ರಾಜಕೀಯ

ಸಿದ್ದರಾಮಯ್ಯನವರಿಂದ ಅವಮಾನಕ್ಕೀಡಾಗಿದ್ದ ಪೊಲೀಸ್‌ ಅಧಿಕಾರಿಯಿಂದ ಸ್ವಯಂ ನಿವೃತ್ತಿಗೆ ಅರ್ಜಿ

ಬೆಳಗಾವಿಯ ಸಾಧನಾ ಸಮಾವೇಶದಲ್ಲಿ ಪೊಲೀಸ್‌ ಅಧಿಕಾರಿಗೆ ಅವಮಾನ ಮಾಡಿದ್ದ ಸಿಎಂ ಬೆಂಗಳೂರು: ಕಾಂಗ್ರೆಸ್‌ನ ಸಮಾವೇಶದ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಹಿರಿಯ ಪೊಲೀಸ್‌ ಅಧಿಕಾರಿ ಪ್ರಸ್ತುತ ಧಾರವಾಡದ ಎಎಸ್‌ಪಿ ಆಗಿರುವ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿಗೆ ಮನವಿ ಮಾಡಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿಯಲ್ಲಿ ಕೆಲ ಸಮಯದ ಹಿಂದೆ ನಡೆದ ಕಾಂಗ್ರೆಸ್‌ನ ಸಾಧನಾ ಸಮಾವೇಶದ ವೇದಿಕೆಯಲ್ಲಿ ಆಗ ಬೆಳಗಾವಿಯಲ್ಲಿ ಕರ್ತವ್ಯದಲ್ಲಿದ್ದ ನಾರಾಯಣ ಬರಮಣ್ಣಿ ಅವರಿಗೆ ಹೊಡೆಯಲು ಸಿದ್ದರಾಮಯ್ಯ ಕೈ ಎತ್ತಿದ್ದರು. ಈ ವೀಡಿಯೊ ಭಾರಿ ವೈರಲ್‌ ಆಗಿ […]

ಸಿದ್ದರಾಮಯ್ಯನವರಿಂದ ಅವಮಾನಕ್ಕೀಡಾಗಿದ್ದ ಪೊಲೀಸ್‌ ಅಧಿಕಾರಿಯಿಂದ ಸ್ವಯಂ ನಿವೃತ್ತಿಗೆ ಅರ್ಜಿ Read More »

ಸಿಎಂ ಬದಲಾವಣೆ ವಿಷಯದಲ್ಲಿ ನನ್ನ ಮಾತಿಗೆ ನಾನು ಬದ್ಧ : ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್

ಬೆಂಗಳೂರು: ನನಗೆ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡದಂತೆ ಪಕ್ಷ ನೊಟೀಸ್ ನೀಡಿದೆ. ನಾನು ಬೇರೆಯವರಿಗೂ ಹೇಳುವಂತೆ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ನನ್ನ ಮಾತಿಗೆ ನಾನು ಬದ್ಧ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ. ನಾನು ಪಕ್ಷದ ವರಿಷ್ಠರ ಜೊತೆಗೆ ನಾವೆಲ್ಲರೂ ಬದಲಾವಣೆ ಬಯಸುತ್ತಿರುವುದಾಗಿ ಹೇಳಿದ್ದೇನೆ. ಅವರಿಂದಲೂ ನಮಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಅದು ಮನ್ ನಲ್ಲಿನ ಅಶಾ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ. ನಾನು ಸಿದ್ದರಾಮಯ್ಯ ಅವರ ಅಭಿಮಾನಿ ಹೌದು. ಆದರೆ ಅವರು ಈಗಾಗಲೇ ಎರಡೂವರೆ

ಸಿಎಂ ಬದಲಾವಣೆ ವಿಷಯದಲ್ಲಿ ನನ್ನ ಮಾತಿಗೆ ನಾನು ಬದ್ಧ : ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ Read More »

