ದೇಶ

ಭಾರತದ ತಂತ್ರವನ್ನು ಅರಿಯಲು ಸಾಧ್ಯವಾಗದೆ ಬೇಸ್ತುಬಿದ್ದ ಪಾಕಿಸ್ಥಾನ

ಮಾಕ್‌ ಡ್ರಿಲ್‌ ಸೂಚನೆ ನಂಬಿ ಮೋಸ ಹೋದ ಶತ್ರು ರಾಷ್ಟ್ರ ನವದೆಹಲಿ: ಹಿಂದಿನ ಎರಡು ಸರ್ಜಿಕಲ್‌ ಸ್ಟ್ರೈಕ್‌ಗಳಂತೆ ಈ ಸಲವೂ ಪಾಕಿಸ್ಥಾನಕ್ಕೆ ಭಾರತದ ತಂತ್ರವನ್ನು ಅರಿಯಲು ಸಾಧ್ಯವಾಗದೆ ಹೋಯಿತು. ಹೀಗಾಗಿ ಯಾವುದೇ ಪ್ರತಿರೋಧ ತೋರಿಸದೆ ತನ್ನ 9 ಉಗ್ರ ನೆಲೆಗಳನ್ನು ಭಾರತದ ಧ್ವಂಸ ಮಾಡುವುದನ್ನು ನೋಡುತ್ತಾ ಕೈಕಟ್ಟಿ ನಿಲ್ಲಬೇಕಾಯಿತು. ಭಾರತ ಪಹಲ್ಗಾಮ್‌ಗೆ ದಾಳಿಗೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎನ್ನುವುದು ಪಾಕಿಸ್ಥಾನಕ್ಕೆ ಸ್ಪಷ್ಟವಾಗಿ ತಿಳಿದಿತ್ತು. ಹೀಗಾಗಿ ಪಾಕಿಸ್ಥಾನದ ಸಚಿವರು ಮಾಧ್ಯಮಗಳ ಮುಂದೆ ದಾಳಿಯಾದರೆ ಬಿಡುವುದಿಲ್ಲ, ನಾವೂ ಪ್ರತಿದಾಳಿ ಮಾಡುತ್ತೇವೆ, […]

ಭಾರತದ ತಂತ್ರವನ್ನು ಅರಿಯಲು ಸಾಧ್ಯವಾಗದೆ ಬೇಸ್ತುಬಿದ್ದ ಪಾಕಿಸ್ಥಾನ Read More »

ಆಪರೇಷನ್‌ ಸಿಂಧೂರ್‌ : ಉಗ್ರರನ್ನು ತಯಾರಿ ಮಾಡುತ್ತಿದ್ದ ನೆಲೆಗಳು ನಾಶ

ಜಗತ್ತಿಗೆ ಕಂಟಕವಾಗಿದ್ದ ಜೈಶ್‌, ಲಷ್ಕರ್‌, ಹಿಜ್ಬುಲ್‌ಗೆ ಮರ್ಮಾಘಾತ ನವದೆಹಲಿ: ಇಂದು ಮುಂಜಾನೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್‌ ಸಿಂಧೂರ್‌ ಎಂದು ಹೆಸರಿಟ್ಟದ್ದು ಸ್ವತಹ ಪ್ರಧಾನಿ ನರೇಂದ್ರ ಮೋದಿ ಎಂದು ಮೂಲಗಳು ತಿಳಿಸಿವೆ. ಸಿಂಧೂರ ಭಾರತೀಯರ ನಾರಿಯರ ಪಾಲಿಗೆ ಅತ್ಯಂತ ಪವಿತ್ರವಾದದ್ದು. ಏ.22ರಂದು ಪಹಲ್ಗಾಮ್‌ನಲ್ಲಿ ಅನೇಕ ಹಿಂದೂ ಮಹಿಳೆಯರ ಎದುರೇ ಅವರ ಗಂಡಂದಿರನ್ನು ಗುಂಡಿಕ್ಕಿ ಕೊಂದು ಉಗ್ರರು ಸಿಂಧೂರವನ್ನು ಅಳಿಸಿ ಹಾಕಿದ್ದರು. ಹೀಗಾಗಿ ಆಪರೇಷನ್‌ ಸಿಂಧೂರ್‌ ಹೆಸರಿಡಲಾಗಿತ್ತು. ಕಾರ್ಯಾಚರಣೆಯನ್ನು ಶುರುವಿನಿಂದ ಕೊನೆಯ ತನಕ ವಾರ್‌ ರೂಮ್‌ನಲ್ಲಿ ಕುಳಿತು

