ರಾಜಕೀಯ

ಅಶೋಕ್ ರೈ ಗೆಲುವು ಕಬಕ, ಕುಂಬ್ರದಲ್ಲಿ ಸಂಭ್ರಮಾಚರಣೆ

ಪುತ್ತೂರು: ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಬಕದಲ್ಲಿ ಹಾಗೂ ಕುಂಬ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚಿರಿಸಿದರು. ಕುಂಬ್ರದಲ್ಲಿ ಕಾರ್ಯಕರ್ತರು ಕುಂಬ್ರ ಕಟ್ಟೆಯ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಶೋಕ್ ರೈ ಗೆಲುವು ಕಬಕ, ಕುಂಬ್ರದಲ್ಲಿ ಸಂಭ್ರಮಾಚರಣೆ Read More »

ಕೈಗೆ ಗೆಲುವು ಕೊಟ್ಟ ರೈ ! | ಕೊನೆ ಸುತ್ತಿನಲ್ಲಿ 3351 ಮತಗಳ ಅಂತರದ ಮುನ್ನಡೆಯಲ್ಲಿ ಕಾಂಗ್ರೆಸ್

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಗೆಲುವು ಪಡೆದುಕೊಂಡಿದ್ದಾರೆ. ಬಿಜೆಪಿಯ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಭಾರೀ ಸ್ಪರ್ಧೆಯ ನಡುವೆಯೇ ಅಶೋಕ್ ಕುಮಾರ್ ರೈ ಅವರು ಗೆಲುವು ದಾಖಲಿಸಿದ್ದಾರೆ. 64687 ಮತಗಳಿಂದ ಜಯ ಗಳಿಸಿದ್ದಾರೆ. 3351 ಮತಗಳ ಅಂತರದಿಂದ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅರುಣ್ ಕುಮಾರ್ ಪುತ್ತಿಲ ಅವರು 61336 ಮತ ಪಡೆದುಕೊಂಡಿದ್ದಾರೆ. ಆಶಾ ತಿಮ್ಮಪ್ಪ ಅವರು 36526 ಮತ ಪಡೆದಿದ್ದಾರೆ.

ಕೈಗೆ ಗೆಲುವು ಕೊಟ್ಟ ರೈ ! | ಕೊನೆ ಸುತ್ತಿನಲ್ಲಿ 3351 ಮತಗಳ ಅಂತರದ ಮುನ್ನಡೆಯಲ್ಲಿ ಕಾಂಗ್ರೆಸ್ Read More »

ರೋಚಕತೆ ಪಡೆದ ಪುತ್ತೂರು ರಾಜಕೀಯ ಆಖಾಡ | 2673 ಮತಗಳ ಮುನ್ನಡೆಯಲ್ಲಿ ಅಶೋಕ್ ರೈ

ಪುತ್ತೂರು: ಅಶೋಕ್ ರೈ ಗೆಲುವಿನ ಸನಿಹಕ್ಕೆ ಬರುವ ಲಕ್ಷಣಗಳು ಗೋಚರವಾಗುತ್ತಿವೆ. ಒಟ್ಟು 61797 ಮತಗಳನ್ನು ಬಾಚಿಕೊಂಡಿದ್ದು, 2673 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಎರಡನೇ ಸ್ಥಾನಕ್ಕೆ ಜಾರಿದ್ದು 59124 ಮತ ಪಡೆದುಕೊಂಡಿದ್ದಾರೆ. ಆಶಾ ತಿಮ್ಮಪ್ಪ ಅವರು 34871 ಮತ ಪಡೆದುಕೊಂಡಿದ್ದಾರೆ. ಒಟ್ಟು 161554 ಮತಗಳ ಎಣಿಕೆ ಕಾರ್ಯ ನಡೆದಿದೆ.

ರೋಚಕತೆ ಪಡೆದ ಪುತ್ತೂರು ರಾಜಕೀಯ ಆಖಾಡ | 2673 ಮತಗಳ ಮುನ್ನಡೆಯಲ್ಲಿ ಅಶೋಕ್ ರೈ Read More »

