ರಾಜಕೀಯ

ಯೋಗಿ ಆದಿತ್ಯನಾಥ್ ಆಗಮನಕ್ಕೆ ಕ್ಷಣಗಣನೆ | ಸಿದ್ಧಗೊಂಡ ರೋಡ್ ಶೋ ವಾಹನ

ಪುತ್ತೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿಗೆ ಆಗಮಿಸಲು ಕ್ಷಣಗಣನೆ ಆರಂಭಗೊಂಡಿದ್ದು, ಅವರು ರೋಡ್ ಶೋ ಮಾಡುವ ವಾಹನ ಸಿದ್ಧಗೊಂಡಿದೆ. ಈಗಾಗಲೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಾಹನವನ್ನು ತರಲಾಗಿದೆ. ಯೋಗಿ ಆದಿತ್ಯನಾಥ್ ಅವರು ಇದೀಗ ಕೊಪ್ಪ ಶೃಂಗೇರಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇನ್ನೇನು ಅಲ್ಲಿ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಆಗಮಿಸಲಿದ್ದಾರೆ. ರೋಡ್ ಶೋ ಹೊರಡುವ ಸ್ಥಳ ಸಹಿತ ಸುತ್ತಮುತ್ತಲು ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಬಂದೋ ಬಸ್ತ್ ನಲ್ಲಿ ತೊಡಗಿದ್ದಾರೆ.

ಯೋಗಿ ಆದಿತ್ಯನಾಥ್ ಆಗಮನಕ್ಕೆ ಕ್ಷಣಗಣನೆ | ಸಿದ್ಧಗೊಂಡ ರೋಡ್ ಶೋ ವಾಹನ Read More »

ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯಕೊಡಿಸುತ್ತೇನೆ : ಅಶೋಕ್ ಕುಮಾರ್ ರೈ| ಈಶ್ವರಮಂಗಲದಲ್ಲಿ ರೋಡ್ ಶೋ

ಪುತ್ತೂರು: ಬಡವರ ಸೇವೆ ಮಾಡಬೇಕು, ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸಬೇಕು, ನೊಂದವರಿಗೆ ಸಾಂತ್ವನ ಹೇಳಬೇಕು, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಮತ್ತು ಪುತ್ತೂರು ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯ ಕೊಡಿಸುವೆ ನನ್ನನ್ನು ಗೆಲ್ಲಿಸಿಕೊಡಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಮನವಿ ಮಾಡಿದರು. ಈಶ್ವರಮಂಗಲದಿಂದ ಗಾಳಿಮುಖ ತನಕ ನಡೆದ ಬೃಹತ್ ರೋಡ್‌ಶೋ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಅಶೋಕ್ ರೈಗೆ ಹಣ ಮಾಡಬೇಕೆಂಬ ಆಸೆಯೇ ಇಲ್ಲ, ನನಗೆ ದೇವರು ಕೊಟ್ಟಿದ್ದಾನೆ,

ಕ್ಷೇತ್ರದ ಕಟ್ಟಕಡೇಯ ವ್ಯಕ್ತಿಗೂ ನ್ಯಾಯಕೊಡಿಸುತ್ತೇನೆ : ಅಶೋಕ್ ಕುಮಾರ್ ರೈ| ಈಶ್ವರಮಂಗಲದಲ್ಲಿ ರೋಡ್ ಶೋ Read More »

ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಗಾಂವ್ಕರ್ ಪುತ್ತೂರಿಗೆ ಭೇಟಿ

ಪುತ್ತೂರು: ಗೋವಾ ಆಮ್ ಆದ್ಮಿ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಕರ್ನಾಟಕದ ವಿಧಾನ ಸಭಾ ಚುನಾವಣಾ ಆಮ್ ಆದ್ಮಿ ಪಕ್ಷದ ವೀಕ್ಷಕ ಉಪೇಂದ್ರ ಗಾಂವ್ಕರ್ ಪುತ್ತೂರಿಗೆ ಭೇಟಿ ನೀಡಿದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ  ಡಾ. ಬಿ.ಕೆ. ವಿಷುಕುಮಾರ್ ಗೌಡ ಮತ್ತು ಪಕ್ಷದ ಮುಖಂಡರ ಜೊತೆ ಚುನಾವಣಾ ಪ್ರಚಾರ ಮತ್ತು ಮತಗಳಿಸುವ ಕಾರ್ಯ ತಂತ್ರಗಳ  ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.. ಈ  ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪುರುಶೋತ್ತಮ ಗೌಡ ಕೋಲ್ಪೆ, ಜನಾರ್ದನ ಬಂಗೇರ, ಮಹಮ್ಮದ್ ಆಲಿ ಉಪಸ್ಥಿತರಿದ್ದರು.

