ದೇಶ

ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ | ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಮೃತ್ಯು

ಕೇರಳ: ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಆಯೇಷಾ ರಿದಾ (13) ಹಾಗೂ ಫಾತಿಮಾ ಮೊಹಿನಾ (11) ಮೃತಪಟ್ಟವರು. ಮೃತ ವಿದ್ಯಾರ್ಥಿಗಳು ಕಲ್ಪಕಂಚೇರಿ ಕಲ್ಲಿಂಗಪರಮ್ ಎಂ.ಎಸ್‍.ಎಂ.ಎಚ್‍.ಎಸ್‍. ತಿರುರು ಉಪಜಿಲಾ ಶಾಲೆಯ ಒಂಬತ್ತು ಮತ್ತು ಆರನೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ. ನಿಲಂಬೂರ್ ಕರುಳ್ಳೆ ವನಂ ರೇಂಜ್‌ನ ನೆಡುಂಕಯಾಟ್ ಸೌಟ್ಸ್ ಮತ್ತು ಗೈಡ್ಸ್ ಶಿಬಿರದಲ್ಲಿ ಪಾಲ್ಗೊಳ್ಳಲು ಶಾಲೆಯ 49 ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರ […]

ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರಕ್ಕೆ ಬಂದಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ | ಇಬ್ಬರು ವಿದ್ಯಾರ್ಥಿನಿಯರು ನದಿಯಲ್ಲಿ ಮುಳುಗಿ ಮೃತ್ಯು Read More »

ಇನ್ಸಾಟ್ -3ಡಿಎಸ್ ಬಾಹ್ಯಾಕಾಶ ನೌಕೆ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜು | ಫೆ.17 ರಂದು ಉಡಾವಣೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜಿಎಸ್‌ಎಲ್ವಿ-ಎಫ್ 14 ಮಿಷನ್ ಭಾಗವಾಗಿ, ಇನ್ಸಾಟ್ -3 ಡಿಎಸ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಫೆ.17 ರಂದು ಸಂಜೆ 5:30 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ. ಈ ಮೂಲಕ ಇಸ್ರೋದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ನ 16ನೇ ಹಾರಾಟ ಮಾಡಲಿದ್ದು, ಜ.25, 2024 ರಂದು ಉಪಗ್ರಹವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ತರಲಾಗಿದೆ. ಇನ್ಸಾಟ್-3ಡಿಎಸ್ ಹವಾಮಾನ

ಇನ್ಸಾಟ್ -3ಡಿಎಸ್ ಬಾಹ್ಯಾಕಾಶ ನೌಕೆ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜು | ಫೆ.17 ರಂದು ಉಡಾವಣೆ Read More »

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ | ಮೋದೀಜಿಯವರಿಗೆ ವೈಜ್ಞಾನಿಕ ಮಾದರಿಯನ್ನು ವಿವರಿಸಿದ ಅಚಲ್ ಬಿಳಿನೆಲೆ

ಜ. 29ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ಮಾದರಿ ಚಂದ್ರಯಾನ -3 ಯನ್ನು ದೇಶದ ಪ್ರಧಾನಿ ಮೋದೀಜಿಯವರಿಗೆ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಳ್ಯದ ಅಚಲ್ ಬಿಳಿನೆಲೆಯವರು ವಿವರಿಸಿದರು. ವೈಜ್ಞಾನಿಕ ಮಾದರಿಯನ್ನು ವೀಕ್ಷಿಸುತ್ತಾ ಬಂದ ಪ್ರಧಾನಿಗಳಿಗೆ “ಪ್ರಣಾಮ್ ಮಹೋದಯ್ , ಮೇ ಅಚಲ್ ಬಿಳಿನೆಲೆ (ನಮಸ್ತೆ ಮಹೋದಯ, ನಾನು ಅಚಲ್ ಬಿಳಿನೆಲೆ) ಎಂದು ಕಲಿಯುತ್ತಿರುವ ಸಂಸ್ಥೆಯ ಬಗ್ಗೆ ಹೇಳಿ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ | ಮೋದೀಜಿಯವರಿಗೆ ವೈಜ್ಞಾನಿಕ ಮಾದರಿಯನ್ನು ವಿವರಿಸಿದ ಅಚಲ್ ಬಿಳಿನೆಲೆ Read More »

