ದೇಶ

ಬೇಕಾಬಿಟ್ಟಿ ಸಿಮ್ ಖರೀದಿ ನಿಯಂತ್ರಣಕ್ಕೆ ಕೇಂದ್ರ ಸರಕಾರ ಯಾವ ನಿಯಮಗಳನ್ನು ತರಲಿದೆ | ಇಲ್ಲಿದೆ ಡಿಟೈಲ್ಸ್

ಬೇಕಾಬಿಟ್ಟಿ ಸಿಮ್ ಖರೀದಿಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಕಠಿಣ ನಿಯಮಗಳನ್ನು ಜ್ಯಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡಿದೆ. ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ದೇಶ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕುವ ಜತೆಗೆ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುವ ಡೀಲರ್‍ ಗಳಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಸಿಮ್ ಖರೀದಿಯಲ್ಲಿ ಕಠಿಣ ನಿಯಮಗಳನ್ನು ತರಲಿದೆ. ಡಿ.1ರಿಂದ ಸಿಮ್ ಮಾರಾಟದ ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಸಿಮ್‌ಗಳನ್ನು ಮಾರಾಟ ಮಾಡುವ ಎಲ್ಲ ಡೀಲರ್‌ಗಳು ಪರಿಶೀಲನೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಅಷ್ಟೇ ಅಲ್ಲದೆ ಡೀಲರ್‌ಗಳು ಸಿಮ್‌ಗಳನ್ನು […]

ಬೇಕಾಬಿಟ್ಟಿ ಸಿಮ್ ಖರೀದಿ ನಿಯಂತ್ರಣಕ್ಕೆ ಕೇಂದ್ರ ಸರಕಾರ ಯಾವ ನಿಯಮಗಳನ್ನು ತರಲಿದೆ | ಇಲ್ಲಿದೆ ಡಿಟೈಲ್ಸ್ Read More »

ಅಪಹರಣವಾಗಿದ್ದ ಬಾಲಕಿ 20 ಗಂಟೆಗಳ ಕಾರ್ಯಾಚರಣೆ ಬಳಿಕ ಪತ್ತೆ!

ತಿರುವನಂತಪುರಂ: ಸೋಮವಾರ ಸಂಜೆ ನಾಪತ್ತೆಯಾಗಿದ್ದ ಕೇರಳದ ಆರು ವರ್ಷದ ಬಾಲಕಿ ಕೊಲ್ಲಂನ ಆಶ್ರಮ ಮೈದಾನದಲ್ಲಿ ಪತ್ತೆಯಾಗಿದ್ದಾಳೆ. 20 ಗಂಟೆಗಳ ಹುಡುಕಾಟದ ಬಳಿಕ ಕೇರಳ ಪೊಲೀಸರು ಬಾಲಕಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಸಂಜೆ 6 ವರ್ಷದ ಬಾಲಕಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಟ್ಯೂಷನ್‌ಗೆ ತೆರಳುತ್ತಿದ್ದಾಗ ಅಪಹರಣಕಾರರು ಬಾಲಕಿಯನ್ನು ಅಪಹರಣ ಮಾಡಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಾಜ್ಯಾದ್ಯಂತ ನಾಕಾ ಬಂದಿ ನಡೆಸಿ ಬಾಲಕಿಯ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದರು. ಅಲ್ಲದೆ

ಅಪಹರಣವಾಗಿದ್ದ ಬಾಲಕಿ 20 ಗಂಟೆಗಳ ಕಾರ್ಯಾಚರಣೆ ಬಳಿಕ ಪತ್ತೆ! Read More »

ಗುಂಡು ಹಾರಿಸಿದ ತಂಡವನ್ನು ಬೆದರಿಸಿ ಓಡಿಸಿದ ಮಹಿಳೆ; ವೈರಲ್ ವೀಡಿಯೋ ಇಲ್ಲಿದೆ |  ಮಹಿಳೆಯ ಧೈರ್ಯಕ್ಕೆ ವ್ಯಾಪಕ ಶ್ಲಾಘನೆ

ನಡುರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಬೈಕಿನಲ್ಲಿ ಬಂದ ನಾಲ್ವರ ತಂಡ ಗುಂಡು ಹಾರಿಸಿದ್ದು, ಇದೇ ಸಂದರ್ಭ ಪಕ್ಕದ ಮನೆಯ ಮಹಿಳೆಯೋರ್ವರು ಕೋಲು ಹಿಡಿದು ಓಡಿಸಿದ ಘಟನೆ ನಡೆದಿದೆ. ಹರ್ಯಾಣದ ಭಿವಾನಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಇದರ ವೀಡಿಯೋ ಇದೀಗ ವೈರಲ್ ಆಗಿದೆ. ನವಂಬರ್ 27ರಂದು ಘಟನೆ ನಡೆದಿದೆ. ಘಟನೆಯ ವೀಡಿಯೋ ಇದೀಗ ಸಕ್ಕತ್ ವೈರಲ್ ಆಗಿದೆ. ಮಹಿಳೆಯ ಧೈರ್ಯಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ. 58 ಸೆಕೆಂಡಿನ ಈ ವೀಡಿಯೋದಲ್ಲಿ, ವ್ಯಕ್ತಿಯೋರ್ವರು ಮನೆ ಹೊರಗಡೆ ರಸ್ತೆ ಬದಿಯಲ್ಲಿ ನಿಂತಿರುವ ದೃಶ್ಯ ಕಾಣುತ್ತದೆ.

ಗುಂಡು ಹಾರಿಸಿದ ತಂಡವನ್ನು ಬೆದರಿಸಿ ಓಡಿಸಿದ ಮಹಿಳೆ; ವೈರಲ್ ವೀಡಿಯೋ ಇಲ್ಲಿದೆ |  ಮಹಿಳೆಯ ಧೈರ್ಯಕ್ಕೆ ವ್ಯಾಪಕ ಶ್ಲಾಘನೆ Read More »

ಎಂಡೋ ಪಟ್ಟಿಯಿಂದ ಎಂಡೋ ಸಂತ್ರಸ್ತರನ್ನೇ ಹೊರಗಿಟ್ಟ ಸರಕಾರ: ಆಕ್ರೋಶ

ಕಾಸರಗೋಡು: ಎಂಡೋಸಲ್ಫಾನ್‌ ಸಿಂಪಡಣೆಯಿಂದ ಬಾಧಿತರಾಗಿರುವವರ ಪಟ್ಟಿಯಿಂದ 2011ರ ಅಕ್ಟೋಬರ್‌ ಬಳಿಕ ಜನಿಸಿದ ಮಕ್ಕಳನ್ನು ಹೊರಗೆ ಇಟ್ಟಿರುವ ಕೇರಳ ಸರಕಾರದ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಎಂಡೋಸಲ್ಫಾನ್‌ನ ಅಂಶಗಳು ಪೂರ್ಣವಾಗಿ ನಿವಾರಣೆ ಆಗಿಲ್ಲ. ಇದರ ಹೊರತಾಗಿಯೂ ಕೂಡ ಕೇರಳ ಸರಕಾರ ಕೈಗೊಂಡ ತೀರ್ಮಾನ ಸರಿಯಲ್ಲ ಎಂದು ವಿಜ್ಞಾನಿಗಳು, ವೈದ್ಯ ಸಮುದಾಯ ಹೇಳಿದೆ. 2011ರ ಬಳಿಕ ಜನಿಸಿದ ಹಲವಾರು ಮಕ್ಕಳಲ್ಲಿ ಔಷಧದ ದುಷ್ಪರಿಣಾಮ ಕಂಡುಬಂದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂಡೋಸಲ್ಫಾನ್‌

ಎಂಡೋ ಪಟ್ಟಿಯಿಂದ ಎಂಡೋ ಸಂತ್ರಸ್ತರನ್ನೇ ಹೊರಗಿಟ್ಟ ಸರಕಾರ: ಆಕ್ರೋಶ Read More »

6 ವರ್ಷದ ಬಾಲಕಿ ಅಪಹರಣ; ಶೀಘ್ರ ಪತ್ತೆಗೆ ಕೇರಳ ಸಿಎಂ ಆದೇಶ

ತಿರುವನಂತಪುರಂ: ದಕ್ಷಿಣ ಕೇರಳದ ಪೂಯಪ್ಪಲ್ಲಿಯಿಂದ ಸೋಮವಾರ 6 ವರ್ಷದ ಬಾಲಕಿಯ ಅಪಹರಣದ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನಿಖೆಯನ್ನು ತೀವ್ರಗೊಳಿಸುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅಪಹರಣದ ಕುರಿತು ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಪೊಲೀಸರು ಅಪಹರಣವಾದ ಬಾಲಕಿಯ ಪತ್ತೆಗೆ ಪೊಲೀಸರು ತಂಡ ರಚನೆ

