ರಾಜಕೀಯ

ಸುಳ್ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಿರೇಬಂಡಾಡಿ ಕ್ಷೇತ್ರಕ್ಕೆ ಭೇಟಿ

ಪುತ್ತೂರು: ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ  ಅವರು ಬೂತ್ ಪ್ರವಾಸದ ಮಧ್ಯೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಕ್ಷೇತ್ರದ ಹಿರೇಬಂಡಾಡಿ ಬೂತಿಗೆ ಭೇಟಿ ನೀಡಿದರು. ಭೇಟಿ ನೀಡಿದ ಅವರು ಅಲ್ಲಿನ ಕಾರ್ಯಕರ್ತರ ಜತೆ ಫೋಟೊ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಳ್ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಿರೇಬಂಡಾಡಿ ಕ್ಷೇತ್ರಕ್ಕೆ ಭೇಟಿ Read More »

ಒಬ್ಬರ ಮತ ಇನ್ನೊಬ್ಬರಿಂದ ಚಲಾವಣೆ: ಮಾತಿನ ಚಕಮಕಿ | ಮತದಾನ ಅವಕಾಶ ಕಳೆದುಕೊಂಡ ಮತದಾರ

ಕಡಬ: ತಾಲೂಕಿನ‌ 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಶಾಲಾ 101ನೇ ಮತಗಟ್ಟೆಯಲ್ಲಿ ಸಾದಿಕ್ ಎಂಬವರು ಸಾದಿಕ್ ಕೆ ಎಂಬವರ ಮತವನ್ನು ಚಲಾಯಿಸಿದ್ದು, ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಇಬ್ಬರ ತಂದೆಯ ಹೆಸರು ಅಬೂಬಕ್ಕರ್ ಆಗಿದ್ದುದೇ ಗೊಂದಲಕ್ಕೆ ಕಾರಣ. ಸ್ವಲ್ಪ ಹೊತ್ತು ಅಧಿಕಾರಿಗಳು ಗಲಬಿಲಿಗೊಂಡರು. ಮತಗಟ್ಟೆಯ ಅಧಿಕಾರಿಗಳ ಎಡವಟ್ಟಿನಿಂದ ಈ ಪ್ರಮಾದ ನಡೆದಿದ್ದು. ಸಾಧಿಕ್ ಕೆ ಎಂಬವರಿಗೆ ಮತದಾನದ ಅವಕಾಶ ಇಲ್ಲದಂತಾಯಿತು. ಸ್ಥಳದಲ್ಲಿ ಮಾತಿನ ಚಕಮಕಿ, ವಾಗ್ಯುದ್ದ ನಡೆಯಿತು. ಎಷ್ಟೇ ಚರ್ಚೆ ನಡೆದರು ಸಾದಿಕ್ ಕೆ ಅವರಿಗೆ

ಒಬ್ಬರ ಮತ ಇನ್ನೊಬ್ಬರಿಂದ ಚಲಾವಣೆ: ಮಾತಿನ ಚಕಮಕಿ | ಮತದಾನ ಅವಕಾಶ ಕಳೆದುಕೊಂಡ ಮತದಾರ Read More »

ಕೈಕೊಟ್ಟ ಮತಯಂತ್ರದಿಂದ ಮತದಾನ ವಿಳಂಬ

ಕಡಬ: ಕಡಬ ತಾಲೂಕಿನಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಅಲ್ಲಲ್ಲಿ ಮತಯಂತ್ರ ಕೆಟ್ಟು ಹೋಗಿ  ಮತದಾನ ಸ್ವಲ್ಪ ಮಟ್ಟಿನ‌ ವಿಳಂಬವಾಗಿತ್ತು. ಕೊಯಿಲ ಗ್ರಾಮದ ಸಬಳೂರು ಸರಕಾರಿ ಶಾಲೆಯಲ್ಲಿನ ಮತಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟು ಸುಮಾರು ಅರ್ಧ ಗಂಟೆ ಹೊತ್ತು ಮತದಾರರು ಹಾಗೂ ಮತಗಟ್ಟೆಯ ಅಧಿಕಾರಿಗಳು ಚಡಪಡಿಸುವಂತಾಗಿತ್ತು. ಮತದಾನ ಮಾಡಲು ಬಂದವರ ಸರತಿ ಸಾಲು ಹನುಮಂತನ ಬಾಲದಂತೆ ಉದ್ದವಾಗುತ್ತಾ ಹೊಯಿತು. ಮತಯಂತ್ರ ದುರಸ್ತಿಯಾದ ಬಳಿಕ  ಮತದಾನ ಸಲೀಸಾಗಿ ನಡೆಯಿತು. ಇದೇ ಪರಿಸ್ಥಿತಿ ತಾಲೂಕಿನ ಬಲ್ಯ ಗ್ರಾಮದ ಬಲ್ಯ ಮತಗಟ್ಟೆ

