ರಾಜಕೀಯ

ಡಿ.27: ನಗರಸಭೆಯ ತೆರವಾದ ಎರಡು ವಾರ್ಡ್‍ಗಳಿಗೆ ಉಪಚುನಾವಣೆ

ಪುತ್ತೂರು : ನಗರಸಭಾ ಸದಸ್ಯರ ಅಕಾಲಿಕ ಮರಣದಿಂದಾಗಿ ಸ್ಥಳೀಯ ಸಂಸ್ಥೆಗಳ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಿಗದಿಯಾಗಿದ್ದು, ಎರಡು ಸ್ಥಾನಗಳಿಗೆ ಡಿ.27 ರಂದು ಮತದಾನ ನಿಗದಿಗೊಳಿಸಿ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ. ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿ.8 ರಂದು ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಗೊಳಿಸಲಿದ್ದು, , ಅದೇ ದಿನ […]

ಡಿ.27: ನಗರಸಭೆಯ ತೆರವಾದ ಎರಡು ವಾರ್ಡ್‍ಗಳಿಗೆ ಉಪಚುನಾವಣೆ Read More »

ಮಿಝೋರಾಂ: ಸೋಲು ಕಂಡ ಮುಖ್ಯಮಂತ್ರಿ, ಬಹುಮತ ಗೆದ್ದ ಝಡ್.ಪಿ.ಎಂ.

ಮಿಝೋರಾಂ: ಮಿಝೋರಾಂನಲ್ಲಿ ZPM ಪಕ್ಷ ನೂತನ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ZPM ಪಕ್ಷವು 40 ಸ್ಥಾನಗಳಲ್ಲಿ 22 ಸ್ಥಾನಗಳನ್ನು ಗೆದ್ದಿದೆ ಎಂದು ಭಾರತೀಯ ಚುನಾವಣಾ ಆಯೋಗವು ತಿಳಿಸಿದೆ. ಇನ್ನೂ ಐದು ಸ್ಥಾನಗಳಲ್ಲಿ ZPM ಮುನ್ನಡೆಯನ್ನು ಸಾಧಿಸಿದೆ. ಅಲ್ಲದೆ, ಪೂರ್ವ ಐಜ್ವಾಲ್ ನಲ್ಲಿ ಪ್ರತಿಸ್ಪರ್ಧಿ ZPM ಅಭ್ಯರ್ಥಿ ಎದುರು ಮಿಝೋರಾಂ ಮುಖ್ಯಮಂತ್ರಿ ಸೋತಿದ್ದು, ZPM ಗೆ ಭಾರೀ ಮೈಲಿಗಲ್ಲನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಝೊರಾಂಥಾಂಗ ವಿರುದ್ಧ ZPM ಅಭ್ಯರ್ಥಿ ಲಾಲತನಸಂಗ 2,101 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ZPMನ ಮುಖ್ಯಮಂತ್ರಿ

ಮಿಝೋರಾಂ: ಸೋಲು ಕಂಡ ಮುಖ್ಯಮಂತ್ರಿ, ಬಹುಮತ ಗೆದ್ದ ಝಡ್.ಪಿ.ಎಂ. Read More »

ಮಧ್ಯಪ್ರದೇಶ: ಸಂದೇಶ ರವಾನಿಸಿರುವ ಬಿಜೆಪಿ!

ಭೋಪಾಲ್: ಮಧ್ಯಪ್ರದೇಶದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಪ್ರಹ್ಲಾದ್ ಪಟೇಲ್ ಮತ್ತು ಮಧ್ಯಪ್ರದೇಶದಿಂದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ ವರ್ಗಿಯಾ ಸೇರಿದಂತೆ ಏಳು ಲೋಕಸಭಾ ಸದಸ್ಯರನ್ನು ಕಣಕ್ಕಿಳಿಸಿತ್ತು. ಇದರಿಂದಾಗಿ ಸಿಎಂ ಹುದ್ದೆಗೆ ಆಯ್ಕೆಗಳನ್ನು ತೆರೆದಿಟ್ಟಿದ್ದು, ಅಧಿಕಾರವನ್ನು ಮತ್ತೆ ಉಳಿಸಿಕೊಂಡರೆ ಚೌಹಾಣ್ ಸ್ವಯಂಚಾಲಿತ ಆಯ್ಕೆಯಾಗದಿರಬಹುದು ಎಂಬ ಸಂದೇಶವನ್ನು ಬಿಜೆಪಿ ಕಳುಹಿಸಿದೆ. ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳ ಪೈಕಿ ಬಿಜೆಪಿ 163 ಸ್ಥಾನಗಳನ್ನು ಗೆದ್ದುಕೊಂಡಿದೆ.

