ರಾಜಕೀಯ

ಹಿಂದುಳಿದ ವರ್ಗದ ಅಭಿವೃದ್ಧಿ ಬಾಯಿ ಮಾತಿನ ಘೋಷಣೆಯಿಂದ ಆಗುವುದಿಲ್ಲ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಾಯಿ ಮಾತಿನ ಅಭಿವೃದ್ಧಿಯ ಘೋಷಣೆಯಿಂದ ದಲಿತರು, ಹಿಂದುಳಿದ ವರ್ಗದವರ ಹೊಟ್ಟೆ ತುಂಬುವುದಿಲ್ಲ. ಆದರೆ ಸಿಎಂ ‌ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರೆ ಅಭಿವೃದ್ಧಿ ಆಗುತ್ತದೆ ಎಂದು ತಿಳಿದುಕೊಂಡಿದ್ದಾರೆಂದು ‌ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರ ‌ಜೊತೆಗೆ ಮಾತನಾಡಿದ ಅವರು, ಸಿಎಂ ದಲಿತರ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಮೊದಲು ಅವರಿಗೆ ಮೀಸಲಿಟ್ಟ ಹಣವನ್ನು ನೀಡುವತ್ತ ಗಮನ ನೀಡಲಿ. ಹಿಂದುಳಿದ ವರ್ಗದವರನ್ನು ಅಭಿವೃದ್ಧಿ ಮಾಡುವುದಾಗಿ ಹೇಳುತ್ತಾರೆ. ಆದರೆ ಅವುಗಳ ಅಭಿವೃದ್ಧಿಗೆ ಮೀಸಲಿಟ್ಟ ಯೋಜನೆಗಳಿಗೆ ಹಣ ನೀಡುವುದಿಲ್ಲ ಎಂದು […]

ಹಿಂದುಳಿದ ವರ್ಗದ ಅಭಿವೃದ್ಧಿ ಬಾಯಿ ಮಾತಿನ ಘೋಷಣೆಯಿಂದ ಆಗುವುದಿಲ್ಲ : ಬಸವರಾಜ ಬೊಮ್ಮಾಯಿ Read More »

ಸುರ್ಜೆವಾಲಾ ಕರ್ನಾಟಕದ ಸೂಪರ್‌ ಸಿಎಂ: ಬಿಜೆಪಿ-ಜೆಡಿಎಸ್‌ ಟೀಕೆ

ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ ಎಂದು ವ್ಯಂಗ್ಯ ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಪದೇ ಪದೆ ಬಂದು ಶಾಸಕರ, ಸಚಿವರ ಸಭೆ ನಡೆಸುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್‌ ಟೀಕಿಸಿವೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಸುರ್ಜೆವಾಲಾ ಸೂಪರ್‌ ಸಿಎಂ ಆಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ @rssurjewala ಅವರಿಗೆ ಅಭಿನಂದನೆಗಳು, ಚುನಾಯಿತ ಮುಖ್ಯಮಂತ್ರಿಗಳು ಸರ್ಕಾರ ನಡೆಸಲು

ಸುರ್ಜೆವಾಲಾ ಕರ್ನಾಟಕದ ಸೂಪರ್‌ ಸಿಎಂ: ಬಿಜೆಪಿ-ಜೆಡಿಎಸ್‌ ಟೀಕೆ Read More »

ಸ್ಮಾರ್ಟ್‌ ಮೀಟರ್‌ ಹಗರಣ : ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಕೋರ್ಟಿಗೆ ದೂರು

900 ರೂಪಾಯಿಯ ಮೀಟರ್‌ಗೆ ಗ್ರಾಹಕರಿಂದ 9,000 ರೂ. ವಸೂಲು ಮಾಡಿ ಲೂಟಿ ಬೆಂಗಳೂರು : ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಬಿಜೆಪಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಬಿಜೆಪಿ ದೂರು ನೀಡಿದೆ. ಈ ಹಿಂದೆ ಲೋಕಾಯುಕ್ತ ಡಿವೈಎಸ್​ಪಿಗೆ ದೂರು ನೀಡಿದ್ದ ಬಿಜೆಪಿ ಶಾಸಕರು ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಶಾಸಕ ಸಿ.ಎನ್. ಅಶ್ವತ್ಥನಾರಾಯಣ್,