ಸಾರ್ವಜನಿಕ-ಖಾಸಗಿ ಆಸ್ತಿಗಳಿಗೆ ಹಾನಿ | ಕಾನೂನಿನಲ್ಲಿ ತಿದ್ದುಪಡಿ | ಯಾವ ರೀತಿ ಇದೆ ಕಾನೂನು ?

ನವದೆಹಲಿ: ಪ್ರತಿಭಟನೆ, ಗುಂಪು ಗಲಾಟೆಯಂತಹ ಸಂದರ್ಭದಲ್ಲಿ ಸಾರ್ವಜನಿಕ / ಖಾಸಗಿ ಆಸ್ತಿಗಳಿಗೆ ಹಾನಿ ಉಂಟುಮಾಡುವುದು ಮತ್ತು ಸಾರ್ವಜನಿಕರಿಗೆ ಅನಾನುಕೂಲತೆ ಉಂಟು ಮಾಡುವ ಕುರಿತು ಕಾನೂನು ಆಯೋಗವು ಕಾನೂನುಗಳಿಗೆ ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ. ಅಂತಹ ಸಂಘಟನೆಯ ಜವಾಬ್ದಾರಿಯುತ ಪದಾಧಿಕಾರಿಗಳನ್ನು “ಅಪರಾಧಕ್ಕೆ ಪ್ರಚೋದನೆ ನೀಡಿದ ಅಪರಾಧಕ್ಕಾಗಿ ತಪ್ಪಿತಸ್ಥರೆಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ, ಖಾಸಗಿ ಆಸ್ತಿಗಳಿಗೆ ಉಂಟಾದ ಹಾನಿಯ ಮಾರುಕಟ್ಟೆ ಮೌಲ್ಯಕ್ಕೆ ಸಮಾನವಾದ ಭಾರಿ ದಂಡವನ್ನು ವಿಧಿಸುವ ಗುರಿಯನ್ನು ಹೊಂದಿರುವ ಅಸ್ತಿತ್ವದಲ್ಲಿರುವ ಕಾನೂನುಗಳಿಗೆ

ಸಾರ್ವಜನಿಕ-ಖಾಸಗಿ ಆಸ್ತಿಗಳಿಗೆ ಹಾನಿ | ಕಾನೂನಿನಲ್ಲಿ ತಿದ್ದುಪಡಿ | ಯಾವ ರೀತಿ ಇದೆ ಕಾನೂನು ? Read More »

‘ಭಾರತ ರತ್ನ’ ನನ್ನ ಆದರ್ಶ, ತತ್ವಗಳಿಗೆ ಸಂದ ಗೌರವ: ಅಡ್ವಾಣಿ

ನವದೆಹಲಿ: ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಒಬ್ಬ ವ್ಯಕ್ತಿಯಾಗಿ ಮಾತ್ರ ಅಲ್ಲ. ಜೀವನದುದ್ದಕ್ಕೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಕಾರಣವಾದ ಆದರ್ಶಗಳು ಮತ್ತು ತತ್ವಗಳಿಗೆ ಸಂದ ಗೌರವ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಶನಿವಾರ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ತಮ್ಮ ಹೆಸರನ್ನು ಘೋಷಿಸಿದ ಬೆನ್ನಲ್ಲೇ, “ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ, ಇಂದು ನನಗೆ ನೀಡಲಾದ ಭಾರತ ರತ್ನವನ್ನು ನಾನು ಸ್ವೀಕರಿಸುತ್ತೇನೆ” ಎಂದು

‘ಭಾರತ ರತ್ನ’ ನನ್ನ ಆದರ್ಶ, ತತ್ವಗಳಿಗೆ ಸಂದ ಗೌರವ: ಅಡ್ವಾಣಿ Read More »

ಸತ್ತಲ್ಲಿಂದ ಎದ್ದು ಬಂದಳೇ ನಟಿ ಪೂನಂ ಪಾಂಡೆ!!

