ರಾಜಕೀಯ

ಸರ್ವೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಸ್ಮಾಟ್೯ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಪುತ್ತೂರು : ಸರ್ವೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಕಾರ್ಯಕ್ರಮ ಹಾಗೂ ಸ್ಮಾಟ್೯ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಮಂಗಳವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ, ಮಕ್ಕಳ‌ ಪ್ರತಿಭಾ ಪ್ರದರ್ಶನಕ್ಕೆ ಶಿಕ್ಷಕರು ಒಂದೆಡೆ ಪ್ರಯತ್ನ ಮಾಡುತ್ತಿದ್ದರೆ, ಅದಕ್ಕೆ ಪೂರಕವಾಗಿ ಮೂಲಭೂತ‌ ಸೌಕರ್ಯಗಳನ್ನು ಒದಗಿಸುವ ಮೂಲಕ‌‌ ಶಾಲೆಯ ಅಭಿವೃದ್ಧಿ  ಕಾರ್ಯ ಸರಕಾರದಿಂದ ಆಗುತ್ತಿದೆ ಎಂದರು.  ಎಸ್ ಡಿ ಎಂ ಸಿ ಅಧ್ಯಕ್ಷ ಹನೀಫ್ ರೆಂಜಾಲಾಡಿ , ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ನಾಯ್ಕ್,, […]

ಸರ್ವೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಸ್ಮಾಟ್೯ ಕ್ಲಾಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ Read More »

ಫೆ. 11ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ. 11ರಂದು ಪುತ್ತೂರಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ ನೀಡಲಿರುವ ಅಮಿತ್ ಶಾ ಅವರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆಯಲಿರುವ ಕೃಷಿ ಯಂತ್ರ ಮೇಳದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಸಂಕಲ್ಪ ಅಭಿಯಾನ ಪುತ್ತೂರು ತಾಲೂಕಿನಾದ್ಯಂತ ನಡೆಯುತ್ತಿದ್ದು, ಫೆ. 11ರಂದು ಪುತ್ತೂರಿನಲ್ಲಿ ನಡೆಯಲಿರುವ ಅಭಿಯಾನದಲ್ಲಿ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಫೆ. 11ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ Read More »

ಪುತ್ತೂರಿನಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಭೆ

ಪುತ್ತೂರು : ಜೆಡಿಎಸ್ ಪಕ್ಷ ಜಾತ್ಯಾತೀತ ನೆಲೆಯಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಪಕ್ಷವಾಗಿದ್ದು, ಮುಂದಿನ ದಿನಗಳಲ್ಲಿ ನಾಯಕರನ್ನು, ಕಾರ್ಯಕರ್ತರನ್ನು ಸೇರಿಸಿಕೊಂಡು ದ.ಕ ಜಿಲ್ಲೆಯಲ್ಲಿ ಪಕ್ಷವನ್ನು ಸಧೃಢವಾಗಿ ಸಂಘಟಿಸಲಾಗುವುದು. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಪಕ್ಷದ ವತಿಯಿಂದ ಪಕ್ಷ ಸಂಘಟನೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಎಂದು ಜೆಡಿಎಸ್ ದ.ಕ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಹೇಳಿದರು.ಅವರು ಸೋಮವಾರ ಪುತ್ತೂರು ಅಮರ್ ಕಾಂಪ್ಲೆಕ್ಸ್‌ನಲ್ಲಿ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟಿಸಿ ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ನಮ್ಮ ನಾಯಕ

ಪುತ್ತೂರಿನಲ್ಲಿ ಜೆಡಿಎಸ್ ಕಚೇರಿ ಉದ್ಘಾಟನೆ, ಕಾರ್ಯಕರ್ತರ ಸಭೆ Read More »

ವಿಜಯ ಸಂಕಲ್ಪ ಅಭಿಯಾನದ ಮೂಲಕ ಯೋಜನೆಗಳು ಪ್ರತೀ ಮನೆಗೆ ತಲುಪಬೇಕು : ಶಾಸಕ ಸಂಜೀವ ಮಠಂದೂರು

ವಿಟ್ಲ : ಕಮಲ ಕುಟುಂಬ ಮಿಲನ ಮತ್ತು ಕ್ರೀಡೋತ್ಸವ ಜ. 29ರಂದು ವಿಠಲ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಜಯ ಸಂಕಲ್ಪ ಅಭಿಯಾನದ ಮೂಲಕ ಪ್ರಧಾನಿ ಮೋದಿಯವರ ಯೋಜನೆಗಳು ಪ್ರತೀ ಮನೆಗೆ ತಲುಪಿಸುವ ಕಾರ್ಯ ಆಗಬೇಕು ಎಂದರು. ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ನಮ್ಮೆಲ್ಲ ಸದಸ್ಯರು ಒಂದೇ ಕುಟುಂಬದವರಂತೆ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಇಂದಿನ ಕಾರ್ಯಕ್ರಮದಲ್ಲಿ ಸಿಕ್ಕಿದೆ ಎಂದರು. ಈ ಸಂದರ್ಭದಲ್ಲಿ