ಸ್ಮಾರ್ಟ್‌ ಮೀಟರ್‌ ಹಗರಣ : ಇಂಧನ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಕೋರ್ಟಿಗೆ ದೂರು Read More »

ಒಪ್ಪಂದದಂತೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದಿದ್ದರೆ ಡಿ.ಕೆ.ಶಿ. ಬಲವಂತವಾಗಿ ಎಳೆದುಕೊಳ್ಳುತ್ತಾರೆ: ಜನಾರ್ದನ ರೆಡ್ಡಿ

ಸವಣೂರು: ಮುಖ್ಯಮಂತ್ರಿ ಅಧಿಕಾರ ಸಂದರ್ಭ ಹೈಕಮಾಂಡ್ ಉಪಸ್ಥಿತಿಯಲ್ಲಿ ನಡೆದ 50:50 ರಂತೆ ಮಾಡಿಕೊಂಡ ಒಪ್ಪಂದದಂತೆ ಸಿದ್ಧರಾಮಯ್ಯ ಅವರು ರಾಜಿನಾಮೆ ಕೊಟ್ಟು ಡಿ.ಕೆ.ಶಿ. ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಾರೆ. ಒಂದು ವೇಳೆ ಸೀಟು ಬಿಟ್ಟು ಕೊಡದಿದ್ದರೆ ಡಿ.ಕೆ.ಶಿ.ಯವರು ಬಲವಂತವಾಗಿ ಕುರ್ಚಿಯನ್ನು ಎಳೆದುಕೊಳ್ಳುತ್ತಾರೆ. ಅಧಿಕಾರ ಪಡೆಯುವಲ್ಲಿ ಡಿಕೆಶಿ ಆತುರದಲ್ಲಿದ್ದಾರೆ ಎಂದು ಮಾಜಿ ಸಚಿವ, ಗಂ ಗಾವತಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಅರೇಲ್ತಡಿ ಇರುವೆರ್ ಉಳ್ಳಾಕುಲು ಮತ್ತು ಕೆಡೆಂಜೋಡಿತ್ತಾಯಿ ದೈವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರು

ಒಪ್ಪಂದದಂತೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದಿದ್ದರೆ ಡಿ.ಕೆ.ಶಿ. ಬಲವಂತವಾಗಿ ಎಳೆದುಕೊಳ್ಳುತ್ತಾರೆ: ಜನಾರ್ದನ ರೆಡ್ಡಿ Read More »

ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ: ಸಚಿವ ಡಾ. ಎಚ್. ಸಿ. ಮಹದೇವಪ್ಪ

ಸಾಧನಾ ಸಮಾವೇಶ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕಲ್ಲ ಮೈಸೂರು: ಸಾಧನಾ ಸಮಾವೇಶ ಸಿಎಂ ‌ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಕಾರ್ಯಕ್ರಮ ಅಲ್ಲ ಎಂದು ಸಚಿವ ಡಾ. ಎಚ್. ಸಿ. ಮಹದೇವಪ್ಪ ತಿಳಿಸಿದ್ದಾರೆ. ಜು. 19 ರಂದು ಮೈಸೂರಿನಲ್ಲಿ ಹಮ್ಮಿಕೊಳ್ಳಲಾದ ಸಾಧನಾ ಸಮಾವೇಶದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಈ‌ ಮೊದಲೇ ಜನರು ಶಕ್ತಿ ತುಂಬಿದ್ದಾರೆ. ಈ‌ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿದೆ. ಈ ಸಾಧನಾ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರಲಿರುವುದಾಗಿ ಅವರು ಮಾಹಿತಿ

ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ: ಸಚಿವ ಡಾ. ಎಚ್. ಸಿ. ಮಹದೇವಪ್ಪ Read More »

