ರಾಜಕೀಯ

ರಾಜಕೀಯ ಚಾಣಕ್ಯನ ಭೇಟಿ: ಗರಿಗೆದರಿದ ರಾಜಕೀಯ ಚಟುವಟಿಕೆ | ಭರದ ಸಿದ್ಧತೆ ಜೊತೆಗೆ ರಾಜಕೀಯ ಕುತೂಹಲ | ಶಾ ಭೇಟಿ ನೀಡಲಿದೆಯೇ ಬಿಜೆಪಿಗೆ ಹೊಸ ಧಿಕ್ಕು!

ಪುತ್ತೂರು: ಅಮಿತ್ ಶಾ ಭೇಟಿ ಪುತ್ತೂರಿಗೆ ಹೊಸ ರಂಗು ತಂದಿದೆ. ಉತ್ಸಾಹಕ್ಕೆ ಸಿಕ್ಕ ಯುವಕರು ಪೇಟೆಯಲ್ಲಿ ಮಾತ್ರವಲ್ಲ, ಗ್ರಾಮಾಂತರ ಭಾಗಗಳಲ್ಲೂ ಬಿಜೆಪಿ ಧ್ವಜ ಹಾರಿಸುತ್ತಿದ್ದಾರೆ. ಅಂದರೆ ಬಿಜೆಪಿಗೆ ಹೊಸ ಉತ್ಸಾಹ ಬಂದಿದ್ದು, ಇದು ರಾಜಕೀಯ ವಲಯದಲ್ಲೂ ಹೊಸ ಬಿರುಗಾಳಿ ಬೀಸುವ ಸಾಧ್ಯತೆಗಳು ದಟ್ಟವಾಗಿದೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕೃಷಿ ಯಂತ್ರ ಮೇಳ, ಹನುಮಗಿರಿಯಲ್ಲಿ ಅಮರಗಿರಿ ಲೋಕಾರ್ಪಣೆ ಹೀಗೆ ಸಾಲು ಸಾಲು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಮಿಸುತ್ತಿರುವ ಅಮಿತ್ ಶಾ ಅವರ ಭೇಟಿ ರಾಜಕೀಯವಾಗಿಯೂ […]

ರಾಜಕೀಯ ಚಾಣಕ್ಯನ ಭೇಟಿ: ಗರಿಗೆದರಿದ ರಾಜಕೀಯ ಚಟುವಟಿಕೆ | ಭರದ ಸಿದ್ಧತೆ ಜೊತೆಗೆ ರಾಜಕೀಯ ಕುತೂಹಲ | ಶಾ ಭೇಟಿ ನೀಡಲಿದೆಯೇ ಬಿಜೆಪಿಗೆ ಹೊಸ ಧಿಕ್ಕು! Read More »

ಸುಸೂತ್ರವಾಗಿ ಸಾಗಿದ ಬಿಜೆಪಿ ಜಾಥಾ ಅಂತ್ಯದಲ್ಲಿ ಬಿರುಸಾಗಿದ್ದೇಕೆ?! | ಈ ಬಿರುಸು ಪೂರ್ವ ನಿಯೋಜಿತ ಪ್ಲ್ಯಾನೇ?! | ಹಿರಿ ನಾಯಕರಿರುವ ಬಿಜೆಪಿಯಲ್ಲಿ ಈ ಗೊಂದಲವೇಕೆ? | ಬಿಜೆಪಿ ಪಡಸಾಲೆಯ ಗೊಂದಲ ಎದುರಾಳಿಗಳಿಗೆ ಆಹಾರವಾಗದೇ? ಇದಕ್ಕೆ ಹೊಣೆ ಯಾರು?

