ಪುತ್ತೂರು

ಜಾನುವಾರು ಸಾಗಾಟಮಾಡುತ್ತಿದ್ದ ಮೂವರು ಆರೋಪಿಯರ ಬಂಧನ

ಪುತ್ತೂರು : ಗೂಡ್ಸ್‌ ವಾಹನವೊಂದರಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣ ಉಪ್ಪಿನಂಗಡಿಯ  34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ನಲ್ಲಿ ನಡೆದಿದೆ. ಈ ಪ್ರಕರಣವನ್ನು  ಪೊಲೀಸರು ಪತ್ತೆ ಹಚ್ಚಿ, ಹಾಸನ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.  ಕೃತ್ಯಕ್ಕೆ ಬಳಸುತ್ತಿದ್ದ ವಾಹನ ಹಾಗೂ ಜಾನುವಾರು ವಶಪಡಿಸಿಕೊಂಡಿರುವ ಘಟನೆ ಹಾಸನ ತಾಲೂಕು ಸಾಲಗಾಮೆ ಹೋಬಳಿ ನಿವಾಸಿಗಳಾದ ಪ್ರತಾಪ್ ಎಸ್.ಎಂ.(28ವ.), ಪವನ್ ಸಿ.(24ವ.), ಶ್ರೇಯಸ್ ಹೆಚ್.ವಿ.(24ವ.) ಬಂಧಿತ ಆರೋಪಿಗಳಾಗಿದ್ದಾರೆ. ಮಾ.25ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಮನಿಶಾ ಎಂ., […]

ಜಾನುವಾರು ಸಾಗಾಟಮಾಡುತ್ತಿದ್ದ ಮೂವರು ಆರೋಪಿಯರ ಬಂಧನ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ “ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ” ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್‌ಸ್ಟಿಟ್ಯೂಶನ್ಸ್ ಇನ್ನೊವೇಶನ್ ಕೌನ್ಸಿಲ್ (ಐಐಸಿ) ಹಾಗೂ ಗಣಕವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ  ‘ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಆಯೋಜಿಸಲಾಯಿತು. ಸಂತ ಫಿಲೋಮಿನಾ ವಿಮೆನ್ಸ್ ಹಾಸ್ಟೆಲ್‌ನ ವಾರ್ಡನ್ ಸಿಸ್ಟರ್ ಲೂರ್ದ್ ಮೇರಿ ಸಂಪನ್ಮೂಲವ್ಯಕ್ತಿಯಾಗಿ, ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಯಾವರೀತಿಯ ಸಾಧನೆ ಮಾಡಿರುತ್ತಾರೆ ಎಂಬುದನ್ನು ತಿಳಿಸಿದ ಅವರು, ನಾವು ಯಾವತ್ತೂ ಬೇರೆಯವರಿಂದ ಸ್ಪೂರ್ತಿ ಪಡೆಯುತ್ತೇವೆ. ನಮ್ಮಲ್ಲಿ ಅಂತರ್ಗತವಾದ ಅಗಾಧ ಶಕ್ತಿಯ ಅರಿವು ನಮಗಿರುವುದಿಲ್ಲ. ಯಾವುದೇ

ಸಂತ ಫಿಲೋಮಿನಾ ಕಾಲೇಜಿನಲ್ಲಿ “ನಾವೀನ್ಯತೆಯಲ್ಲಿ ಮಹಿಳೆಯರ ಪಾತ್ರ” ಉಪನ್ಯಾಸ ಕಾರ್ಯಕ್ರಮ Read More »

ಮಹಿಳೆ ಮೇಲೆ ತಲ್ವಾರಿನಿಂದ ಹಲ್ಲೆಗೆ ಯತ್ನ

ಪುತ್ತೂರು: ಮಹಿಳೆ ಮೇಲೆ ತಲ್ವಾರ್ ಬೀಸಿ ಹಲ್ಲೆಗೆ ಯತ್ನಿಸಿದ ಘಟನೆ ಸಂಪ್ಯದ ಮೂಲೆ ಎಂಬಲ್ಲಿ ಇಂದು ನಡೆದಿದೆ. ಹಸೈನಾರ್ ಎಂಬಾತ ಸಂಪ್ಯದಮೂಲೆ ನಿವಾಸಿ ರೇಖನಾಥ್‍ ರೈ ಅವರ ಸಹೋದರಿ ಪುಷ್ಪಾವತಿ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮಹಿಳೆ ಮೇಲೆ ತಲ್ವಾರಿನಿಂದ ಹಲ್ಲೆಗೆ ಯತ್ನ Read More »