535 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ

ಪುತ್ತೂರು: ಅಶೋಕ್ ಕುಮಾರ್ ರೈ ಅವರು ಮತ್ತೆ ಮುನ್ನಡೆ ಕಾಯ್ದುಕೊಂಡಿದ್ದಾರೆ. 56272 ಮತ ಪಡೆದಿರುವ ಅಶೋಕ್ ಕುಮಾರ್ ರೈ ಅವರು 535 ಮತಗಳಷ್ಟು ಮುನ್ನಡೆಯಲ್ಲಿದ್ದಾರೆ. ಅರುಣ್ ಕುಮಾರ್ ಪುತ್ತಿಲ 55737 ಮತ ಪಡೆದುಕೊಂಡಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ 33005 ಮತ ಪಡೆದಿದ್ದಾರೆ. 150432 ಮತಗಳಷ್ಟು ಎಣಿಕೆ ಕಾರ್ಯ ನಡೆದಿದೆ. ಸುಮಾರು 20 ಸಾವಿರದಷ್ಟು ಮತಗಳ ಎಣಿಕೆ ಕಾರ್ಯ ನಡೆಯಬೇಕಿದೆ.

535 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆ Read More »

ಆಖಾಡದಲ್ಲಿ ದೋಸ್ತಿಗಳ ಜುಗಲ್ ಬಂಧಿ | ಗೆಲುವಿಗಾಗಿ ಪುತ್ತಿಲ ಹಾಗೂ ರೈ ಕಾದಾಟ | 256 ಮತಗಳ ಮುನ್ನಡೆಯಲ್ಲಿ ಕಾಂಗ್ರೆಸ್

ಪುತ್ತೂರು: ಅಶೋಕ್ ಕುಮಾರ್ ರೈ ಅವರು 52255 ಮತಗಳನ್ನು ಪಡೆದುಕೊಂಡು, 256 ಮತಗಳಿಂದ ಮುನ್ನಡೆ ಸಾಧಿಸಿಕೊಂಡಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು 51999 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಆಶಾ ತಿಮ್ಮಪ್ಪ ಅವರು 31304 ಮತಗಳನ್ನು ಪಡೆದುಕೊಂಡಿದ್ದು, ಈಗಾಗಲೇ 140651 ಮತಗಳ ಎಣಿಕೆ ಕಾರ್ಯ ಮುಕ್ತಾಯ ಕಂಡಿದೆ.

ಆಖಾಡದಲ್ಲಿ ದೋಸ್ತಿಗಳ ಜುಗಲ್ ಬಂಧಿ | ಗೆಲುವಿಗಾಗಿ ಪುತ್ತಿಲ ಹಾಗೂ ರೈ ಕಾದಾಟ | 256 ಮತಗಳ ಮುನ್ನಡೆಯಲ್ಲಿ ಕಾಂಗ್ರೆಸ್ Read More »

ಮತ್ತೆ ಅಶೋಕ್ ಕುಮಾರ್ ರೈ ಮುನ್ನಡೆ | 237 ಮತಗಳ ಅಂತರದಲ್ಲಿ ಪುತ್ತೂರು ಕಾಂಗ್ರೆಸ್

ಪುತ್ತೂರು: ಅಶೋಕ್ ಕುಮಾರ್ ರೈ ಅವರು 48257 ಮತಗಳನ್ನು ಪಡೆದುಕೊಂಡಿದ್ದು, 237 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಎರಡನೇ ಸ್ಥಾನಕ್ಕೆ ಇಳಿದಿದ್ದು, 48020 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ 29232 ಮತ, ಜೆಡಿಎಸ್ ನ ದಿವ್ಯಪ್ರಭಾ 486, SDPIನ ಶಾಫಿ ಬೆಳ್ಳಾರೆ 2290, ವಿಶು ಕುಮಾರ್ 475, ಸುಂದರ ಕೊಯಿಲ 441, ನೋಟಾ 632 ಮತ ಚಲಾವಣೆಯಾಗಿದೆ. ಒಟ್ಟು 130218 ಮತಗಳ ಎಣಿಕೆ ಕಾರ್ಯ ಈಗಾಗಲೇ

ಮತ್ತೆ ಅಶೋಕ್ ಕುಮಾರ್ ರೈ ಮುನ್ನಡೆ | 237 ಮತಗಳ ಅಂತರದಲ್ಲಿ ಪುತ್ತೂರು ಕಾಂಗ್ರೆಸ್ Read More »