ಆಪರೇಷನ್‌ ಸಿಂಧೂರ್‌ : ಉಗ್ರರನ್ನು ತಯಾರಿ ಮಾಡುತ್ತಿದ್ದ ನೆಲೆಗಳು ನಾಶ Read More »

ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ : ಕಾಂಗ್ರೆಸ್‌ ಪೋಸ್ಟ್‌

ಆಪರೇಷನ್‌ ಸಿಂಧೂರ್‌ ಬೆನ್ನಲ್ಲೇ ಮಹಾತ್ಮ ಗಾಂಧೀಜಿ ಹೇಳಿಕೆ ಹಂಚಿಕೊಂಡು ಕಾಂಗ್ರೆಸ್‌ ಎಡವಟ್ಟು ಬೆಂಗಳೂರು: ಇಂದು ಮುಂಜಾನೆ ಭಾರತೀಯ ಯೋಧರು ನಡೆಸಿದ ಆಪರೇಷನ್‌ ಸಿಂಧೂರ್‌ ಸರ್ಜಿಕಲ್‌ ಸ್ಟ್ರೈಕ್‌ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಸೇನೆಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಈ ನಡುವೆ ಕರ್ನಾಟಕ ಕಾಂಗ್ರೆಸ್‌ ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಹಂಚಿಕೊಂಡು ಎಡವಟ್ಟು ಮಾಡಿಕೊಂಡಿದೆ. ಆಪರೇಷನ್‌ ಸಿಂಧೂರ್‌ ಬೆನ್ನಲ್ಲೇ ತನ್ನ ಎಕ್ಸ್‌ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್‌, ಮಹಾತ್ಮ ಗಾಂಧಿ ಅವರ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂಬ ಸಂದೇಶವನ್ನು

ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ : ಕಾಂಗ್ರೆಸ್‌ ಪೋಸ್ಟ್‌ Read More »

ಯಾಕೆ ಆಪರೇಷನ್‌ ಸಿಂಧೂರ್‌ ಹೆಸರು?

ಕಾರ್ಯಾಚರಣೆಯ ಹೆಸರಿಗೂ ಇದೆ ಮಹತ್ವ ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಭಾರತದ ಈ ಪ್ರತೀಕಾರದ ಕ್ರಮಕ್ಕೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಡಲಾಗಿದೆ. ಪಾಕಿಸ್ಥಾನದ ಉಗ್ರರು ಭಾರತದ ಹಿಂದೂ ಮಹಿಳೆಯರ ಕುಂಕುಮ ಅಳಿಸಿ ಕಣ್ಣೀರಿಡುವಂತೆ ಮಾಡಿದ್ದರು ಅದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ಥಾನದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಅದಕ್ಕೆ ಆಪರೇಷನ್ ಸಿಂಧೂರ್

ಯಾಕೆ ಆಪರೇಷನ್‌ ಸಿಂಧೂರ್‌ ಹೆಸರು? Read More »