ಪುತ್ತೂರು: ಅಮಿತ್ ಶಾ ಕಾರ್ಯಕ್ರಮದ ಪ್ರಚಾರಾರ್ಥ ಗುರುವಾರ ಪೇಟೆಯಾದ್ಯಂತ ನಡೆದ ಜಾಥಾ, ಅಂತ್ಯದಲ್ಲಿ ಏಕಾಏಕೀ ಬಿರುಸಾಯಿತು. ಮಾತಿನ ಚಕಮಕಿ ತಾರಕಕ್ಕೇರಿತು. ಮುಖಂಡರ ಮಧ್ಯಪ್ರವೇಶ ಬಿರುಸಿನ ವಾತಾವರಣವನ್ನು ತಿಳಿಗೊಳಿಸಿತೇನೋ ನಿಜ. ಆದರೆ ಸುಸೂತ್ರವಾಗಿ ಸಾಗುತ್ತಿದ್ದ ಜಾಥಾ ಕೊನೆಯಲ್ಲಿ ಬಿರುಸಾಗಲು ಕಾರಣವೇನು? ಹೀಗೊಂದು ಪ್ರಶ‍್ನೆ ಬಿಜೆಪಿ ಪಾಳಯದೊಳಗೆ ಸದ್ದಿಲ್ಲದೆ ಹರಿದಾಡುತ್ತಿದೆ. ಜಾಥಾದ ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಎಲ್ಲಾ ಮುಖಂಡರು ಜೊತೆಗೆ ಹೆಜ್ಜೆ ಮುಂದಿಡುತ್ತಾ ಸಾಗಿದರು. ಪ್ರಚಾರಾರ್ಥ ಜಾಥಾ ವಿಜೃಂಭಣೆಯಿಂದಲೇ ಸಾಗಿತ್ತು. ಆದರೆ ಕೊನೆಯಲ್ಲಿ ಜಾಥಾ ಅಂತ್ಯವಾಗುತ್ತದೆ ಎಂದಾಗ, ಏಕಾಏಕೀ

ಸುಸೂತ್ರವಾಗಿ ಸಾಗಿದ ಬಿಜೆಪಿ ಜಾಥಾ ಅಂತ್ಯದಲ್ಲಿ ಬಿರುಸಾಗಿದ್ದೇಕೆ?! | ಈ ಬಿರುಸು ಪೂರ್ವ ನಿಯೋಜಿತ ಪ್ಲ್ಯಾನೇ?! | ಹಿರಿ ನಾಯಕರಿರುವ ಬಿಜೆಪಿಯಲ್ಲಿ ಈ ಗೊಂದಲವೇಕೆ? | ಬಿಜೆಪಿ ಪಡಸಾಲೆಯ ಗೊಂದಲ ಎದುರಾಳಿಗಳಿಗೆ ಆಹಾರವಾಗದೇ? ಇದಕ್ಕೆ ಹೊಣೆ ಯಾರು? Read More »

ಅಮಿತ್ ಶಾ ಆಗಮನ ಹಿನ್ನೆಲೆ: ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಬಿಜೆಪಿ ಜಾಥಾ

ಪುತ್ತೂರು: ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸುತ್ತಿರುವ ಕೇಂದ್ರದ ಗೃಹ ಸಚಿವ, ಸಹಕಾರ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಗುರುವಾರ ಜಾಥಾ ನಡೆಸಲಾಯಿತು. ಪುತ್ತೂರು ಬಿಜೆಪಿ ಘಟಕದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜಾಥಾಕ್ಕೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ದರ್ಬೆಯಿಂದ ಹೊರಟ ಜಾಥಾ, ಪುತ್ತೂರು ಪೇಟೆಯಾಗಿ ಸಾಗಿ ಬೊಳುವಾರಿನಲ್ಲಿ ಸಮಾಪನಗೊಂಡಿತು. ದಾರಿಯುದ್ಧಕ್ಕೂ ಆಸುಪಾಸಿನ ಅಂಗಡಿಗಳಿಗೆ, ಸಾರ್ವಜನಿಕರಿಗೆ ಆಮಂತ್ರಣ ಪತ್ರ ನೀಡಲಾಯಿತು. ಜಾಥಾದ ಮುಂಭಾಗದಿಂದ ಕಾರ್ಯಕ್ರಮದ ವಿವರಣೆಯನ್ನು

ಅಮಿತ್ ಶಾ ಆಗಮನ ಹಿನ್ನೆಲೆ: ಪ್ರಚಾರಾರ್ಥವಾಗಿ ಪುತ್ತೂರು ಪೇಟೆಯಲ್ಲಿ ಬಿಜೆಪಿ ಜಾಥಾ Read More »

ಕೇಂದ್ರ ಗೃಹ ಸಚಿವ ಅಮಿತ್‍ಶಾ ಆಗಮನ ಹಿನ್ನಲೆ : ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಅಮಿತ್‍ ಶಾ ಫೆ.11 ರಂದು ಪುತ್ತೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಗುರುವಾರ ಪ್ರಾರ್ಥ‍ನೆ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್‍.ಭಟ್‍ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ,, ನಗರಸಭೆ ಅಧ್ಯಕ್ಷ ಜೀವಂಧರ್‍ ಜೈನ್‍, ಬಿಜೆಪಿ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ,, ರಾಧಾಕೃಷ್ಣ ಬೋರ್ಕರ್‍, ರಾಜೇಶ್‍

