ರಾಜಕೀಯ

ಆರ್‌ಎಸ್‌ಎಸ್‌ ನಿಷೇಧದ ಕಿಚ್ಚು : ಸರ್ಕಾರ V/S ಬಿಜೆಪಿ ವಾಕ್ಸಮರ

ಪ್ರಿಯಾಂಕ್‌ ಖರ್ಗೆ ಪತ್ರದ ಪರಿಣಾಮದ ಮೇಲೆ ಕಣ್ಣಿಡಲು ಸಮಿತಿ ರಚಿಸಿದ ಬಿಜೆಪಿ ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಆಕ್ರೋಶದ ಕಿಡಿ ಎಬ್ಬಿಸಿದೆ. ಮಾಜಿ ಸಚಿವ ಕಾರ್ಕಳದ ಶಾಸಕ ಸುನಿಲ್‌ ಕುಮಾರ್‌, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಹಿತ ಅನೇಕ ಬಿಜೆಪಿ ಮತು ಸಂಘ ಪರಿವಾರದ ನಾಯಕರು ತಾಕತ್‌ ಇದ್ದರೆ ಆರ್‌ಎಸ್‌ಎಸ್‌ ನಿಷೇಶ ಮಾಡಿ ಎಂದು ಪ್ರಿಯಾಂಕ್‌ ಖರ್ಗೆಗೆ ನೇರ […]

ಆರ್‌ಎಸ್‌ಎಸ್‌ ನಿಷೇಧದ ಕಿಚ್ಚು : ಸರ್ಕಾರ V/S ಬಿಜೆಪಿ ವಾಕ್ಸಮರ Read More »

ಡಿಕೆಶಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮುನಿರತ್ನ ಹೈಡ್ರಾಮಾ

ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿ ದಿಢೀರ್‌ ಎಂದು ಕಾರ್ಯಕ್ರಮಕ್ಕೆ ಬಂದ ಮುನಿರತ್ನ ಬೆಂಗಳೂರು : ಬೆಂಗಳೂರು ನಡಿಗೆ ಕಾರ್ಯಕ್ರಮದ ಪ್ರಯುಕ್ತ ಡಿ.ಕೆ ಶಿವಕುಮಾರ್ ಇಂದು ಮತ್ತಿಕೆರೆಯ ಜೆ.ಪಿ ಪಾರ್ಕ್​ನಲ್ಲಿ ಜನರೊಂದಿಗೆ ಸಂವಾದ ನಡೆಸುವ ವೇಳೆ ಹೈಡ್ರಾಮಾ ನಡೆಯಿತು. ಆರ್​ಎಸ್​ಎಸ್​ ಡ್ರೆಸ್, ಟೋಪಿ ಧರಿಸಿ ಜೆ.ಪಿ ಪಾರ್ಕ್​ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಡಿ.ಕೆ ಶಿವಕುಮಾರ್ ನಿರ್ಲಕ್ಷ್ಯಿಸಿದ್ದು, ಡಿಕೆಶಿ ವೇದಿಕೆಯಲ್ಲಿ ಕುಳಿತಾಗ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್​ಎ ಬಾರಯ್ಯ’

ಡಿಕೆಶಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮುನಿರತ್ನ ಹೈಡ್ರಾಮಾ Read More »

ಬೆಂಗಳೂರು ನಡಿಗೆ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ

ಬೆಂಗಳೂರು: ಲಾಲ್ ಬಾಗ್‌ನಲ್ಲಿ ‌ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಸಮಸ್ಯೆಗಳನ್ನು ಚಲಿಸುವ ‘ಬೆಂಗಳೂರು ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಆರು ದಿನಗಳಲ್ಲಿ ಆರು ಪ್ರಮುಖ ಉದ್ಯಾನಗಳಲ್ಲಿ ಬೆಳಗ್ಗೆ 1 ತಾಸು ನಡಿಗೆ ಮತ್ತು ಒಂದು ತಾಸು ಸಾರ್ವಜನಿಕರ ಜೊತೆಗೆ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಇಂದು ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರ ಜೊತೆಗೆ ಹಾಳಾದ ರಸ್ತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು. ಆಂಬ್ಯುಲನ್ಸ್ ಸಂಚಾರಕ್ಕೆ ಅನುಕೂಲಕರ ಮತ್ತು ಉದ್ದೇಶಿತ ಟನಲ್ ರಸ್ತೆಗೆ ಸಂಬಂಧಿಸಿದ