ಸುರ್ಜೇವಾಲಾ ಜೊತೆ ಮುಗಿಯದ ಕಾಂಗ್ರೆಸ್ ಶಾಸಕರ ದೋಷಾರೋಪ

ಬೆಂಗಳೂರು: ಕಾಂಗ್ರೆಸ್ ನಾಯಕರು ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರೊಂದಿಗೆ ಎರಡನೆಯ ದಿನವೂ ದೂರುಗಳ ಸುರಿಮಳೆದೈದಿದ್ದಾರೆ. ಕಾಂಗ್ರೆಸ್ ನಾಯಕರುಗಳ ಜೊತೆಗೆ ಸುರ್ಜೇವಾಲಾ ನಡೆಸಿದ ಮ್ಯಾರಥಾನ್ ಮುಖಾಮುಖಿ ಸಭೆಯಲ್ಲಿ ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೂರುಗಳ ಮಳೆಯನ್ನೇ ಸುರಿಸಿದ್ದಾರೆ. ಸುಮಾರು 20 ಕ್ಕೂ ಅಧಿಕ ಕಾಂಗ್ರೆಸ್ ಶಾಸಕರುಗಳ ಜೊತೆಗೆ ಸಭೆ ನಡೆಸಿದ್ದು, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ಅನುದಾನ ನೀಡುವಂತೆ, ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ವಿನಂತಿಸಿದ್ದಾರೆ. ಹಾಗೆಯೇ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿಯಲ್ಲಿ ಆಗುತ್ತಿರುವ

ಸುರ್ಜೇವಾಲಾ ಜೊತೆ ಮುಗಿಯದ ಕಾಂಗ್ರೆಸ್ ಶಾಸಕರ ದೋಷಾರೋಪ Read More »

ಕಾಂಗ್ರೆಸ್ ತನ್ನ ವೈಫಲ್ಯವನ್ನು ಮರೆಮಾಚಲು ಜನಜಾಗೃತಿ ಸಭೆ ನಡೆಸುತ್ತಿದೆ : ದಯಾನಂದ ಉಜಿರೆಮಾರು, ಪಿ.ಬಿ.ಶಿವಕುಮಾರ್ ಜಂಟಿ ಹೇಳಿಕೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ನ ಭ್ರಷ್ಟಾಚಾರ, ಬೆಲೆ ಏರಿಕೆ , ಜನವಿರೋಧಿ ನೀತಿಯ ವಿರುದ್ಧ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದ ಹೋರಾಟ ಪರಿಣಾಮಕಾರಿಯಾದ ಹಿನ್ನೆಲೆಯಲ್ಲಿ ಭಯದಿಂದ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಜನಜಾಗೃತಿ ಸಭೆಯನ್ನು ನಡೆಸುತ್ತಿದೆ. ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ತಳಮಟ್ಟದಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಯ ತನಕ ಭ್ರಷ್ಟಾಚಾರ ತಾಂಡವವಾಡುತ್ತಿದೆ , ಆರೋಗ್ಯ

ಕಾಂಗ್ರೆಸ್ ತನ್ನ ವೈಫಲ್ಯವನ್ನು ಮರೆಮಾಚಲು ಜನಜಾಗೃತಿ ಸಭೆ ನಡೆಸುತ್ತಿದೆ : ದಯಾನಂದ ಉಜಿರೆಮಾರು, ಪಿ.ಬಿ.ಶಿವಕುಮಾರ್ ಜಂಟಿ ಹೇಳಿಕೆ Read More »

ಸಿದ್ದರಾಮಯ್ಯ ಲಾಟರಿ ಸಿಎಂ ಹೇಳಿಕೆ ನನ್ನದಲ್ಲ ಎಂದ ಬಿ.ಆರ್‌.ಪಾಟೀಲ್‌

ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೆ ತಿರುಚಿ ತೇಜೋವಧೆ ಎಂದು ಸ್ಪಷ್ಟನೆ ಬೆಂಗಳೂರು: ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪದೇ ಪದೆ ಮುಜುಗರವುಂಟು ಮಾಡುತ್ತಿರುವ ಆಳಂದದ ಕಾಂಗ್ರೆಸ್‌ ಶಾಸಕ ಬಿ.ಆರ್‌.ಪಾಟೀಲ್‌ ನಿನ್ನೆ ಸಿದ್ದರಾಮಯ್ಯ ಲಾಟರಿ ಸಿಎಂ ಎಂದು ಹೇಳಿದ್ದು ಭಾರಿ ವೈರಲ್‌ ಆಗಿದೆ. ಫೋನ್‌ನಲ್ಲಿ ಯಾರ ಜೊತೆಗೋ ಮಾತನಾಡುತ್ತಾ ಬಿ.ಆರ್‌ ಪಾಟೀಲ್‌ ಏಕವಚನದಲ್ಲೇ ಸಿದ್ದರಾಮಯ್ಯ ಲಕ್ಕಿ, ಸಿಎಂ ಲಾಟರಿ ಹೊಡೆದುಬಿಟ್ಟರು ಎಂಬ ಹೇಳಿದ್ದರು. ಇದರಿಂದ ಪಕ್ಷಕ್ಕೆ ಮತ್ತು ಸಿದ್ದರಾಮಯ್ಯನವರಿಗೆ ತೀವ್ರ ಮುಜುಗರವಾಗಿದ್ದು, ಕೂಡಲೇ ಇದಕ್ಕೆ ಸ್ಪಷ್ಟನೆ ಕೊಟ್ಟ ಪಾಟೀಲ್‌