ಮಧ್ಯಪ್ರದೇಶ: ಸಂದೇಶ ರವಾನಿಸಿರುವ ಬಿಜೆಪಿ! Read More »

ರಾಜಸ್ಥಾನ: ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ವಸುಂಧರಾ ರಾಜೇ ಸಹಿತ 6 ಆಕಾಂಕ್ಷಿಗಳು

ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿಯ ವಿಜಯದ ಬೆನ್ನಲ್ಲೇ ಅಲ್ಲಿ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಆರಂಭಗೊಂಡಿದೆ. ಬಿಜೆಪಿ ರಾಷ್ಟ್ರೀಯ ನಾಯಕತ್ವ ಹೊಸ ಮುಖ್ಯಮಂತ್ರಿ ಹೆಸರನ್ನು ಶೀಘ್ರ ಘೋಷಿಸುವ ಸಾಧ್ಯತೆಯಿದೆ. ಸಿಎಂ ಹುದ್ದೆಗೆ ಪ್ರಸಕ್ತ ಐದು ಪ್ರಮುಖ ಹೆಸರುಗಳು ಕೇಳಿ ಬಂದಿವೆ. ಒಟ್ಟು 199 ಸ್ಥಾನಗಳ ಪೈಕಿ 101 ಮ್ಯಾಜಿಕ್ ನಂಬರ್ ಆಗಿತ್ತು. ಇದರಲ್ಲಿ ಬಿಜೆಪಿ 115 ಸ್ಥಾನ, ಕಾಂಗ್ರೆಸ್ 68 ಸ್ಥಾನ, ಬಹುಜನ್ ಸಮಾಜ ಪಾರ್ಟಿ 2 ಸ್ಥಾನ, ಇತರೆ 13 ಸ್ಥಾನಗಳನ್ನು ಪಡೆದುಕೊಂಡಿದೆ. 2018ರ ಚುನಾವಣೆಯಲ್ಲಿ ಬಿಜೆಪಿ 73

ರಾಜಸ್ಥಾನ: ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ವಸುಂಧರಾ ರಾಜೇ ಸಹಿತ 6 ಆಕಾಂಕ್ಷಿಗಳು Read More »

ಅತಂತ್ರ ಮುನ್ಸೂಚನೆಯಲ್ಲೂ ಮಿಜೋರಾಂ ಬಿಜೆಪಿ ಮುಖ್ಯಸ್ಥನ ವಿಶ್ವಾಸದ ಮಾತು!

ಮಿಜೋರಾಂನ 40 ವಿಧಾನಸಭಾ ಸ್ಥಾನಗಳ ಮತ ಎಣಿಕೆ ನಡೆಯುತ್ತಿದ್ದು, ಮುಂದಿನ ಸರ್ಕಾರದ ಭಾಗವಾಗಿ ತಮ್ಮ ಪಕ್ಷ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವನ್‌ಲಾಲ್‌ಮುಕಾ ಸೋಮವಾರ ಹೇಳಿದ್ದಾರೆ. ತಮ್ಮ ಪಕ್ಷ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. ನಾವು ಮೂರು ಸ್ಥಾನ ಗೆಲ್ಲುವುದು ಖಚಿತ, ಐದಕ್ಕಿಂತ ಹೆಚ್ಚು ಸ್ಥಾನಗಳ ನಿರೀಕ್ಷೆಯಲ್ಲಿದ್ದೇವೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಸದ್ಯದಲ್ಲೇ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿ ಬಿಜೆಪಿ ಭಾಗವಹಿಸಲಿದೆ ಎಂದು ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಳೆದ 2018ರಲ್ಲಿ ನಡೆದ ವಿಧಾನಸಭಾ