ನಟಿ, ಮಾಡೆಲ್ ಪೂನಂ ಪಾಂಡೆಯ ಸಾವಿನ ವರದಿ ಶುಕ್ರವಾರ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಶನಿವಾರ ಆಕೆ ಸ್ವತಃ ಇನ್’ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದ್ದಾಳೆ. ವಿವಾದದಿಂದಲೇ ಸುದ್ದಿಯಾಗಿದ್ದ ನಟಿ, ಮಾಡೆಲ್ ಇದೀಗ ಹೊಸ ಗಿಮಿಕ್ ಪ್ರಯೋಗಿಸಿದ್ದಾಳೆ. ಅದೂ, ಗರ್ಭಕಂಠದ ಕ್ಯಾನ್ಸರ್ ಬಗೆಗಿನ ಜಾಗೃತಿಯಂತೆ. ಗರ್ಭಕಂಠ ಕ್ಯಾನ್ಸರಿಗೆ ಸೂಕ್ತ ಔಷದೋಪಚಾರ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ತಾನು ಸತ್ತಂತೆ ನಟಿಸಬೇಕಾಯಿತು ಎಂದು ಉತ್ತರಪ್ರದೇಶದ ಕಾನ್ಪುರ ನಿವಾಸಿ, 32ರ ಹರೆಯದ ಪೂನಂ ಪಾಂಡೆ ಹೇಳಿಕೊಂಡಿದ್ದಾಳೆ.

ಸತ್ತಲ್ಲಿಂದ ಎದ್ದು ಬಂದಳೇ ನಟಿ ಪೂನಂ ಪಾಂಡೆ!! Read More »

ಬಿಜೆಪಿಯ ಭೀಷ್ಮನಿಗೆ ಒಲಿದ ಭಾರತರತ್ನ

ಬಿಜೆಪಿಯ ಭೀಷ್ಮ ಎಂದೇ ಖ್ಯಾತನಾಮರಾದ ಎಲ್‍.ಕೆ.ಅಡ್ವಾಣಿ ಅವರು ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿದ್ದು, ಲಾಲ್‍ ಕೃಷ್ಣ ಅಡ್ವಾಣಿ ಅವರು ಬಿಜೆಪಿ ಪಕ್ಷದ ಸಹಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಹಿಂದೂ ರಾಷ್ಟ್ರೀಯತಾವಾದಿ ಸ್ವಯಂಸೇವಕ ಸಂಘಟನೆಯಾದ ಆರ್‍.ಎಸ್‍.ಎಸ್‍.ನ ಸದಸ್ಯರೂ ಆಗಿದ್ದಾರೆ. 2002 ರಿಂದ 2004 ರ ತನಕ ಉಪಪ್ರಧಾನಿಯಾಗಿದ್ದ ಎಲ್‍.ಕೆ.ಅಡ್ವಾಣಿ ಅವರು, 90ರ ದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಧೀಮಂತ ನಾಯಕರಾಗಿದ್ದರು. ಲೋಕಸಭೆಯಲ್ಲಿ ದೀರ್ಘಾವಧಿವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.

ಬಿಜೆಪಿಯ ಭೀಷ್ಮನಿಗೆ ಒಲಿದ ಭಾರತರತ್ನ Read More »

ಜ್ಞಾನವಾಪಿ ಮಸೀದಿ ಕೆಳಮಹಡಿಯಲ್ಲಿ ಹಿಂದೂಗಳ ಪೂಜೆಗೆ ಯಾವುದೇ ತಡೆ ನೀಡಲು ಸಾಧ್ಯವಿಲ್ಲ| ಅಲಹಾಬಾದ್ ಹೈಕೋರ್ಟ್‍ ಹೇಳಿಕೆ