ಕೇಂದ್ರ ಗೃಹ ಸಚಿವ ಅಮಿತ್‍ಶಾ ಆಗಮನ ಹಿನ್ನಲೆ : ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ Read More »

ಶಾಸಕರ ಹೇಳಿಕೆಯನ್ನು ಅನ್ಯಥಾ ಭಾವಿಸಬೇಕಾಗಿಲ್ಲ | ಶಾಸಕರ ಹೇಳಿಕೆಯನ್ನು ಸಮರ್ಥಿಸಿಕೊಂಡ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್

ಪುತ್ತೂರು: ಅಮಿತ್ ಶಾ ಅವರು ಪುತ್ತೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ನಾನಾ ರೀತಿಯ ಹೇಳಿಕೆಗಳನ್ನು ನೀಡಲು ಶುರು ಮಾಡಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಶಾಸಕ ಸಂಜೀವ ಮಠಂದೂರು ಅವರು, ಅಣಬೆಗೆ ಹೋಲಿಸಿ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅನಪೇಕ್ಷಿತ ಸಂದೇಶವನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಹೇಳಿದರು. ಶಾಸಕ ಸಂಜೀವ ಮಠಂದೂರು ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಜೀವಂಧರ್ ಜೈನ್ ಅವರು ಈ

ಶಾಸಕರ ಹೇಳಿಕೆಯನ್ನು ಅನ್ಯಥಾ ಭಾವಿಸಬೇಕಾಗಿಲ್ಲ | ಶಾಸಕರ ಹೇಳಿಕೆಯನ್ನು ಸಮರ್ಥಿಸಿಕೊಂಡ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ Read More »

ಅಮಿತ್ ಶಾ ಆಗಮನದೊಂದಿಗೆ ಕ್ಯಾಂಪ್ಕೋ ಸಂಸ್ಥೆ ಗುಜರಾತ್ ಅಡಿಕೆ ಮಂಡಿಗೆ ಹೋಗದಿರುವಂತಾಗಲಿ: ಎಂ.ಬಿ. ವಿಶ್ವನಾಥ 

ಪುತ್ತೂರು : ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಆದರೆ ಅವರ ಪಾದಾರ್ಪಣೆಯಿಂದ ಪುತ್ತೂರಿನ ಪವಿತ್ರವಾದ ಮಣ್ಣು ವಿಷಪೂರಿತವಾಗದಿರಲಿ, ಇಲ್ಲಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ ಗುಜರಾತ್ನ ಅಡಿಕೆ ಮಂಡಿಗೆ ಹೋಗದಿರುವಂತಾಗಲಿ ಎಂಬುದು ಪ್ರಾರ್ಥನೆಯಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಹೇಳಿದರು.  ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಯಾದ ಅಡಿಕೆಗೆ ಕೊಳೆರೋಗ, ಎಲೆಚುಕ್ಕಿ ರೋಗಗಳಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯು ಈ ಬಗ್ಗೆ

ಅಮಿತ್ ಶಾ ಆಗಮನದೊಂದಿಗೆ ಕ್ಯಾಂಪ್ಕೋ ಸಂಸ್ಥೆ ಗುಜರಾತ್ ಅಡಿಕೆ ಮಂಡಿಗೆ ಹೋಗದಿರುವಂತಾಗಲಿ: ಎಂ.ಬಿ. ವಿಶ್ವನಾಥ  Read More »

ಫೆ.೬ : ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಕಾರ್ಯಕ್ರಮ

ಪುತ್ತೂರು : ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿ ಯೋಜನೆಗೆ ಶಿಲಾನ್ಯಾಸ ಕಾರ್ಯಕ್ರಮ ಫೆ.೬ ಸೋಮವಾರ ಬೆಳಿಗ್ಗೆ ೯.೦೦ ಗಂಟೆಗೆ ೩೪ನೇ ನೆಕ್ಕಿಲಾಡಿಯ ಶಕ್ತಿನಗರದಲ್ಲಿ ನಡೆಯಲಿದೆ.ಸುಮಾರು ೧೨.೭೫ ಕೋಟಿ ರೂ. ಅನುದಾನ ಈ ರಸ್ತೆಯ ಅಭಿವೃದ್ಧಿಗೆ ಬಿಡುಗಡೆಗೊಳಿಸಲಾಗಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫೆ.೬ : ಪುತ್ತೂರು-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ಕಾರ್ಯಕ್ರಮ Read More »

