ರಾಜಕೀಯ

ಜನ ಮರೆತರೂ ಸೋಷಿಯಲ್‌ ಮೀಡಿಯಾ ಮರೆಯುವುದಿಲ್ಲ

ಲಕ್ಷ್ಮೀ-ರವಿ ರಾದ್ಧಾಂತದಲ್ಲಿ ಮುನ್ನೆಲೆಗೆ ಬಂದ ಹಳೆ ಪ್ರಕರಣಗಳು ಕಾರ್ಕಳ: ಸಾರ್ವಜನಿಕರ ನೆನಪಿನ ಶಕ್ತಿಗೆ ಬಹಳ ಕಡಿಮೆ ಆಯಸ್ಸು. ಹೀಗಾಗಿ ರಾಜಕಾರಣಿಗಳು ಏನೇ ಮಾಡಿದರೂ, ಮಾತನಾಡಿದರೂ ಕೆಲವೇ ಸಮಯದಲ್ಲಿ ಜನ ಅದನ್ನು ಮರೆತುಬಿಡುತ್ತಾರೆ. ಹೀಗಾಗಿ ರಾಜಕೀಯ ನಾಯಕರು ಏನೇನಲ್ಲ ಮಾಡಿಯೂ ದಕ್ಕಿಸಿಕೊಳ್ಳುತ್ತಾರೆ ಎನ್ನುವುದು ಭಾರತದ ರಾಜಕೀಯದ ಮಟ್ಟಿಗೆ ಸಾರ್ವತ್ರಿಕವಾಗಿರುವ ಒಂದು ಅಭಿಪ್ರಾಯ ಮತ್ತು ಇದು ನಿಜವೂ ಹೌದು. ಆದರೆ ಈ ಸೋಷಿಯಲ್‌ ಮೀಡಿಯಾ ಯುಗದಲ್ಲಿ ಜನರು ಮರೆತರೂ ಸೋಷಿಯಲ್‌ ಮೀಡಿಯಾ ಮಾತ್ರ ಮರೆಯುವುದಿಲ್ಲ. ಎಲ್ಲ ಹಳೆ ವೀಡಿಯೊ, ದಾಖಲೆಗಳನ್ನೆಲ್ಲ […]

ಜನ ಮರೆತರೂ ಸೋಷಿಯಲ್‌ ಮೀಡಿಯಾ ಮರೆಯುವುದಿಲ್ಲ Read More »

ಸಿಟಿ ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ : ಪುತ್ತೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಪುತ್ತೂರು: ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಹೇಳಿರುವ ವಿಡಿಯೋ ನಾವು ನೋಡಿದ್ದೇವೆ, ಇದು ಕಟ್ಟುಕಥೆಯಲ್ಲ ಅಲ್ಲದೆ ಪರಿಷತ್ ನಲ್ಲಿರುವ ಅನೇಕ ಸದಸ್ಯರೂ ಇದನ್ನು ನೋಡಿದ್ದಾರೆ ಸಿ.ಟಿ.ರವಿ ಹೇಳಿಕೆ‌ ಸಹಿಸಲು ಅಸಾಧ್ಯವಾದುದು ಅವರ ಹೇಳಿಕೆಗೆ ಅಗತ್ಯ ಕಾನೂನು ಕ್ರಮ ಆಗಬೇಕೆಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪುತ್ತೂರಿನಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಸಭಾಪತಿಗಳೂ ಈ ವಿಚಾರವನ್ನು‌ ಪ್ರಿವಿಲೇಜ್ ಕಮಿಟಿಗೆ ನೀಡಿದ್ದಾರೆ. ಸಿಟಿ ರವಿ ಹೇಳಿಕೆಗೆ ಬಿಜೆಪಿ ಪಕ್ಷದ ವಿರೋಧವೂ ಇಲ್ಲ, ಖಂಡನೆಯೂ ಇಲ್ಲ,

ಸಿಟಿ ರವಿ ವಿಚಾರದಲ್ಲಿ ಬಿಜೆಪಿ ಸಮರ್ಥನೆ ದುರಾದೃಷ್ಟಕರ : ಪುತ್ತೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ Read More »

