಗಿದ್ದಾರೆ. ನಿವೃತ್ತ ಯೋಧ ಸಂಜೀವ ಕುಲಾಲ್ ಕೃಷ್ಣ ನಗರ ಅವರ ಮನೆಯಲ್ಲಿ ನಡೆದ ಆಯ್ಕೆ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.  ಲಾಭಾರ್ಥಿ ಪ್ರಮುಖ್ ಆಗಿ ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್ ಕೃಷ್ಣ ನಗರ, ಪ್ರಚಾರ ಪ್ರಮುಖರಾಗಿ ನಿಕಟಪೂರ್ವ ಅಧ್ಯಕ್ಷ ಅಶೋಕ್ ಪ್ರಶಾಂತ್ ಕೆಮ್ಮಾಯಿ, ಮಹಿಳಾ ಪ್ರಮುಖರಾಗಿ ಮಾಲಿನಿ ದಿನೇಶ್ ಆಚಾರ್ಯ ಕೃಷ್ಣನಗರ, ಲಲೀತಾ ಸುಬ್ರಹ್ಮಣ್ಯ ನಾಯಕ್,

ಕೆಮ್ಮಾಯಿ ಕೃಷ್ಣನಗರ 140 ನೇ ಬಿಜೆಪಿ ಬೂತ್ ಅಧ್ಯಕ್ಷರಾಗಿ ದಯಾನಂದ ಗೌಡ ಕೆಮ್ಮಾಯಿ, ಕಾರ್ಯದರ್ಶಿಯಾಗಿ ರವಿ ಆಚಾರ್ಯ ಕೃಷ್ಣನಗರ ಆಯ್ಕೆ. Read More »

ನ.28 ರಿಂದ 30 : ಪುತ್ತೂರಿನಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ

ಪುತ್ತೂರು: ಸಂಸಾರ ಜೋಡುಮಾರ್ಗ, ರೋಟರಿ ಪುತ್ತೂರು ಎಲೈಟ್ ಹಾಗೂ ನಿರತ ನಿರಂತ ಬಹುವಚನಂ ಆಶ್ರಯದಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ ನ.28 ರಿಂದ 30 ರ ವರೆಗೆ ಪುತ್ತೂರು ಸುದಾನ ವಿದ್ಯಾಸಂಸ್ಥೆಯ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ. ನ.28 ರ ಗುರುವಾರ ಸಂಜೆ  ಸಾಗರದ  ಕಿನ್ನರ ಮೇಳ ತುಮರಿ ತಂಡದಿಂದ “ಇರುವೆ ಪುರಾಣ” ನಾಟಕ ಪ್ರದರ್ಶಗೊಳ್ಳಲಿದೆ.  ನ.29 ರ ಶುಕ್ರವಾರ ರಂಗಾಯಣ ಕಲಾವಿದ ರಾಕೇಶ್ ಆಚಾರ್ಯ ನಿರ್ದೇಶನದಲ್ಲಿ ವೀರಮಂಗಲ ಪಿಎಂ ಶ್ರೀ ಸರ್ಕಾರಿ ಹಿ.ಪ್ರಾ. ಶಾಲಾ ಮಕ್ಕಳಿಂದ “ರಂಗಗೀತೆಗಳ

ನ.28 ರಿಂದ 30 : ಪುತ್ತೂರಿನಲ್ಲಿ ಅಟ್ಟಾಮುಟ್ಟಾ ಮಕ್ಕಳ ನಾಟಕೋತ್ಸವ Read More »

ಅಂತರ್ ವಿಶ್ವವಿದ್ಯಾಲಯ ವೈಟ್‌ ಲಿಫ್ಟಿಂಗ್‌ ಸ್ಪರ್ಧೆ : ಫಿಲೋಮಿನಾ ಕಾಲೇಜಿನ ಸ್ಪಂದನ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ದ್ವಿತೀಯ ಬಿಎಸ್ಸಿ ಯ ಸ್ಪಂದನ 2024-25ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ವೈಟ್‌ ಲಿಫ್ಟಿಂಗ್ ಚಾಂಪಿಯನ್‌ ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಸ್ಪರ್ಧೆಯ 45 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಸ್ಪಂದನಾ ಸಂತ ಫಿಲೋಮಿನಾದ ಮಹಿಳಾ ವೈಟ್  ಲಿಫ್ಟರ್ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಪದಕವನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಸಂಚಾಲಕ ರೆ.ಫಾ.ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲ  ರೆ. ಡಾ.ಆಂಟನಿ ಪ್ರಕಾಶ್ ಮೊಂತೇರೊ ಸೇರಿದಂತೆ ಕಾಲೇಜು ಅಧ್ಯಾಪಕ ವೃಂದ, ಅಧ್ಯಾಪಕೇತರ ವೃಂದ ಹಾಗೂ ವಿದ್ಯಾರ್ಥಿ ಅಭಿನಂದನೆ ಸಲ್ಲಿಸಿದ್ದಾರೆ.