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ : ನಿತಿನ್ ಗಡ್ಕರಿ

ಬೆಂಗಳೂರು: ಸಿಗಂದೂರು ಸೇತುವೆ ಉದ್ಘಾಟನೆಯ ಆಹ್ವಾನದ ವಿಚಾರದಲ್ಲಿ ‌ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎನ್ನುವ ಸಿಎಂ ‌ಸಿದ್ದರಾಮಯ್ಯ ಅವರ ಆರೋಪಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗಡ್ಕರಿ, ಕಾರ್ಯಕ್ರಮದಲ್ಲಿ ಯಾವ ಶಿಷ್ಟಾಚಾರವೂ ಉಲ್ಲಂಘನೆ ಆಗಿಲ್ಲ. ಸಿದ್ದರಾಮಯ್ಯ ಅವರಿಗೆ ಜುಲೈ 11 ರಂದೇ ಅಧಿಕೃತ ಆಹ್ವಾನ ನೀಡಲಾಗಿದೆ. ಜುಲೈ 12 ರಂದು ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆಯಲಾಗಿದ್ದು, ಯಾವುದೇ ಪೂರ್ವಯೋಜಿತ ಕಾರ್ಯಕ್ರಮ ಇದ್ದರೂ ಸೇತುವೆ ಉದ್ಘಾಟನೆಗೆ ‌ವರ್ಚುವಲ್ ರೂಪದಲ್ಲಾದರೂ ಭಾಗಿಯಾಗಿ ಎಂದು

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ : ನಿತಿನ್ ಗಡ್ಕರಿ Read More »

ಕಾರ್ಕಳ: ಪರಶುರಾಮನ ಮೂರ್ತಿ ಫೈಬರ್‌ನದ್ದಲ್ಲ ಹಿತ್ತಾಳೆಯದ್ದು ಎಂದ ಪೊಲೀಸ್‌ ತನಿಖೆ

ಫೈಬರ್‌ ಮೂರ್ತಿ ಎಂದು ಆರೋಪಿಸಿದವರಿಗೆ ತೀವ್ರ ಮುಖಭಂಗ ಕಾರ್ಕಳ: ಇಲ್ಲಿನ ಬೈಲೂರು ಸಮೀಪ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್‌ನ ಪರಶುರಾಮನ ವಿಗ್ರಹದ ವಿವಾದಕ್ಕೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ದೋಷಾರೋಪ ಪಟ್ಟಿಯಲ್ಲಿ ಪರಶುರಾಮ ಪ್ರತಿಮೆಯನ್ನು ಹಿತ್ತಾಳೆಯಿಂದ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಕಂಚಿನ ಬದಲಾಗಿ ಹಿತ್ತಾಳೆ

ಕಾರ್ಕಳ: ಪರಶುರಾಮನ ಮೂರ್ತಿ ಫೈಬರ್‌ನದ್ದಲ್ಲ ಹಿತ್ತಾಳೆಯದ್ದು ಎಂದ ಪೊಲೀಸ್‌ ತನಿಖೆ Read More »

ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ | ತಾಕತ್ತಿದ್ದರೆ ಶಾಸಕರು ತಡೆಯಲಿ | ಪ್ರತಿಭಟನೆಯಲ್ಲಿ ಸವಾಲೆಸೆದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ. ಪುತ್ತೂರು ಶಾಸಕರಿಗೆ ತಾಕತ್ತಿದ್ದರೆ ಬಂದು ತಡೆಯಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಸವಾಲೆಸೆದಿದ್ದಾರೆ. ಪುತ್ತೂರಿನಲ್ಲಿ ಸೋಮವಾರ ನಡೆದ ಮರಳು, ಕೆಂಪುಕಲ್ಲು ಅಭಾವದ ಕುರಿತು ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಪುತ್ತೂರು ಶಾಸಕರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ಕಾರ್ಯಕರ್ತರು ಬಳೆಯಿಟ್ಟು ರಾಜಕೀಯ ಮಾಡಿದವರಲ್ಲ. ಬಿಜೆಪಿ ಕಾರ್ಯಕರ್ತರು ಸ್ವಾಭಿಮಾನಿಗಳು, ಹಣ, ಅಮಿಷಗಳಿಗೆ ಮರುಳಾಗುವವರು ಬಿಜೆಪಿಗರಲ್ಲ ಇಂದು ಯಾವುದಾದರೂ ಕೆಲಸಕ್ಕೆ ಶಾಸಕರ ಬಳಿ ಹೋದಲ್ಲಿ ಅವರಿಗೆ