ರಾಹುಲ್‌ ಗಾಂಧಿ ವಿರುದ್ಧ ಕ್ರೈಂ ಬ್ರಾಂಚ್‌ ತನಿಖೆ

ಬಿಜೆಪಿ ಸಂಸದರನ್ನು ತಳ್ಳಿ ಗಾಯಗೊಳಿಸಿದ ಪ್ರಕರಣ ಹೊಸದಿಲ್ಲಿ: ಸಂಸತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಂಸದರ ನಡುವೆ ನಡೆದ ತಳ್ಳಾಟ ಮತ್ತು ರಾಹುಲ್‌ ಗಾಂಧಿ ತಳ್ಳಿದಾಗ ಬಿಜೆಪಿಯ ಇಬ್ಬರು ಸಂಸದರು ಬಿದ್ದು ಗಾಯಗೊಂಡಿರುವ ಪ್ರಕರಣದ ತನಿಖೆಯನ್ನು ದಿಲ್ಲಿಯ ಕ್ರೈಂಬ್ರಾಂಚ್‌ ನಡೆಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ದಾಖಲಿಸಿದ ಪ್ರಕರಣಗಳ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.ಬಿಜೆಪಿ ನೀಡಿದ ದೂರಿನ ಆಧಾರದಲ್ಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಗುರುವಾರ ಸಂಸತ್ತಿನ ಆವರಣದಲ್ಲಿ ನಡೆದ ಗದ್ದಲದ

ರಾಹುಲ್‌ ಗಾಂಧಿ ವಿರುದ್ಧ ಕ್ರೈಂ ಬ್ರಾಂಚ್‌ ತನಿಖೆ Read More »

ಲಕ್ಷ್ಮೀ ಹೆಬ್ಬಾಳ್ಕರ್‌, ಡಿಕೆಶಿ ಸುವರ್ಣ ಸೌಧದಲ್ಲೇ ಹೆಣ ಕೆಡಹುವ ಧಮಕಿ ಹಾಕಿದ್ದಾರೆ : ನ್ಯಾಯಾಲಯಕ್ಕೆ ತಿಳಿಸಿದ ಸಿ.ಟಿ.ರವಿ

ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಬೆದರಿಕೆ ಹಾಕಿರುವ ಕುರಿತು ದೂರು ಬೆಳಗಾವಿ: ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಗುರುವಾರ ಮಧ್ಯಾಹ್ನ ವಿಧಾನಸಭಾ ಕಾರಿಡಾರ್​ನಲ್ಲಿ ಮಂತ್ರಿ ಧಮಕಿ ಹಾಕಿದ್ದರು. ರಾತ್ರಿ ನನ್ನನ್ನು ಪೊಲಿಸರು ಎಲ್ಲೆಲ್ಲೋ ಕರೆದೊಯ್ಯತ್ತಿದ್ದರು. ದೇವರ ಮೇಲೆ ಭಾರ ಹಾಕಿ ನಾನು ಹೋದೆ. ನಿಮ್ಮನ್ನ ನೋಡಿಕೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿ.ಕೆ ಶಿವಕುಮಾರ್ ಕೌನ್ಸಿಲ್ ಹಾಲ್ ಒಳಗೆ ಹೇಳಿದ್ದರು ಎಂದು ಸಿ.ಟಿ ರವಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ

ಲಕ್ಷ್ಮೀ ಹೆಬ್ಬಾಳ್ಕರ್‌, ಡಿಕೆಶಿ ಸುವರ್ಣ ಸೌಧದಲ್ಲೇ ಹೆಣ ಕೆಡಹುವ ಧಮಕಿ ಹಾಕಿದ್ದಾರೆ : ನ್ಯಾಯಾಲಯಕ್ಕೆ ತಿಳಿಸಿದ ಸಿ.ಟಿ.ರವಿ Read More »

ಸಿ.ಟಿ.ರವಿಗೆ ಕೊಲೆಗಡುಕ ಎಂದದ್ದು ನಿಜ : ಸ್ಪಷ್ಟನೆ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್‌

