ರಾಜಕೀಯ

ಮೋದಿ ಗೆಲುವಿಗೆ ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ  | ಪುತ್ತೂರಿನಲ್ಲಿ ಸ್ವಾಗತ, ಮಹಾಲಿಂಗೇಶ್ವರ, ಲಕ್ಷ್ಮೀವೆಂಕಟರಮಣ ದೇವಳದಲ್ಲಿ ವಿಶೇಷ ಪ್ರಾರ್ಥನೆ | ಮೋದಿ 9 ವರ್ಷ ಆಡಳಿತಕ್ಕೆ ಫಲ ಸಿಗುವ ಸಮಯ: ಚಂದ್ರಶೇಖರ್

ಪುತ್ತೂರು: ಜನರಿಗೆ ಪ್ರಧಾನಿ ಮೋದಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ, ದೇಶಕ್ಕೆ ಬರುವ ಆತಂಕದ ವಿಷಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮುಂಬವರು ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿಗೆ ’ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ ಪುತ್ತೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಅದ್ದೂರಿಯ ಸ್ವಾಗತ ಮಾಡಿ ಬೈಕ್ ರ್ಯಾಲಿಯ ಮೂಲಕ ಪುತ್ತೂರಿನಿಂದ ಮುಂದಿನ ತಾಲೂಕಿಗೆ ಬೀಳ್ಕೊಡಲಾಯಿತು. ಬೈಕ್ ರ್ಯಾಲಿಯನ್ನು ಪುತ್ತೂರಿನ ಕಾರ್ಯಕರ್ತರು ಸ್ವಾಗತಿಸಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ […]

ಮೋದಿ ಗೆಲುವಿಗೆ ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ  | ಪುತ್ತೂರಿನಲ್ಲಿ ಸ್ವಾಗತ, ಮಹಾಲಿಂಗೇಶ್ವರ, ಲಕ್ಷ್ಮೀವೆಂಕಟರಮಣ ದೇವಳದಲ್ಲಿ ವಿಶೇಷ ಪ್ರಾರ್ಥನೆ | ಮೋದಿ 9 ವರ್ಷ ಆಡಳಿತಕ್ಕೆ ಫಲ ಸಿಗುವ ಸಮಯ: ಚಂದ್ರಶೇಖರ್ Read More »

ಸಾರ್ವಜನಿಕರಂತೆ ಸರತಿಯಲ್ಲೇ ಸಾಗಿ ಶಾಸಕರಿಗೆ ಮನವಿ ನೀಡಿದ ಅಶೋಕ್ ರೈ ಸಹೋದರಿ!!

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ಸಹೋದರಿ ನಳಿನಿ ಶೆಟ್ಟಿ ಶನಿವಾರದಂದು ಶಾಸಕರನ್ನು ಭೇಟಿಯಾಗಲು ಶಾಸಕರ ಕಚೇರಿಗೆ ಬಂದಿದ್ದರು. ಶಾಸಕರನ್ನು ಭೇಟಿಯಾಗಲು ಬಂದಿರುವ ಸಾರ್ವಜನಿಕರ ಸಂಖ್ಯೆಯೂ ಅಪಾರವಾಗಿತ್ತು. ತನ್ನ ಸಹೋದರಿ ತನಗಾಗಿ ಕಾಯುತ್ತಿದ್ದಾರೆ ಎಂಬ ವಿಚಾರ ಶಾಸಕರಿಗೆ ಗೊತ್ತಿತ್ತು. ಆದರೆ ಶಾಸಕರು ತನ್ನ ಸಹೋದರಿಯನ್ನು ಕರೆಯಲಿಲ್ಲ. ‌ಸರತಿ ಸಾಲಿನಲ್ಲೇ ಬಂದ ನಳಿನಿ ಶೆಟ್ಟಿಯವರು ಅರ್ಜಿ ಸಲ್ಲಿಸಿ ಅಲ್ಲಿಂದ ತೆರಳಿದರು. ‌ಶಾಸಕರ ಈ ನ್ಯಾಯದ ನಡೆ ಅಲ್ಲಿದ್ದವರಿಗೆ ಶಾಸಕರ ಬಗ್ಗೆ ಗೌರವ ಹೆಚ್ಚಾಗುವಂತೆ ಮಾಡಿತು. ಅಧಿಕಾರದಲ್ಲಿರುವವರು ರಾಜಧರ್ಮ

ಸಾರ್ವಜನಿಕರಂತೆ ಸರತಿಯಲ್ಲೇ ಸಾಗಿ ಶಾಸಕರಿಗೆ ಮನವಿ ನೀಡಿದ ಅಶೋಕ್ ರೈ ಸಹೋದರಿ!! Read More »

ಯಾರನ್ನು ಕೇಳಿ ಮೈತ್ರಿ ಮಾಡಿದ್ರಿ: ಗುಡುಗಿದ ಜೆಡಿಎಸ್ ರಾಜ್ಯಾಧ್ಯಕ್ಷ?