ಅತಂತ್ರ ಮುನ್ಸೂಚನೆಯಲ್ಲೂ ಮಿಜೋರಾಂ ಬಿಜೆಪಿ ಮುಖ್ಯಸ್ಥನ ವಿಶ್ವಾಸದ ಮಾತು! Read More »

ತೆಲಂಗಾಣ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ | 119ರಲ್ಲಿ 64 ಸ್ಥಾನ ಗೆದ್ದು, ಸರ್ಕಾರ ರಚನೆಗೆ ಹಕ್ಕು ಮಂಡನೆ

ಹೈದರಾಬಾದ್: ತೆಲಂಗಾಣದ 119 ಸ್ಥಾನಗಳ ಪೈಕಿ 64 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವಿವಾರ ರಾತ್ರಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಶನಿವಾರ, ಶಿವಕುಮಾರ್ ಅವರನ್ನು ತೆಲಂಗಾಣ ರಾಜ್ಯ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಮತ ಎಣಿಕೆಗೆ ಮುಂಚಿತವಾಗಿ ತನ್ನ ಶಾಸಕರನ್ನು ಒಟ್ಟಾಗಿ ಇರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿದ

ತೆಲಂಗಾಣ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್ | 119ರಲ್ಲಿ 64 ಸ್ಥಾನ ಗೆದ್ದು, ಸರ್ಕಾರ ರಚನೆಗೆ ಹಕ್ಕು ಮಂಡನೆ Read More »

ಡಿ.21-24: ಪುತ್ತೂರಿನಲ್ಲಿ ಸಿಪಿಐ(ಎಂ) ರಾಜ್ಯ ಮಟ್ಟದ ಸೈದ್ದಾಂತಿಕ ಅಧ್ಯಯನ ಶಿಬಿರ

ಪುತ್ತೂರು: ಸಿಪಿಐ(ಎಂ) ಪಕ್ಷದ ರಾಜ್ಯ ಮಟ್ಟದ ಸೈದ್ದಾಂತಿಕ ಅದ್ಯಯನ ಶಿಬಿರವು ಡಿ.21 ರಿಂದ 24ರ ತನಕ ಪುತ್ತೂರಿನಲ್ಲಿ ನಡೆಯಲಿದೆ ಎಂದು ಸಿಪಿಐ(ಎಂ) ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ.ಸತೀಶನ್ ತಿಳಿಸಿದ್ದಾರೆ. ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದು, ರಾಜ್ಯ ಮಟ್ಟದ ರೈತ, ಕಾರ್ಮಿಕ, ದಲಿತ, ಯುವಜನ ನಾಯಕರುಗಳಿಗೆ ನೀಡುವ ಈ ಸೈದ್ದಾಂತಿಕ ಅದ್ಯಯನ ಶಿಬಿರ ನಡೆಸಲಾಗುವುದು ಎಂದು ತಿಳಿಸಿದರು. ಸ್ವಾಗತ ಸಮಿತಿ ಅದ್ಯಕ್ಷರಾಗಿ ಪುತ್ತೂರು ಪಿಕೆ ಸತೀಶನ್, ಕಾರ್ಯದರ್ಶಿಯಾಗಿ ಬಿ.ಎಂ.ಭಟ್ ಖಜಾಂಜಿಯಾಗಿ ಈಶ್ವರಿ ಮುಂಡೂರು

ಡಿ.21-24: ಪುತ್ತೂರಿನಲ್ಲಿ ಸಿಪಿಐ(ಎಂ) ರಾಜ್ಯ ಮಟ್ಟದ ಸೈದ್ದಾಂತಿಕ ಅಧ್ಯಯನ ಶಿಬಿರ Read More »

