ಪುತ್ತೂರು

ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ

ಪುತ್ತೂರು: ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ ಗುರುವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್‍. ಗೌರಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇತನ, ರಜೆ, ಮೂಲಭೂತ ಸೌಲ್ಯಗಳನ್ನು ಪಡೆದುಕೊಳ್ಳುವಲ್ಲಿ ತಾರತಮ್ಯ ಧೋರಣೆ ಇದ್ದ ಸಂದರ್ಭದಲ್ಲಿ ಪುರುಷರಷ್ಟೇ ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು 1909 ರಲ್ಲಿ ಮಹಿಳೆಯರು ದಂಗೆ ಎದ್ದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಪ್ರತಿಭಟನೆ ಮಾಡಿ ಇದೊಂದು ಕ್ರಾಂತಿಯಾದ ಪರಿಣಾಮ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಮೋದಿ ಸರಕಾರ ಬಂದ ನಂತರ ಮಹಿಳಾ ಸಬಲೀಕರಣಗೊಳ್ಳುವಲ್ಲಿ […]

ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ Read More »

ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ ಸಂಬಂಧಿಸಿ ಪೋಷಕರಿಗೆ ಕಾರ್ಯಾಗಾರ ಗುರುವಾರ ನಡೆಯಿತು. ವಿದ್ಯಾಭಾರತಿ ಕ್ಷೇತ್ರೀಯ ಶಿಶುಶಿಕ್ಷಣ ಸಹಪ್ರಮುಖರಾದ ತಾರಾ ಕಾಳಿಚರಣ್ ಬೆಂಗಳೂರು ಶಾಲಾ ಪೂರ್ವ ಪ್ರಾಥಮಿಕ, ಒಂದನೇ ಹಾಗೂ 2ನೇ ತರಗತಿ ಪೋಷಕರೊಂದಿಗೆ ಮಾತನಾಡಿ, ಸೊನ್ನೆಯಿಂದ 9 ವರ್ಷದ ವರೆಗಿನ ಮಗುವಿನ ಬೆಳವಣಿಗೆಯಲ್ಲಿ ಮನೆ, ಶಾಲೆ, ಸಮಾಜ ಪ್ರಮುಖ ಪಾತ್ರ ವಹಿಸುತ್ತಿದ್ದು ಮನೆ ಮತ್ತು ಶಾಲೆ ಒಂದೇ ನಾಣ್ಯದ ಮುಖಗಳಂತೆ ಕಾರ್ಯನಿರ್ವಹಿಸಬೇಕು. ಈ ಸಂದರ್ಭ ಮಗು ನೋಡಿ ಕಲಿಯುವ ಸಂಗತಿಗಳೇ ಅತೀ ಹೆಚ್ಚಾಗಿರುವುದರಿಂದ

ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ Read More »

ರಾಷ್ಟ್ರೀಯ ಸಿಎಸ್‌ಸಿ ಹಿಂದಿ ಒಲಿಂಪಿಯಾಡ್ ಪರೀಕ್ಷೆ | ಸೃಜನ್ ಕೆ.ಪಿ ಪಲ್ಲತ್ತಾರು ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್

