ದೇಶ

ಎನ್‍ ಕೌಂಟರ್ ಗೆ ರಶೀದ್ ಕಾಲಿಯಾ ಬಲಿ

ಉತ್ತರಪ್ರದೇಶ: 40 ಕೊಲೆ ಪ್ರಕರಣ ಆರೋಪ ಎದುರಿಸುತ್ತಿದ್ದ ರಶೀದ್ ಕಾಲಿಯಾನನ್ನು  ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಶನಿವಾರ ಹತ್ಯೆ ಮಾಡಿದೆ. ಝಾನ್ಸಿ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ರಶೀದ್‌ ಕಾಲಿಯಾನನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಆತನ ತಲೆಗೆ 1.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಉತ್ತರ ಪ್ರದೇಶ ಪೊಲೀಸ್ ಮೂಲಗಳ ಪ್ರಕಾರ, ಕಾಲಿಯಾ ಝಾನ್ಸಿ ಜಿಲ್ಲೆಯ ಮೌರಾನಿಪುರದಲ್ಲಿ ಸುಪಾರಿ ಹತ್ಯೆಗಾಗಿ ಆಗಮಿಸಿದ್ದ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಮೌರಾನಿಪುರದಲ್ಲಿ ಕಾಲಿಯಾ ಇರುವಿಕೆಯ ಬಗ್ಗೆ ಮಾಹಿತಿ […]

ಎನ್‍ ಕೌಂಟರ್ ಗೆ ರಶೀದ್ ಕಾಲಿಯಾ ಬಲಿ Read More »

ವಿಶ್ವಕಪ್ : ನಾಳೆ ನಡೆಯಲಿದೆ ಭಾರತ-ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಸೆಣಸಾಟ | ಭಾರತದ ಗೆಲುವಿಗಾಗಿ ಪೂಜೆ-ಪುನಸ್ಕಾರಗಳು, ಶುಭ ಹಾರೈಕೆಗಳು

ಬೆಂಗಳೂರು: ಭಾನುವಾರ ವಿಶ್ವದ ಅತೀ ದೊಡ್ಡ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ನಡುವೆ ನಡೆಯಲಿದ್ದು, ಒಂದೆಡೆ ಭಾರತದ ಆಟಗಾರರು ಸತತ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರೆ, ಇನ್ನೊಂದೆಡೆ ಭಾರತ ತಂಡದ ಗೆಲುವಿಗಾಗಿ ದೇವಸ್ಥಾನಗಳಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಬೆಂಗಳೂರಿನ ನಿಮಿಷಾಂಭ ದೇವಾಲಯದಲ್ಲಿ ಭಾರತ ಗೆಲುವಿಗಾಗಿ ವಿಶೇಷ ಹೋಮ ಹವನಗಳನ್ನು ನಡೆಸಲಾಗುತ್ತಿದೆ. ಮತ್ತೊಂದೆಡೆ ಕಾಪು ಕಡಲ ಕಿನಾರೆಗಳಲ್ಲಿ ಭಾರತ ಗೆಲುವಿಗಾಗಿ ಮರಳಿನಲ್ಲಿ ವಿಶ್ವಕಪ್ ಹೋಲುವ ಶಿಲ್ಪಗಳನ್ನು ರಚಿಸಿ ಶುಭ ಹಾರೈಸುವ

ವಿಶ್ವಕಪ್ : ನಾಳೆ ನಡೆಯಲಿದೆ ಭಾರತ-ಆಸ್ಟ್ರೇಲಿಯಾ ನಡುವೆ ಜಿದ್ದಾಜಿದ್ದಿನ ಸೆಣಸಾಟ | ಭಾರತದ ಗೆಲುವಿಗಾಗಿ ಪೂಜೆ-ಪುನಸ್ಕಾರಗಳು, ಶುಭ ಹಾರೈಕೆಗಳು Read More »

ಪಿಸ್ತುಲ್ ತೋರಿಸಿ ಶೋ ಮಾಡಿದ ಭೂಪ : ಮುಂದೆ ಏನಾಯ್ತು ನೋಡಿ! !