ನಳಿನ್ ಕುಮಾರ್ ಪಕ್ಷದ ಮುಂದೆ ಶೂನ್ಯ: ಬಿಜೆಪಿ ಕಾರ್ಯನಿರ್ವಹಣಾ ಸಮಿತಿ ಸಭೆಯಲ್ಲಿ ಸಂಸದ

ಪುತ್ತೂರು: ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ; ಯಾವುದೇ ವ್ಯಕ್ತಿಯ ಆಸ್ತಿಯೂ ಅಲ್ಲ. ಹೀಗೆಂದು ಹೇಳಿದವರು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್. ಮಂಗಳವಾರ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯನಿರ್ವಹಣಾ ಸಮಿತಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ರಾಜ್ಯಾಧ್ಯಕ್ಷನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಗುಂಪುಗಾರಿಕೆಗೆ ಅವಕಾಶ ನೀಡದೆ ಸಂಘಟನೆಯನ್ನು ಬೆಳೆಸಿದ್ದೇನೆ. ಪಕ್ಷದ ಹೆಸರಿನಲ್ಲಿ ವೈಯಕ್ತಿಕ ಪ್ರಚಾರ ತೆಗೆದುಕೊಂಡಿಲ್ಲ. ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಬದಲಾಗಿ

ನಳಿನ್ ಕುಮಾರ್ ಪಕ್ಷದ ಮುಂದೆ ಶೂನ್ಯ: ಬಿಜೆಪಿ ಕಾರ್ಯನಿರ್ವಹಣಾ ಸಮಿತಿ ಸಭೆಯಲ್ಲಿ ಸಂಸದ Read More »

ಯಾವ ಯಡಿಯೂರಪ್ಪ, ತಿಮ್ಮಪ್ಪ, ಬೊಮ್ಮಪ್ಪನೂ ಇಲ್ಲ: ಕುತೂಹಲ ಮೂಡಿಸಿದ ವಿ. ಸೋಮಣ್ಣ ನಡೆ

ಬೆಂಗಳೂರು: ಡಿ. 6ರ ತನಕ ಏನೂ ಮಾತನಾಡಬೇಡ ಎಂದು ಹೈಕಮಾಂಡ್ ಹೇಳಿದೆ. ಅಲ್ಲಿಯವರೆಗೆ ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ಕಾಂಗ್ರೆಸಿಗೆ ಹೋಗುವ ವಿಚಾರ ನನ್ನ ತಲೆಯಲ್ಲಿ ಇಲ್ಲ. ಆ ಯೋಚನೆಯೂ ಇಲ್ಲ. ಮತ್ತೆ ಸೋಮನಹಳ್ಳಿ ಮುದುಕಿ ಕಥೆ ಹೇಳಿ, ನನ್ನ ಕೋಳಿಯಿಂದಲೆ ಬೆಳಕಾಗೋದು ಅಂತ ಕೆಲವರು ಎಂದು ಕೊಂಡಿದ್ದಾರೆ. ಆದರೆ ಅದೆಲ್ಲ ನಡೆಯುವುದಿಲ್ಲ. ಮುದುಕಿ ಯಾರು ಕೋಳಿ ಯಾರು ಎಂದು ನೀವೇ ತೀರ್ಮಾನಿಸಿ

ಯಾವ ಯಡಿಯೂರಪ್ಪ, ತಿಮ್ಮಪ್ಪ, ಬೊಮ್ಮಪ್ಪನೂ ಇಲ್ಲ: ಕುತೂಹಲ ಮೂಡಿಸಿದ ವಿ. ಸೋಮಣ್ಣ ನಡೆ Read More »

ನಳಿನ್ ಕುಮಾರ್ ಕಟೀಲ್ ಗೆಲ್ಲಿಸಿ ಕೊಡಿರೆಂದ ಬಿಜೆಪಿ ರಾಜ್ಯಾಧ್ಯಕ್ಷ!

ಮಂಗಳೂರಿಗೆ ಆಗಮಿಸಿದ್ದ  ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಪರ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ನಳಿನ್ ಕುಮಾರ್ ಕಟೀಲ್ ಅವರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥೀ ಎನ್ನುವುದನ್ನು ಸಾರಿದಂತಾಗಿದೆ. ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮತ್ತೆ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೊಮ್ಮೆ ನಮ್ಮ ಪಕ್ಷದ ಅಭ್ಯರ್ಥಿಯಾದ

ನಳಿನ್ ಕುಮಾರ್ ಕಟೀಲ್ ಗೆಲ್ಲಿಸಿ ಕೊಡಿರೆಂದ ಬಿಜೆಪಿ ರಾಜ್ಯಾಧ್ಯಕ್ಷ! Read More »

error: Content is protected !!
Scroll to Top