ಕೈಕೊಟ್ಟ ಮತಯಂತ್ರದಿಂದ ಮತದಾನ ವಿಳಂಬ Read More »

ಆಟೋದಲ್ಲಿ ಬಂದು ಮತದಾನ ಮಾಡಿದ ಒಡಿಯೂರು ಶ್ರೀ | ಸರಳತೆಯ ಸಂದೇಶ ಸಾರಿದ ಸ್ವಾಮೀಜಿ

ಪುತ್ತೂರು: ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬುಧವಾರ ಆಟೊ ರಿಕ್ಷಾದಲ್ಲಿ ಬಂದು ಮತದಾನ ಮಾಡಿದರು. ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬವೆಂದೇ ಹೇಳಲಾಗುವ ಮತದಾನಕ್ಕೆ ರಿಕ್ಷಾದಲ್ಲಿ ಬಂದು, ಸರಳತೆಯ ಟಚ್ ನೀಡಿದರು. ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಆಟೋದಲ್ಲಿ ಬಂದು ಮತದಾನ ಮಾಡಿದ ಒಡಿಯೂರು ಶ್ರೀ | ಸರಳತೆಯ ಸಂದೇಶ ಸಾರಿದ ಸ್ವಾಮೀಜಿ Read More »

ಬೂತ್ ಬೂತ್ ಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದ ಆಶಾ ತಿಮ್ಮಪ್ಪ

ಪುತ್ತೂರು: ಒಂದೆಡೆ ಚುನಾವಣೆ ನಡೆಯುತ್ತಿದ್ದಂತೆ ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬೂತ್ ಬೂತ್ ಗಳಿಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದರು. ಮತಗಟ್ಟೆಯ ಹೊರಗಡೆ ಹಾಕಲಾಗಿರುವ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರು. ಇದಕ್ಕೆ ಪೂರಕವಾಗಿ ಆಶಾ ತಿಮ್ಪಪ್ಪ ಅವರು ಬೂತ್ ಬೂತ್ ಗಳಿಗೆ ತೆರಳಿ, ಕಾರ್ಯಕರ್ತ ಕೆಲಸವನ್ನು ಪ್ರಶಂಸಿಸಿದರು. ಆಶಾ ತಿಮ್ಮಪ್ಪ  ಅವರ ಜೊತೆಗೆ ಕಿಶೋರ್ ಕುಮಾರ್ ಬೊಟ್ಯಾಡಿ, ಬೂತ್ ಪ್ರಮುಖರು ಉಪಸ್ಥಿತರಿದ್ದರು.

ಬೂತ್ ಬೂತ್ ಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದ ಆಶಾ ತಿಮ್ಮಪ್ಪ Read More »

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಕೋಡಿಂಬಾಡಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೋಡಿಂಬಾಡಿ ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಅಶೋಕ್ ಕುಮಾರ್ ರೈ Read More »

ಮತದಾನ ಮಾಡಿದ ಅಭ್ಯರ್ಥಿಗಳು

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಬುಧವಾರ ಬೆಳಿಗ್ಗೆಯೇ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಕುಂತೂರು ಮತಗಟ್ಟೆಯಲ್ಲಿ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಮುಂಡೂರು ಮತಗಟ್ಟೆಯಲ್ಲಿ, ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಅವರು ಗುತ್ತಿಗಾರಿನ ಮೆಟ್ಟಿನಡ್ಕದಲ್ಲಿ ತಮ್ಮ ಮತ ಚಲಾಯಿಸಿದರು. ಬಳಿಕ ಮತಗಟ್ಟೆಯ ಹೊರಗಡೆ ತಮ್ಮ ಬೂತ್ ಪ್ರಮುಖರು, ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ, ಫೊಟೊ ಕ್ಲಿಕ್ಕಿಸಿಕೊಂಡರು.