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್‌ ನಡುವೆ ನಡೆದಿರುವ ಚುನಾವಣಾ ಮೈತ್ರಿಯ ವಿರುದ್ಧ ಜೆಡಿಎಸ್‌ ರಾಜ್ಯಾದ್ಯಕ್ಷ ಸಿಎಂ. ಇಬ್ರಾಹಿಂ ಅಬ್ಬರಿಸಿದ್ದಾರೆ. ʻʻಇಬ್ಬರು ಕೂತು ಮಾತನಾಡಿದರೆ ಮೈತ್ರಿ ಆಗಲ್ಲ. ನಾನು ರಾಜ್ಯಾಧ್ಯಕ್ಷನಿದ್ದೇನೆ. ಚುನಾಯಿತ ಆಧ್ಯಕ್ಷನಿದ್ದೇನೆʼʼ ಎಂದು ಗುಡುಗಿದ ಅವರು, ಮೈತ್ರಿಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಅಕ್ಟೋಬರ್‌ 16ರಂದು ಕರೆದಿರುವ ಸಮಾನ ಮನಸ್ಕರ ಸಭೆಯಲ್ಲಿ ಮುಂದಿನ ನಡೆಯನ್ನು ನಿರ್ಧರಿಸುವುದಾಗಿ ಪ್ರಕಟಿಸಿದರು. ಅಂದು ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಮೈತ್ರಿಯ ಬಳಿಕ ಮಾಜಿ ಮುಖ್ಯಮಂತ್ರಿ

ಯಾರನ್ನು ಕೇಳಿ ಮೈತ್ರಿ ಮಾಡಿದ್ರಿ: ಗುಡುಗಿದ ಜೆಡಿಎಸ್ ರಾಜ್ಯಾಧ್ಯಕ್ಷ? Read More »

ಪರ – ವಿರೋಧಕ್ಕೆ ಬೀದಿದೀಪ ಬಲಿ!! | ಬೀದಿ ದೀಪಕ್ಕಾಗಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಒತ್ತಾಯ

ಪುತ್ತೂರು: ನಗರಸಭೆಯ 31 ವಾರ್ಡ್ ಸಂಖ್ಯೆ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಹೈಮಾಸ್ಟ್ ದೀಪ ಅಳವಡಿಸುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಪರ ವಿರೋಧಗಳು ಮುಂದುವರಿದಿದ್ದು, ಇದೀಗ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಹೈಮಾಸ್ಟ್ ದೀಪವನ್ನು ಅಗತ್ಯತೆ ಇರುವಲ್ಲಿ ಅಳವಡಿಸುವಂತೆ ನಗರಸಭೆಗೆ ಮನವಿ ಮಾಡಿದ್ದಾರೆ. ಪ್ರಸ್ತುತ ಉಜ್ರುಪಾದೆ ಜಂಕ್ಷನ್‌ನಲ್ಲಿ ಹೈ ಮಾಸ್ಟ್ ದೀಪ ಅಳವಡಿಸುವ ಕೆಲಸ ನಡೆಯುತ್ತಿದೆ. ಆದರೆ ಅಗತ್ಯತೆ ಇರುವಲ್ಲಿ ಅಳವಡಿಸದೇ ಇರುವುದರಿಂದ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ, ನಗರಸಭೆ ಮಾಜಿ

ಪರ – ವಿರೋಧಕ್ಕೆ ಬೀದಿದೀಪ ಬಲಿ!! | ಬೀದಿ ದೀಪಕ್ಕಾಗಿ ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಒತ್ತಾಯ Read More »

ಅಚ್ಚೇದಿನ್ ಬರುವುದಾಗಿ ಹೇಳಿದ್ದ ಬಿಜೆಪಿ, ಜನರ ಖಾತೆಗೆ ನಯಾ ಪೈಸೆ ಹಣ ಹಾಕಿಲ್ಲವೆಂದ ಅಶೋಕ್ ರೈ | ಕೊಳ್ತಿಗೆ ವಲಯ ಕಾಂಗ್ರೆಸ್‌ಕಾರ್ಯಕರ್ತರ ಸಭೆಯಲ್ಲಿ ಶಾಸಕರಿಗೆ ಸನ್ಮಾನ | ಕಾವು ಹೇಮನಾಥ ಶೆಟ್ಟಿ ಅವರಿಗೆ ಅರಣ್ಯ ನಿಗಮ ನೀಡಲು ಆಗ್ರಹ

