ಮಾಂಸಕ್ಕಾಗಿ ವಧಿಸಲು ತಂದವನನ್ನೇ ಕೊಂಬಿನಿಂದ ತಿವಿದು ಕೊಂದ ಕೋಣ
ಪೇಟೆಯಲ್ಲಿ ದಾಂಧಲೆ ಎಬ್ಬಿಸಿದ ಕೋಣನಿಂದ ಹಲವರಿಗೆ ಗಾಯ ಕಾಸರಗೋಡು : ವಧಿಸಲು ಒಯ್ಯುತ್ತಿದ್ದವನನ್ನು ಕೋಣ ಕೊಂಬಿನಿಂದ ತಿವಿದು ಕೊಂದಿರುವ ಘಟನೆಯೊಂದು ಕಾಸರಗೋಡು ಸಮೀಪದ ಮೊಗ್ರಾಲ್ ಪುತ್ತೂರು ಎಂಬಲ್ಲಿ ಸಂಭವಿಸಿದೆ. ಈ ಘಟನೆಯ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.ಲಾರಿಯಿಂದ ಇಳಿಸುತ್ತಿರುವಾಗ ರೊಚ್ಚಿಗೆದ್ದ ಕೋಣ ಹಗ್ಗ ಕಡಿದುಕೊಂಡು ಯುವಕನನ್ನು ಒಂದಷ್ಟು ದೂರ ಎಳೆದುಕೊಂಡು ಹೋಗಿ ಕೊಂಬಿನಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಮೃತ ಯುವಕನನ್ನು ಮೂಲತಃ ಕರ್ನಾಟಕದ ಚಿತ್ರದುರ್ಗದ ಸಾದಿಕ್ (22) ಎಂದು ಗುರುತಿಸಲಾಗಿದೆ. […]
ಮಾಂಸಕ್ಕಾಗಿ ವಧಿಸಲು ತಂದವನನ್ನೇ ಕೊಂಬಿನಿಂದ ತಿವಿದು ಕೊಂದ ಕೋಣ Read More »










