ದೇಶ

ಅಫ್ಘಾನಿನ ದೆಹಲಿ ರಾಯಭಾರ ಕಚೇರಿ ಶಾಶ್ವತ ಬಂದ್: ಗೊಂದಲದಿಂದ ಕೂಡಿದ ಹೇಳಿಕೆ!

ನವದೆಹಲಿ: ತಾಲಿಬಾನ್ ಆಡಳಿತವಿರುವ ಅಫಘಾನಿಸ್ತಾನವು ಭಾರತದಲ್ಲಿರುವ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಸೆಪ್ಟೆಂಬರ್‌ 30ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರಾಯಭಾರ ಕಚೇರಿಯನ್ನು ಈಗ ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಈ ನಡುವೆ ತಾಲಿಬಾನ್ ನೀಡಿರುವ ಆರೋಪಗಳು, ಅದರ ದ್ವಂದ್ವ ನಿಲುವನ್ನು ಸೂಚಿಸುವಂತಿದೆ. ಮೊದಲು “ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಅಲ್ಲದೇ, ರಾಯಭಾರ ಕಚೇರಿ ನಿರ್ವಹಣೆಗೆ ಸಾಕಷ್ಟು ದುಡ್ಡಿಲ್ಲ” ಎಂದು ಹೇಳಿತ್ತು. ಆದರೆ ಈಗ “ಭಾರತ ಸರ್ಕಾರದಿಂದ ಎದುರಾಗುತ್ತಿರುವ ಸವಾಲುಗಳಿಂದಾಗಿ ಸ್ಥಗಿತಗೊಳಿಸಲಾಗುತ್ತಿದೆ” ಎಂದು ಆರೋಪಿಸಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ಅಫಘಾನಿಸ್ತಾನವು […]

ಅಫ್ಘಾನಿನ ದೆಹಲಿ ರಾಯಭಾರ ಕಚೇರಿ ಶಾಶ್ವತ ಬಂದ್: ಗೊಂದಲದಿಂದ ಕೂಡಿದ ಹೇಳಿಕೆ! Read More »

ಡೀಪ್‌ಫೇಕ್‌ಗೆ ಕಡಿವಾಣ ಹಾಕಲು ಶೀಘ್ರ ಹೊಸ ಕಾನೂನು!!

ಡೀಪ್‌ಫೇಕ್‌ಗಳು ಪ್ರಜಾಪ್ರಭುತ್ವಕ್ಕೆ ಹೊಸ ಅಪಾಯ ಎಂದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು, ಡೀಪ್‌ಫೇಕ್‌ಗಳಿಗೆ ಕಡಿವಾಣ ಹಾಕಲು ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಾವಳಿ ರೂಪಿಸಲಿದೆ ಎಂದು ಗುರುವಾರ ಹೇಳಿದ್ದಾರೆ. ಇಂದು ಡೀಪ್‌ಫೇಕ್ ಕುರಿತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಭೇಟಿ ಮಾಡಿ, ಚರ್ಚಿಸಿದ ಸಚಿವರು, ಪತ್ತೆ, ತಡೆಗಟ್ಟುವಿಕೆ, ವರದಿ ಮಾಡುವ ಕಾರ್ಯವಿಧಾನವನ್ನು ಬಲಪಡಿಸುವುದು ಮತ್ತು ಬಳಕೆದಾರರಿಗೆ ಜಾಗೃತಿ ಮೂಡಿಸುವಂತಹ ಕೆಲಸದ ಅಗತ್ಯವನ್ನು ಕಂಪನಿಗಳು ಒಪ್ಪಿಕೊಂಡಿವೆ ಎಂದರು. “ನಾವು ಇಂದೇ ಕರಡು ನಿಯಮಾವಳಿಯನ್ನು ಸಿದ್ಧಪಡಿಸಲು ಪ್ರಾರಂಭಿಸುತ್ತೇವೆ ಮತ್ತು ಕಡಿಮೆ

ಡೀಪ್‌ಫೇಕ್‌ಗೆ ಕಡಿವಾಣ ಹಾಕಲು ಶೀಘ್ರ ಹೊಸ ಕಾನೂನು!! Read More »

350 ರೂ.ಗಾಗಿ ಅಪ್ರಾಪ್ತನಿಂದ ಯುವಕನ ಹತ್ಯೆ!! | ಕೊಂದು ಕುಣಿದು ಕುಪ್ಪಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!!