ಪುತ್ತೂರು: ನಾವು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಚ್ಚೇದಿನ್ ಕೊಡುತ್ತೇವೆ, ಜನರಿಗೆ ನೆಮ್ಮದಿಯ ಜೀವನ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಜನರ ಖಾತೆಗೆ ನಯಾ ಪೈಸೆ ನೀಡಿಲ್ಲ. ನೆಮ್ಮದಿಯ ಜೀವನವನ್ನೂ ನೀಡಿಲ್ಲ ಎಂದು ಶಾಸಕ ಅಶೋಕ್ ರೈ ಆರೋಪಿಸಿದರು. ಕೊಳ್ತಿಗೆ ವಲಯ ಕಾಂಗ್ರೆಸ್ ವತಿಯಿಂದ ಕೊಳ್ತಿಗೆ ಅಂಬೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೊಟ್ಟಿದ್ದ ಗ್ಯಾರಂಟಿಯನ್ನು ಕಾಂಗ್ರೆಸ್ ಈಡೇರಿಸಿದೆ. ಜನರ ಖಾತೆಗೆ ಹಣವನ್ನು ನೀಡಿದ್ದೇವೆ, ಅಕ್ಕಿಯನ್ನು ನೀಡಿದ್ದೇವೆ,

ಅಚ್ಚೇದಿನ್ ಬರುವುದಾಗಿ ಹೇಳಿದ್ದ ಬಿಜೆಪಿ, ಜನರ ಖಾತೆಗೆ ನಯಾ ಪೈಸೆ ಹಣ ಹಾಕಿಲ್ಲವೆಂದ ಅಶೋಕ್ ರೈ | ಕೊಳ್ತಿಗೆ ವಲಯ ಕಾಂಗ್ರೆಸ್‌ಕಾರ್ಯಕರ್ತರ ಸಭೆಯಲ್ಲಿ ಶಾಸಕರಿಗೆ ಸನ್ಮಾನ | ಕಾವು ಹೇಮನಾಥ ಶೆಟ್ಟಿ ಅವರಿಗೆ ಅರಣ್ಯ ನಿಗಮ ನೀಡಲು ಆಗ್ರಹ Read More »

ಮೋದಿ ಜನ್ಮ ದಿನ: ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ರಕ್ತದಾನ ಶಿಬಿರ

ಪುತ್ತೂರು: ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ನಡೆಯುವ ಸೇವಾ ಪಾಕ್ಷಿಕ ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರ ಪುತ್ತೂರು ಬ್ಲಡ್ ಬ್ಯಾಂಕ್’ನಲ್ಲಿ ಮಂಗಳವಾರ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮೋದಿಯವರ ಜನ್ಮದಿನದಿಂದ ಆಕ್ಟೋಬರ್ 2 ಗಾಂಧಿ ಜಯಂತಿವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಶಿಬಿರದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ ಜಗನ್ನಿವಾಸ್ ರಾವ್,

ಮೋದಿ ಜನ್ಮ ದಿನ: ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ರಕ್ತದಾನ ಶಿಬಿರ Read More »

ಸದ್ಯವೇ ಪುತ್ತೂರಿನಲ್ಲಿ ಬೃಹತ್ ಮಹಿಳಾ ಸಮಾವೇಶ | ಕೆಯ್ಯೂರು ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಶಾಸಕ ಅಶೋಕ್ ರೈ

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಆಗಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರೆ ಕಾಂಗ್ರೆಸ್ ಗೆ ಶಕ್ತಿ ತುಂಬಲಿದ್ದಾರೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಕಾಂಗ್ರೆಸ್ ಮುಖಂಡ ಸಂತೋಷ್ ರೈ ಇಳಂತಾಜೆ ನಿವಾಸದಲ್ಲಿ ಕೆಯ್ಯೂರು ವಲಯ ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಐದು ಗ್ಯಾರಂಟಿಗಳನ್ನು ಸರಕಾರ ಜಾರಿಗೆ ತಂದಿದೆ. ಈ ಐದು ಗ್ಯಾರಂಟಿಗಳಲ್ಲಿ ಬಹುತೇಕ ಮಹಿಳೆಯರನ್ನೇ ಮುಂದಿಟ್ಟುಕೊಂಡು ಮಾಡಲಾಗಿದೆ. ಶಕ್ತಿ ಯೋಜನೆ, ಅನ್ನ

ಸದ್ಯವೇ ಪುತ್ತೂರಿನಲ್ಲಿ ಬೃಹತ್ ಮಹಿಳಾ ಸಮಾವೇಶ | ಕೆಯ್ಯೂರು ಮಹಿಳಾ ಕಾಂಗ್ರೆಸ್ ಘಟಕ ಉದ್ಘಾಟಿಸಿ ಶಾಸಕ ಅಶೋಕ್ ರೈ Read More »

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್ | ಸೀಟು ಹಂಚಿಕೆಯ ಗೊಂದಲದ ಬಗ್ಗೆಯೂ ಮಾತನಾಡಿದ ಎಚ್.ಡಿ.ಕೆ.

