ಪುತ್ತೂರು

ರಾಷ್ಟ್ರಕ್ಕಾಗಿ ಜೀವನ ಮುಡಿಪಾಗಿರಿಸಿ : ಲತೇಶ್ ಬಾಕ್ರಬೈಲು | ಸ್ವಾಮಿ ವಿವೇಕಾನಂದ ವಿಷಯಾಧಾರಿತ “ವಿವೇಕ ಸ್ಮೃತಿ” ಕಾರ್ಯಕ್ರಮ

ಪುತ್ತೂರು: ರಾಷ್ಟ್ರ್ರ ಎಂದರೇನು, ರಾಷ್ಟ್ರದಲ್ಲಿ ನಾವೇನು ಮತ್ತು ನಮಗೆ ರಾಷ್ಟ್ರವೇನು ಈ ಮೂರು ಸಂಗತಿಗಳನ್ನು ಅರ್ಥ ಮಾಡಿಕೊಳ್ಳದ ವಿನಃ ವಿವೇಕಾನಂದರ ಚಿಂತನೆಗಳನ್ನು ಅರ್ಥ ಮಾಡಿಕೊಳುವುದು ಕಷ್ಟ. ವಿದ್ಯಾರ್ಥಿಗಳು ವಿವೇಕಾನಂದರ ಚಿಂತನೆಗಳನ್ನು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತುಉತ್ತಮ ಭಾರತದ ನಿರ್ಮಾಣಕ್ಕೆ ಕೈ ಜೋಡಿಸಬೇಕು. ರಾಷ್ಟ್ರಕ್ಕಾಗಿಜೀವನವನ್ನು ಮುಡಿಪಾಗಿರಿಸಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ನ ಜಿಲ್ಲಾ ಸಹಕಾರ್ಯದರ್ಶಿ ಲತೀಶ್ ಬಾಕ್ರಬೈಲು ಹೇಳಿದರು. ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ, ಭಾರತೀಯ ಸಂಸ್ಕೃತಿ […]

ರಾಷ್ಟ್ರಕ್ಕಾಗಿ ಜೀವನ ಮುಡಿಪಾಗಿರಿಸಿ : ಲತೇಶ್ ಬಾಕ್ರಬೈಲು | ಸ್ವಾಮಿ ವಿವೇಕಾನಂದ ವಿಷಯಾಧಾರಿತ “ವಿವೇಕ ಸ್ಮೃತಿ” ಕಾರ್ಯಕ್ರಮ Read More »

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪ್ರತೀಕ್ಷಾ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪುತ್ತೂರು: ಬೆದ್ರಾಳ ನಿವಾಸಿ, ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಬೆದ್ರಾಳ ನಿವಾಸಿ ಪ್ರತೀಕ್ಷಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಖಾಸಗಿ ಕಾಲೇಜಿನಲ್ಲಿ ಅಲೈಡ್ ಹೆಲ್ತ್‍ ಸೈನ್ಸ್ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಕೆಲ ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತಿಸಿದ್ದಳು. ತಕ್ಷಣ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಮೃತಳು ತಂದೆ, ತಾಯಿ ಮತ್ತು ಕುಟುಂಬಸ್ಥರನ್ನು

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪ್ರತೀಕ್ಷಾ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ಮೂಲಕ ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು | ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಿಂದ ಸರಕಾರಕ್ಕೆ ಆಗ್ರಹ

ಪುತ್ತೂರು: ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಾಗಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ. ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿರುವ ಸಂಘ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಪ್ರಸ್ತುತ ಅಡಿಕೆ ಪ್ರಧಾನ ಬೆಳೆಯಾಗುತ್ತಿದ್ದು, ಪಾರಂಪರಿಕ ಕೃಷಿಯಾದ ಅಡಿಕೆಯನ್ನೇ ನಂಬಿ ಕೃಷಿಕರು ಬದುಕುತ್ತಿದ್ದಾರೆ. ಅಡಿಕೆಯನ್ನು ವಿವಿಧ ಆಯುರ್ವೇದ ಔಷಧಗಳಿಗೂ ಉಪಯೋಗ ಮಾಡಬಹುದು ಎಂದು  ಹಲವು ಸಂಶೋಧನೆಗಳಿಂದ ದೃಢವಾಗಿದೆ. ಈಗಾಗಲೇ ಕೃಷಿಕ ಸಂಶೋಧಕ ಬದನಾಜೆ

ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸುವ ಮೂಲಕ ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು | ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಿಂದ ಸರಕಾರಕ್ಕೆ ಆಗ್ರಹ Read More »

ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವೈಭವದ ವರ್ಷಾವಧಿ ನೇಮೋತ್ಸವ

ಪುತ್ತೂರು: ನೆಹರುನಗರ ಸಮೀಪದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಮಂಗಳವಾರ ನಡೆಯಿತು. ಮಂಗಳವಾರ ಬೆಳಗ್ಗೆ 9 ಕ್ಕೆ ಮೂಲಸ್ಥಾನ ಕಾರ್ಜಾಲುಗುತ್ತಿನಲ್ಲಿ ಸ್ಥಳಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. 11.30 ಕ್ಕೆ ಕಲ್ಲೇಗ ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ ಸೇವೆ, ಬಳಿಕ ನಡೆದ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ರಾತ್ರಿ 7.30 ಕ್ಕೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಟು,

ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವೈಭವದ ವರ್ಷಾವಧಿ ನೇಮೋತ್ಸವ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಮಾಸಿಕ ಸಭೆ

ಬಂಟ್ವಾಳ: ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಫೆಬ್ರವರಿ ತಿಂಗಳ ಕೇಂದ್ರ ಸಮಿತಿ ಸಭೆ ವಿಟ್ಲ ಮಂಗಿಲ ಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಜರಗಿತು. ಡಾ. ವಾರಿಜಾ ನೀರ್ಬೈಲು ಸಭೆಯನ್ನು ಉದ್ಘಾಟಿಸಿ, ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳು ಉತ್ತಮವಾಗಿದ್ದು ತಾಲೂಕು ಘಟಕಗಳು ಹೆಚ್ಚು ಸಕ್ರಿಯವಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದಾಗ ಪ್ರತಿಷ್ಠಾನದ ಕಾರ್ಯಕ್ರಮಗಳು ಪರಿಣಾಮಕಾರಿಯಾಗುವುದೆಂದು ತಿಳಿಸಿದರು .  ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ, ಗೋ ಸಂರಕ್ಷಣಾ ಅಭಿಯಾನಕ್ಕೆ ಹಿರಿಯರ ಸೇವಾ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಮಾಸಿಕ ಸಭೆ Read More »

ಫೆ.16 : ದ್ವಾರಕಾ ಪ್ರತಿಷ್ಠಾನದಿಂದ ‘ದ್ವಾರಕೋತ್ಸವ-2025’, ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ

ಪುತ್ತೂರು: ದ್ವಾರಕಾ ಪ್ರತಿಷ್ಠಾನದ ವತಿಯಿಂದ ‘ದ್ವಾರಕೋತ್ಸವ-2025’, ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಫೆ.16 ಭಾನುವಾರ ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದ್ವಾರಕಾ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್‍ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ದ್ವಾರಕಾ ಪ್ರತಿಷ್ಠಾನ ವಿವಿಧ ವೈದಿಕ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಯಕ್ಷಗಾನ, ಸಂಗೀತ, ಗೋಸೇವೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸಂಸ್ಕೃತಿಯ ಸಂರಕ್ಷಣೆ, ಅನುಷ್ಠಾನ, ಸಂವರ್ಧನೆ ನಮ್ಮ ಧ್ಯೇಯವಾಗಿದೆ.

ಫೆ.16 : ದ್ವಾರಕಾ ಪ್ರತಿಷ್ಠಾನದಿಂದ ‘ದ್ವಾರಕೋತ್ಸವ-2025’, ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ Read More »

ಆಟೋ ರಿಕ್ಷಾ – ಹೋಂಡಾ ಆಕ್ಟಿವಾ ನಡುವೆ ಅಪಘಾತ | ಆಕ್ಟಿವಾ ಸವಾರರಿಗೆ ಗಾಯ

ಪುತ್ತೂರು : ನರಿಮೊಗರು ಶಾಲಾ ಬಳಿ ಆಟೋರಿಕ್ಷಾ ಮತ್ತು ಹೋಂಡಾ ಆಕ್ಟಿವ ನಡುವೆ ಅಪಘಾತ ಸಂಭವಿಸಿದ್ದು ಸವಾರರಿಗೆ ಗಾಯವಾಗಿದೆ. ಅಪಘಾತ ನಡೆದ ತಕ್ಷಣ ಅಲ್ಲಿಗೆ ಆಗಮಿಸಿದ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಕೂಡಲೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನು ಮಾಡಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು ಮಾರ್ಗದ ಕೆಲಸ ಮಾಡುವ ಗುತ್ತಿಗೆ ದಾರರ ಕೆಲವು ತಪ್ಪುಗಳಿಂದ ಅಪಘಾತ ಹೆಚ್ಚುತ್ತಿದೆ. ಕಾರಣ ನರಿಮೊಗರು ಶಾಲಾ ಬಳಿ ಇರುವ 80 ವರ್ಷ ಹಳೆಯ ಕಟ್ಟಡ ಮಾರ್ಗಕ್ಕೆ ಹೊಂದಿಕೊಂಡು ಇರುವುದರಿಂದ