ಆಪರೇಷನ್‌ ಸಿಂಧೂರ್‌ : 90ಕ್ಕೂ ಹೆಚ್ಚು ಉಗ್ರರು ಬಲಿ

ತಣಿದ 140 ಕೋಟಿ ಭಾರತೀಯರ ಆಕ್ರೋಶ ; ಯುದ್ಧಕ್ಕೆ ಆಹ್ವಾನ ಎಂದ ಪಾಕಿಸ್ಥಾನ ನವದೆಹಲಿ: ಇಡೀ ದೇಶ ಗಾಢ ನಿದ್ರೆಯಲ್ಲಿರುವ ಹೊತ್ತು ಮೂರೂ ಸೇನಾ ಪಡೆಗಳು ಪಾಕಿಸ್ಥಾನದ 9 ಉಗ್ರ ನೆಲೆಗಳ ಮೇಲೆ ಕರಾರುವಕ್ಕು ದಾಳಿ ಮಾಡಿ 140 ಕೋಟಿ ಭಾರತೀಯರ ಆಕ್ರೋಶದ ಆಗ್ರಹವನ್ನು ಈಡೇರಿಸಿವೆ. ಕಳೆದ ಏ.22ರಂದು ಪಾಕಿಸ್ಥಾನದ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಎರಗಿ 26 ಮಂದಿಯನ್ನು ಗುಂಡಿಕ್ಕಿ ಸಾಯಿಸಿದ ಬಳಿಕ ಭಾರತೀಯರ ರಕ್ತ ಕೊತ ಕೊತ ಕುದಿಯುತ್ತಿತ್ತು. ಸೇಡು ತೀರಿಸಲೇ

ಆಪರೇಷನ್‌ ಸಿಂಧೂರ್‌ : 90ಕ್ಕೂ ಹೆಚ್ಚು ಉಗ್ರರು ಬಲಿ Read More »

ಆಪರೇಷನ್‌ ಸಿಂಧೂರ್‌ : ಪಾಕಿಸ್ಥಾನದ 9 ಉಗ್ರ ನೆಲೆಗಳ ಮೇಲೆ ಭಾರತ ದಾಳಿ

ಅನೇಕ ಉಗ್ರರು ಸತ್ತಿರುವುದಾಗಿ ವರದಿ; ಪಾಕಿಸ್ಥಾನದಲ್ಲಿ ಭೀತಿಯ ವಾತಾವರಣ ಮುಂಜಾನೆ 1.45ಕ್ಕೆ ನಡೆದ ವಾಯುದಾಳಿ; ಭಾರತದ ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿ ವಾಪಸ್‌ ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ಥಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಬಾಂಬ್‌ ದಾಳಿ ಮಾಡಿ ಸೇಟು ತೀರಿಸಿಕೊಂಡಿದೆ.ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ತಡರಾತ್ರಿ 1.44ಕ್ಕೆ ದಾಳಿ ನಡೆಸಿದೆ. ರಫೇಲ್‌ ಯುದ್ಧ ವಿಮಾನಗಳನ್ನು ಬಳಸಿ ಪಾಕಿಸ್ಥಾನ ಮತ್ತು ಪಾಕಿಸ್ಥಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಏರ್‌ ಸ್ಟ್ರೈಕ್‌

ಆಪರೇಷನ್‌ ಸಿಂಧೂರ್‌ : ಪಾಕಿಸ್ಥಾನದ 9 ಉಗ್ರ ನೆಲೆಗಳ ಮೇಲೆ ಭಾರತ ದಾಳಿ Read More »

ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ

ಇರುಮುಡಿ ಹೊತ್ತು ಅಯ್ಯಪ್ಪನ ಸನ್ನಿಧಾನಕ್ಕೆ ಹೋಗಲಿರುವ ರಾಷ್ಟ್ರಪತಿ ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿರುವುದು ಇದೇ ಮೊದಲು. ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಶಬರಿಮಲೆ ಏರುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಭದ್ರತಾ ಇಲಾಖೆಯು ಅವರು ನೇರವಾಗಿ ಇಳಿಯಲು ಸನ್ನಿಧಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಿತ್ತು ಆದರೆ ವಿರೋಧದಿಂದಾಗಿ ಆ ಆಲೋಚನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ನಿಲಕ್ಕಲ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯಲಿದ್ದಾರೆ.

ಮೇ 18ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ Read More »

ಶಸ್ತ್ರಾಸ್ತ್ರ ಸಹಿತ ಇಬ್ಬರು ಉಗ್ರರು ಸೆರೆ

ಶ್ರೀನಗರ: ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಹಿತ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆ ಬಂಧಿಸಿದೆ. ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಬುಚ್‌ಪೋರಾ ಪಟ್ಟಣದಲ್ಲಿ ತಪಾಸಣೆ ಕಾರ್ಯಾಚರಣೆಯ ಸಂದರ್ಭದಲ್ಲಿ ಭಯೋತ್ಪಾದಕರ ಸಹಚರರನ್ನು ಬಂಧಿಸಲಾಗಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ನರಮೇಧದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು 10ಕ್ಕೂ ಹೆಚ್ಚು ಉಗ್ರರ ಮನೆಗಳನ್ನು ಸ್ಫೋಟಿಸಲಾಗಿದೆ. ಕಾಡಿನಲ್ಲಿ ಅಡಗಸಿಟ್ಟಿದ್ದ ಅಪಾರ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಕೊಳ್ಳಲಾಗಿದೆ.

