ಬಸ್ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಸುಮ್ಮನಿರಲ್ಲ| ಕೆಎಸ್ಆರ್ಟಿಸಿ ಅಧಿಕಾರಿಗೆ ಶಾಸಕ ಅಶೋಕ್ ರೈ ಖಡಕ್ ವಾರ್ನಿಂಗ್
ಪುತ್ತೂರು: ರೂಟ್ ಗಳಿಗೆ ಸರಿಯಾಗಿ ಬಸ್ ಬರುತ್ತಿಲ್ಲ, ಒಂದು ದಿನ ಬಂದರೆ ಮಾರನೇ ದಿನ ಬರುವುದಿಲ್ಲ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ಗಳ ಓಡಾಟ ಇಲ್ಲದೇ ಇರುವ ಕಾರಣ ತೊಂದರೆಯಲ್ಲಿದ್ದಾರೆ, ನಾನು ಪದೇ ಪದೇ ನಿಮಗೆ ಎಚ್ಚರಿಕೆ ಕೊಟ್ಟರೂ ಮತ್ತೆ ಅದೇ ಸಮಸ್ಯೆ ಮರುಕಳಿಸುತ್ತಿದೆ ಇದಕ್ಕೆ ಏನು ಕಾರಣ? ಬಸ್ ಇಲ್ಲವೇ? ಚಾಲಕರಿಲ್ಲವೇ? ಕಂಡಕ್ಟರ್ ಇಲ್ಲವೇ? ಅಥವಾ ನಿಮಗೆ ಖುಷಿ ಬಂದ ಹಾಗೆ ಬಸ್ ಓಡಾಟ ಮಾಡುತ್ತಿದ್ದೀರಾ ಹೀಗೇ ಕೆಎಸ್ಆರ್ಟಿಸಿ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡದ್ದು ಶಾಸಕ ಅಶೋಕ್ ರೈ.ಸೋಮವಾರ […]