ಸಿದ್ದರಾಮಯ್ಯ ಲಾಟರಿ ಸಿಎಂ ಹೇಳಿಕೆ ನನ್ನದಲ್ಲ ಎಂದ ಬಿ.ಆರ್‌.ಪಾಟೀಲ್‌ Read More »

1.07 ಲಕ್ಷ ಕೋಟಿ ರೂ.ಗಳ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಯೋಜನೆಗೆ ಪ್ರಧಾನಿ ಮೋದಿ ಸರ್ಕಾರ ಅಸ್ತು

ನವದೆಹಲಿ: ಕೇಂದ್ರದ ಪ್ರಧಾನಿ ಮೋದಿ ಸರ್ಕಾರವು ಉತ್ಪಾದನಾ ವಲಯದ ಮೇಲೆ ವಿಶೇಷ ದೃಷ್ಟಿ ಹರಿಸಿದ್ದು, ಎಲ್ಲಾ ವಲಯಗಳಿಗೆ ಸಂಬಂಧಿಸಿದ ಹಾಗೆ ಉದ್ಯೋಗ ಸೃಷ್ಟಿ ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲು ಮಹತ್ವದ ನಿರ್ಣಯವೊಂದನ್ನು ಅನುಮೋದಿಸಿದೆ. ಉದ್ಯೋಗದ ಅವಕಾಶಗಳು ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚು ಮಾಡಲು 1.07 ಲಕ್ಷ ಕೋಟಿ ರೂ. ವೆಚ್ಚದ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ ಇದಾಗಿದೆ. ಪಿಎಂ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ

1.07 ಲಕ್ಷ ಕೋಟಿ ರೂ.ಗಳ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ನೀಡುವ ಯೋಜನೆಗೆ ಪ್ರಧಾನಿ ಮೋದಿ ಸರ್ಕಾರ ಅಸ್ತು Read More »

ನನಗೆ ಅವಕಾಶ ಸಿಕ್ಕಿದ್ದರಿಂದ ಸಿಎಂ ಆಗಿದ್ದೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಾನು ಮತ್ತು ಬಿ.ಆರ್. ಪಾಟೀಲ್ ಅವರು ಒಟ್ಟಿಗೆ ಶಾಸಕರಾದವರು. ನನಗೆ ಮುಖ್ಯಮಂತ್ರಿಯಾಗಲು ಅವಕಾಶ ಸಿಕ್ಕಿದ್ದರಿಂದ ಪಾಟೀಲ್ ಅವರು ಈ ರೀತಿಯ ಹೇಳಿಕೆ ನೀಡಿರಬಹುದು. ಅವರ ಹೇಳಿಕೆಗಳ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಅದೃಷ್ಟದಿಂದ ಮುಖ್ಯಮಂತ್ರಿಯಾದವರು ಎಂಬ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಇದೇ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಆಡಳಿತ ನ್ಯಾಯ ಮಂಡಳಿಯ

ನನಗೆ ಅವಕಾಶ ಸಿಕ್ಕಿದ್ದರಿಂದ ಸಿಎಂ ಆಗಿದ್ದೇನೆ: ಸಿಎಂ ಸಿದ್ದರಾಮಯ್ಯ Read More »

ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಕಾಂಗ್ರೆಸಿಗರಿಗೆ ಡಿಕೆಶಿ ತಾಕೀತು

