ರಾಜಕೀಯ

ಶಾಂತಿಗೋಡು ಬೂತ್ ನಲ್ಲಿ ಬಿಜೆಪಿ ಪರ ಮತ ಯಾಚನೆ

ಪುತ್ತೂರು: ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಶಾಂತಿಗೋಡು ಬೂತ್ ನಲ್ಲಿ ಮತ ಯಾಚನೆ ಭಾನುವಾರ ನಡೆಯಿತು. ಬೂತ್ ಸದಸ್ಯರು, ಶಕ್ತಿ ಕೇಂದ್ರದ ಅಧ್ಯಕ್ಷರು ಸಹಿತ ಮತ್ತಿತರರು ಮನೆ ಮನೆ ಭೇಟಿ ನೀಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಶಕ್ತಿ ಕೇಂದ್ರ ಅಧ್ಯಕ್ಷ ಶ್ಯಾಮ್ ಭಟ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,  ಬೂತ್ ಅಧ್ಯಕ್ಷ ಎಸ್ ಕೃಷ್ಣ ಸಾಲ್ಯಾನ್, ಯುವಮೋರ್ಚಾ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ, ವಿಘ್ನೇಶ್ ಕುಕ್ಯನ ಮತ್ತಿತರರು ಉಪಸ್ಥಿತರಿದ್ದರು

ಶಾಂತಿಗೋಡು ಬೂತ್ ನಲ್ಲಿ ಬಿಜೆಪಿ ಪರ ಮತ ಯಾಚನೆ Read More »

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಬನ್ನೂರು ಚರ್ಚ್ ಗೆ ಭೇಟಿ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭಾನುವಾರ ಬೆಳಿಗ್ಗೆ ಪುತ್ತೂರು ಬನ್ನೂರು ಚರ್ಚ್ ಗೆ ಭೇಟಿ ನೀಡಿದರು. ಭೇಟಿ ನೀಡಿದ ಅವರು ಚರ್ಚ್ ಧರ್ಮಗುರುಗಳೊಂದಿಗೆ ಮಾತನಾಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಬನ್ನೂರು ಚರ್ಚ್ ಗೆ ಭೇಟಿ Read More »

ಬಿಜೆಪಿ ಡಬಲ್ ಇಂಜಿನಿನಲ್ಲಿ ಸಾಗುತ್ತಿದ್ದರೆ, ಕಾಂಗ್ರೆಸ್ ರಿವರ್ಸ್ ಗೇರಿನಲ್ಲಿದೆ | ನರೇಂದ್ರ ಮೋದಿ ಅವಮಾನಿಸುವ ಕಾಂಗ್ರೆಸಿಗೆ ಮತದಾರರಿಂದ ತಕ್ಕ ಪಾಠ | ವಿಟ್ಲದಲ್ಲಿ ರೋಡ್ ಶೋ ನಡೆಸಿ, ಮತದಾರರ ಸಭೆಯಲ್ಲಿ ಮಾತನಾಡಿದ ಅಣ್ಣಾಮಲೈ

ವಿಟ್ಲ: ಬಿಜೆಪಿ ಡಬಲ್ ಇಂಜಿನಿನಲ್ಲಿ ಮುಂದೆ ಹೋಗುತ್ತಿದ್ದರೆ, ಕಾಂಗ್ರೆಸ್ ರಿವರ್ಸ್ ಗೇರಿನಲ್ಲಿ ಹಿಂದೆ ಸಾಗುತ್ತಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ಮತದಾರರು ಮಾಡಬೇಕಾಗಿದೆ ಎಂದು ಕರ್ನಾಟಕ ಬಿಜೆಪಿ ಚುನಾವಣೆಯ ಸಹಪ್ರಭಾರಿ, ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ ಹೇಳಿದರು. ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿ ಬಿಜೆಪಿ ಸಾಕಷ್ಟು

ಬಿಜೆಪಿ ಡಬಲ್ ಇಂಜಿನಿನಲ್ಲಿ ಸಾಗುತ್ತಿದ್ದರೆ, ಕಾಂಗ್ರೆಸ್ ರಿವರ್ಸ್ ಗೇರಿನಲ್ಲಿದೆ | ನರೇಂದ್ರ ಮೋದಿ ಅವಮಾನಿಸುವ ಕಾಂಗ್ರೆಸಿಗೆ ಮತದಾರರಿಂದ ತಕ್ಕ ಪಾಠ | ವಿಟ್ಲದಲ್ಲಿ ರೋಡ್ ಶೋ ನಡೆಸಿ, ಮತದಾರರ ಸಭೆಯಲ್ಲಿ ಮಾತನಾಡಿದ ಅಣ್ಣಾಮಲೈ Read More »

ಆಶಾ ತಿಮ್ಮಪ್ಪ ಪರ ಅಣ್ಣಾಮಲೈ ಮತಯಾಚನೆ | ಅರಿಯಡ್ಕ, ಕೊಳ್ತಿಗೆ, ಮಾಡ್ನೂರು, ನೆಟ್ಟಣಿಗೆ ಮುಡ್ನೂರು ಪ್ರದೇಶದಲ್ಲಿ ಮತಯಾಚನೆ | ಜನಮಂಗಲ ಸಭಾಂಗಣದಲ್ಲಿ ಮತದಾರರ ಸಭೆ