ಹೊಸದಿಲ್ಲಿ: ಜ್ಞಾನವಾಪಿ ಮಸೀದಿಯ ಕೆಳಮಹಡಿಯಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿರುವ ವಾರಣಾಸಿ ಜಿಲ್ಲಾ ಕೋರ್ಟ್‌ನ ಆದೇಶದ ಬೆನ್ನಲ್ಲೇ ಹಿಂದೂಗಳ ಪೂಜೆ ಯಾವುದೇ ರೀತಿಯ ತಡೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‍ ತಿಳಿಸುವ ಮೂಲಕ ಮತ್ತೊಂದು ಜಯ ಲಭಿಸಿದಂತಾಗಿದೆ. ಇದೀಗ ಈ ಕುರಿತು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ಗೆ ಏರಿದ್ದ ಮಸೀದಿ ಸಮಿತಿಗೆ ಹಿನ್ನಡೆಯಾಗಿದೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಜ್ಞಾನವಾಪಿ ಪ್ರಕರಣದ ಶುಕ್ರವಾರದ ವಿಚಾರಣೆ ಪೂರ್ಣಗೊಂಡಿದ್ದು, ಈ ಸಮಯದಲ್ಲಿ ಮಸೀದಿ ಸಮಿತಿಗೆ ಹೈಕೋರ್ಟ್‌ನಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ

ಜ್ಞಾನವಾಪಿ ಮಸೀದಿ ಕೆಳಮಹಡಿಯಲ್ಲಿ ಹಿಂದೂಗಳ ಪೂಜೆಗೆ ಯಾವುದೇ ತಡೆ ನೀಡಲು ಸಾಧ್ಯವಿಲ್ಲ| ಅಲಹಾಬಾದ್ ಹೈಕೋರ್ಟ್‍ ಹೇಳಿಕೆ Read More »

ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ಇನ್ನಿಲ್ಲ!!

ವಿವಾದದಿಂದಲೇ ಗುರುತಿಸಿಕೊಂಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ. ಸರ್ವಿಕಲ್ (ಗರ್ಭ ಕಂಠ) ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ನಿವಾಸಿಯಾಗಿರುವ 32 ವರ್ಷದ ಪೂನಂ ಪಾಂಡೆ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದರು.

ವಿವಾದಿತ ನಟಿ, ಮಾಡೆಲ್ ಪೂನಂ ಪಾಂಡೆ ಇನ್ನಿಲ್ಲ!! Read More »

ಬಜೆಟ್ ಮಂಡನೆ ಮಾಡಿದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಕೇಂದ್ರದ ಮಧ್ಯಂತರ ಬಜೆಟ್ ಮಂಡನೆ ಮಾಡಿದರು. ಈ ಮೂಲಕ 2019 ರಿಂದ ಈ ವರೆಗೆ ಪೂರ್ಣಾವಧಿ ವಿತ್ತ ಮಂತ್ರಿಯಾಗಿ ಕೆಲಸ ಮಾಡಿದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. 40 ಸಾವಿರ ರೈಲು ಬೋಗಿಗಳನ್ನ ವಂದೇ ಭಾರತ್​ಗೆ ಉನ್ನತೀಕರಣ ಮಾಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು. ನಗರಗಳಲ್ಲಿ ಸುಗಮ ಸಂಚಾರಕ್ಕೆ ಮೆಟ್ರೋ ರೈಲುಗಳ ಹೆಚ್ಚಳಕ್ಕೆ ಮುಂದಾಗಲಾಗುವುದು ಎಂದು ತಿಳಿಸಿದರು. ಸರಕುಗಳನ್ನು ಸಾಗಿಸಲು ನಿರ್ಮಿಸಲಾಗುತ್ತಿರುವ ರೈಲ್ವೇ ಕಾರಿಡಾರ್ ಹೊರತುಪಡಿಸಿ,

ಬಜೆಟ್ ಮಂಡನೆ ಮಾಡಿದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ Read More »

error: Content is protected !!
Scroll to Top