ಬೆಂಗಳೂರು: ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸಿಗರಿಗೆ ಖಡಕ್ ತಾಕೀತು ಮಾಡಿದ್ದಾರೆ. ಬಾಲಕೃಷ್ಣ ಆಗಲಿ, ಬಿ.ಆರ್‌. ಪಾಟೀಲ್ ಆಗಲಿ ಯಾರೇ ಆದರೂ ಮಾಧ್ಯಮಗಳ ಮುಂದೆ ಹೋಗಿ ಹೇಳಿಕೆ ನೀಡಬಾರದು ಎಂದು ಅವರು ಖಡಕ್ ಸೂಚನೆ ನೀಡಿದ್ದಾರೆ. ನಾವು ಸಿಎಂ ಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲ. ಇಕ್ಬಾಲ್ ಹುಸೇನ್ ಅವರಿಗೆ ನೊಟೀಸ್ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಕಾಂಗ್ರೆಸಿಗರಿಗೆ ಡಿಕೆಶಿ ತಾಕೀತು Read More »

ನಕ್ಸಲರ ಜೊತೆ ಮಾತುಕತೆ ನಡೆಸುವಂತೆ ಕಾಂಗ್ರೆಸ್ ಹೇಳುತ್ತದೆ: ಅಮಿತ್ ಶಾ

ಹೈದರಾಬಾದ್: ಶಸ್ತ್ರಧಾರಿಗಳಾದ ನಕ್ಸಲರ ಜೊತೆಗೆ ಯಾವ ರೀತಿಯ ಮಾತುಕತೆಯನ್ನೂ ‌ನಾವು ನಡೆಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಶಸ್ತ್ರ ಹಿಡಿದ ನಕ್ಸಲರು ಅದನ್ನು ತೊರೆದು ಪೊಲೀಸರ ಮುಂದೆ ಬಂದು ಶರಣಾಗಲಿ. ಅವರು ಸಮಾಜದ ಮುಖ್ಯ ಭೂಮಿಕೆಗೆ ಬರಲಿ ಎಂದು ಶಾ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷ, ನಕ್ಸಲರ ಜೊತೆಗೆ ಮಾತನಾಡಿ ಎಂದು ಕೇಂದ್ರ ಸರ್ಕಾರವನ್ನು ಕೋರುತ್ತದೆ. ಆದರೆ ನಮ್ಮ ಸರ್ಕಾರದ ನೀತಿ ನಾವು ಶಸ್ತ್ರ ಹಿಡಿದ ಯಾರೊಂದಿದೂ ಮಾತುಕತೆಗೆ ಸಿದ್ಧರಿಲ್ಲ ಎನ್ನುವುದಾಗಿದೆ. ಒಂದು ವೇಳೆ

ನಕ್ಸಲರ ಜೊತೆ ಮಾತುಕತೆ ನಡೆಸುವಂತೆ ಕಾಂಗ್ರೆಸ್ ಹೇಳುತ್ತದೆ: ಅಮಿತ್ ಶಾ Read More »

ಸಾಮಾಜಿಕ ಶಾಂತಿ ಕದಡುವವರ ವಿರುದ್ಧ ಸುಮೊಟೋ ಕೇಸ್ ದಾಖಲಿಸಲು ಪೊಲೀಸರಿಗೆ ಸಿಎಂ ‌ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ದ್ವೇಷ ಭಾಷಣದ ಮೂಲಕ ಸಾಮಾಜಿಕ ಶಾಂತಿ, ಸಾಮರಸ್ಯ ಕದಡುವವರ ವಿರುದ್ಧ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸುವಂತೆ ಸಿಎಂ ‌ಸಿದ್ದರಾಮಯ್ಯ ಆಜ್ಞಾಪಿಸಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಸಾರ್ವಜನಿಕ ವಲಯದಲ್ಲಿ ಶಾಂತಿ ಭಂಗ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೋಮು ಸಾಮರಸ್ಯ ಕದಡುವವರ ವಿರುದ್ಧ, ದ್ವೇಷ ಹರಡುವವರ ವಿರುದ್ದ ದೂರುಗಳು ಬಂದಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಇಂತಹ

ಸಾಮಾಜಿಕ ಶಾಂತಿ ಕದಡುವವರ ವಿರುದ್ಧ ಸುಮೊಟೋ ಕೇಸ್ ದಾಖಲಿಸಲು ಪೊಲೀಸರಿಗೆ ಸಿಎಂ ‌ಸಿದ್ದರಾಮಯ್ಯ ಸೂಚನೆ Read More »

error: Content is protected !!
Scroll to Top