ಪುತ್ತೂರು: ಕರ್ನಾಟಕ ರಾಜ್ಯ ಚುನಾವಣಾ ಸಹಪ್ರಭಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಶನಿವಾರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಅರಿಯಡ್ಕ, ಕೊಳ್ತಿಗೆ, ಮಾಡ್ನೂರು, ನೆಟ್ಟಣಿಗೆ ಮುಡ್ನೂರು ಪ್ರದೇಶದಲ್ಲಿ ಮತಯಾಚನೆ ನಡೆಸಿದರು. ಬಳಿಕ ಜನಮಂಗಲ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಲವಾರು ಅಭಿವೃದ್ಧಿ ಪರ ಕಾರ್ಯಕ್ರಮಗಳು ನಡೆದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿಯೂ ಭಾರತದ ಹೆಮ್ಮೆಯನ್ನು ಅಲ್ಲೂ ಪಸರಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಆಶಾ ತಿಮ್ಮಪ್ಪ ಪರ ಅಣ್ಣಾಮಲೈ ಮತಯಾಚನೆ | ಅರಿಯಡ್ಕ, ಕೊಳ್ತಿಗೆ, ಮಾಡ್ನೂರು, ನೆಟ್ಟಣಿಗೆ ಮುಡ್ನೂರು ಪ್ರದೇಶದಲ್ಲಿ ಮತಯಾಚನೆ | ಜನಮಂಗಲ ಸಭಾಂಗಣದಲ್ಲಿ ಮತದಾರರ ಸಭೆ Read More »

ಕಾಂಗ್ರೆಸ್ ಬೆಂಬಲಿಸಿ : ಕಲ್ಲಂದಡ್ಕದಲ್ಲಿ ಅಶೋಕ್ ರೈ ಮತಯಾಚನೆ

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಶೋಕ್ ಕುಮಾರ್ ರೈ, ಕಲ್ಲಂದಡ್ಕದಲ್ಲಿರುವ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಕುಡಿಯುವ ನೀರು, ರಸ್ತೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಅಗತ್ಯವಿದೆ. ಎಲ್ಲಾ ಸಮಸ್ಯೆಗಳಿಗೂ ಕಾಂಗ್ರೆಸ್ ಪರಿಹಾರ ಕಾಣಿಸಲಿದೆ. ಆದ್ದರಿಂದ ಕಾಂಗ್ರೆಸನ್ನು ಬೆಂಬಲಿಸಿ ಎಂದು ಭರವಸೆ ನೀಡಿದರು. ಕೆಪಿಸಿಸಿ ವಕ್ತಾರ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಡಾ. ‌ರಾಜಾರಾಂ ಕೆ.ಬಿ., ಎಂ‌.ಎಸ್. ಮಹಮ್ಮದ್

ಕಾಂಗ್ರೆಸ್ ಬೆಂಬಲಿಸಿ : ಕಲ್ಲಂದಡ್ಕದಲ್ಲಿ ಅಶೋಕ್ ರೈ ಮತಯಾಚನೆ Read More »

ಯುವ ಮತದಾರರೊಂದಿಗೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಸಂವಾದ

ಪುತ್ತೂರು: ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ, ಸಿಂಗಂ ಖ್ಯಾತಿಯ ಅಣ್ಣಾಮಲೈ ಅವರು ಯುವಮತದಾರರೊಂದಿಗೆ ಶನಿವಾರ ಸಂವಾದ ನಡೆಸಿದರು. ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಪಡೆಯುವ ಶಿಕ್ಷಣ ಯುವಜನಾಂಗವನ್ನು ಪ್ರಜ್ಞಾವಂತರನ್ನಾಗಿಸುತ್ತದೆ. ಮಾತ್ರವಲ್ಲ, ದೇಶಕಟ್ಟುವ ಕಾಯಕದಲ್ಲಿ ಪ್ರತಿಯೋರ್ವರನ್ನು ಸಮರ್ಥವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಶಿಕ್ಷಣ ಪಡೆಯುತ್ತಾ ಹೋದಂತೆ, ಮನಸ್ಸು ದೇಶಪ್ರೇಮದಿಂದ ವಿಚಲಿತವಾಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಶಿಕ್ಷಣ ಪಡೆಯುವ ಜೊತೆಜೊತೆಗೆ ರಾಷ್ಟ್ರೀಯ ವಿಚಾರಧಾರೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು. ಸುಡಾನಿನಲ್ಲಿ ತೊಂದರೆ ಅನುಭವಿಸುತ್ತಿದ್ದ ಭಾರತೀಯರನ್ನು

ಯುವ ಮತದಾರರೊಂದಿಗೆ ಸಿಂಗಂ ಖ್ಯಾತಿಯ ಅಣ್ಣಾಮಲೈ ಸಂವಾದ Read More »