ಫೆ.11 : ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ : ತೆಂಕಿಲ ಶಾಲಾ ಮೈದಾನಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ

ಪುತ್ತೂರು: ಸುವರ್ಣ ಮಹೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಫೆ.11ರಂದು ಕೇಂದ್ರ ಗೃಹ ಸಚಿವರು, ಕೇಂದ್ರದ ಪ್ರಥಮ ಸಹಕಾರ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ದ.ಕ ಎಸ್ಪಿ ಡಾ.ಅಮಟೆ ವಿಕ್ರಮ್‌ರವರು ಕಾರ್ಯಕ್ರಮ ನಡೆಯುವ ತೆಂಕಿಲ ವಿವೇಕಾನಂದ ಶಾಲಾ ಮೈದಾನಕ್ಕೆ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್, ಡಿವೈಎಸ್ಪಿ ವೀರಯ್ಯ ಹಿರೇಮಠ್, ಕ್ಯಾಂಪ್ಕೋ ಮಾಜಿ

ಫೆ.11 : ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ : ತೆಂಕಿಲ ಶಾಲಾ ಮೈದಾನಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಭೇಟಿ Read More »

ತಾಲೂಕು ಅಕ್ರಮ-ಸಕ್ರಮ ಮಂಜೂರಾತಿ ಸಭೆ

ಪುತ್ತೂರು: ತಾಲೂಕು ಅಕ್ರಮ-ಸಕ್ರಮ ಮಂಜೂರಾತಿ ಸಭೆ ಮಾನ್ಯ ಶಾಸಕರಾದ ಸಂಜೀವ ಮಠದೂರು ನೇತೃತ್ವದಲ್ಲಿ ನಡೆಯಿತು.ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಬ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗ ನಿಟ್ಟಿನಲ್ಲಿ ರೈತರಿಗೆ ಇಲಾಖೆಯ ಅಧಿಕಾರಿಗಳಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಸಬೇಕು. ಸರ್ಕಾರಿ ಜಾಗದಲ್ಲಿ ಸಾಗುವಳಿ ಮಾಡಿದ ರೈತರಿಗೆ ಸಕ್ರಮ ಮಾಡಲು ಅವಕಾಶ ಮಾಡಿಕೊಡಲಾಗಿದ್ದು, ಮಾ.30ರ ತನಕ ಅಕ್ರಮ ಸಕ್ರಮ ಅರ್ಜಿ ನೀಡಲು ಅವಕಾಶವಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಅವರು ಪುತ್ತೂರು ಪುರಭವನದಲ್ಲಿ

ತಾಲೂಕು ಅಕ್ರಮ-ಸಕ್ರಮ ಮಂಜೂರಾತಿ ಸಭೆ Read More »

ಸಂಸದರಿಂದ ಹನುಮಗಿರಿ ಕ್ಷೇತ್ರ ಅಮರಗಿರಿ ಶ್ರೀ ಭಾರತೀ ಅಮರಜ್ಯೋತಿ ಮಂದಿರದ ಪರಿಶೀಲನೆ

ಪುತ್ತೂರು : ಫೆ.11 ರಂದು ನಡೆಯುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅಮಿತ್‌ಷಾ ಅವರು ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಅಲ್ಲಿ ನೂತನವಾಗಿ ನಿರ್ಮಿಸಲಾದ ಅಮರಗಿರಿ ಶ್ರೀ ಭಾರತಿ ಅಮರಜ್ಯೋತಿ ಮಂದಿರವನ್ನು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಹಾಯಕ ಆಯುಕ್ತ ಗಿರೀಶ್ ನಂದನ್, ಕ್ಷೇತ್ರದ ನನ್ಯ ಅಚ್ಚುತ

ಸಂಸದರಿಂದ ಹನುಮಗಿರಿ ಕ್ಷೇತ್ರ ಅಮರಗಿರಿ ಶ್ರೀ ಭಾರತೀ ಅಮರಜ್ಯೋತಿ ಮಂದಿರದ ಪರಿಶೀಲನೆ Read More »

error: Content is protected !!
Scroll to Top