ರಾಹುಲ್‌ ಗಾಂಧಿಯನ್ನು ಡ್ರಗ್‌ ಅಡಿಕ್ಟ್‌ ಎಂದಾಗ ಕೋಪ ಬಂತು ಎಂದ ಸಚಿವೆ ಬೆಳಗಾವಿ: ರಾಹುಲ್ ಗಾಂಧಿಯವರನ್ನು ಸುಮ್ಮನೆ ಎಳೆದು ತಂದು ಡ್ರಗ್ ಅಡಿಕ್ಟ್ ಎಂದಿದ್ದಕ್ಕೆ ನೀವು ಮೂವರನ್ನು ಆಕ್ಸಿಡೆಂಟ್ ಮಾಡಿ ಅವರ ಕೊಲೆಗೆ ಕಾರಣರಾಗಿದ್ದೀರಿ, ನೀವು ಕೊಲೆಗಡುಕ ಎಂದು ನಾನು ಹೇಳಿದ್ದು ನಿಜ. ನಾನು ಆ ಮಾತಿನಿಂದ ಹಿಂದೆ ಸರಿಯುವುದಿಲ್ಲ, ಹೆಣ್ಣಿನ ಮಾನ, ಶೀಲದ ಬಗ್ಗೆ ಬಳಸಬಾರದ ಪದ ಬಳಸಿದ ಸಿ.ಟಿ ರವಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಸಿ.ಟಿ.ರವಿಗೆ ಕೊಲೆಗಡುಕ ಎಂದದ್ದು ನಿಜ : ಸ್ಪಷ್ಟನೆ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್‌ Read More »

ನನ್ನ ಜೀವಕ್ಕೆ ಅಪಾಯವಾದರೆ ಡಿಕೆಶಿ ಹೊಣೆ : ಸಿ.ಟಿ.ರವಿ ವೀಡಿಯೊ ಸಂದೇಶ

ಪೊಲೀಸರು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡುತ್ತಿದ್ದಾರೆ ಎಂದು ಆರೋಪ ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಬೆಳಗಾವಿ ಪೊಲೀಸರ ವಶದಲ್ಲಿರುವ ಬಿಜೆಪಿ ಎಂಎಲ್​​ಸಿ ಸಿ.ಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ತನ್ನ ಜೀವಕ್ಕೆ ಅಪಾಯವಿದ್ದು ಏನೇ ಆದರೂ ಅದಕ್ಕೆ ಪೊಲೀಸರು ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವೆ ಹೆಬ್ಬಾಳ್ಕರ್ ಕಾರಣ ಎಂದು ವಿಡಿಯೋ ಸಂದೇಶ ಪ್ರಕಟಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​​ನಲ್ಲಿ ವೀಡಿಯೊ ಸಂದೇಶ ಪ್ರಕಟಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ

ನನ್ನ ಜೀವಕ್ಕೆ ಅಪಾಯವಾದರೆ ಡಿಕೆಶಿ ಹೊಣೆ : ಸಿ.ಟಿ.ರವಿ ವೀಡಿಯೊ ಸಂದೇಶ Read More »

ರಾತ್ರಿಯಿಡೀ ಬೆಳಗಾವಿಯಲ್ಲಿ ಹೈಡ್ರಾಮಾ : ಇಂದು ಬೆಂಗಳೂರಿನ ಕೋರ್ಟ್‌ಗೆ ಸಿ.ಟಿ.ರವಿ ಹಾಜರು

ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಕೊಲೆ ಸಂಚು ದೂರು-ಠಾಣೆಯಿಂದ ಠಾಣೆಗೆ ಕರೆದೊಯ್ದ ಪೊಲೀಸರು ಬೆಳಗಾವಿ: ನಿನ್ನೆ ಸಂಸತ್‌ನಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಸಂಸದರ ನಡುವೆ ನಡೆದ ಜಟಾಜಟಿ ಮಾದರಿಯಲ್ಲೇ ರಾಜ್ಯದಲ್ಲೂ ಹೈಡ್ರಾಮಾ ನಡೆದಿದ್ದು, ಬೆಳಗಾವಿಯಲ್ಲಿ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ರಾತ್ರಿಯಿಡೀ ಠಾಣೆಯಿಂದ ಠಾಣೆಗೆ ಶಿಫ್ಟ್‌ ಮಾಡಲಾಗಿದೆ. ನಂತರ ಗುರುವಾರ ರಾತ್ರಿಯೇ ಬಿಗಿ ಭದ್ರತೆಯಲ್ಲಿ ಅವರನ್ನು ಖಾನಾಪುರ ಠಾಣೆಯಿಂದ ಬೆಂಗಳೂರಿಗೆ ಬಿಗಿಭದ್ರತೆಯಲ್ಲಿ ಕರೆತರಲಾಗಿದ್ದು, ಇಂದು ಸಂಜೆಯೊಳಗೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್​​​ಗೆ ಸಿ‌ಟಿ‌ ರವಿಯನ್ನು ಪೊಲೀಸರು