ಪುತ್ತಿಲಗೆ ಕೊಂಚ ಹಿನ್ನಡೆ | 119 ಮತಗಳ ಮುನ್ನಡೆಯಲ್ಲಿ ಪುತ್ತಿಲ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ಲೀಡ್ ಕೊಂಚ ಕಡಿಮೆಯಾಗಿದ್ದು, 119 ಮತಗಳ ಅಂತರದಿಂದ ಮುನ್ನಡೆಯಲಿದ್ದಾರೆ. ಕಾಂಗ್ರೆಸಿನ ಅಶೋಕ್ ಕುಮಾರ್ ರೈ ಅವರು 43777 ಮತಗಳನ್ನು ಪಡೆದುಕೊಂಡಿದ್ದು, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು 43896 ಮತ ಪಡೆದುಕೊಂಡಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಅವರು 26989 ಮತ ಪಡೆದುಕೊಂಡಿದ್ದು, ಒಟ್ಟು 118918 ಮತಗಳ ಎಣಿಕೆ ನಡೆದಿದೆ.

ಪುತ್ತಿಲಗೆ ಕೊಂಚ ಹಿನ್ನಡೆ | 119 ಮತಗಳ ಮುನ್ನಡೆಯಲ್ಲಿ ಪುತ್ತಿಲ Read More »

ಬೆಳ್ತಂಗಡಿ: ಗೆಲುವಿನ ಹಾದಿಯಲ್ಲಿ ಪೂಂಜಾ ಓಟ | 13100 ಮತಗಳ ಮುನ್ನಡೆ

ಪುತ್ತೂರು: ಬೆಳ್ತಂಗಡಿಯ ಅಭಿವೃದ್ಧಿಯ ಹರಿಕಾರ ಎಂದೇ ಕರೆಸಿಕೊಂಡಿರುವ ಹಾಲಿ ಶಾಸಕ ಹರೀಶ್ ಪೂಂಜಾ ಅವರು 74896 ಮತಗಳನ್ನು ಪಡೆದುಕೊಂಡು, 13100 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸಿನ ರಕ್ಷಿತ್ ಶಿವರಾಂ 61734 ಮತ ಪಡೆದುಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಜೆಡಿಎಸ್‍ ನ ಅಶ್ರಫ್ ಆಲಿಕುಂಞಿ 406, ಆಮ್ ಆದ್ಮಿಯ ಜನಾರ್ದನ ಬಂಗೇರ 207, ಅಕ್ಬರ್ ಬೆಳ್ತಂಗಡಿ 1808, ಆದಿತ್ಯ ನಾರಾಯಣ ಕೊಲ್ಲಾಜೆ 296 ಮತ, ಶೈಲೇಶ್ 226, ಮಹೇಶ್ 163 ಹಾಗೂ ನೋಟಾ ಪರವಾಗಿ 685 ಮತ

ಬೆಳ್ತಂಗಡಿ: ಗೆಲುವಿನ ಹಾದಿಯಲ್ಲಿ ಪೂಂಜಾ ಓಟ | 13100 ಮತಗಳ ಮುನ್ನಡೆ Read More »

10ನೇ ಸುತ್ತಿನಲ್ಲಿ ಸಾವಿರಕ್ಕೂ ಅಧಿಕ ಮತಗಳಿಂದ ಪುತ್ತಿಲ ಮುನ್ನಡೆ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರು 39969 ಮತಗಳನ್ನು ಪಡೆದುಕೊಂಡು, 1125 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸಿನ ಅಶೋಕ್ ಕುಮಾರ್ ರೈ ಅವರು 38844 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, 24679 ಮತ ಪಡೆದುಕೊಂಡಿದ್ದಾರೆ.

10ನೇ ಸುತ್ತಿನಲ್ಲಿ ಸಾವಿರಕ್ಕೂ ಅಧಿಕ ಮತಗಳಿಂದ ಪುತ್ತಿಲ ಮುನ್ನಡೆ Read More »

9ನೇ ಸುತ್ತಿನಲ್ಲಿ ಪುತ್ತಿಲ ಮುನ್ನಡೆ

ಪುತ್ತೂರು: ಅರುಣ್ ಕುಮಾರ್ ಪುತ್ತಿಲ 35780 ಮತ ಪಡೆದುಕೊಂಡು ಮುನ್ನಡೆ ಸಾಧಿಸಿದ್ದಾರೆ. ಅಶೋಕ್ ಕುಮಾರ್ ರೈ ಅವರು 35131 ಮತ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು 22349 ಮತ ಪಡೆದುಕೊಂಡಿದ್ದಾರೆ.

9ನೇ ಸುತ್ತಿನಲ್ಲಿ ಪುತ್ತಿಲ ಮುನ್ನಡೆ Read More »

error: Content is protected !!
Scroll to Top