ಮೇ 1ರಂದು ಪುತ್ತೂರಿನಲ್ಲಿ ಎಸ್.ಸಿ. ಸಮಾವೇಶ|ಎಸ್.ಸಿ. ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆಗಳ ವಿವರ ನೀಡಿದ ಅಣ್ಣಪ್ಪ ಕಾರೆಕ್ಕಾಡ್

ಪುತ್ತೂರು: ಮೇ 1ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರಿನ ದರ್ಶನ್ ಹಾಲಿನಲ್ಲಿ ಎಸ್.ಸಿ. ಸಮಾವೇಶ ನಡೆಯಲಿದೆ ಎಂದು ಎಸ್.ಸಿ. ಮೋರ್ಚಾ ಜಿಲ್ಲಾ ಸದಸ್ಯ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದನ್ನು ನೋಡಿಕೊಂಡು ಜನರು ಮತ ಚಲಾಯಿಸಬೇಕು. ಯಾವುದೇ ಆಮಿಷಗಳಿಗೂ ಜನರು ಒಳಗಾಗಬಾರದು ಎಂದ ಅವರು, ಬಿಜೆಪಿ ನೀಡಿರುವ ಯೋಜನೆಗಳು ಹಾಗೂ ಕೆಲಸಗಳ ವಿವರ ನೀಡಿದರು. 1. ಬಿಜೆಪಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪಾಯಿ ಹಳ್ಳಿ

ಮೇ 1ರಂದು ಪುತ್ತೂರಿನಲ್ಲಿ ಎಸ್.ಸಿ. ಸಮಾವೇಶ|ಎಸ್.ಸಿ. ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆಗಳ ವಿವರ ನೀಡಿದ ಅಣ್ಣಪ್ಪ ಕಾರೆಕ್ಕಾಡ್ Read More »

ಪುತ್ತೂರು, ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಗೆದ್ದೇ ಗೆಲ್ತೀವಿ: ಅಣ್ಣಾಮಲೈ

ಪುತ್ತೂರು: ಬಹಳ  ಧೈರ್ಯಶಾಲಿ  ಕ್ರಮವನ್ನು ಮೋದಿ ತೆಗೆದುಕೊಂಡಿದ್ದಾರೆ ಎಂದರೆ ಅದಕ್ಕೆ ಮತದಾರರು ಕಾರಣ. ಮುಂದೆಯೂ ಇಂತಹ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ 130ಕ್ಕೂ ಅಧಿಕ ಸೀಟ್ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಿಜೆಪಿಯ ಭದ್ರ ಬುನಾದಿ ಇರುವ ಪುತ್ತೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡಾಯ, ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಮಾತನಾಡಲ್ಲ. ಕರಾವಳಿಯಲ್ಲಿ ಬಿಜೆಪಿ ಭದ್ರಬುನಾದಿ ಇರುವ ಕಾರಣ, ಪಕ್ಷೇತರರು ಬಿಜೆಪಿಯಲ್ಲಿ

ಪುತ್ತೂರು, ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಗೆದ್ದೇ ಗೆಲ್ತೀವಿ: ಅಣ್ಣಾಮಲೈ Read More »

ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುರೇಶ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ

ಪುತ್ತೂರು: ಚುನಾವಣಾ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಬಿಜೆಪಿ ಕಾರ್ಯದರ್ಶಿ, ಅಡ್ವೊಕೇಟ್ ಸುರೇಶ್ ಅವರು ಶನಿವಾರ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಅಶ್ಮಿ ಕಂಫರ್ಟಿನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಈ ಸಂದರ್ಭ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.

ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುರೇಶ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ Read More »

ಹಿರೇಬಂಡಾಡಿ ಗ್ರಾಮದಲ್ಲಿ ಆಶಾ ತಿಮ್ಮಪ್ಪ ಮತಯಾಚನೆ

ಪುತ್ತೂರು: ಹಿರೇಬಂಡಾಡಿ ಗ್ರಾಮದ 48 ನೇ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮತಯಾಚನೆ ಮಾಡಿದರು. ಹಿರೇಬಂಡಾಡಿ ಗ್ರಾಮದ 48 ನೇ ಬೂತ್ ನಲ್ಲಿ ಬೆಳಿಯಪ್ಪ ಗೌಡ ಅವರ ಮನೆಗೆ ಭೇಟಿ ನೀಡಿ, ಕರಪತ್ರ ವಿತರಿಸಿದರು. ಈ ಸಂದರ್ಭ ಶಕ್ತಿಯ ಕೇಂದ್ರ ಪ್ರಮುಖರಾದ ದಯಾನಂದ ಸರೋಳಿ, ನವೀನ್ ಕುಬಲ, ರಕ್ಷಿತ್, ವಿಶ್ವನಾಥ, ಸತೀಶ, ನಾರಾಯಾಣ ಮೊದಲಾದವರು ಉಪಸ್ಥಿತರಿದ್ದರು.

ಹಿರೇಬಂಡಾಡಿ ಗ್ರಾಮದಲ್ಲಿ ಆಶಾ ತಿಮ್ಮಪ್ಪ ಮತಯಾಚನೆ Read More »

error: Content is protected !!
Scroll to Top