ಅಂತರ್ ವಿಶ್ವವಿದ್ಯಾಲಯ ವೈಟ್‌ ಲಿಫ್ಟಿಂಗ್‌ ಸ್ಪರ್ಧೆ : ಫಿಲೋಮಿನಾ ಕಾಲೇಜಿನ ಸ್ಪಂದನ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಪುತ್ತೂರು ಬಿಜೆಪಿ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ, ಕಾರ್ಯದರ್ಶಿಯಾಗಿ ಗಣೇಶ್ ಪೇರಡ್ಕ ಆಯ್ಕೆ

ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ, ಕಾರ್ಯದರ್ಶಿಯಾಗಿ ಗಣೇಶ್ ಪೇರಡ್ಕ ಆಯ್ಕೆಯಾದರು. ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇವಪ್ಪ ಗೌಡ ಓಲಾಡಿಯವರ ಮನೆಯಲ್ಲಿ ನಡೆದ ಆಯ್ಕೆ  ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಹಿಳಾ ಮೋರ್ಚಾದ  ಅಧ್ಯಕ್ಷೆ ಯಶೋಧ ಗೌಡ ಪ್ರಭಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಬೂತ್ ಸದಸ್ಯರಾಗಿ ಪ್ರವೀಣ್ ಕಲ್ಕಾರ್, ರೂಪ ಪರಕಮೆ, ಹರೀಶ್ ಕರ್ಬಡ್ಕ, ಪ್ರವೀಣ್ ಶೆಟ್ಟಿ ಕುದುರೆಪಾಡ್ಡಿ,

ಪುತ್ತೂರು ಬಿಜೆಪಿ 142 ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಿನೋದ್ ಕರ್ಪುತಮೂಳೆ, ಕಾರ್ಯದರ್ಶಿಯಾಗಿ ಗಣೇಶ್ ಪೇರಡ್ಕ ಆಯ್ಕೆ Read More »

ಸಂಸ್ಥೆಯ  ಇತಿಹಾಸವನ್ನು ತಿಳಿದಾಗ ಮಾತ್ರ ಪ್ರಗತಿ ಸಾಧ್ಯ : ಸಂಜೀವ ಮಠoದೂರು

ಉಪ್ಪಿನಂಗಡಿ : ಉಪ್ಪಿನಂಗಡಿ ಬೋರ್ಡ್ ಹೈಸ್ಕೂಲ್ 1957ರಲ್ಲಿ ಸ್ಥಾಪನೆಯಾಗಿದ್ದು ಇಂದು ಪದವಿ ಪೂರ್ವ ವಿಭಾಗವನ್ನು ಹೊಂದಿ  ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಶೈಕ್ಷಣಿಕ ಸಾಧನೆ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚಿದ ಪ್ರತಿಭೆಗಳನ್ನು ಈ ಸಂಸ್ಥೆ ನೀಡಿದೆ. ಶಾಲೆಯ ಸ್ಥಾಪನೆಗೆ ಅಂದು ಭೂದಾನ ಮಾಡಿದ ಬೆನಗಲ್ ಸಹೋದರರು, ನೇತೃತ್ವ ವಹಿಸಿದ ವೇಣುಗೋಪಾಲ್ ನಾಯಕ್, ವಿದ್ಯಾಭಿಮಾನಿಗಳ ಕೊಡುಗೆ ಮತ್ತು  ಅಧ್ಯಾಪಕ ವೃಂದದ  ಶ್ರಮವನ್ನು ಸದಾ ಸ್ಮರಿಸುವ ಅವಶ್ಯಕತೆ ಇದೆಯೆಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ 

ಸಂಸ್ಥೆಯ  ಇತಿಹಾಸವನ್ನು ತಿಳಿದಾಗ ಮಾತ್ರ ಪ್ರಗತಿ ಸಾಧ್ಯ : ಸಂಜೀವ ಮಠoದೂರು Read More »

error: Content is protected !!
Scroll to Top