ಆಮ್ ಆದ್ಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಗಾಂವ್ಕರ್ ಪುತ್ತೂರಿಗೆ ಭೇಟಿ Read More »

ಕೇವಲ  40% ಕಮಿಷನ್ ಗಾಗಿ ರಸ್ತೆಗಳನ್ನು ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ | ದಿವ್ಯಪ್ರಭಾ ಗೌಡ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡ ಬನ್ನೂರು, ಕೇಪುಲು, ತಾರಿ ಗುಡ್ಡೆ ಹಾಗೂ ಕೃಷ್ಣಾನಗರ ವಾರ್ಡ್ ಗಳಲ್ಲಿ ಇಂದು ಸಾರ್ವಜನಿಕ ಭಾಷಣ ನಡೆಸಿ ಮತ ಯಾಚಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ದಿವ್ಯ ಪ್ರಭಾ, ಪುತ್ತೂರು ಕ್ಷೇತ್ರದಲ್ಲಿ ಈಗ ಬಿಜೆಪಿ vs ಜೆಡಿಎಸ್ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಯಾಕೆಂದರೆ ಕಾಂಗ್ರೆಸ್ನಲ್ಲಿ ಇರುವ ಅಭ್ಯರ್ಥಿ ಬಿಜೆಪಿಯಿಂದ ಬಂದವರು ಹಾಗೇಯೇ ಪಕ್ಷೇತರ ಅಭ್ಯರ್ಥಿ ಕೂಡ ಬಿಜೆಪಿಯವರು ಎಂದು ಲೇವಡಿ ಮಾಡಿದರು. ನಗರದ ವಾರ್ಡ್ ಗಳಿಗೆ ಶಾಸಕರು ಕೋಟಿ ಕೋಟಿ

ಕೇವಲ  40% ಕಮಿಷನ್ ಗಾಗಿ ರಸ್ತೆಗಳನ್ನು ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ | ದಿವ್ಯಪ್ರಭಾ ಗೌಡ Read More »

ಬಿಜೆಪಿ ಅಭ್ಯರ್ಥಿ ಪರ ಎರಡನೇ ಸುತ್ತಿನ  ಮತ ಯಾಚನೆ | ಮನೆ ಮನೆ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಎರಡನೇ  ಸುತ್ತಿನ ಮತಪ್ರಚಾರ ಕಾರ್ಯ ಶುಕ್ರವಾರ ಬಿರುಸಿನಿಂದ ಆರಂಭಗೊಂಡಿದೆ. ಶುಕ್ರವಾರ ಏಕಕಾಲದಲ್ಲಿ 220 ಬೂತ್‍ಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚನೆ ಕಾರ್ಯ ನಡೆಸಲಾಯಿತು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಇರ್ದೆ ಗ್ರಾಮದ ಗೋಳಿ ಪದವಿನಲ್ಲಿ ಮನೆ ಮನೆ ಭೇಟಿ ನೀಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿ ಪರ ಎರಡನೇ ಸುತ್ತಿನ  ಮತ ಯಾಚನೆ | ಮನೆ ಮನೆ ಭೇಟಿ Read More »

ಪಕ್ಷೇತರ ಅಭ್ಯರ್ಥಿ ತಾರಾ ಪ್ರಚಾರಕರನ್ನು ಬಳಸಿ ಜಾಹೀರಾತು ನೀಡಿಕೆ : ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ದೂರು

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರು ಬಿಜೆಪಿ ತಾರಾ ಪ್ರಚಾರಕರನ್ನು  ಬಳಸಿಕೊಂಡು ಕಾನೂನು ಬಾಹಿರ ಪ್ರಚಾರ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದು, ಈ ಕುರಿತು ಬಿಜೆಪಿ ಅಭ್ಯರ್ಥಿ ಏಜೆಂಟ್ ರಾಜೇಶ್ ಬನ್ನೂರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಈಗಾಗಲೇ ತಾರಾ ಪ್ರಚಾರಕರನ್ನು ಬಳಸಿಕೊಳ್ಳುತ್ತಿರುವ ಕುರಿತು  ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಮೇ.6 ರಂದು ಯೋಗಿ ಆದಿತ್ಯನಾಥ ಪುತ್ತೂರಿಗೆ ಆಗಮಿಸಲಿದ್ದು, ಅವರಿಗೆ ಸ್ವಾಗತಿಸುವ ಜಾಹೀರಾತು ನೀಡಿರುವುದು ನಮ್ಮ ಗಮನಕ್ಕೆ ಬಂದಿದ್ದು ಚುನಾವಣಾ

ಪಕ್ಷೇತರ ಅಭ್ಯರ್ಥಿ ತಾರಾ ಪ್ರಚಾರಕರನ್ನು ಬಳಸಿ ಜಾಹೀರಾತು ನೀಡಿಕೆ : ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ದೂರು Read More »

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕುಂಬ್ರ ದಲಿತ ಕಾಲನಿಗೆ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಒಳಮೊಗ್ರು ಗ್ರಾಮದ ಕುಂಬ್ರ ಶಾಲಾ ಬಳಿಯ ದಲಿತ ಕಾಲನಿಗೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ವಕ್ತಾರ ಅಮಲ ರಾಮಚಂದ್ರ, ಮುಖಂಡರು, ಕಾರ್ಯಕರ್ತರು, ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಕುಂಬ್ರ ದಲಿತ ಕಾಲನಿಗೆ ಭೇಟಿ Read More »

ಶಾಂತಿಗೋಡಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಯಾಚನೆ

ಪುತ್ತೂರು: ಶಾಂತಿಗೋಡು  ಬೂತ್ ವತಿಯಿಂದ  ಬಿಜೆಪಿ  ಅಭ್ಯರ್ಥಿ ಆಶಾ ತಿಮಪ್ಪರ ಪರ  ಮತ ಯಾಚನೆ ನಡೆಯಿತು. ಶಾಂತಿಗೋಡು ಗ್ರಾಮದ ಮನೆ ಮನೆ ಭೇಟಿ ಮಾಡಿ ಮತ ಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಕ್ತಿಕೇಂದ್ರ ಅಧ್ಯಕ್ಷ ಶ್ಯಾಮ್ ಭಟ್, ಬೂತ್ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಉಪಾಧ್ಯಕ್ಷ ದೇವರಾಜ್ ಕಲ್ಕಾರ್, ಯುವ ಮೋರ್ಚಾ ಕಾರ್ಯದರ್ಶಿ ವಿನೋದ್ ಕರ್ಪೂತಮೂಲೆ, ದೇವಪ್ಪ ಓಲಾಡಿ, ಹೊನ್ನಪ್ಪ ಕೈಂಡಾಡಿ, ಶಿವಪ್ರಸಾದ್ ಕೈಂದಾಡಿ, ಸತೀಶ್ ಪರಕಮೆ,  ಪ್ರಸಾದ್ ಕಕ್ವೆ,

ಶಾಂತಿಗೋಡಿನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಯಾಚನೆ Read More »

ಮೇ 10ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹೆಚ್ಚಿನ ಬಸ್ ಗಳ ಬಳಕೆ | ಮೇ 9 ಹಾಗೂ 10 ರಂದು ಬಸ್ ಗಳ ಓಡಾಟದಲ್ಲಿ ವ್ಯತ್ಯಯ

ಪುತ್ತೂರು : ಮೇ 10 ರಂದು ನಡೆಯುವ ಚುನಾವಣೆ ಹಿನ್ನೆಯಲ್ಲಿ ಪುತ್ತೂರು ಕೆಎಸ್ ಆರ್ ಟಿಸಿ ನಿಗಮದ ಬಸ್ ಗಳನ್ನು ಪುತ್ತೂರು, ಸುಳ್ಯ, ಮಡಿಕೇರಿ, ಬಂಟ್ವಾಳ, ಬೆಳ್ತಂಗಡಿ ಹಾಗೂ ವಿರಾಜಪೇಟೆ ವಿಧಾಸಭಾ ಕ್ಷೇತ್ರದ ಚುನಾವಣೆ ಕಾರ್ಯಕ್ಕಾಗಿ ಬಳಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮೇ 9 ಹಾಗೂ 10 ರಂದು ಬಸ್ ಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಎಸ್ ಆರ್ ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಚುನಾವಣೆ ಸಂದರ್ಭ ಪೊಲೀಸ್್ ಬಂದೋಬಸ್ತ್ ಗಾಡಿ ಬಸ್ ಗಳನ್ನು ಬಳಸಲಾಗುತ್ತಿದ್ದು,

ಮೇ 10ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹೆಚ್ಚಿನ ಬಸ್ ಗಳ ಬಳಕೆ | ಮೇ 9 ಹಾಗೂ 10 ರಂದು ಬಸ್ ಗಳ ಓಡಾಟದಲ್ಲಿ ವ್ಯತ್ಯಯ Read More »

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಈಶ್ವರಮಂಗಲದ ಬಸಿರಡ್ಕ, ಕೊರಗಜ್ಜ ಕಟ್ಟೆಗೆ ಭೇಟಿ | ಕಾರ್ಯಕರ್ತರ ಜತೆ ಸಂವಾದ

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗುರುವಾರ ಈಶ್ವರಮಂಗಲದ ಬಸಿರಡ್ಕ ಮತ್ತು ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದರು. ಬಳಿಕ ಕಾರ್ಯಕರ್ತರ ಜೊತೆ ಮಾತನಾಡಿ, ಬಿಜೆಪಿ ಸರಕಾರದ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಇದರೊಂದಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯನ್ನು ಜನರಿಗೆ ಮನದಟ್ಟು ಮಾಡಬೇಕು ಎಂದರು. ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ, ಅಧಿಕಾರಕ್ಕೆ ಬಂದರೆ ಬಜರಂಗ ದಳವನ್ನು ನಿಷೇಧಿಸಲಿದೆ. ಆದ್ದರಿಂದ ಇದಕ್ಕೆ ಆಸ್ಪದ ನೀಡಬಾರದು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಈಶ್ವರಮಂಗಲದ ಬಸಿರಡ್ಕ, ಕೊರಗಜ್ಜ ಕಟ್ಟೆಗೆ ಭೇಟಿ | ಕಾರ್ಯಕರ್ತರ ಜತೆ ಸಂವಾದ Read More »

error: Content is protected !!
Scroll to Top