ರಾಜಕೀಯ

ನಿಡ್ಪಳ್ಳಿ, ಆರ್ಯಾಪು ಗ್ರಾಪಂ ಉಪಚುನಾವಣೆ : ಪುತ್ತಿಲ ಪರಿವಾರದಿಂದ ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ

ಪುತ್ತೂರು: ಪುತ್ತಿಲ ಪರಿವಾರದಿಂದ ನಿಡ್ಪಳ್ಳಿ ಹಾಗೂ ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಮಹಾ ಸಂಪರ್ಕ ಅಭಿಯಾನ ಭಾನುವಾರ ನಡೆಯಿತು. ಶ್ರೀಕ್ಷೇತ್ರ ನಿಡ್ಪಳ್ಳಿಯ ಶಾಂತಾದುರ್ಗಾ ದೇವಸ್ಥಾನ, ಆರ್ಯಾಪು ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಎರಡು ಕ್ಷೇತ್ರದ ಪುತ್ತಿಲ ಪರಿವಾರದ ಬ್ಯಾಟ್ ಚಿಹ್ನೆಯ ಅಭ್ಯರ್ಥಿಗಳಾದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಹಾಗೂ ಜಗನ್ನಾಥ ರೈ ಕೊಳಂಬೆತ್ತಿಮಾರು ಹಾಗೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ತಾಲೂಕು ಸಮಿತಿ ಹಾಗೂ […]

ನಿಡ್ಪಳ್ಳಿ, ಆರ್ಯಾಪು ಗ್ರಾಪಂ ಉಪಚುನಾವಣೆ : ಪುತ್ತಿಲ ಪರಿವಾರದಿಂದ ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ Read More »

ಆರ್ಯಾಪು, ನಿಡ್ಪಳ್ಳಿಯಲ್ಲಿ ಉಪ ಚುನಾವಣಾ ಪೂರ್ವ ಕಾಂಗ್ರೆಸ್ ಕಾರ್ಯಕರ್ತರು, ಮತದಾರರ ಸಭೆ

ಪುತ್ತೂರು: ಚುನಾವಣೆ ಸಂದರ್ಭ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಯೋಜನೆಗಳು ಮೂರೇ ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಕಾಂಗ್ರೆಸ್ ಸರಕಾರದ ಈ ಯೋಜನೆಯನ್ನು ಜನ ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಗ್ರಾಪಂ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನ್ನು ಬೆಂಬಲಿಸಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಅವರು ಉಪಚುನಾವಣೆ ಅಂಗವಾಗಿ ನಿಡ್ಪಳ್ಳಿ ಹಾಗೂ ಆರ್ಯಾಪುನಲ್ಲಿ ನಡೆದ ಕಾರ್ಯಕರ್ತರು ಹಾಗೂ ಮತದಾರರ ಸಭೆಯಲ್ಲಿ ಮಾತನಾಡಿದರು. ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಶಾಸಕ

ಆರ್ಯಾಪು, ನಿಡ್ಪಳ್ಳಿಯಲ್ಲಿ ಉಪ ಚುನಾವಣಾ ಪೂರ್ವ ಕಾಂಗ್ರೆಸ್ ಕಾರ್ಯಕರ್ತರು, ಮತದಾರರ ಸಭೆ Read More »

ಆರ್ಯಾಪು, ನಿಡ್ಪಳ್ಳಿ ಗ್ರಾಪಂ ಉಪ ಚುನಾವಣೆ | ಆರು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ಪುತ್ತೂರು: ಆರ್ಯಾಪು ಹಾಗೂ ನಿಡ್ನಳ್ಳಿ ಗ್ರಾ.ಪಂಗಳಲ್ಲಿ ತಲಾ ಒಂದು ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಆರು ಮಂದಿ ಸದಸ್ಯರು ಅಂತಿಮ ಕಣದಲ್ಲಿದ್ದಾರೆ. ಸದಸ್ಯರಿಬ್ಬರ ನಿಧನದಿಂದ ತೆರವಾದ ತಲಾ ಒಂದು ಸ್ಥಾನಕ್ಕೆ ಜು.23ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಆರು ಮಂದಿ ಅಂತಿಮ ಕಣದಲ್ಲಿದ್ದಾರೆ. ಹೀಗಾಗಿ ಎರಡೂ ಪಂಚಾಯತ್‌ಗಳಲ್ಲಿಯೂ ತಲಾ ಒಂದು ಸ್ಥಾನಕ್ಕೆ ತ್ರಿಕೋಣ ಸ್ಪರ್ಧೆ ಏರ್ಪಡಲಿದೆ. ನಿಡ್ನಳ್ಳಿ ಗ್ರಾ.ಪಂನ ನಿಡ್ನಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಬಿಜೆಪಿ ಬೆಂಬಲಿತ