ಬೆಂಗಳೂರು ನಡಿಗೆ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ Read More »

ಬಿಹಾರ ಚುನಾವಣೆಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಕೋಟಿಗಟ್ಟಲೆ ವಸೂಲಿ : ಬಿಜೆಪಿ ಆರೋಪ

ಮಂತ್ರಿಗಿರಿಗಾಗಿ ಹೈಕಮಾಂಡ್‌ಗೆ 300 ಕೋ. ರೂ. ಕೊಡಲು ಒಪ್ಪಿದ್ದ ಕಳಂಕಿತ ಶಾಸಕ ವೀರೇಂದ್ರ ಪಪ್ಪಿ ಬೆಂಗಳೂರು: ಬಿಹಾರ ಚುನಾವಣೆಗೆ ಹಣ ಸಂಗ್ರಹಿಸಲು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಆರೋಪಿಸಿವೆ. ಬೆಟ್ಟಿಂಗ್‌ ಹಗರಣದಲ್ಲಿ ಸಿಕ್ಕಿ ಬಿದ್ದಿರುವ ಕಾಂಗ್ರೆಸ್‌ ಶಾಸಕ ಕೆ.ಸಿ. ವೀರೇಂದ್ರ ಬಿಹಾರ ಚುನಾವಣೆಗಾಗಿ ಕಾಂಗ್ರೆಸ್‌ ಹೈಕಮಾಂಡ್‌ಗೆ 300 ಕೋಟಿ ರೂ. ಕೊಟ್ಟು ಮಂತ್ರಿ ಸ್ಥಾನಗಿಟ್ಟಿಸಲು ಪ್ರಯತ್ನಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದ್ದಾರೆ. ರಾಜ್ಯದಲ್ಲಿರುವ ಕಾಂಗ್ರೆಸ್‌

ಬಿಹಾರ ಚುನಾವಣೆಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಕೋಟಿಗಟ್ಟಲೆ ವಸೂಲಿ : ಬಿಜೆಪಿ ಆರೋಪ Read More »

ರಾಜ್ಯದ ಸಮಸ್ಯೆಗಳ ನಡುವೆಯೂ ಸಿಎಂ ಔತಣಕೂಟ: ಸಿ.ಟಿ. ರವಿ ವ್ಯಂಗ್ಯ

ಬೆಂಗಳೂರು: ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಮೊದಲಾದ ಸಮಸ್ಯೆಗಳು ತಾಂಡವವಾಡುತ್ತಿವೆ. ಇವುಗಳ ನಡುವೆ ನೀವು ಔತಣಕೂಟದ ಸಂಭ್ರಮ ಮಾಡುತ್ತಿದ್ದೀರಾ ಎಂದು ಸಿಎಂ ‌ಸಿದ್ದರಾಮಯ್ಯ ಅವರ ಡಿನ್ನರ್ ಮೀಟಿಂಗ್ ಕುರಿತು ಎಂ ಎಲ್ ಸಿ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ. ಭ್ರಷ್ಟಾಚಾರ 80% ದಾಟಿದೆ ಎಂದು ಗುತ್ತಿಗೆದಾರರೇ ಪತ್ರ ಬರೆಯುತ್ತಾರೆ. ರೈತರ ಆತ್ಮಹತ್ಯೆ ವಿಚಾರದಲ್ಲಿ ದೇಶದಲ್ಲೇ ಕರ್ನಾಟಕ ನಂ.2. ಅತಿವೃಷ್ಟಿಯಿಂದ ಹತ್ತಕ್ಕೂ ಅಧಿಕ ಜಿಲ್ಲೆಗಳು ಹಾನಿಗೊಳಗಾಗಿವೆ. ಹೀಗಿದ್ದರೂ ಸಿ ಎಂ ಔತಣ ಕೂಟ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಸಮಸ್ಯೆಗಳ ನಡುವೆಯೂ ಸಿಎಂ ಔತಣಕೂಟ: ಸಿ.ಟಿ. ರವಿ ವ್ಯಂಗ್ಯ Read More »

ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆಯ ಲಾಕರ್‌ನಲ್ಲಿತ್ತು 40 ಕೆಜಿ ಚಿನ್ನ

ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಸಂಪಾದಿಸಿದ ಅಪಾರ ಅಕ್ರಮ ಸಂಪತ್ತು ಬಯಲು ಬೆಂಗಳೂರು: ಅಕ್ರಮ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತೊಮ್ಮೆ ದಾಳಿ ಮಾಡಿದಾಗ ಲಾಕರ್‌ನಲಿದ್ದ 51 ಕೋಟಿ ರೂ. ಮೌಲ್ಯದ 40 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ. ಇ.ಡಿ. ಅಧಿಕಾರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಫೆಡರಲ್ ಬ್ಯಾಂಕ್‌ ಸೇರಿದಂತೆ ಪಟ್ಟಣದ ಹಲವೆಡೆ ಶೋಧ ನಡೆಸಿದ್ದಾರೆ. ವೀರೇಂದ್ರ ಪಪ್ಪಿ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಅಲ್ಪಾವಧಿಯಲ್ಲಿಯೇ 2,000 ಕೋಟಿ ರೂ. ಲಾಭಗಳಿಸಿದ್ದಾರೆ

ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ ಮನೆಯ ಲಾಕರ್‌ನಲ್ಲಿತ್ತು 40 ಕೆಜಿ ಚಿನ್ನ Read More »

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡುವಂತೆ ಕೇಂದ್ರಕ್ಕೆ ಸಿಎಂ ‌ಸಿದ್ದರಾಮಯ್ಯ ಮನವಿ

ಬೆಂಗಳೂರು: ನಮ್ಮ ಮೆಟ್ರೋಗೆ ವಾಲ್ಮೀಕಿ ಮಹರ್ಷಿಗಳ ಹೆಸರನ್ನು ಇರಿಸುವಂತೆ ಸಿ ಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಮ್ಮ ಮೆಟ್ರೋವನ್ನು ನಡೆಸುತ್ತಿವೆ. ಈ ಕಾರಣದಿಂದ ರಾಜ್ಯ ಸರ್ಕಾರದಿಂದ ಬೆಂಗಳೂರಿನ ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡಲು ಸಾಧ್ಯವಿಲ್ಲ. ಹೀಗಾಗಿ ನಾನು ಕೇಂದ್ರ ಸರ್ಕಾರದ ಬಳಿ ಶಿಫಾರಸ್ಸು ಮಾಡಿದ್ದೇನೆ. ಕೇಂದ್ರ ಒಪ್ಪಿಕೊಳ್ಳಬೇಕು. ಮುಂದೇನಾಗುತ್ತದೆ ಎಂಬುದನ್ನು ನಿರೀಕ್ಷಿಸೋಣ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ವಿ. ಎಸ್. ಉಗ್ರಪ್ಪ ಅವರು ಪಠ್ಯದಲ್ಲಿ ವಾಲ್ಮೀಕಿ ಮತ್ತು

ನಮ್ಮ ಮೆಟ್ರೋಗೆ ವಾಲ್ಮೀಕಿ ಹೆಸರಿಡುವಂತೆ ಕೇಂದ್ರಕ್ಕೆ ಸಿಎಂ ‌ಸಿದ್ದರಾಮಯ್ಯ ಮನವಿ Read More »

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ಸಮುದಾಯದ ಓಲೈಕೆ: ಅರವಿಂದ್ ಬೆಲ್ಲದ್ ಆಕ್ರೋಶ