ಪುತ್ತೂರು: ರಾಷ್ಟ್ರೀಯ ಸಿಎಸ್‌ಸಿ ಅಕಾಡೆಮಿ ಒಲಿಂಪಿಯಾಡ್ ನಡೆಸುವ ೨೦೨೪-೨೫ ನೇ ಸಿಎಸ್‌ಸಿ ಹಿಂದಿ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಒಳಮೊಗ್ರು ಗ್ರಾಮದ ಪಲ್ಲತ್ತಾರು ನಿವಾಸಿ ಸೃಜನ್ ಕೆ.ಪಿ.ರವರು ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಆನ್ ಲೈನ್ ಮೂಲಕವೇ ಈ ಪರೀಕ್ಷೆ ನಡೆಯುತ್ತಿದ್ದು ಇದರಲ್ಲಿ ರಾಜ್ಯದಿಂದ ಇಬ್ಬರು ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದು ಅದರಲ್ಲಿ ದ.ಕ ಜಿಲ್ಲೆಯಿಂದ ಸೃಜನ್ ಕೆ.ಪಿ.ಯರವರು ಓರ್ವರಾಗಿದ್ದಾರೆ. ಶೈಕ್ಷಣಿಕ ಕಾರ್ಯಕ್ಷಮತೆ ಸುಧಾರಿಸಲು ಜ್ಞಾನದ ಮಟ್ಟ ಮತ್ತು ಪರೀಕ್ಷೆಯ ಸಿದ್ಧತೆಯನ್ನು ಅಳೆಯಲು ಈ ಒಲಿಂಪಿಯಡ್ ಪರೀಕ್ಷೆ ಸಹಾಯಮಾಡುತ್ತದೆ.

ರಾಷ್ಟ್ರೀಯ ಸಿಎಸ್‌ಸಿ ಹಿಂದಿ ಒಲಿಂಪಿಯಾಡ್ ಪರೀಕ್ಷೆ | ಸೃಜನ್ ಕೆ.ಪಿ ಪಲ್ಲತ್ತಾರು ರಾಜ್ಯ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ Read More »

ವಿಟ್ಲ ಮಾಡತಡ್ಕ ಕಲ್ಲಿನ ಕೋರೆಯಲ್ಲಿ ಸ್ಪೋಟ | ಅರುಣ್‍ ಕುಮಾರ್ ಪುತ್ತಿಲ ಭೇಟಿ

ವಿಟ್ಲ : ಮಾಡತಡ್ಕದ ಕಲ್ಲಿನ ಕೋರೆಯಲ್ಲಿ ಸಂಭವಿಸಿದ ಸ್ಫೋಟದ ಘಟನಾ ಸ್ಥಳಕ್ಕೆ  ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ  ಸುತ್ತಮುತ್ತಲಿನ  ಹಾನಿಗೊಳಗಾದ ಮನೆಗಳನ್ನೂ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ಮಾಹಿತಿಯನ್ನು ಪಡೆದು ಘಟನೆಯಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ಸಂಬಂಧಪಟ್ಟ ಕೋರೆಯ ಮಾಲಕರು ನೀಡಬೇಕು ಮತ್ತು ಅಧಿಕಾರಿಗಳು ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ತಕ್ಷಣ ಎಚ್ಚೆತ್ತು ಗ್ರಾಮದ ಜನರನ್ನೂ ರಕ್ಷಣೆ ಮಾಡಬೇಕು. ಗ್ರಾಮಸ್ಥರು ಈಗಾಗಲೆ ಸದಾ ಭಯದಿಂದ ತಮ್ಮ ಜೀವ

ವಿಟ್ಲ ಮಾಡತಡ್ಕ ಕಲ್ಲಿನ ಕೋರೆಯಲ್ಲಿ ಸ್ಪೋಟ | ಅರುಣ್‍ ಕುಮಾರ್ ಪುತ್ತಿಲ ಭೇಟಿ Read More »

ಮಾ.8 : ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ | ವಿವಿಧತೆಯಲ್ಲಿ ಏಕತೆ ವಿಶಿಷ್ಟ ವಾಹನ ಜಾಥಾ

ಪುತ್ತೂರು: ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದೊಂದಿಗೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಪುತ್ತೂರು ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಮಾ.8 ರಂದು ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ ಹಾಗೂ ವಿವಿಧತೆಯಲ್ಲಿ ಏಕತೆ ವಿಶಿಷ್ಠ ವಾಹನ ಜಾಥಾ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಗೌರವಾಧ್ಯಕ್ಷೆ ಚಂಚಲ ತೇಜೋಮಯ ಅವರು ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 37 ವರ್ಷಗಳಿಂದ ಮಹಿಳಾ ಒಕ್ಕೂಟ ಮಹಿಳೆಯರ ಸಮಗ್ರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ

ಮಾ.8 : ಜಿಲ್ಲಾ ಮಟ್ಟದ ಮಹಿಳಾ ದಿನಾಚರಣೆ | ವಿವಿಧತೆಯಲ್ಲಿ ಏಕತೆ ವಿಶಿಷ್ಟ ವಾಹನ ಜಾಥಾ Read More »

ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ಬೈದರ್ಕಳ ನೇಮೋತ್ಸವ

ಪುತ್ತೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ನಂದನಬಿತ್ತ್‌ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ  ಮಂಗಳವಾರ ಸಂಜೆ ಮೂಲಸ್ಥಾನ ಗರಡಿಯಲ್ಲಿ ಶುದ್ದಹೋಮ ಕಲಶ ಮೂಲಸ್ಥಾನ ಗರಡಿಯಲ್ಲಿ  ಕ್ಷೇತ್ರ ತಂತ್ತಿಗಳಾದ ಶಿವಾನಂದ ಶಾಂತಿ ನೇತೃತ್ವದಲ್ಲಿ ಶುದ್ದಹೋಮ ಕಲಶ, ಧೂಮಾವತಿ ಬಲಿ ಸೇವೆ, ಸತ್ಯಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜಾ ಕಾರ್ಯಕ್ರಮ ನೆರವೇರಿತು. ಬಳಿಕ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಟು ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ

ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ಬೈದರ್ಕಳ ನೇಮೋತ್ಸವ Read More »

ಮುಂಡೂರಿನಲ್ಲಿ ಸೆನ್ಸಾರ್ ಆರ್‌ಟಿಒ ಟ್ರಾಕ್ : 8 ಕೋಟಿ ಅನುದಾನ ಬಿಡುಗಡೆ

ಪುತ್ತೂರು: ಪುತ್ತೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಮುಂಡೂರಿನಲ್ಲಿ ಜಿಲ್ಲೆಯ ಎರಡನೇ ಸೆನ್ಸಾರ್ ಆರ್ ಟಿಒ ಟ್ರ್ಯಾಕ್ ನಿರ್ಮಾಣವಾಗಲಿದ್ದು ಇದಕ್ಕಾಗಿ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮುಂಡೂರು ಗ್ರಾಮದಲ್ಲಿ ಸುಮಾರು 5.40  ಎಕ್ರೆ ಜಾಗದಲ್ಲಿ ಈ ಬೃಹತ್ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಮತ್ತು ಚಾಲನ ತರಬೇತಿ ಕೇಂದ್ರ ಇಲ್ಲಿ ನಿರ್ಮಾಣವಾಗಲಿದೆ. ಪುತ್ತೂರು ಶಾಸಕರ ಕನಸಿನ ಕೂಸಾದ ಈ ಯೋಜನೆಯನ್ನು ಶಾಸಕರೇ ಸ್ವಯಂ ಮುತುವರ್ಜಿವಹಿಸಿ ಪುತ್ತೂರಿಗೆ ತರುವಲ್ಲಿ ಯಸಶ್ವಿಯಾಗಿದ್ದರು. ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಅಲೆವೂರು

ಮುಂಡೂರಿನಲ್ಲಿ ಸೆನ್ಸಾರ್ ಆರ್‌ಟಿಒ ಟ್ರಾಕ್ : 8 ಕೋಟಿ ಅನುದಾನ ಬಿಡುಗಡೆ Read More »