ನವದೆಹಲಿ: ಜೆಡಿಎಸ್ ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಸೇರಿದೆ. ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಅಧಿಕೃತವಾಗಿ ಮೈತ್ರಿ ಬಗ್ಗೆ ಕೆಲ ವಿಚಾರ ಚರ್ಚೆ ನಡೆಸಿದ್ದೇವೆ. ಮೈತ್ರಿ ಬಗ್ಗೆ ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್‌ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ ಎಂದಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಗೆಲ್ಲುವುದೇ ನಮ್ಮ ಗುರಿ.

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿದ ಜೆಡಿಎಸ್ | ಸೀಟು ಹಂಚಿಕೆಯ ಗೊಂದಲದ ಬಗ್ಗೆಯೂ ಮಾತನಾಡಿದ ಎಚ್.ಡಿ.ಕೆ. Read More »

ನಾರಿ ವಂದನಾ ಅಧಿನಿಯಮ: ಪುತ್ತೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಂಭ್ರಮ ಹೀಗಿತ್ತು.. ವೀಡಿಯೋ ನೋಡಿ

ಪುತ್ತೂರು: ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಮಂಡಿಸಿದ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಅಭಿನಂದನಾ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಮಂಡಿಸಿದ ಬಗ್ಗೆ ಸಂಭ್ರಮ ವ್ಯಕ್ತಪಡಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯಂತಿ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ

ನಾರಿ ವಂದನಾ ಅಧಿನಿಯಮ: ಪುತ್ತೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಂಭ್ರಮ ಹೀಗಿತ್ತು.. ವೀಡಿಯೋ ನೋಡಿ Read More »

ಚೌತಿಯಂದು ಪ್ರವೇಶಿಸುವ ಹೊಸ, ಅತ್ಯಾಧುನಿಕ ಸಂಸತ್ ಕಟ್ಟಡ ಭಾರತದ ಕನಸನ್ನು ನನಸಾಗಿಸಲಿದೆ ಎಂದ ಪ್ರಧಾನಿ | ಮಾಧ್ಯಮ ಪ್ರತಿನಿಧಿಗಳೊಂದಿಗಿನ ಮೋದಿ ಮಾತು ಇಲ್ಲಿದೆ…

ನವ ದೆಹಲಿ: ಸಂಸತ್ತಿನ ಈ ವಿಶೇಷ ಅಧಿವೇಶನದ ಅವಧಿ ಚಿಕ್ಕದಾಗಿದ್ದರೂ ಕೂಡ ಸಮಯ ಬಹಳ ಮಹತ್ವದ್ದಾಗಿದ್ದು, ದೊಡ್ಡದಾಗಿದೆ. ಇದೊಂದು ಐತಿಹಾಸಿಕ ನಿರ್ಧಾರಗಳ ಅಧಿವೇಶನ. ಈ ಅಧಿವೇಶನದ ವಿಶೇಷತೆ ಏನೆಂದರೆ ಸ್ವಾತಂತ್ರ್ಯ ನಂತರ ಭಾರತದ 75 ವರ್ಷಗಳ ಪಯಣ ಹೊಸ ಗಮ್ಯದಿಂದ ಆರಂಭವಾಗುತ್ತಿದೆ. ಈಗ ಹೊಸ ಜಾಗದಿಂದ ಪಯಣವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವಾಗಲೇ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಿದೆ. ಮುಂಬರುವ ಎಲ್ಲಾ ನಿರ್ಧಾರಗಳನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು

ಚೌತಿಯಂದು ಪ್ರವೇಶಿಸುವ ಹೊಸ, ಅತ್ಯಾಧುನಿಕ ಸಂಸತ್ ಕಟ್ಟಡ ಭಾರತದ ಕನಸನ್ನು ನನಸಾಗಿಸಲಿದೆ ಎಂದ ಪ್ರಧಾನಿ | ಮಾಧ್ಯಮ ಪ್ರತಿನಿಧಿಗಳೊಂದಿಗಿನ ಮೋದಿ ಮಾತು ಇಲ್ಲಿದೆ… Read More »

error: Content is protected !!
Scroll to Top