ವಿಜಯ ಸಂಕಲ್ಪ ಅಭಿಯಾನದ ಮೂಲಕ ಯೋಜನೆಗಳು ಪ್ರತೀ ಮನೆಗೆ ತಲುಪಬೇಕು : ಶಾಸಕ ಸಂಜೀವ ಮಠಂದೂರು Read More »

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯತರ ಚಟುವಟಿಕೆಗಳ ಉದ್ಘಾಟನೆ

ಪುತ್ತೂರು : ಜಿಡೆಕಲ್ಲು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ನಡೆಯಿತು. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಎಲ್ಲಾ ಅನುದಾನಗಳನ್ನು ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಂಬ್ರ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದುಗಪ್ಪ ನಾಯ್ಕ್, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ನಳಿನಾಕ್ಷಿ ಎ. ಎಸ್, ಸಾಂಸ್ಕೃತಿಕ ಸಂಘ ಸಂಚಾಲಕಿ

ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪಠ್ಯತರ ಚಟುವಟಿಕೆಗಳ ಉದ್ಘಾಟನೆ Read More »

ಸಂಜೀವಣ್ಣ ಬಿಜೆಪಿ ಅಭ್ಯರ್ಥಿ ಪಕ್ಕಾ: ಗೆಲುವಿನ ಅಂತರ ಹೆಚ್ಚಳ ಸೂಚಿಸಿದ ಸಮೀಕ್ಷೆ

ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಅವರೇ ಮುಂದಿನ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದ್ದು, ಇದರ ನಡುವೆ ನ್ಯೂಸ್ ಪುತ್ತೂರು ನಡೆಸಿದ ಸಮೀಕ್ಷೆಯಲ್ಲಿ ಗೆಲುವಿನ ಅಂತರ ಇನ್ನೂ ಹೆಚ್ಚಳಗೊಳ್ಳುವ ಸುಳಿವು ಲಭಿಸಿದೆ. ಹಾಲಿ ಶಾಸಕರೇ ಮುಂದಿನ ಚುನಾವಣೆಯಲ್ಲೂ ಕಣಕ್ಕಿಳಿಯುವುದು ಸಾಮಾನ್ಯ ಸಂಗತಿ. ಇದು ಪುತ್ತೂರಿನ ರಾಜಕೀಯ ವಿದ್ಯಮಾನದಲ್ಲೂ ನಡೆಯಲಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಮತದಾರನೂ ಶಾಸಕ ಸಂಜೀವ ಮಠಂದೂರು ಪರವಾಗಿಯೇ ಬ್ಯಾಟಿಂಗ್ ಮಾಡಿದ್ದು, ಬಿಜೆಪಿಗೆ ಗೆಲುವಿನ ಸರಣಿ ಮುಂದುವರಿಯುವ ಸೂಚನೆ ನಿಚ್ಚಳವಾದಂತಾಗಿದೆ. ಅಭಿವೃದ್ದಿ ಕೆಲಸ,

ಸಂಜೀವಣ್ಣ ಬಿಜೆಪಿ ಅಭ್ಯರ್ಥಿ ಪಕ್ಕಾ: ಗೆಲುವಿನ ಅಂತರ ಹೆಚ್ಚಳ ಸೂಚಿಸಿದ ಸಮೀಕ್ಷೆ Read More »

ಸಂಪ್ಯ – ಕುಂಜೂರುಪಂಜ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ಸಂಪ್ಯದಿಂದ ಕುಂಜೂರು ಪಂಜ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ 50 ಲಕ್ಷ ರೂಪಾಯಿ ಅನುದಾನ ನೀಡಿದ್ದು, ಕಾಮಗಾರಿಗೆ ಜ. 27ರಂದು ಚಾಲನೆ ನೀಡಲಾಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ತಾಯಿಯ ಪಾತ್ರ ನಿರ್ವಹಿಸುತ್ತಾರೆ. ಹಲವು ಮಕ್ಕಳನ್ನು ತನ್ನ ಮಕ್ಕಳಂತೆ ಶಿಕ್ಷಕರು ಪೋಷಿಸುತ್ತಾರೆ, ಶಿಕ್ಷಣ ನೀಡುತ್ತಾರೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪ್ರೋತ್ಸಾಹ ನೀಡುತ್ತಾ, ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸವೂ ಶಾಲೆಗಳಲ್ಲಿ ಆಗುತ್ತದೆ ಎಂದರು.ಪ್ರೀತಮ್ ಪುತ್ತೂರಾಯ ಮಾತನಾಡಿ, ಮುಂದಿನ ಪೀಳಿಗೆಗೆ ಅನುಕೂಲ ಆಗುವಂತೆ ಕುಂಜೂರುಪಂಜದಿಂದ