ಉತ್ತರ ಪ್ರದೇಶ, ಘಝಿಯಾಬಾದ್: ವ್ಯಕ್ತಿ ಒಬ್ಬರು ತನ್ನ ಕಾರಿನ ಕಿಟಕಿ ಮೂಲಕ ನಗರದಲ್ಲಿ ಪಿಸ್ತುಲ್ ತೋರಿಸಿ ರೋಡ್ ಶೋ ಮಾಡಿರುವ ದೃಶ್ಯ ವೈರಲ್ ಆಗಿದೆ. ಉತ್ತರಪ್ರದೇಶದ NH 24 ಸಿದ್ದಾರ್ಥ್ ವಿಹಾರ ಪ್ರದೇಶದಲ್ಲಿ ಶುಕ್ರವಾರದಂದು ಟಾಟಾ ಪಂಚ್ ಕಾರ್ ನಲ್ಲಿ ಡ್ರೈವರ್ ಪಕ್ಕದ ಸೀಟ್ ನಲ್ಲಿ ಕೂತಿದ್ದ ವ್ಯಕ್ತಿ ಒಬ್ಬರು ಪಿಸ್ತುಲ್ ತೋರಿಸುವುದರ ಮೂಲಕ ತನ್ನ ಹುಚ್ಚಾಟವನ್ನು ಪ್ರದರ್ಶಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೀಡಿಯೋ ತಿಳಿದ ಪೊಲೀಸರು ಕೃತ್ಯ ಎಸಗಿದ ಟಾಟಾ ಪಂಚ್ ಕಾರನ್ನು ವಶಕ್ಕೆ

ಪಿಸ್ತುಲ್ ತೋರಿಸಿ ಶೋ ಮಾಡಿದ ಭೂಪ : ಮುಂದೆ ಏನಾಯ್ತು ನೋಡಿ! ! Read More »

ಸಚಿನ್ ದಾಖಲೆ ಮುರಿದು ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದ ವಿರಾಟ್ ಕೊಹ್ಲಿ

ಮುಂಬೈ: ಇಲ್ಲಿನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ದಾಖಲಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಬುಧವಾರ ವಿಶ್ವಕಪ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಕ್ರೀಸಿಗೆ ಬಂದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ 50ನೇ ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ 49 ಅತೀ ಹೆಚ್ಚು

ಸಚಿನ್ ದಾಖಲೆ ಮುರಿದು ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದ ವಿರಾಟ್ ಕೊಹ್ಲಿ Read More »

ಕಂದಕಕ್ಕೆ ಉರುಳಿದ ಬಸ್: 36 ಮಂದಿ ಮೃತ್ಯು

ದೋಡಾ: ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಒಂದು ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಕನಿಷ್ಠ 36 ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದೆ. ಕಿಶ್ತ್ವಾರದಿಂದ ಜಮ್ಮುಗೆ ಪ್ರಯಾಣಿಸುತ್ತಿದ್ದ ಬಸ್, ಅಸ್ಸಾರ್ ಪ್ರದೇಶದಲ್ಲಿನ ತೃಣಾಲ್ ಬಳಿ ಕಡಿದಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದರಿಂದ ಈ ಘಟನೆ ನಡೆದಿದೆ. ಬಸ್‌ನಲ್ಲಿ 55 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆಯ ಕುರಿತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ತೀವ್ರ

ಕಂದಕಕ್ಕೆ ಉರುಳಿದ ಬಸ್: 36 ಮಂದಿ ಮೃತ್ಯು Read More »

ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಕಾಸರಗೋಡು: ಡೆತ್ ನೋಟು ಬರೆದಿಟ್ಟು ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ಲ ಸಮೀಪದ ಪದ್ಯಾಣದಲ್ಲಿ ನಡೆದಿದೆ. ಪದ್ಯಾಣದ ನಿವಾಸಿ ಸಿಲ್ವೆಸ್ಟರ್ ಕ್ರಾಸ್ತ ಎಂಬವರ ಪುತ್ರ ಐವನ್ ಕ್ರಾಸ್ತ (23) ಈ ಕೃತ್ಯ ಎಸಗಿದವರು. ಐವನ್ ತೊಕ್ಕೊಟ್ಟುವಿನ ಕಾಲೇಜೊಂದರ ಬಿ.ಎಡ್ ವಿದ್ಯಾರ್ಥಿಯಾಗಿದ್ದ. ಈತನ ಮೃತದೇಹ ಮಂಗಳವಾರ ರಾತ್ರಿ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಶೋಧ ನಡೆಸಿದಾಗ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈತ ಮಲಗುವ ಕೋಣೆಯೊಳಗೆ ಡೆತ್ ನೋಟ್ ಪತ್ತೆಯಾಗಿದ್ದು, ನನ್ನ

ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ Read More »

ಚೀನಾದಲ್ಲಿ ನಡೆದ 19ನೇ ಏಷಿಯಾ ಚಾಂಪಿಯನ್ ಶಿಪ್: ದೇಶದ ಕೀರ್ತಿ ಪತಾಕೆ ಹಾರಿಸಿದ ಪುತ್ತೂರಿನ ಪ್ರತಿಭೆ ಪ್ರಜ್ಞಾ ವೈ. ಗಾಯತ್ರಿ

ಪುತ್ತೂರು: ಪುತ್ತೂರಿನ ಪ್ರತಿಭೆ ಪ್ರಜ್ಞಾ ವೈ ಗಾಯತ್ರಿ ಚೀನಾದ ನಡೆದ 19ನೇ ಏಷಿಯಾ ಸ್ಟೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದು ದೇಶದ ಕೀರ್ತಿ ಪತಾಕೆನ್ನು ಹಾರಿಸಿದ್ದಾರೆ. ಭಾರತೀಯ ಜೂನಿಯರ್ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದು, ಅ.22ರಿಂದ 28ರವರೆಗೆ ಚೀನಾ ದೇಶದ ಬಿಧಾಯಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡ 3ನೇ ಸ್ಥಾನ ಪಡೆದು ಕಂಚಿನ ಪದಕ ಪಡೆದುಕೊಂಡಿತ್ತು. ಕರ್ನಾಟಕದ ಐವರು ಆಟಗಾರರು ಸೇರಿ ಒಟ್ಟು 12 ಆಟಗಾರರೊಂದಿಗಿನ ಈ ತಂಡದಲ್ಲಿ ಪುತ್ತೂರಿನ ಮರೀಲ್ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಜ್ಞಾ

ಚೀನಾದಲ್ಲಿ ನಡೆದ 19ನೇ ಏಷಿಯಾ ಚಾಂಪಿಯನ್ ಶಿಪ್: ದೇಶದ ಕೀರ್ತಿ ಪತಾಕೆ ಹಾರಿಸಿದ ಪುತ್ತೂರಿನ ಪ್ರತಿಭೆ ಪ್ರಜ್ಞಾ ವೈ. ಗಾಯತ್ರಿ Read More »

ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಒಂದೇ ಕುಟುಂಬದ ಐವರು ಮೃತ್ಯು

ಉತ್ತರ ಪ್ರದೇಶ: ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹರ್ದೋಯ್’ನ ಸವಯಜ್ ಪುರ ಕೊಟ್ಟಾಲಿ ಪ್ರದೇಶದ ಬಿಲ್ ಹೌರ್-ಕತ್ರಾ ರಸ್ತೆಯ ಖಮಾರಿಯಾ ತಿರುವಿನ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತರು ಪಚ್ ದೇವ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಕಾಂತ್ ಗ್ರಾಮದವರಾಗಿದ್ದು, ಒಂದೇ ಕುಟುಂಬದವರು ಎನ್ನಲಾಗಿದೆ. ಅಪಘಾತದ

ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಒಂದೇ ಕುಟುಂಬದ ಐವರು ಮೃತ್ಯು Read More »

ಕೇರಳದ ಎರ್ನಾಕುಲಂನಲ್ಲಿ ಭೀಕರ ಸ್ಪೋಟ | ಓರ್ವ ಮಹಿಳೆ ಮೃತ್ಯು, 23 ಮಂದಿಗೆ ಗಾಯ

ಕೇರಳ: ಎರ್ನಾಕುಲಂನಲ್ಲಿರುವ ಕನ್ವೆನ್ಷನ್‌ ಸೆಂಟರ್‌  ನಲ್ಲಿ ಭೀಕರ ಸ್ಫೋಟ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು, 23 ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಮೃತಪಟ್ಟ ಮಹಿಳೆಯ ಗುರುತು ಪತ್ತೆಯಾಗದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಕಾಏಕಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಇದೊಂದು ಉಗ್ರರ ದಾಳಿಯ ಶಂಕೆ ವ್ಯಕ್ತವಾಗಿದೆ. ಈ ಘಟನೆ ಎರ್ನಾಕುಲಂನ ಕಲಮಶ್ಶೇರಿಯಲ್ಲಿರುವ ಜಾಮ್ರಾ ಇಂಟರ್‌ನ್ಯಾಷನಲ್‌ ಸಭಾಭವನದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಬೆಳಗ್ಗಿನ ಪ್ರಾರ್ಥನೆಗಾಗಿ ನೂರಾರು ಜನ ಸೇರಿದ್ದು, ಬೆಳಿಗ್ಗೆ

ಕೇರಳದ ಎರ್ನಾಕುಲಂನಲ್ಲಿ ಭೀಕರ ಸ್ಪೋಟ | ಓರ್ವ ಮಹಿಳೆ ಮೃತ್ಯು, 23 ಮಂದಿಗೆ ಗಾಯ Read More »

ನಿಲ್ಲಿಸಿದ್ದ ಆಟೋಕ್ಕೆ ತಗುಲಿದ ಬೆಂಕಿ : ಸಂಪೂರ್ಣ ನಾಶ

ಕುಂಬಳೆ: ನಿಲ್ಲಿಸಿದ್ದ ಆಟೋರಿಕ್ಷಾವೊಂದಕ್ಕೆ ಬೆಂಕಿ ಹತ್ತಿಕೊಂಡು ಸಂಪೂರ್ಣ ನಾಶಗೊಂಡ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಬಾಯಾರು ಬಳ್ಳೂರು ನಿವಾಸಿ ರವಿಕುಮಾರ್ ಎಂಬವರ ಆಟೋರಿಕ್ಷಾ ಬೆಂಕಿಗಾಹುತಿಯಾಗಿದ್ದು, ರೋಗಿ ಒಬ್ಬರನ್ನು ರಿಕ್ಷಾದಲ್ಲಿ ಕುಂಬಳೆ ಆಸ್ಪತ್ರೆಗೆ ತಲುಪಿಸಿ, ಬಳಿಕ ರಿಕ್ಷಾವನ್ನು ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಲ್ಲಿಸಲಾಗಿತ್ತು. ರವಿಕುಮಾರ್ ಸ್ವಲ್ಪ ದೂರದಲ್ಲಿ ನಿಂತು ಓರ್ವರಲ್ಲಿ ಮಾತನಾಡುತ್ತಿದ್ದಂತೆ ರಿಕ್ಷಾ ಉರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾದರೂ ರಿಕ್ಷಾ ಸಂಪೂರ್ಣ ಉರಿದು ಸುಟ್ಟುಹೋಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ

ನಿಲ್ಲಿಸಿದ್ದ ಆಟೋಕ್ಕೆ ತಗುಲಿದ ಬೆಂಕಿ : ಸಂಪೂರ್ಣ ನಾಶ Read More »

error: Content is protected !!
Scroll to Top