ಕೇವಲ 350 ರೂಪಾಯಿಗಾಗಿ ಅಪ್ರಾಪ್ತ ಬಾಲಕನೋರ್ವ ಯುವಕನನ್ನು 60ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆಗೈದ ಭೀಭತ್ಸ ಘಟನೆ ಈಶಾನ್ಯ ದೆಹಲಿಯ ವೆಲ್ ಕಮ್ ರಸ್ತೆಯಲ್ಲಿ ನಡೆದಿದೆ. ಹತ್ಯೆಯ ಬಳಿಕ ಶವದ ಬಳಿ ಡ್ಯಾನ್ಸ್ ಮಾಡುತ್ತಿರುವ ಬಾಲಕನ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಇರಿತಕ್ಕೊಳಗಾದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಯುವಕನ ಹತ್ಯೆಗೆ ಮೊದಲು ಬಾಲಕ ಹಣಕ್ಕಾಗಿ ಪೀಡಿಸಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ, ಯುವಕನ ಕತ್ತು ಹಿಸುಕಿದ್ದಾನೆ.

350 ರೂ.ಗಾಗಿ ಅಪ್ರಾಪ್ತನಿಂದ ಯುವಕನ ಹತ್ಯೆ!! | ಕೊಂದು ಕುಣಿದು ಕುಪ್ಪಳಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!! Read More »

ದೇಶ ಸೇವೆಗಾಗಿ ಪ್ರಾಣತೆತ್ತ MRPL ನಿವೃತ್ತ ಎಂ.ಡಿ.ಯ ಸುಪುತ್ರ!

ಮಂಗಳೂರು: ಜಮ್ಮು – ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸೇನೆಯ ಇಬ್ಬರು ಕ್ಯಾಪ್ಟನ್‌ಗಳು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮೇಜರ್‌ ಮತ್ತು ಯೋಧ ಗಾಯಗೊಂಡಿದ್ದು, ಅವರನ್ನು ಉಧಂಪುರದ ಕಮಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಓರ್ವರಾದ ಕ್ಯಾ. ಎಂ.ವಿ. ಪ್ರಾಂಜಲ್ (29) ಅವರು ಎಂ.ಆರ್.ಪಿ.ಎಲ್.ನ ನಿವೃತ್ತ ಎಂ.ಡಿ. ಎಂ. ವೆಂಕಟೇಶ್ ಅವರ ಏಕೈಕ ಪುತ್ರ. ಪ್ರಾಂಜಲ್‌ ಎಂ.ವಿ. ಅವರು ಎಸೆಸೆಲ್ಸಿವರೆಗೆ ಎಂಆರ್‌ಪಿಎಲ್‌ ಸಮೀಪವೇ ಇರುವ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ನ್ಯಾಶನಲ್‌ ಡಿಫೆನ್ಸ್‌

ದೇಶ ಸೇವೆಗಾಗಿ ಪ್ರಾಣತೆತ್ತ MRPL ನಿವೃತ್ತ ಎಂ.ಡಿ.ಯ ಸುಪುತ್ರ! Read More »

ಟ್ರಕ್ಕಿಗೆ ಢಿಕ್ಕಿ ಹೊಡೆದ ವಿದ್ಯಾರ್ಥಿಗಳಿದ್ದ ಆಟೋ | ಅಪಘಾತದ ರಭಸಕ್ಕೆ ಗಾಳಿಯಲ್ಲಿ ಎಗರಿಬಿದ್ದ ಶಾಲಾ ಮಕ್ಕಳು: ಭೀಕರ ವೀಡಿಯೋ!!

ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಟ್ರಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ 8 ಮಕ್ಕಳು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರ (ನ. 22ರಂದು) ನಡೆದಿದೆ. ಮುಂಜಾನೆ 7:35ರ ಸಮಯಕ್ಕೆ ಮಕ್ಕಳು ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ವಿಶಾಖಪಟ್ಟಣಂನ ಸಂಗಮ್ ಶರತ್ ಥಿಯೇಟರಿನ ಅಂಡರ್‌ ಪಾಸ್‌ ರಸ್ತೆಯಿಂದ ನುಗ್ಗಿದ ಆಟೋ ಹೆದ್ದಾರಿಯಲ್ಲಿ ಬರುತ್ತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆದಿದೆ. ರಸ್ತೆ ದಾಟಲು ವೇಗವಾಗಿ ಹೋಗುತ್ತಿದ್ದ ರಿಕ್ಷಾ, ಟ್ರಕ್ಕಿಗೆ ಢಿಕ್ಕಿ ಹೊಡೆದಿದೆ. ಕ್ಷಣ ಮಾತ್ರದಲ್ಲಿ ಆಟೋ ಪಲ್ಟಿಯಾಗಿದ್ದು,