ಆರ್ಯಾಪು, ನಿಡ್ಪಳ್ಳಿ ಗ್ರಾಪಂ ಉಪ ಚುನಾವಣೆ | ಆರು ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ Read More »

ಗ್ರಾಪಂ ಉಪಚುನಾವಣೆ : ಪುತ್ತಿಲ ಪರಿವಾರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ

ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬ್ಯಾಟ್ ಚಿಹ್ನೆ ದೊರಕಿದ್ದು, ಇದೀಗ ಮತ್ತೊಮ್ಮೆ ಗ್ರಾಪಂ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ ದೊರಕಿದೆ. ನಿಡ್ಪಳ್ಳಿ ಗ್ರಾಪಂ ನಿಂದ ಸ್ಪರ್ಧಿಸುತ್ತಿರುವ ತೋಟ, ಜಗನ್ನಾಥ ರೈ ಬ್ಯಾಟ್ ಚಿಹ್ನೆ ಲಭಿಸಿದೆ. ಆರ್ಯಾಪು ಗ್ರಾಪಂನಿಂದ ಸ್ಪರ್ಧಿಸಿರುವ ಸುಬ್ರಹ್ಮಣ್ಯ ಬಲ್ಯಾಯ ಅವರಿಗೆ ಬ್ಯಾಟ್ ಚಹ್ನೆ ಲಭಿಸಿದೆ.

ಗ್ರಾಪಂ ಉಪಚುನಾವಣೆ : ಪುತ್ತಿಲ ಪರಿವಾರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ Read More »

ಗೃಹಲಕ್ಷ್ಮೀ ಯೋಜನೆಯ ನೋಂದಾವಣೆ ಜು.19 ರಿಂದ ಆರಂಭ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಪುತ್ತೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ನೋಂದಾವಣೆ ಜು.19 ರಿಂದ ಆರಂಭಗೊಳ್ಳಲಿದೆ. ಮನೆಯ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆ ಯೋಜನೆಯ ಫಲಾನುಭವಿಗಳಾಗಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಫಲಾನುಭವಿ ಮಹಿಳೆ ಅಥವಾ ಪತಿ ಆದಾಯ ತೆರಿಗೆ ಅಥವಾ ಜಿಎಸ್ ಟಿ ಪಾವತಿದಾರರಾಗಿಬಾರದು. ರೇಷನ್ ಕಾರ್ಡ್ ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಮತ್ತು ನೊಂದಣಿ ಸ್ಥಳದ ವಿವರ ಎಸ್ ಎಂ

ಗೃಹಲಕ್ಷ್ಮೀ ಯೋಜನೆಯ ನೋಂದಾವಣೆ ಜು.19 ರಿಂದ ಆರಂಭ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ Read More »

ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆ | ಎರಡು ಬಣಗಳೊಳಗೆ ಮಾರಾಮಾರಿ

ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಕುರಿತು ಕಡಬ ಅಂಬೇಡ್ಕರ‍ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೃಷ್ಣಪ್ಪ ಜಿ. ಹಾಗೂ ನಂದಕುಮಾರ್ ಬಣದ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿದೆ. ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆರೋಪ ಹೊತ್ತಿರುವ ಉಚ್ಚಾಟಿತ ಮುಖಂಡರು ಆಗಮಿಸಿದ್ದು ಕೃಷ್ಣಪ್ಪ ಜಿ. ಬಣದವರ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆ | ಎರಡು ಬಣಗಳೊಳಗೆ ಮಾರಾಮಾರಿ Read More »

ಕಾಂಗ್ರೆಸ್ ಸರಕಾರದಿಂದ ದ್ವೇಷ ರಾಜಕಾರಣ : ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ರೀತಿಯ ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು ಪುತ್ತೂರು ನಗರದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುನಿಗಳು, ಉದ್ಯಮಿಗಳು ಜತೆಗೆ ಎಲ್ಲಿಂದಲೋ ಉದ್ಯೋಗ ಅರಸಿ ಬಂದ ಕಾರ್ಮಿಕರ ಹತ್ಯೆಗಳು, ಎರಡು ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ

ಕಾಂಗ್ರೆಸ್ ಸರಕಾರದಿಂದ ದ್ವೇಷ ರಾಜಕಾರಣ : ಸಂಸದ ನಳಿನ್ ಕುಮಾರ್ ಕಟೀಲ್ Read More »

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ | ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ

ಧರ್ಮಸ್ಥಳ : ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಶಕ್ತಿ “ ಯೋಜನೆ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿದ್ಧರಾಮಯ್ಯ ಅವರು ಹಂಚಿಕೊಂಡಿದ್ದು, 14ನೇ ಬಜೆಟ್ ನ ಫಲಶ್ರುತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆಗೆ ಸಿಕ್ಕಿರುವ ಮನ್ನಣೆಯಾಗಿದೆ ಎಂದು ಅವರು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಧರ್ಮಸ್ಥಳಕ್ಕೆ

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ | ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ Read More »

ಗ್ರಾಮ ಪಂಚಾಯಿತಿ ಉಪ ಚುನಾವಣೆ | ಮಾಜಿ ಶಾಸಕರ ನೇತೃತ್ವದಲ್ಲಿ ಮತ ಬೇಟೆ

ಪುತ್ತೂರು: ನಿಡ್ಪಳ್ಳಿ  ಗ್ರಾಮ ಪಂಚಾಯತ್ ಉಪಚುನಾವಣೆಗೆ ಮಾಜಿ ಶಾಸಕ ಸಂಜೀವ ಮಂಠದೂರು ನೇತೃತ್ವದಲ್ಲಿ ಮತಯಾಚನೆ ಗುರುವಾರ ನಡೆಯಿತು. ಅಭ್ಯರ್ಥಿ ಚಂದ್ರಶೇಖರ ಪ್ರಭು ಪರ ಮತ ಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಗೀತಾ ಸಂತೋಷ್, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ, ನಿಕಟ ಪೂರ್ವ ನಗರಸಭೆ  ಅಧ್ಯಕ್ಷ ಜೀವಂಧರ್ ಜೈನ್, ನಿತೀಶ್ ಕುಮಾರ್ ಶಾಂತಿವನ, ಅಪ್ಪಯ್ಯ ಮಣಿಯಾಣಿ, ಪದ್ಮನಾಭ ಬೋರ್ಕರ್, ರಾಧಾಕೃಷ್ಣ ಬೋರ್ಕರ್, ಆರ್ ಸಿ ನಾರಾಯಣ್ ರೆಂಜ, ಪುನೀತ್ ಮಾಡತ್ತಾರ್, ಹರಿಪ್ರಸಾದ್ ಯಾದವ್ ಮತ್ತಿತರರು

ಗ್ರಾಮ ಪಂಚಾಯಿತಿ ಉಪ ಚುನಾವಣೆ | ಮಾಜಿ ಶಾಸಕರ ನೇತೃತ್ವದಲ್ಲಿ ಮತ ಬೇಟೆ Read More »

ಜು.28 : ಅಣ್ಣಾಮಲೈ ನಡೆಸಲಿರುವ 120 ದಿನಗಳ ಪಾದಯಾತ್ರೆಗೆ ಚಾಲನೆ

ಬೆಂಗಳೂರು : ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ನಡೆಸಲಿರುವ 120 ದಿನಗಳ ಕಾಲ ಪಾದಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜು. 8 ರಂದು ರಾಮೇಶ್ವರಂನಿಂದ ಚಾಲನೆ ನೀಡಲಿದ್ದಾರೆ. ಎನ್ ಮಣ್ ಎನ್ ಮಕ್ಕಳ್ – ಪ್ರಥಮರ್ ಮೋದಿಯಿನ್ ತಮಿಳ್ ಮುಝಕ್ಕಂ (ನನ್ನ ಭೂಮಿ, ನನ್ನ ಜನರು – ತಮಿಳರಿಗೆ ಪ್ರಧಾನಿ ಮೋದಿಯವರ ಕರೆ) ಎಂಬ ಹೆಸರಿನ ಈ ಯಾತ್ರೆಯು ಎಲ್ಲಾ 234 ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿದ್ದು, 2024 ರ ಜನವರಿ ಮಧ್ಯದಲ್ಲಿ

ಜು.28 : ಅಣ್ಣಾಮಲೈ ನಡೆಸಲಿರುವ 120 ದಿನಗಳ ಪಾದಯಾತ್ರೆಗೆ ಚಾಲನೆ Read More »

error: Content is protected !!
Scroll to Top