ರಾಜಕೀಯ

ಬಳ್ಳಾರಿಯ ಕಾರ್ಯಕರ್ತನಿಂದ ಪುತ್ತಿಲಗೆ ಗೌರವ

ಪುತ್ತೂರು: ಬಳ್ಳಾರಿಯಿಂದ ಆಗಮಿಸಿದ ಹಿಂದೂ ಕಾರ್ಯಕರ್ತನೋರ್ವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಶಾಲು ಹಾಕಿ, ಭಗವದ್ಗೀತೆಯ ಪುಸ್ತಕ ನೀಡಿ ಗೌರವಿಸಿದರು. ಅರುಣ್ ಪುತ್ತಿಲ ಅವರ ಕಚೇರಿಗೆ ಆಗಮಿಸಿದ ಬಳ್ಳಾರಿಯ ತೇಜ ಎನ್ನುವ ಯುವಕ, ಅಭಿಮಾನ ಮೆರೆದದ್ದು ಹೀಗೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ‌ ಬಳಿಕ ಅರುಣ್ ಕುಮಾರ್ ಪುತ್ತಿಲ ಪ್ರಸಿದ್ಧಿ ಪಡೆದುಕೊಳ್ಳುತ್ತಿದ್ದಾರೆ‌.

ಬಳ್ಳಾರಿಯ ಕಾರ್ಯಕರ್ತನಿಂದ ಪುತ್ತಿಲಗೆ ಗೌರವ Read More »

ವಿಧಾನಸಭೆ ಸ್ಪೀಕರ್‌ ಆಗಿ ಯು.ಟಿ ಖಾದರ್ ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆ ಸಭಾಪತಿ ಸ್ಥಾನಕ್ಕೆ ಮಾಜಿ ಸಚಿವ, ಮಂಗಳೂರಿನ ಶಾಸಕ ಯು.ಟಿ ಖಾದರ್ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಯು.ಟಿ ಖಾದರ್ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಅವರಿಗೆ ನಾಮಪತ್ರ ಸಲ್ಲಿಸಿದ್ದರು. ಖಾದರ್ ಅವರನ್ನು ಹೊರತುಪಡಿಸಿ ಮತ್ತ್ಯಾರೂ ಸ್ಪೀಕರ್‌ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಯು.ಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಅದನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅನುಮೋದಿಸಿದರು. ಬಳಿಕ ಖಾದರ್

ವಿಧಾನಸಭೆ ಸ್ಪೀಕರ್‌ ಆಗಿ ಯು.ಟಿ ಖಾದರ್ ಅವಿರೋಧ ಆಯ್ಕೆ Read More »

ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ

ಬೆಂಗಳೂರು: ರಾಜ್ಯ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯು.ಟಿ. ಖಾದರ್ ಮಂಗಳವಾರ ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಸ್ಪೀಕರ್ ಸ್ಥಾನಕ್ಕೆ ನಾಳೆ (ಮೇ 24) ಚುನಾವಣೆ ನಡೆಯಲಿದ್ದು, ಯು.ಟಿ ಖಾದರ್ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಲು  ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಝಮೀರ್ ಅಹ್ಮದ್, ಶಾಸಕ ಅಜಯ್ ಸಿಂಗ್ ಉಪಸ್ಥಿತರಿದ್ದರು.

ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ನಾಮಪತ್ರ ಸಲ್ಲಿಕೆ Read More »

ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಒಳ ಪ್ರವೇಶಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಬೆಂಗಳೂರು: ಕರ್ನಾಟಕದ ಮುರ್ಮು ಖ್ಯಾತಿಯ ಭಾಗೀರಥಿ ಮುರುಳ್ಯ ಶಾಸಕಿಯಾಗಿ ಮೊದಲ ಬಾರಿಗೆ ಪ್ರವೇಶ ಮಾಡುತ್ತಿರುವ ಸಂದರ್ಭದಲ್ಲಿ ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಪ್ರವೇಶಿಸಿದರು. ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ವಿಧಾನಸಭೆಗೆ ಮೊದಲ ಬಾರಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ನಮಿಸಿದರು. ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆದರ್ಶವನ್ನು ಅನುಕರಣೆ ಮಾಡಿರುವುದನ್ನು ಇಲ್ಲಿ ಗಮನಿಸಬಹುದು.