ಟ್ರಕ್ಕಿಗೆ ಢಿಕ್ಕಿ ಹೊಡೆದ ವಿದ್ಯಾರ್ಥಿಗಳಿದ್ದ ಆಟೋ | ಅಪಘಾತದ ರಭಸಕ್ಕೆ ಗಾಳಿಯಲ್ಲಿ ಎಗರಿಬಿದ್ದ ಶಾಲಾ ಮಕ್ಕಳು: ಭೀಕರ ವೀಡಿಯೋ!! Read More »

19ರ ಹರೆಯದ ತರುಣನ ಹತ್ಯೆಗೈದ ಅಪ್ರಾಪ್ತರ ತಂಡ!! | ಯುವಕನ ಪಾಲಿಗೆ ಮುಳುವಾಯ್ತೇ ಡ್ರಗ್ಸ್ ಜಾಲ ವಿರುದ್ಧದ ಕಾರ್ಯಾಚರಣೆ ??

19 ವರ್ಷದ ಯುವಕನೋರ್ವನನ್ನು ನಾಲ್ವರ ತಂಡ ಹತ್ಯೆಗೈದ ಘಟನೆ ತಿರುವನಂತಪುರಂನ ಕರಿಮಾಡೋಮ್‌ನ ಟರ್ಫ್‌ನಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಅರ್ಷದ್ ಎಂದು ಗುರುತಿಸಲಾಗಿದೆ. ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಆರೋಪಿಗಳು ಅಪ್ರಾಪ್ತರು ಎಂದು ಹೇಳಲಾಗಿದೆ. ಹಿಂದಿನ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಅರ್ಷದ್ ತನ್ನ ಸ್ನೇಹಿತರೊಂದಿಗೆ ಕಾಲೋನಿಯಲ್ಲಿ ಡ್ರಗ್ಸ್ ಜಾಲ ತಡೆಯುವ ತಡೆಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾದಕ ವ್ಯಸನದ ವಿರುದ್ಧ ಹೋರಾಡಲು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಅರ್ಷದ್

19ರ ಹರೆಯದ ತರುಣನ ಹತ್ಯೆಗೈದ ಅಪ್ರಾಪ್ತರ ತಂಡ!! | ಯುವಕನ ಪಾಲಿಗೆ ಮುಳುವಾಯ್ತೇ ಡ್ರಗ್ಸ್ ಜಾಲ ವಿರುದ್ಧದ ಕಾರ್ಯಾಚರಣೆ ?? Read More »

ಶಾಲೆಗೆ ಬಂದು ಗಾಳಿಯಲ್ಲಿ ಗುಂಡು: ಯುವಕ ಬಂಧನ!

ಖಾಸಗಿ ಶಾಲೆಯೊಂದಕ್ಕೆ ಏರ್‌ಗನ್‌ನೊಂದಿಗೆ ಅತಿಕ್ರಮ ಪ್ರವೇಶ ಮಾಡಿದ ಯುವಕ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ತ್ರಿಶೂರ್’ನ ನಾಯ್ಕನಾಲ್ ವಿವೇಕೋದಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದಿದೆ. ಆರೋಪಿಯನ್ನು ತ್ರಿಶೂರ್ ಬಳಿಯ ಮುಲಾಯಂ ಮೂಲದ ಜಗನ್ (19) ಎಂದು ಗುರುತಿಸಲಾಗಿದೆ. ಬೆಳಗ್ಗೆ 10.30ರ ಸುಮಾರಿಗೆ ಘಟನೆ ನಡೆದಿದ್ದು, ಪೊಲೀಸರು ಶಾಲೆಗೆ ತೆರಳಿ ಯುವಕನನ್ನು ಬಂಧಿಸಿದ್ದಾರೆ. ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈತ ಶಾಲೆಯ ಹಳೆ ವಿದ್ಯಾರ್ಥಿ. ಆತನ ಹುಚ್ಚಾಟದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಶಾಲಾ ದಿನಗಳಲ್ಲಿಯೇ ಯುವಕ ಮಾದಕ ವ್ಯಸನಿಯಾಗಿದ್ದ

ಶಾಲೆಗೆ ಬಂದು ಗಾಳಿಯಲ್ಲಿ ಗುಂಡು: ಯುವಕ ಬಂಧನ! Read More »

ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕ ಸಂಘಟನೆ: ಇಸ್ರೇಲ್‌ ಘೋಷಣೆ

ಮುಂಬೈ ಭಯೋತ್ಪಾದಕ ದಾಳಿ(26/11)ಯ 15ನೇ ವರ್ಷಾಚರಣೆಗೂ ಮುನ್ನವೇ ಮಹತ್ವದ ಬೆಳವಣಿಗೆ ಎಂಬಂತೆ ಪಾಕಿಸ್ತಾನ ಮೂಲದ ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕ ಸಂಘಟನೆ ಎಂದು ಇಸ್ರೇಲ್ ಅಧಿಕೃತವಾಗಿ ಘೋಷಿಸಿದೆ ಎಂದು ವರದಿಯಾಗಿದೆ. ಇದೊಂದು ಮಾರಣಾಂತಿಕ ಹಾಗೂ ಖಂಡನಾರ್ಹ ಭಯೋತ್ಪಾದಕ ಸಂಘಟನೆಯಾಗಿದೆ ಎಂದು ತಿಳಿಸಿರುವ ಇಸ್ರೇಲ್‌, ಲಷ್ಕರ್‌ ಇ ತೊಯ್ಬಾ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ. ಆದರೆ ಈ ಬಗ್ಗೆ ಭಾರತದಿಂದ ಯಾವುದೇ ಮನವಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತ ಸರ್ಕಾರ ಯಾವುದೇ ವಿನಂತಿ ಮಾಡದಿದ್ದರೂ

ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕ ಸಂಘಟನೆ: ಇಸ್ರೇಲ್‌ ಘೋಷಣೆ Read More »

ಭಾರತ ಮೂಲದ ಹಡಗು ಕೆಂಪು ಸಮುದ್ರದಲ್ಲಿ ಅಪಹರಣ!!

ನವದೆಹಲಿ: ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಪಹರಿಸಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಪಹರಿಸಿದ್ದು, ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದಾರೆ. ಇಸ್ರೇಲ್‌ ಹಡಗನ್ನು ಹೈಜಾಕ್ ಮಾಡಿರುವುದಾಗಿ ಹೌತಿಗಳು ಹೇಳಿದ್ದರು. ಆದರೆ ಹೌತಿಗಳ ಹೇಳಿಕೆಯನ್ನು ನಿರಾಕರಿಸಿರುವ ಇಸ್ರೇಲ್ ಸರ್ಕಾರ, ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ ಹಡಗಿನಲ್ಲಿ ಯಾವುದೇ ಭಾರತೀಯರು ಇಲ್ಲ. ಅಲ್ಲದೆ

ಭಾರತ ಮೂಲದ ಹಡಗು ಕೆಂಪು ಸಮುದ್ರದಲ್ಲಿ ಅಪಹರಣ!! Read More »

ವಿಶ್ವಕಪ್ ನಲ್ಲಿ ಭಾರತಕ್ಕೆ ಸೋಲು: ರೋಹಿತ್ ಶರ್ಮ ಭಾವುಕ ಮಾತು

ನವದೆಹಲಿ: ನಿನ್ನೆ ನಡೆದ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸುವ ಮೂಲಕ ಅಸಂಖ್ಯಾತ ಭಾರತೀಯರ ಕನಸು ನುಚ್ಚು ನೂರಾಯಿತು. ಮಹತ್ವದ ಪಂದ್ಯದಲ್ಲಿ ಹೀನಾಯ ಸೋಲಿನ ಬಗ್ಗೆ ಮಾತನಾಡಿದ ರೋಹಿತ್ ಅವರು​, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿಯಲ್ಲಿ ನಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್​ ಮಾಡಲಿಲ್ಲ ಎಂದು ಒಪ್ಪಿಕೊಂಡರು. ನಾವು ಉತ್ತಮವಾಗಿ ಆಡಲಿಲ್ಲ: ಪಂದ್ಯದ ಬಳಿಕ ನೋವಿನಿಂದಲೇ ಮಾತನಾಡಿದ ರೋಹಿತ್​, ಫೈನಲ್‌ಗೆ ಈ ಪಿಚ್​ ತುಂಬಾ ಕಷ್ಟಕರ ಆಗಿತ್ತು, ಬಹಳ ಶುಷ್ಕದಿಂದ ಕೂಡಿತ್ತು ಮತ್ತು ಟಾಸ್ ಗೆದ್ದ

ವಿಶ್ವಕಪ್ ನಲ್ಲಿ ಭಾರತಕ್ಕೆ ಸೋಲು: ರೋಹಿತ್ ಶರ್ಮ ಭಾವುಕ ಮಾತು Read More »

error: Content is protected !!
Scroll to Top