ರಾತ್ರಿಯಿಡೀ ಬೆಳಗಾವಿಯಲ್ಲಿ ಹೈಡ್ರಾಮಾ : ಇಂದು ಬೆಂಗಳೂರಿನ ಕೋರ್ಟ್‌ಗೆ ಸಿ.ಟಿ.ರವಿ ಹಾಜರು Read More »

ರಾಹುಲ್‌ ಗಾಂಧಿ ತಳ್ಳಿದಾಗ ಬಿದ್ದು ಗಾಯಗೊಂಡ ಬಿಜೆಪಿ ಸಂಸದ

ಸಂಸತ್‌ ಆವರಣದಲ್ಲಿ ಪ್ರತಿಭಟನೆ ವೇಳೆ ಹೈಡ್ರಾಮಾ ಹೊಸದಿಲ್ಲಿ: ಅಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ ಹೇಳಿಕೆ ಬಿಜೆಪಿ-ಕಾಂಗ್ರೆಸ್‌ ನಡುವೆ ಕಿಚ್ಚು ಹೊತ್ತಿಸಿದೆ. ಇಂದು ಉಭಯ ಪಕ್ಷಗಳು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಭಾರಿ ಹೈಡ್ರಾಮಾ ನಡೆದಿದೆ. ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿ ಕುಸಿದು ಬಿದ್ದಿದ್ದು, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಪ್ರತಿಭಟನೆ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟಿಸುತ್ತಿದ್ದ ವೇಳೆ ಪ್ರತಾಪ್‌

ರಾಹುಲ್‌ ಗಾಂಧಿ ತಳ್ಳಿದಾಗ ಬಿದ್ದು ಗಾಯಗೊಂಡ ಬಿಜೆಪಿ ಸಂಸದ Read More »

ಸುದೇಶ್ ಕುಮಾರ್ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಪುತ್ತೂರು: ಕೊಂಬೆಟ್ಟು ಬೂತ್ ಅಧ್ಯಕ್ಷರಾಗಿದ್ದ ಸುದೇಶ್ ಕುಮಾರ್ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾಲಿಂಗೇಶ್ವರ ದೇವಳದ ನೂತನ ಸಮಿತಿ ಘೋಷಣೆಯಾಗುತ್ತಿದ್ದಂತೆ ರಾಜೀನಾಮೆ ಪತ್ರವನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವರಿಗೆ ನೀಡಿದ್ದಾರೆ. ತಾನು ಕಳೆದ 35 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ ಕೊಂಬೆಟ್ಟು ವಾರ್ಡ್ ನಲ್ಲಿ ದುಡಿಯುತ್ತಿದ್ದು ಪಕ್ಷದ ಎಲ್ಲಾ ಚಟುವಟಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಪಕ್ಷದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದೇನೆ. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನಾಮ ನಿರ್ದೇಶನಕ್ಕೆ ಅರ್ಜಿ ಸಲ್ಲಿಸಿದ್ದು ಪ್ರಬಲ

ಸುದೇಶ್ ಕುಮಾರ್ ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ Read More »

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸ್ನೇಹಮಯಿ ಕೃಷ್ಣ : ಕೇಸ್‌ ಹಿಂದೆಗೆಯಲು ಆಮಿಷವೊಡ್ಡಿದ ಆರೋಪ

ಮುಡಾ ಹಗರಣದ ಸಿಬಿಐ ತನಿಖೆಗೆ ಆದೇಶವಾಗುವ ತನಕ ಹೋರಾಟ ಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮುಡಾ ಹಗರಣದ ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಇಂದು ಬೆಂಗಳೂರಿನಲ್ಲಿ ಕಾಣಿಸಿಕೊಂಡು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ತನ್ನ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮೈಸೂರಿನ ಚಾಮುಂಡಿ ದೇವಿಗೆ ಬರುವ ಹರಕೆ ಸೀರೆಯನ್ನು ಕಳ್ಳತನ ಮಾಡಲಾಗುತ್ತದೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಫ್​ಐಆರ್

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸ್ನೇಹಮಯಿ ಕೃಷ್ಣ : ಕೇಸ್‌ ಹಿಂದೆಗೆಯಲು ಆಮಿಷವೊಡ್ಡಿದ ಆರೋಪ Read More »

error: Content is protected !!
Scroll to Top