ರಂಜಾನ್‍ ಹಬ್ಬ | ನಗರ ಠಾಣೆಯಲ್ಲಿ ಶಾಂತಿ ಸಭೆ

ಪುತ್ತೂರು: ಸೌಹಾರ್ದತೆ, ಸಮನ್ವಯತೆಯಿಂದ ಹಾಗೂ ಶಾಂತಿಯುತವಾಗಿ ಹಬ್ಬಗಳ ಆಚರಣೆ ನಡೆಯಬೇಕು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ವಿನಂತಿಸಿದ್ದಾರೆ.ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆಸಲಾದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಮಾ. 31 ರಂದು ರಂಜಾನ್ ಹಬ್ಬ ನಡೆಯಲಿದ್ದು, ಯಾವುದೇ ಮೆರವಣಿಗೆಗಳು ಇರುವುದಿಲ್ಲ. ಮಸೀದಿಯಲ್ಲಿ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು. ವಾಟ್ಸಪ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಯಾವುದೇ ಘಟನೆಗಳಿಗೆ

ರಂಜಾನ್‍ ಹಬ್ಬ | ನಗರ ಠಾಣೆಯಲ್ಲಿ ಶಾಂತಿ ಸಭೆ Read More »

6ನೇ ವಾರಕ್ಕೆ ಜಿಗಿದ ‘ಭಾವ ತೀರ ಯಾನ’ ಸಿನಿಮಾ | ಪ್ರೇಕ್ಷಕರಿಂದ ಚಿತ್ರಕ್ಕೆ ವ್ಯಾಪಕ ಬೆಂಬಲ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ 6ನೇ ವಾರದ ಪ್ರದರ್ಶನಕ್ಕೆ ಕಾಲಿಟ್ಟಿದೆ. ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6 ನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿದೆ. ಈ ಮೂಲಕ ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೌಂಟರ್‌’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

6ನೇ ವಾರಕ್ಕೆ ಜಿಗಿದ ‘ಭಾವ ತೀರ ಯಾನ’ ಸಿನಿಮಾ | ಪ್ರೇಕ್ಷಕರಿಂದ ಚಿತ್ರಕ್ಕೆ ವ್ಯಾಪಕ ಬೆಂಬಲ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಗುಡ್ಡಪ್ಪ ಗೌಡ ಬಲ್ಯ

ಪುತ್ತೂರು: ಕೃಷ್ಣ ನಗರದ ಅಲಂಬುಡದಲ್ಲಿರುವ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ನಿವೃತ್ತ ಉಪನ್ಯಾಸಕ, ಜೇಸೀ ತರಬೇತುದಾರ ಮತ್ತು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥದಾರಿಯೂ ಆಗಿರುವ ಗುಡ್ಡಪ್ಪ ಗೌಡ ಬಲ್ಯ ಅವರು ಅಧಿಕಾರ ಸ್ವೀಕರಿಸಿದರು. 35 ವರ್ಷಗಳ ಬೋಧನ ಅನುಭವ ಇರುವ ಇವರು ಈ ಶಾಲೆಯ ಆರಂಭದಿಂದಲೇ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸ್ಥೆಯ ಅಧ್ಯಕ್ಷ  ವೆಂಕಟ್ರಮಣ ಗೌಡ ಕಳುವಾಜೆಯವರು ದಾಖಲೆಗಳ ಕಡತಗಳನ್ನು ನೀಡಿ ಶ್ರೀಯುತರನ್ನು ಆಡಳಿತಾಧಿಕಾರಿಯೆಂದು ಘೋಷಿಸಿ ಶುಭ ಹಾರೈಸಿದರು. ನಿರ್ದೇಶಕರಾದ ಗೌರಿ ಬನ್ನೂರು, ಗಂಗಾಧರ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ಗುಡ್ಡಪ್ಪ ಗೌಡ ಬಲ್ಯ Read More »

ವಿದ್ಯುತ್‍ ಕಳ್ಳತನ : ಗುತ್ತಿಗೆದಾರ ಸಹಿತ ಬಳಕೆದಾರನ ಮೇಲೆ ಪ್ರಕರಣ ದಾಖಲು

ಸವಣೂರು: ವ್ಯಕ್ತಿಯೊಬ್ಬರು ವಿದ್ಯುತ್‍ ಕಳ್ಳತನ ಮಾಡಿರುವುದನ್ನು ಮೆಸ್ಕಾಂ ಜಾಗೃತ ದಳದ ಸಿಬ್ಬಂದಿಗಳು ಕಡಬ ತಾಲೂಕು ಸವಣೂರು ಗ್ರಾಮದ ಕಣಿಮಜಲು ಎಂಬಲ್ಲಿ ಪತ್ತೆಹಚ್ಚಿದ್ದಾರೆ. ಅಬ್ದುಲ್ ಆಸೀಫ್ ರೆಂಜಾಲಾಡಿ ಎಂಬವರ ತೋಟದಲ್ಲಿ ವಿದ್ಯುತ್ ಕಳ್ಳತನ ಮಾಡಿರುವುದರ ಕುರಿತು ಖಚಿತ ಮಾಹಿತಿ ಮೇರೆಗೆ ಮಂಗಳೂರು ಮೆಸ್ಕಾಂ ಜಾಗೃತದಳ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ವಿದ್ಯುತ್ ಕಂಬ ಅಳವಡಿಸಿ ಅನಧಿಕೃತವಾಗಿ ಸಂಪರ್ಕ ನೀಡಿದ ಗುತ್ತಿಗೆದಾರ ಬೈಟ್ ಪವರ್ ಪ್ಲಸ್ ತಾಜುದ್ದೀನ್ ಕೂರತ್ ಹಾಗೂ ಅಬ್ದುಲ್ ಆಸೀಫ್ ರೆಂಜಲಾಡಿಯವರ ಮೇಲೆ ಪ್ರಕರಣ ದಾಖಲಾಗಿದೆ.