ಮತದಾನ ಮಾಡಿದ ಅಭ್ಯರ್ಥಿಗಳು Read More »

ಹಿರೇಬಂಡಾಡಿಯಲ್ಲಿ ಮತ ಚಲಾಯಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು ಹಿರೇಬಂಡಾಡಿ ಗ್ರಾಮ ಪಂಚಾಯತಿ ಸಮುದಾಯ ಭವನದಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ ಮತದಾನ ಕೇಂದ್ರಕ್ಕೆ ಆಗಮಿಸಿದ ಅವರು, ಮತ ಚಲಾಯಿಸಿ, ಬೂತ್ ಪ್ರಮುಖರ ಜೊತೆ ಮಾತುಕತೆ ನಡೆಸಿದರು. ಇದೇ ಸಂದರ್ಭ ಮತದಾರರ ಜೊತೆಯೂ ಮಾತನಾಡಿ, ಹೆಚ್ಚು ಮತದಾನ ಆಗಲು ಸಹಕಾರ ಕೇಳಿದರು.

ಹಿರೇಬಂಡಾಡಿಯಲ್ಲಿ ಮತ ಚಲಾಯಿಸಿದ ಶಾಸಕ ಸಂಜೀವ ಮಠಂದೂರು Read More »

ಮತದಾನ ಕೇಂದ್ರದ ಮುಂದೆ ಬೆಳಗ್ಗಿನಿಂದಲೇ ಮಾರುದ್ದದ ಸರತಿ ಸಾಲು

ಪುತ್ತೂರು: ಬುಧವಾರ ಬೆಳಗ್ಗೆ ಶುರುವಾದ ಮತದಾನಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮತದಾನ ಕೇಂದ್ರದ ಮುಂದೆ ಮಾರುದ್ದದ ಸರತಿ ಸಾಲು ಕಂಡುಬಂದಿದೆ. ವಾರದ ನಡುವಿನ ದಿನದಲ್ಲಿ ಚುನಾವಣೆ ಬಂದಿರುವ ಕಾರಣದಿಂದ ಎಲ್ಲರೂ ಬೆಳಗ್ಗೆಯೆ ಮತದಾನ ಮಾಡಲು ಬಂದಿದ್ದರು. ಪ್ರತಿ ಮತದಾನ ಕೇಂದ್ರದಲ್ಲು ಸರತಿ ಸಾಲು ಮಾರುದ್ದ ಬೆಳೆದಿತ್ತು. ಬುಧವಾರ ಹೆಚ್ಚಿನ ಕಚೇರಿ, ಅಂಗಡಿ- ಮಳಿಗೆಗಳಿಗೆ ರಜೆ ಘೋಷಿಸಲಾಗಿದ್ದರೂ, ಗ್ರಾಮೀಣ ಭಾಗಗಳಿಗೆ ಇದು ಅನ್ವಯ ಆಗುವುದಿಲ್ಲ. ಆದ್ದರಿಂದ ಬೆಳಿಗ್ಗೆಯೇ ಮತದಾನ ಮಾಡಿ ತೆರಳುವ ಧಾವಂತ ಎಲ್ಲರಲ್ಲೂ ಕಾಣುತ್ತಿತ್ತು. ಮತದಾನ

ಮತದಾನ ಕೇಂದ್ರದ ಮುಂದೆ ಬೆಳಗ್ಗಿನಿಂದಲೇ ಮಾರುದ್ದದ ಸರತಿ ಸಾಲು Read More »

ಮತದಾರನ ಮನದಾಳ ಇಂದೇ ನಿರ್ಧಾರ

ಪುತ್ತೂರು: ಚುನಾವಣೆಯ ಪೂರ್ವಭಾವಿಯಾಗಿ ಟೆಸ್ಟಿಂಗ್ ಓಟ್ ಪ್ರಕ್ರಿಯೆ ನಡೆದಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನದ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಮತದಾರ ತನ್ನ ಮನದಾಳದ ನಿರ್ಧಾರವನ್ನು ಪ್ರಕಟಿಸಲಿದ್ದಾನೆ. ಪುತ್ತೂರು ವಿಧಾನಸಭಾ ಕ್ಷೇತ್ರದ 220 ಬೂತ್ ಗಳಲ್ಲಿ ಚುನಾವಣೆ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಮಂಗಳವಾರ ಸಂಜೆಯೇ ಬಂದು ಸನ್ನದ್ಧರಾಗಿದ್ದಾರೆ. ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆಶಾ ತಿಮ್ಮಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ, ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯಪ್ರಭಾ ಚಿಲ್ತಡ್ಕ, ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ, ಎಸ್.ಡಿ.ಪಿ.ಐ. ಅಭ್ಯರ್ಥಿಯಾಗಿ ಶಾಫಿ

ಮತದಾರನ ಮನದಾಳ ಇಂದೇ ನಿರ್ಧಾರ Read More »

error: Content is protected !!
Scroll to Top