ಆಟೋ ರಿಕ್ಷಾ – ಹೋಂಡಾ ಆಕ್ಟಿವಾ ನಡುವೆ ಅಪಘಾತ | ಆಕ್ಟಿವಾ ಸವಾರರಿಗೆ ಗಾಯ Read More »

ಅಂಬಿಕಾ ವಿದ್ಯಾಲಯದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇ ಸಂಸ್ಥೆಯಲ್ಲಿ 2024-25ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ’ಸೌಪ್ರಸ್ತಾನಿಕಂ’ ನಡೆಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ದೇಶಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಡುವುದೇ ಜೀವನದ ಉದ್ದೇಶವಾಗಿರಬೇಕು. ನಾವು ದೊಡ್ಡ ದೊಡ್ಡ ಹುದ್ದೆ ಅಲಂಕರಿಸಿದರೂ ದೇಶಕ್ಕೆ ಸಂಕಷ್ಟ ಬಂದಾಗ ಓಗೊಟ್ಟು ದೇಶಸೇವಕರಾಗಿ ಸಹಕರಿಸುವ ಸತ್ಪ್ರಜೆಗಳಾಗಿ ಮೂಡಿಬರಬೇಕು ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ, ತ್ರಿಭುಜದ ಮೂರು ಬಾಹುಗಳು ಹೇಗೆ

ಅಂಬಿಕಾ ವಿದ್ಯಾಲಯದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ Read More »

ಪ್ರತಿಷ್ಠಿತ ಉಪ್ಪಿನಂಗಡಿ ಸಿ.ಎ. ಬ್ಯಾಂಕ್‍ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಸುನಿಲ್‍ ಕುಮಾರ್ ದಡ್ಡು, ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆ

ಉಪ್ಪಿನಂಗಡಿ: ಪ್ರತಿಷ್ಟಿತ ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ದಡ್ಡು ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆಯಾಗಿದ್ದಾರೆ. ಫೆ.2 ರಂದು ಬ್ಯಾಂಕ್‍ ನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಲ್ಲಾ 12 ಸ್ಥಾನಗಳು ಸಹಕಾರಿ ಭಾರತಿ ತೆಕ್ಕೆಗೆ ಬಿದ್ದಿತ್ತು. ಫೆ.11 ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಸುನಿಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾಗಿ ದಯಾನಂದ

ಪ್ರತಿಷ್ಠಿತ ಉಪ್ಪಿನಂಗಡಿ ಸಿ.ಎ. ಬ್ಯಾಂಕ್‍ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ಸುನಿಲ್‍ ಕುಮಾರ್ ದಡ್ಡು, ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆ Read More »

ತಾಲೂಕು ಪಂಚಾಯತ್ ನಲ್ಲಿ ವಿಶ್ವ ಸುರಕ್ಷತಾ ಅಂತರ್ಜಾಲ ದಿನ | ಇಂಟರ್ನೆಟ್ ಬಳಕೆದಾರರು ಎಚ್ಚರದಿಂದಿರಿ : ನವೀನ್ ಕುಮಾರ್ ಭಂಡಾರಿ

ಪುತ್ತೂರು: ಜಗತ್ತು ಇಂಟರ್ನೆಟ್ ಎಂಬ ಜಾಲದಲ್ಲಿ ಮುಳುಗಿದ್ದು ಪ್ರಸ್ತುತ ವಿವಿಧ ರೀತಿಯಲ್ಲಿ ವಂಚಿಸುವ ಜಾಲವೇ ಸಮಾಜವನ್ನು ಕಾಡುತ್ತಿದೆ. ಆದ್ದರಿಂದ ಇಂಟರ್ನೆಟ್ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು ಎಂದು ಪುತ್ತೂರು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭಿಪ್ರಾಯಪಟ್ಟರು. ಅವರು ಇಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು‌ ಮಾಹಿತಿ ತಂತ್ರಜ್ಞಾನ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು ವತಿಯಿಂದ ವಿಶ್ವ ಸುರಕ್ಷತಾ ಅಂತರ್ಜಾಲ ದಿನದಲ್ಲಿ ಮಾತನಾಡಿದರು. ಮೊಬೈಲ್ ನಲ್ಲಿ ಹಲವು ಆನ್ ಲೈನ್ ವ್ಯವಹಾರವನ್ನು ಮಾಡುತ್ತಿದ್ದೇವೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಹಲವು ವಂಚಕರು

ತಾಲೂಕು ಪಂಚಾಯತ್ ನಲ್ಲಿ ವಿಶ್ವ ಸುರಕ್ಷತಾ ಅಂತರ್ಜಾಲ ದಿನ | ಇಂಟರ್ನೆಟ್ ಬಳಕೆದಾರರು ಎಚ್ಚರದಿಂದಿರಿ : ನವೀನ್ ಕುಮಾರ್ ಭಂಡಾರಿ Read More »

error: Content is protected !!
Scroll to Top