ಧಾರವಾಡ: ರಾಜ್ಯ ಸರ್ಕಾರ ಮುಸ್ಲಿಂ ಓಲೈಕೆಯಲ್ಲೇ ಆಡಳಿತ ನಡೆಸುತ್ತಿದ್ದು, ಈಗ ಸರ್ಕಾರಿ ಕಾರ್ಯಕ್ರಮದಲ್ಲೇ ಕುರಾನ್ ಪಠಣಕ್ಕೆ ಅವಕಾಶ ನೀಡುವ ಮೂಲಕ ತಮ್ಮ ಧ್ಯೇಯವೇ ಮುಸ್ಲಿಂ ತುಷ್ಟೀಕರಣ ಎಂದು ಸಾರ್ವಜನಿಕರಿಗೆ ತೋರಿಸಿದ್ದಾರೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಅದರದ್ದೇ ಆದ ರೀತಿ, ನೀತಿಗಳಿವೆ. ಆದರೆ ಹುಬ್ಬಳ್ಳಿಯ ವಿಶಾಲ್ ನಗರದಲ್ಲಿ ಇತ್ತೀಚೆಗೆ ಆಯೋಜನೆ ಮಾಡಿದ್ದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಒಂದು ವರ್ಗದ ಓಲೈಕೆಗಾಗಿ ನಿಯಮಗಳನ್ನು ಗಾಳಿಗೆ

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ಸಮುದಾಯದ ಓಲೈಕೆ: ಅರವಿಂದ್ ಬೆಲ್ಲದ್ ಆಕ್ರೋಶ Read More »

ಅಧಿಕಾರ ರಾಜಕಾರಣದ ಬೆಳ್ಳಿಹಬ್ಬ ಸಂಭ್ರಮದಲ್ಲಿ ಪ್ರಧಾನಿ ಮೋದಿ

ಮುಖ್ಯಮಂತ್ರಿ, ಪ್ರಧಾನಿಯಾಗಿ ಸತತ 24 ವರ್ಷ ಪೂರೈಕೆ; ಇಷ್ಟರತನಕ ಸೋಲಿಲ್ಲದ ಸರದಾರ ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ರಾಜಕಾರಣದಲ್ಲಿ ಸತತ 24 ವರ್ಷಗಳನ್ನು ಪೂರೈಸಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಧಿಅಕರದ ಪಡಸಾಲೆಯಲ್ಲಿ ಅವರಿಗೆ ಈಗ ಬೆಳ್ಳಿಹಬ್ಬದ ಸಂಭ್ರಮ. 2001ರಲ್ಲಿ ಅ.7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಗ್ರಹಣದ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಸರ್ಕಾರಗಳ ಅಧಿನಾಯಕರಾಗಿ ಅಧಿಕಾರದಲ್ಲಿದ್ದಾರೆ. 2001ರಿಂದ 2014ರ ಮಧ್ಯಭಾಗದವರೆಗೆ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ನಂತರ

ಅಧಿಕಾರ ರಾಜಕಾರಣದ ಬೆಳ್ಳಿಹಬ್ಬ ಸಂಭ್ರಮದಲ್ಲಿ ಪ್ರಧಾನಿ ಮೋದಿ Read More »

ಜಾತಿ ಗಣತಿಗಾಗಿ ಶಾಲಾ ಸಮಯವೇ ಬದಲು : ಬೆಳಗ್ಗೆ 8 ಗಂಟೆಗೆ ಶುರು

ಮಧ್ಯಾಹ್ನದ ತನಕ ಪಾಠ ಬಳಿಕ ಗಣತಿಗಾಗಿ ಮನೆ ಮನೆಗೆ ಭೇಟಿ ಬೆಂಗಳೂರು : ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನ​ ಜಾತಿ ಗಣತಿ ಮುಗಿಯದ ಹಿನ್ನೆಲೆ ಅವಧಿ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಮಂಗಳವಾರಕ್ಕೆ (ಅ.7) ಅಂತ್ಯವಾಗಬೇಕಿದ್ದ ಸರ್ವೇ ಕಾರ್ಯವನ್ನು ಅ.12ರವರೆಗೂ, ಬೆಂಗಳೂರಿನಲ್ಲಿ 1 ವಾರ ತಡವಾಗಿಶುರುವಾಗಿರುವ ಕಾರಣ ಅ.24ರವರೆಗೂ ವಿಸ್ತರಿಸಲಾಗಿದೆ.

ಜಾತಿ ಗಣತಿಗಾಗಿ ಶಾಲಾ ಸಮಯವೇ ಬದಲು : ಬೆಳಗ್ಗೆ 8 ಗಂಟೆಗೆ ಶುರು Read More »

error: Content is protected !!
Scroll to Top