ಶಸ್ತ್ರಾಸ್ತ್ರ ಸಹಿತ ಇಬ್ಬರು ಉಗ್ರರು ಸೆರೆ Read More »

ಬುಧವಾರ ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಕೇಂದ್ರ ಸೂಚನೆ

ಯುದ್ಧ ಸಂಭವಿಸಿದರೆ ನಾಗರಿಕರನ್ನು ರಕ್ಷಿಸಲು ಸಿದ್ಧತೆ ಹೊಸದಿಲ್ಲಿ: ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯಗಳು ಬುಧವಾರ ಅಣಕು ರಕ್ಷಣಾ ಕವಾಯತುಗಳನ್ನು ನಡೆಸಲಿವೆ. ಯುದ್ಧ ಸಂಭವಿಸಿದರೆ ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ರಕ್ಷಣಾ ಕವಾಯತು ನಡೆಸಲಾಗುತ್ತಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಪಾಕಿಸ್ಥಾನದ ಉಗ್ರರು ಗುಂಡಿಕ್ಕಿ ಸಾಯಿಸಿದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ ಕೇಂದ್ರದಿಂದ ರಕ್ಷಣಾ ಕವಾಯತು ನಡೆಸಲು ಸೂಚನೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. ಮೇ 7ರಂದು ಅಣಕು ರಕ್ಷಣಾ ಕವಾಯತುಗಳನ್ನು

ಬುಧವಾರ ರಕ್ಷಣಾ ಕವಾಯತು ನಡೆಸಲು ರಾಜ್ಯಗಳಿಗೆ ಕೇಂದ್ರ ಸೂಚನೆ Read More »

ಪಹಲ್ಗಾಮ್‌ ಉಗ್ರರಿಗೆ ಊಟ-ಆಶ್ರಯ ಕೊಟ್ಟ ಯುವಕ ನದಿಯಲ್ಲಿ ಮುಳುಗಿ ಸಾವು

ತಪ್ಪಿಸಿಕೊಳ್ಳಲು ನದಿಗೆ ಹಾರಿ ಈಜಲಾಗದೆ ಮುಳುಗಿದ ಯುವಕ ಶ್ರೀನಗರ: ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಸಾಯಿಸಿದ ಉಗ್ರರಿಗೆ ಊಟ ಮತ್ತು ಆಶ್ರಯ ನೀಡಿದ ಸ್ಥಳೀಯ ಯುವಕನೊಬ್ಬ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಮುಳುಗಿ ಮೃತಪಟ್ಟಿದ್ದಾನೆ. ಆದರೆ ಈ ಯುವಕನ ತಾಯಿ ಇದು ಪೊಲೀಸರು ಮತ್ತು ಭದ್ರತಾ ಪಡೆಯವರು ಉದ್ದೇಶಪೂರ್ವಕವಾಗಿ ನಡೆಸಿದ ಕೊಲೆ ಎಂದು ಅರೋಪಿಸಿ ಮಾಧ್ಯಮಗಳ ಮುಂದೆ ಗೋಳಾಡಿದ್ದಾರೆ. ಇಮ್ತಿಯಾಜ್‌ ಅಹ್ಮದ್ ಮಾಗ್ರೆ ಎಂಬ 23 ವರ್ಷದ ಯುವಕ ಪಹಲ್ಗಾಮ್‌ ದಾಳಿಕೋರರಿಗೆ ಸಕಲ ನೆರವು ನೀಡುತ್ತಿದ್ದ

ಪಹಲ್ಗಾಮ್‌ ಉಗ್ರರಿಗೆ ಊಟ-ಆಶ್ರಯ ಕೊಟ್ಟ ಯುವಕ ನದಿಯಲ್ಲಿ ಮುಳುಗಿ ಸಾವು Read More »

error: Content is protected !!
Scroll to Top