ಸಂಪ್ಯ – ಕುಂಜೂರುಪಂಜ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು Read More »

ಭಾರತೀಯ ಜನತಾ ಪಾರ್ಟಿ “ವಿಜಯ ಸಂಕಲ್ಪ ಅಭಿಯಾನ” ಬಿಜೆಪಿಯೇ ಭರವಸೆ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ “ವಿಜಯ ಸಂಕಲ್ಪ ಅಭಿಯಾನ” ಅಂಗವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು ಸಾನಿಧ್ಯ ಕ್ಕೆ ಭೇಟಿ ನೀಡಿ ಪ್ರಾಥನೆ ಸಲ್ಲಿಸಿ ಬೂತು ಸಮಿತಿ  163 ರಲ್ಲಿ ಇಂದು ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರಕವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ

ಭಾರತೀಯ ಜನತಾ ಪಾರ್ಟಿ “ವಿಜಯ ಸಂಕಲ್ಪ ಅಭಿಯಾನ” ಬಿಜೆಪಿಯೇ ಭರವಸೆ Read More »

ಕುಂಜೂರುಪಂಜದಲ್ಲಿ ಕುಡಿಯುವ ನೀರು ಸರಾಗ ಪೂರೈಕೆ

ಪುತ್ತೂರು: ಕುಂಜೂರುಪಂಜ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಬುಧವಾರ ರಾತ್ರಿಯೇ ಹೊಸ ಬೋರ್ ವೆಲ್ ಗೆ ಪಂಪ್ ಅಳವಡಿಸಲಾಗಿದೆ. ಏಕಾಏಕೀ ಬೋರ್ ವೆಲ್ ಕೈಕೊಟ್ಟ ಕಾರಣ, ತರಾತುರಿಯಲ್ಲಿ ಹೊಸ ಬೋರ್ ವೆಲ್ ಕೊರೆಸುವಲ್ಲಿ ಆರ್ಯಾಪು ಗ್ರಾ.ಪಂ. ಯಶಸ್ವಿಯಾಗಿದೆ. ಇದೀಗ ನೀರು ಸರಾಗವಾಗಿ ಪೂರೈಕೆ ಆಗುತ್ತಿದೆ.

ಕುಂಜೂರುಪಂಜದಲ್ಲಿ ಕುಡಿಯುವ ನೀರು ಸರಾಗ ಪೂರೈಕೆ Read More »

ಟ್ಯಾಂಕರ್ ನೀರು ಚುನಾವಣಾ ಗಿಮಿಕ್: ಕಲ್ಲಂದಡ್ಕದಲ್ಲಿ ನೀರಿನ ವ್ಯತ್ಯಯ ಉಂಟಾಗಿಲ್ಲವೆಂದ ಕುಡಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ

ಪುತ್ತೂರು: ಕುಡಿಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಲ್ಲಂದಡ್ಕದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ನಿನ್ನೆ(ಬುಧವಾರ)ಯಷ್ಟೇ ಬೋರ್ ವೆಲ್ ಪಂಪ್ ಹಾಳಾಗಿದ್ದು, ನಾಳೆ(ಶುಕ್ರವಾರ) ಪಂಪ್ ಅಳವಡಿಕೆ ಮಾಡಲಾಗುವುದು. ತಕ್ಷಣವೇ ನೀರು ಸರಬರಾಜು ಆಗಲಿದೆ ಎಂದು ಕುಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಬಟ್ರುಪ್ಪಾಡಿ ತಿಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಗಿಮಿಕ್ ಗಳನ್ನು ಮಾಡಲು ಕೆಲವರು ಮುಂದಾಗುತ್ತಾರೆ. ಅಲ್ಲಿ ನೀರಿನ ಕೊರತೆ ಇಲ್ಲದೇ ಇದ್ದರೂ, ಅನಾವಶ್ಯಕವಾಗಿ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ನೀರು ನೀಡಲಾಗುತ್ತಿದೆ. ಬಳಿಕ ಅದನ್ನು ಫೊಟೋ ತೆಗೆದು, ಪ್ರಚಾರ ತೆಗೆದುಕೊಳ್ಳುವ ಪ್ರಯತ್ನವಷ್ಟೇ ಇದು.

ಟ್ಯಾಂಕರ್ ನೀರು ಚುನಾವಣಾ ಗಿಮಿಕ್: ಕಲ್ಲಂದಡ್ಕದಲ್ಲಿ ನೀರಿನ ವ್ಯತ್ಯಯ ಉಂಟಾಗಿಲ್ಲವೆಂದ ಕುಡಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ Read More »

error: Content is protected !!
Scroll to Top