ವಿದ್ಯುತ್‍ ಕಳ್ಳತನ : ಗುತ್ತಿಗೆದಾರ ಸಹಿತ ಬಳಕೆದಾರನ ಮೇಲೆ ಪ್ರಕರಣ ದಾಖಲು Read More »

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿ ಧನಸಹಾಯ ಹಸ್ತಾಂತರ

ಪುತ್ತೂರು: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಪುತ್ತೂರು ಶಾಖೆಯ ಸಕ್ರೀಯ  ಸದಸ್ಯರಾದ ಸದಾನಂದ ಕೆ. ಪುತ್ತೂರು ಅವರ  ಹೃದಯ ಚಿಕಿತ್ಸೆಗೆ  ಧನಸಹಾಯ ನೀಡಲಾಯಿತು. 50,000 ರೂ. ವನ್ನು  ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಅವರು ಗುರುವಾರ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಕ್ಯಾಂಪ್ಕೋ ಪುತ್ತೂರು ಪ್ರಾಂತೀಯ ವ್ಯವಸ್ಥಾಪಕ ಪ್ರಕಾಶ್ ಕುಮಾರ್ ಶೆಟ್ಟಿ.ಎ., ಶಾಖಾ ಪ್ರಬಂಧಕ ಅಮರೇಶ್ ಪಿ, ಸಿಬ್ಬಂದಿಗಳು ಹಾಗೂ ಸದಸ್ಯರಾದ ಜಯಗೋವಿಂದ ಶರ್ಮ, ನರೇಂದ್ರ ಪಡಿವಾಳ್ ಉಪಸ್ಥಿತರಿದ್ದರು.

ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ” ಯೋಜನೆಯಡಿ ಧನಸಹಾಯ ಹಸ್ತಾಂತರ Read More »

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ

ಪುತ್ತೂರು: ಬೆಂಕಿ ನಮ್ಮ ಮಿತ್ರನೂ ಹೌದು ಶತ್ರುವೂ ಹೌದು. ಆದರೆ ಅದನ್ನು ಬಳಸುವಲ್ಲಿ ವ್ಯತ್ಯಯ ಉಂಟಾದರೆ ಅದರಿಂದ ಸಾವು ನೋವುಗಳು, ಕಷ್ಟ ನಷ್ಟಗಳು ಉಂಟಾಗಬಹುದು. ಹಾಗಾಗಿ ಇದರ ಬಗ್ಗೆ ಸೂಕ್ತ ಮುನ್ನೆಚ್ಚರಿಕೆಯ ಜತೆಗೆ ಅಗ್ನಿ ಅವಘಡಗಳ ನಿಯಂತ್ರಣದ ಬಗ್ಗೆಯೂ ನಾವು ಜಾಗೃತರಾಗಿರಬೇಕು ಎಂದು  ಪುತ್ತೂರು ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಪ್ರಮುಖ ಅಗ್ನಿಶಾಮಕ ರುಕ್ಮಯ ಗೌಡ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಎಂಬಿಎ ಮತ್ತು ಎನ್‌ಎಸ್‌ಎಸ್ ವಿಭಾಗದ ವತಿಯಿಂದ ಏರ್ಪಡಿಸಲಾದ ಅಗ್ನಿ

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅಗ್ನಿ ಸುರಕ್ಷತೆಯ ಜಾಗೃತಿ ಕಾರ್ಯಕ್ರಮ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಮಂಚಿ ಶಾಲೆಗೆ ಅನುದಾನ ಹಸ್ತಾಂತರ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಯೋಜನಾಧಿಕಾರಿ ರಮೇಶ ಅವರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ 75000 ರೂಪಾಯಿ ಅನುದಾನವನ್ನು ಮಂಚಿ ಸರಕಾರಿ ಪ್ರೌಢಶಾಲೆಗೆ ಹಸ್ತಾಂತರಿಸಿದರು. ಮಂಚಿ ಗ್ರಾಮದ ಸಭಾಭವನ ನಿರ್ಮಾಣಕ್ಕೆ ಈ ಅನುದಾನ ನೀಡಲಾಗಿದೆ. ಮುಂಚಿ ಒಕ್ಕೂಟ ಅಧ್ಯಕ್ಷ ದಿವಾಕರ್ ನಾಯಕ್, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಶಾಲಾ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ಮಂಚಿ ಶಾಲೆಗೆ ಅನುದಾನ ಹಸ್ತಾಂತರ Read More »

error: Content is protected !!
Scroll to Top