ರಾಜಕೀಯ

ಏ.14 ರ ಬಿಜೆಪಿ ಸಮಾವೇಶ ರದ್ದು | ಪ್ರಧಾನಿ ಮೋದಿಯಿಂದ ರೋಡ್ ಶೋ ಮಾತ್ರ

ಮಂಗಳೂರು: ಏ.14 ರಂದು ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಏ. 14ರಂದು ಸಂಜೆ 4 ಗಂಟೆಗೆ ಏರ್ಪಡಿಸಲಾದ ಸಮಾವೇಶ ದಿಢೀರ್ ರದ್ದಾಗಿದೆ. ಕೇವಲ ರೋಡ್ ಶೋ ಮಾತ್ರ ನಡೆಯಲಿದೆ. ಈ ಮೊದಲು ಏ.14 ರಂದು ಸಮಾವೇಶ ಏರ್ಪಡಿಸಲಾಗಿತ್ತು. ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ ಎಂದು ತಿಳಿಸಲಾಗಿತ್ತು. ಕೊನೆ ಕ್ಷಣದಲ್ಲಿ ಸಮಾವೇಶ ರದ್ದಾಗಿದೆ ಎಂಬ ಮಾಹಿತಿ ಜಿಲ್ಲಾ ಬಿಜೆಪಿಗೆ ಲಭ್ಯವಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಸಿಟಿಯಲ್ಲಿ ರೋಡ್ ಶೋ ಮಾತ್ರ ನಡೆಯಲಿದೆ ಎನ್ನಲಾಗಿದೆ.

ಏ.14 ರ ಬಿಜೆಪಿ ಸಮಾವೇಶ ರದ್ದು | ಪ್ರಧಾನಿ ಮೋದಿಯಿಂದ ರೋಡ್ ಶೋ ಮಾತ್ರ Read More »

ಪ್ರಧಾನಿ ನರೇಂದ್ರ ಮೋದಿಯವರದ್ದು ಮಹಿಳೆಯರಿಗೆ ಗೌರವ ನೀಡುವ ಮನಸ್ಥಿತಿ | ನಾರಿಶಕ್ತಿ ಸಮಾವೇಶದಲ್ಲಿ ಮಾಳವಿಕ ಅವಿನಾಶ್

ಪುತ್ತೂರು: ಮಹಿಳೆಯರಿಗೆ ಗೌರವ, ಸ್ವಾವಲಂಬಿ ಬದುಕು ನೀಡಿದ ಪ್ರಧಾನಿ ಇದ್ದರೆ ಅದು ನರೇಂದ್ರ ಮೋದಿ. ತನ್ನ ಸ್ವಂತ ಆಚರಣೆಗಿಂತ ದೇಶದ ಆಚರಣೆ ಮುಖ್ಯ ಎಂದು ತಿಳಿದಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು. ಹೀಗೆಂದು ಹೇಳಿದರು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಚಿತ್ರನಟಿ ಮಾಳವಿಕ ಅವಿನಾಶ್. ಪುತ್ತೂರಿನ ಜೈನ ಭವನದಲ್ಲಿ ಮಂಗಳವಾರ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ನಾರಿಶಕ್ತಿ ಸಮಾವೇಶವನ್ನು ಭಾರತದ ಮಾತೆ ಭಾವಚಿತ್ರದ ಬಳಿ ದೀಪ ಬೆಳಗಿಸಿ, ಬಳಿಕ ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಿರಿಯರಿಗೆ,

ಪ್ರಧಾನಿ ನರೇಂದ್ರ ಮೋದಿಯವರದ್ದು ಮಹಿಳೆಯರಿಗೆ ಗೌರವ ನೀಡುವ ಮನಸ್ಥಿತಿ | ನಾರಿಶಕ್ತಿ ಸಮಾವೇಶದಲ್ಲಿ ಮಾಳವಿಕ ಅವಿನಾಶ್ Read More »

ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿದ್ದಾರೆ: ಡಿ.ಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿಗೆ ಹಾರ ಹಾಕಿದ ಘಟನೆಯಲ್ಲಿ ಪಿಸ್ತೂಲು ಹಿಡಿದುಕೊಂಡ ಸೆಕ್ಯೂರಿಟಿ ವೈಫಲ್ಯ ಆಗಿಲ್ಲ. ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿರುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ. ನನ್ನ ಜೊತೆನೂ ಗನ್ ಮ್ಯಾನ್‌ಗಳು ಇದ್ದಾರೆ. ವಿರೋಧ ಪಕ್ಷಗಳಿಗೆ ಮಾತಾಡೋಕೆ ಒಳ್ಳೆಯ ವಿಷಯ ಇದ್ರೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸೋಮವಾರ ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿದ್ದಾರೆ. ರಿಯಾಜ್ ಬಳಿ

ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿದ್ದಾರೆ: ಡಿ.ಕೆ ಶಿವಕುಮಾರ್ ಹೇಳಿಕೆ Read More »

ಏಪ್ರಿಲ್‍14: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ

ಮಂಗಳೂರು :ಏ.14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ದ.ಕ ಜಿಲ್ಲೆಗೆ ಹಿಂದಿನ ಬಾರಿ ಮೋದಿ ಅವರು ಭೇಟಿ ನೀಡಿದಾಗ ಸೇರಿದ ಜನತೆಯ ದಾಖಲೆ ಮೀರಿಸುವಂತೆ ಈ ಬಾರಿ ಜನರು ಸಮಾವೇಶಗೊಳ್ಳಲಿದ್ದಾರೆ. ಏ.15,16, 17ರಂದು ಪಕ್ಷದ ರಾಜ್ಯಾಧ್ಯಕ್ಷರಿಂದ ತೊಡಗಿ ಎಲ್ಲ ಪ್ರಮುಖರು, ಅಭ್ಯರ್ಥಿಗಳು, ಕಾರ್ಯಕರ್ತರು ಮನೆ ಮನೆ ಸಂಪರ್ಕ ಹಾಗೂ ಪ್ರಚಾರ ನಡೆಸಲಿದ್ದಾರೆ

ಏಪ್ರಿಲ್‍14: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ Read More »

ಲೋಕಸಭಾ ಚುನಾವಣೆ | ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ನಡೆಯುವ ಚುನಾವಣೆಯಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ 10 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿತ್ತು. ನಿನ್ನೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಅದರಂತೆ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ, ದ.ಕ.ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ. ಕಣದಲ್ಲಿ ಕಾಂಗ್ರೆಸ್‌ನ ಪದ್ಮರಾಜ್ ಆ‌ರ್., ಬಿಜೆಪಿಯ ಬ್ರಿಜೇಶ್ ಚೌಟ, ಬಹುಜನ ಸಮಾಜ ಪಾರ್ಟಿಯ ಕಾಂತಪ್ಪ ಅಲಂಗಾರ್,

ಲೋಕಸಭಾ ಚುನಾವಣೆ | ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿ Read More »

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಚುನಾವಣಾ ನಿವೃತ್ತಿ ಘೋಷಣೆ | ಕಾಂಗ್ರೆಸ್‍ ವಲಯದಲ್ಲಿ ಆತಂಕ

ಚಿಕ್ಕಬಳ್ಳಾಪುರ : ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯಿಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಲ್ಲೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದು ಕಾಂಗ್ರೆಸ್‍ ವಲಯದಲ್ಲಿ ಆತಂಕ ಮೂಡಿದೆ. ವೀರಪ್ಪ ಮೊಯಿಲಿ ಅವರು ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಹೈಕಮಾಂಡ್ ಕೊನೆ ಕ್ಷಣದಲ್ಲಿ ವೀರಪ್ಪ ಮೊಯಿಲಿ ಬದಲಿಗೆ ಯುವ ನಾಯಕ ರಕ್ಷಾ ರಾಮಯ್ಯರಿಗೆ ನೀಡಿತ್ತು. ಇದರಿಂದ ನಿರಾಸೆಗೊಂಡಿರುವ ಮೊಯಿಲಿ ಇದೀಗ ಅಂತಿಮವಾಗಿ ರಾಜಕೀಯ ನಿವೃತ್ತಿ ಘೋಷಣೆ

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಚುನಾವಣಾ ನಿವೃತ್ತಿ ಘೋಷಣೆ | ಕಾಂಗ್ರೆಸ್‍ ವಲಯದಲ್ಲಿ ಆತಂಕ Read More »

ಗನ್ ಸಹಿತ ವ್ಯಕ್ತಿಯಿಂದ ಸಿಎಂ ಸಿದ್ಧರಾಮಯ್ಯಗೆ ಹಾರ | ಪರಿಶೀಲನೆ ಮಾಡದ ಪೊಲೀಸರು | ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸ

ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರ ಕಾರ್ಯ ಎಲ್ಲೆಡೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಗನ್ ಸಹಿತ ವ್ಯಕ್ತಿಯೊಬ್ಬ ಬಂದು ಸಿಎಂಗೆ ಹಾರ ಹಾಕಿದ ಘಟನೆ ನಡೆದಿದೆ. ರಿಯಾಜ್ ಎಂಬಾತ ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪರ ಸಿಎಂ ಮತಯಾಚನೆ ಮಾಡುತ್ತಿದ್ದರು. ಈ ವೇಳೆ

ಗನ್ ಸಹಿತ ವ್ಯಕ್ತಿಯಿಂದ ಸಿಎಂ ಸಿದ್ಧರಾಮಯ್ಯಗೆ ಹಾರ | ಪರಿಶೀಲನೆ ಮಾಡದ ಪೊಲೀಸರು | ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸ Read More »

ಕೆಯ್ಯೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಪುತ್ತೂರು: ರಾಜ್ಯದಲ್ಲಿ‌ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪ್ರತೀ ಕುಟುಂಬಕ್ಕೆ ತಲಾ 30 ಸಾವಿರ ಹಣ ವಿವಿಧ ರೂಪದಲ್ಲಿ ದೊರಕಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು. ಅವರು ಕೆಯ್ಯೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಎಂದಿಗೂ ಜನತೆಗೆ ದ್ರೋಹ ಮಾಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ ಎಂದಿಗೂ ಬಡವರ ಹಾಗೂ ನೊಂದವರ ಪರವಾಗಿಯೇ ಕೆಲಸ ಮಾಡಲಿದೆ. ಗ್ಯಾರಂಟಿ ಯೋಜನೆಯನ್ನು ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಜಾರಿ

ಕೆಯ್ಯೂರಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ Read More »

ಮಂಜುನಾಥನಗರದಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ

ಸವಣೂರು : ಪಾಲ್ತಾಡಿ ಬಿಜೆಪಿ ವತಿಯಿಂದ ಬಿಜೆಪಿ ಸ್ಥಾಪನಾ ದಿನಾಚರಣೆಯನ್ನು ಪಾಲ್ತಾಡಿ ಬೂತ್ ಸಂಖ್ಯೆ 70ರ ಅಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಅವರ ಮನೆಯಲ್ಲಿ ನಡೆಯಿತು. ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ.ಕೆ. ಅವರು ಮುಂಬರುವ ಲೋಕಸಭಾ ಚುನಾವಣೆ ಹಾಗೂ ನಾರಿ ಶಕ್ತಿ ಸಂಗಮದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಗಣೇಶ್ ಶೆಟ್ಟಿ ಕುಂಜಾಡಿ, ಬಾಳಪ್ಪ ಪೂಜಾರಿ ಬಂಬಿಲದೋಳ, ವಿಠಲ ಶೆಟ್ಟಿ ಬಂಬಿಲ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.ಬಂಬಿಲ,

ಮಂಜುನಾಥನಗರದಲ್ಲಿ ಬಿಜೆಪಿ ಸ್ಥಾಪನಾ ದಿನಾಚರಣೆ Read More »

ಏ.14 : ಪ್ರಧಾನಿ ಮೋದಿ ಕರ್ನಾಟಕಕ್ಕೆ | ರೋಡ್ ಶೋ ದಲ್ಲಿ ಪಾಲ್ಗೊಳ್ಳಲಿರುವ ಮೋದಿ

ಬೆಂಗಳೂರು : ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಏ.14ರಂದು ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಒಂದು ದಿನದಲ್ಲಿ ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಬೆಂಗಳೂರಿಗೆ ಆಗಮಿಸಲಿರುವ ನರೇಂದ್ರ ಮೋದಿ ಮಧ್ಯಾಹ್ನ 3 ಗಂಟೆಗೆ ಡಾ ಕೆ ಸುಧಾಕರ್ ಪರ ಕ್ಷೇತ್ರ ಚಿಕ್ಕಬಳ್ಳಾಪುರ ಆಯೋಜಿಸಲಾದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶ ಮುಗಿದ ನಂತರ ಮೋದಿ

ಏ.14 : ಪ್ರಧಾನಿ ಮೋದಿ ಕರ್ನಾಟಕಕ್ಕೆ | ರೋಡ್ ಶೋ ದಲ್ಲಿ ಪಾಲ್ಗೊಳ್ಳಲಿರುವ ಮೋದಿ Read More »

error: Content is protected !!
Scroll to Top