ಅಜಿತ್ ಮಡಿಕೇರಿಯನ್ನು ಪುತ್ತೂರಿನಲ್ಲಿ ಒಂದು ಗಂಟೆ ಮೆರವಣಿಗೆ ಮಾಡುತ್ತೇವೆ | ತಾಕತ್ತಿದ್ದರೆ ಶಾಸಕರು ತಡೆಯಲಿ | ಪ್ರತಿಭಟನೆಯಲ್ಲಿ ಸವಾಲೆಸೆದ ಮಾಜಿ ಶಾಸಕ ಸಂಜೀವ ಮಠಂದೂರು Read More »

ಮರಳು, ಕೆಂಪುಕಲ್ಲು ಸಮಸ್ಯೆ | ಪುತ್ತೂರು ಬಿಜೆಪಿ ಗ್ರಾಮಾಂತರ, ನಗರ ಮಂಡಲದಿಂದ ಪ್ರತಿಭಟನೆ

ಪುತ್ತೂರು:  ರಾಜ್ಯ ಸರಕಾರ ಗ್ಯಾರೆಂಟಿ ಯೋಜನೆಗಳಿಗೆ ಸೋರಿಕೆಯ 40 ಶೇಕಡಾ ಹಣವನ್ನು ಬಳಸುತ್ತೇವೆ ಎಂದಿತ್ತು, ಆದರೆ ಇಂದು ಸರಕಾರದ ಬಳಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದೆ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ‌ ಪ್ರತಾಪ್‌ಸಿಂಹ ನಾಯಕ್‌ ಹೇಳಿದ್ದಾರೆ. ಕೆಂಪುಕಲ್ಲು ಮತ್ರು ಮರಳು ಅಭಾವದ ವಿರುದ್ಧ ಪುತ್ತೂರಿನ ಅಮರ್‍ ಜವಾನ್‍ ಸ್ಮಾರಕದ ಬಳಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಉಳಿಸಿದ 40% ಶೇಕಡಾ ಹಣವನ್ನೂ ಬಳಸುತ್ತಿಲ್ಲ, ನಾವು ಚುನಾವಣೆಯ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆವು. ಕಾಂಗ್ರೇಸ್

ಮರಳು, ಕೆಂಪುಕಲ್ಲು ಸಮಸ್ಯೆ | ಪುತ್ತೂರು ಬಿಜೆಪಿ ಗ್ರಾಮಾಂತರ, ನಗರ ಮಂಡಲದಿಂದ ಪ್ರತಿಭಟನೆ Read More »

ಮರಳು, ಕೆಂಪುಕಲ್ಲು ಸಮಸ್ಯೆ : ರಾಜ್ಯ ಕಾಂಗ್ರೆಸ್‍ ಸರಕಾರದ ವಿರುದ್ಧ ಕಡಬದಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಕಡಬ : ಮರಳು ಮತ್ತು ಕೆಂಪು ಕಲ್ಲು ಸಮಸ್ಯೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ದ ವಿರುದ್ಧ ಕಡಬದ ಮಿನಿ ವಿಧಾನ ಸೌಧದ ಬಳಿ ಸೋಮವಾರ ನಡೆಯಿತು. ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯದ ಬಗ್ಗೆ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಭಾರತೀಯ ಜನತಾ ಪಕ್ಷ ಮಾತ್ರ ಜನಸಾಮಾನ್ಯರ ಜೊತೆ ನಿಲ್ಲುವಂತಹ ಪಕ್ಷ, ಕಾಂಗ್ರೆಸ್ ಸರಕಾರದ ವೈಫಲ್ಯದಿಂದ ವ್ಯಾಪಾರಸ್ತರು ಕಂಗಲಾಗಿದ್ದಾರೆ. ಕಾಂಗ್ರೆಸ್ ಸರಕಾರ ಇವತ್ತು ಗಾಣಿಗಾರಿಕೆ ಎಂಬ ಹೆಸರಿನಲ್ಲಿ ಇವತ್ತು

ಮರಳು, ಕೆಂಪುಕಲ್ಲು ಸಮಸ್ಯೆ : ರಾಜ್ಯ ಕಾಂಗ್ರೆಸ್‍ ಸರಕಾರದ ವಿರುದ್ಧ ಕಡಬದಲ್ಲಿ ಬಿಜೆಪಿಯಿಂದ ಪ್ರತಿಭಟನೆ Read More »

error: Content is protected !!
Scroll to Top