ಪುಡಾ ನೂತನ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅಧಿಕಾರ ಸ್ವೀಕಾರ

ಪುತ್ತೂರು: ಖಾಲಿಯಾಗಿದ್ದ ಪುತ್ತೂರು ನಗರ ಅಭಿವೃದ್ದಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ. ಮಂಗಳೂರು ನಗರಪಾಲಿಕಾ ಕಚೇರಿಯಲ್ಲಿ ಎ.ಡಿ. ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ಪುಡಾಗೆ ನಿಯುಕ್ತಿಗೊಳಿಸಲಾಗಿದೆ. ವಾರದ ಪ್ರತೀ ಬುಧವಾರ ಇವರು ಕಚೇರಿಯಲ್ಲಿ ಲಭ್ಯರಿರುತ್ತಾರೆ. ಕಡತ ವಿಲೇವಾರಿಗೆ ಸೂಚನೆ: ನೂತನ ಕಾರ್ಯದರ್ಶಿಯವರನ್ನು ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ ಹಾಗೂ ನಿಹಾಲ್ ಪಿ ಶೆಟ್ಟಿ ಕಲ್ಲಾರೆಯವರು ಸ್ವಾಗತಿಸಿದರು. ಬಳಿಕ ಅಧಿಕಾರಿ ಜೊತೆ ಕಡತ ವಿಲೇವಾರಿ ಕುರಿತು ಮಾತುಕತೆ ನಡೆಸಿದರು. ಕಳೆದ ಒಂದೂವರೆ ತಿಂಗಳಿಂದ

ಪುಡಾ ನೂತನ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅಧಿಕಾರ ಸ್ವೀಕಾರ Read More »

ಅಮೃತ್ ಮಿತ್ರ 2.0 ಯೋಜನೆಯಡಿ ಉದ್ಯಾನವನ ನಿರ್ವಹಣೆ, ಉಸ್ತುವಾರಿ ಕುರಿತು ತರಬೇತಿ ಕಾರ್ಯಾಗಾರ

ಪುತ್ತೂರು: ಕೇಂದ್ರ ಪುರಸ್ಕೃತ “ಅಮೃತ್ ಮಿತ್ರ 2.0 ಯೋಜನೆ”ಯಡಿ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರುಗಳಿಗೆ ಉದ್ಯಾನವನಗಳ ನಿರ್ವಹಣೆ ಮತ್ತು ಉಸ್ತುವಾರಿ ಕುರಿತಾದ ಒಂದು ದಿನದ ತರಬೇತಿ ಕಾರ್ಯಕ್ರಮ ಪುತ್ತೂರು ನಗರಸಭೆ ಕಾರ್ಯಲಯದಲ್ಲಿ ಮಂಗಳವಾರ ನಡೆಯಿತು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸಸಿಗೆ ನೀರುಣಿಸುವ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಸಭಾ ಉಪಾಧ್ಯಕ್ಷ ಕೆ. ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪ್ರಭಾರ ಪೌರಾಯುಕ್ತ ಶಬರಿನಾಥ್ ರೈ, ಸಹಾಯಕ ಕಾರ್ಯ ಪಾಲಕ ಅಭಿಯಂತರ

ಅಮೃತ್ ಮಿತ್ರ 2.0 ಯೋಜನೆಯಡಿ ಉದ್ಯಾನವನ ನಿರ್ವಹಣೆ, ಉಸ್ತುವಾರಿ ಕುರಿತು ತರಬೇತಿ ಕಾರ್ಯಾಗಾರ Read More »

ಮಾ. 9 :  ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವ  ಹಾಗೂ ಸಪರಿವಾರ ದೈವಗಳ ನೇಮೋತ್ಸವ 

ಕುದ್ಮಾರು : ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಮಾ. 9 ಭಾನುವಾರದಂದು ಕುದ್ಮಾರು ಗ್ರಾಮದ ಅನ್ಯಾಡಿಯಲ್ಲಿ ಕಟ್ಟತ್ತಾರು ಕಟ್ಟೆ ಯಲ್ಲಿ ನಡೆಯಲಿದೆ. ನೇಮೋತ್ಸವದಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 7 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್‍ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು. ರಾತ್ರಿ 8:30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು. ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್‍ ದೈವದ ಹಾಗೂ

ಮಾ. 9 :  ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವ  ಹಾಗೂ ಸಪರಿವಾರ ದೈವಗಳ ನೇಮೋತ್ಸವ  Read More »

error: Content is protected !!
Scroll to Top