ವಿಧಾನಸೌಧದ ಮೆಟ್ಟಿಲುಗಳಿಗೆ ನಮಿಸಿ ಒಳ ಪ್ರವೇಶಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ Read More »

ಹೊಸ ಸರಕಾರದ ಮೊದಲ ಅಧಿವೇಶನ ಇಂದಿನಿಂದ | ನೂತನ ಶಾಸಕರ ಪ್ರಮಾಣ ವಚನ, ಸ್ಪೀಕರ್ ಆಯ್ಕೆ ಪ್ರಕ್ರಿಯೆ

ಬೆಂಗಳೂರು: ಇಂದಿನಿಂದ ಮೂರು ದಿನ ವಿಧಾನಸಭಾ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ, ಕೊನೆ ದಿನ ವಿಧಾನಸಭಾ ಸ್ಪೀಕರ್​​​ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಬೆಳಗ್ಗೆ 11ಕ್ಕೆ ಅಧಿವೇಶನ ಆರಂಭವಾಗಲಿದೆ. ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್​ ಆರ್​.ವಿ. ದೇಶಪಾಂಡೆ ಪ್ರಮಾಣ ವಚನ ಬೋಧಿಸಲಿದ್ದಾರೆ. ವಿಧಾನಸಭೆಯ ಅವಧಿ ಮೇ 23ಕ್ಕೆ ಅಂತ್ಯವಾಗಿದ್ದು, ಅಷ್ಟರೊಳಗೆ ಶಾಸಕರ ಪ್ರಮಾಣವಚನ ಸ್ವೀಕಾರ ಪೂರ್ಣಗೊಳ್ಳಬೇಕು. ಜುಲೈ ತಿಂಗಳಿನಲ್ಲಿ ಬಜೆಟ್ ಮಂಡಿಸಲಾಗುವುದು.‌ ಸದಸ್ಯರ ಪ್ರಮಾಣ ವಚನ ಸ್ವೀಕಾರದ ಜತೆಗೆ

ಹೊಸ ಸರಕಾರದ ಮೊದಲ ಅಧಿವೇಶನ ಇಂದಿನಿಂದ | ನೂತನ ಶಾಸಕರ ಪ್ರಮಾಣ ವಚನ, ಸ್ಪೀಕರ್ ಆಯ್ಕೆ ಪ್ರಕ್ರಿಯೆ Read More »

`ಪುತ್ತಿಲ ಪರಿವಾರ’ದ ಲೋಗೊ ಅನಾವರಣ | ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ: ಪುತ್ತಿಲ

ಪುತ್ತೂರು: ನಿರೀಕ್ಷೆಯಂತೆಯೇ ಪುತ್ತಿಲ ಪರಿವಾರ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ. ಸೇವಾ ಸಮರ್ಪಣೆ ಸಮಾರಂಭ ಹಲವು ಕುತೂಹಲಗಳಿಗೆ ನಾಂದಿ ಹಾಡಿತ್ತು. ಆ ಎಲ್ಲಾ ಕುತೂಹಲಗಳಿಗೆ ಸಮಾರಂಭ ಉತ್ತರ ನೀಡಿದೆ. ದರ್ಬೆ ವೃತ್ತದಿಂದ ಪುತ್ತೂರು ಪೇಟೆಯಾಗಿ ಸಾಗಿ ಬಂದ ಕಾಲ್ನಡಿಗೆ ಜಾಥಾ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬಂದು, ರಥಬೀದಿಯಲ್ಲಿ ಹಾಕಿದ್ದ ವೇದಿಕೆಗೆ ಆಗಮಿಸಿತು. ವೇದಿಕೆಗೆ ಹತ್ತಿದ ಅರುಣ್ ಕುಮಾರ್ ಪುತ್ತಿಲ ಅವರು ಸಭೆಗೆ ಸಾಷ್ಟಾಂಗ ನಮಸ್ಕರಿಸಿದರು. ನಂತರ ನಡೆದ ಸಭೆಯಲ್ಲಿ ಪುತ್ತಿಲ ಪರಿವಾರ ಲೋಗೊ ಅನಾವರಣ

`ಪುತ್ತಿಲ ಪರಿವಾರ’ದ ಲೋಗೊ ಅನಾವರಣ | ದೇಶಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ: ಪುತ್ತಿಲ Read More »

ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ | ಕಾಲ್ನಡಿಗೆ ಜಾಥಕ್ಕೆ ದರ್ಬೆಯಲ್ಲಿ ಚಾಲನೆ

ಪುತ್ತೂರು: ಪುತ್ತಿಲ ಅಭಿಮಾನಿಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಕ್ಕೆ ದರ್ಬೆಯಲ್ಲಿ ಚಾಲನೆ ನೀಡಲಾಯಿತು. ದರ್ಬೆಯಲ್ಲಿ ಚಾಲನೆ ಪಡೆದ ಜಾಥ ಮುಖ್ಯರಸ್ತೆಯಾಗಿ ಸಂಚರಿಸಿತು. ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಮಂದಿ ಜಾಥಾದಲ್ಲಿ ಬರಿಗಾಲಲ್ಲಿ ನಡೆದುಕೊಂಡು ಬಂದರು. ಜಾಥಾ ಶಿಸ್ತುಬದ್ಧವಾಗಿ ಸಾಗಿಬಂದಿತು.

ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ | ಕಾಲ್ನಡಿಗೆ ಜಾಥಕ್ಕೆ ದರ್ಬೆಯಲ್ಲಿ ಚಾಲನೆ Read More »

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಭೇಟಿಯಾದ ಶಾಸಕ ಅಶೋಕ್ ರೈ

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆ ಸೇರಿರುವ ಹಿಂದೂ ಕಾರ್ಯಕರ್ತರನ್ನು ಶಾಸಕ ಅಶೋಕ್ ಕುಮೃ್ ರೈ ಅವರು ಭೇಟಿಯಾಗಿ ಸಾಂತ್ವನ ಹೇಳಿದರು. ಪೊಲೀಸ್ ದೌರ್ಜನ್ಯದಲ್ಲಿ ಕಾಂಗ್ರೆಸಿನ ಕೈವಾಡ ಇಲ್ಲ ಎನ್ನುವುದು ನಿಮಗೂ ತಿಳಿದಿದೆ. ಪೊಲೀಸರು ಪ್ರಕರಣವನ್ನು ಅಲ್ಲಿಂದಲ್ಲಿಗೆ ಮುಗಿಸುವ ಪ್ರಯತ್ನದಲ್ಲಿದ್ದರು. ಈ ಪ್ರಕರಣದ ವಿಷಯ ತಿಳಿಯುತ್ತಿದ್ದಂತೆ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆಯನ್ನು ನೀಡಿದ್ದೇನೆ ಎಂದ ಅವರು, ಅಗತ್ಯ ಸಹಕಾರ ಕೇಳಿ. ನನ್ನಿಂದಾಗುವ ಸಹಕಾರ ಖಂಡಿತಾ ನೀಡುತ್ತೇನೆ ಎಂದು ಭರವಸೆ ನೀಡಿದರು. ಮಾಜಿ ಶಾಸಕಿ ಶಕುಂತಳಾ

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಭೇಟಿಯಾದ ಶಾಸಕ ಅಶೋಕ್ ರೈ Read More »

ಪೊಲೀಸ್ ದೌರ್ಜನ್ಯ: ಯುವಕರಿಗೆ ಧೈರ್ಯ ತುಂಬಿದ ಕುಂಟಾರು ರವೀಶ ತಂತ್ರಿ

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರನ್ನು ಭಾನುವಾರ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಭೇಟಿಯಾಗಿ ಧೈರ್ಯ ತುಂಬಿದರು. ಬ್ಯಾನರ್ ಪ್ರಕರಣದಲ್ಲಿ ಪೊಲೀಸರ ಬಂಧಿಯಾಗಿ ಹಲ್ಲೆಗೊಳಗಾದ ಯುವಕರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಭೇಟಿಯಾದರು. ಪ್ರಮುಖರು ಉಪಸ್ಥಿತರಿದ್ದರು.

ಪೊಲೀಸ್ ದೌರ್ಜನ್ಯ: ಯುವಕರಿಗೆ ಧೈರ್ಯ ತುಂಬಿದ ಕುಂಟಾರು ರವೀಶ ತಂತ್ರಿ Read More »

ಇಂದು : ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ ಕಾಲ್ನಡಿಗೆ ಜಾಥಾ | ಬೃಹತ್ ಕಾರ್ಯಕರ್ತರ ಸಭೆ

ಪುತ್ತೂರು: ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ ಧ್ಯೇಯ ವಾಕ್ಯದೊಂದಿಗೆ ಕಾಲ್ನಡಿಗೆ ಜಾಥಾ –ಸೇವಾ ಸಮರ್ಪಣಾ ಕಾರ್ಯಕ್ರಮ ಇಂದು ನಡೆಯಲಿದೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಸಂಜೆ 4 ಗಂಟೆಯಿಂದ ದರ್ಬೆ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ತನಕ ಕಾಲ್ನಡಿಗೆ ಜಾಥಾ ನಡೆಯಲಿದೆ. ಬಳಿಕ 6 ಗಂಟೆಗೆ ದೇವಸ್ಥಾನದ ವಠಾರದಲ್ಲಿ ಬೃಹತ್ ಕಾರ್ಯಕರ್ತರ ಸಭೆ ನಡೆಯಲಿದೆ. ಸಮಸ್ತ ಹಿಂದೂ  ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.

ಇಂದು : ನಮ್ಮ ನಡಿಗೆ ಮಹಾಲಿಂಗೇಶ್ವರನ ಕಡೆಗೆ ಕಾಲ್ನಡಿಗೆ ಜಾಥಾ | ಬೃಹತ್ ಕಾರ್ಯಕರ್ತರ ಸಭೆ Read More »

error: Content is protected !!
Scroll to Top