6 ವರ್ಷದ ಬಾಲಕಿ ಅಪಹರಣ; ಶೀಘ್ರ ಪತ್ತೆಗೆ ಕೇರಳ ಸಿಎಂ ಆದೇಶ Read More »

ಹಳಿ ದಾಟುತ್ತಿದ್ದ ಆನೆಗಳಿಗೆ ಗೂಡ್ಸ್ ರೈಲು ಡಿಕ್ಕಿ: ಮರಿ ಸೇರಿ 3 ಆನೆಗಳ ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 3 ಆನೆಗಳು ಸಾವನ್ನಪ್ಪಿವೆ. ರಾಜಭಟ್ಖಾವಾ ಮತ್ತು ಕಲ್ಚಿನಿ ರೈಲು ನಿಲ್ದಾಣಗಳ ನಡುವಿನ ಶಿಖಾರಿ ಗೇಟ್ ಬಳಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಮರಿ ಮತ್ತು ಎರಡು ವಯಸ್ಕ ಆನೆಗಳು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿವೆ. ಅಲಿಪುರ್ದೌರ್ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದ ಪಶ್ಚಿಮ ರಾಜಭಟ್ಖಾವಾ ಶ್ರೇಣಿಯಲ್ಲಿ ಸಂಭವಿಸಿದ ಈ ಘಟನೆಯು ಭಾರತದಲ್ಲಿ ರೈಲು

ಹಳಿ ದಾಟುತ್ತಿದ್ದ ಆನೆಗಳಿಗೆ ಗೂಡ್ಸ್ ರೈಲು ಡಿಕ್ಕಿ: ಮರಿ ಸೇರಿ 3 ಆನೆಗಳ ಸಾವು Read More »

ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಅಂತ್ಯಕ್ರಿಯೆ

ಬೆಂಗಳೂರು: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಸೋಮಸುಂದರಪಾಳ್ಯ ಚಿತಾಗಾರದಲ್ಲಿ ನಡೆಯಿತು. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್​​ನ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಕಲ್ಲುಬಾಳು ರಸ್ತೆ ಮೂಲಕ ಜಿಗಣಿಯ ಒಡಿಸಿ ಸರ್ಕಲ್​,

ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಅಂತ್ಯಕ್ರಿಯೆ Read More »

ಕ್ಯಾಪ್ಟನ್ ಪ್ರಾಂಜಲ್ ಅಮರ್ ರಹೇ | ಬೆಂಗಳೂರಿನಲ್ಲಿ ಅಂತಿಮ ನಮನ

ಬೆಂಗಳೂರು: ಮಂಗಳೂರಿನ ಸುರತ್ಕಲಿನಲ್ಲಿ ಬೆಳೆದಿದ್ದ ಕ್ಯಾಪ್ಟನ್ ‍ಪ್ರಾಂಜಲ್ ಅಮರರಾಗಿದ್ದಾರೆ. ಉಗ್ರರೊಂದಿಗೆ ನಡೆದ ಕಾಳಗದಲ್ಲಿ ವೀರ ಮರಣವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರ ಬೆಂಗಳೂರಿನ ಅವರ ನಿವಾಸಕ್ಕೆ ಶುಕ್ರವಾರ ರಾತ್ರಿ ತಲುಪಿದ್ದು, ಅಂತಿಮ ನಮನ ಸಲ್ಲಿಸಲಾಗುತ್ತಿದೆ. 29 ವರ್ಷದ ಪ್ರಾಂಜಲ್ ಅವರ ಅಂತ್ಯಕ್ರಿಯೆ ಇಂದು ಅಂದರೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದೆ. ಅಂತ್ಯಕ್ರಿಯೆಯ ಮುನ್ನ ನಡೆಯುವ ವಿಧಿವಿಧಾನ ನಡೆದು ಬಳಿಕ ಮೆರವಣಿಗೆಯಲ್ಲಿ ವೀರ ಯೋಧನ ಪಾರ್ಥಿವ ಶರೀರವನ್ನು 23 ಕಿಲೋ ಮೀಟರ್ ದೂರದಲ್ಲಿರುವ ಸೋಮಸುಂದರ ಪಾಳ್ಯದ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿದುಬಂದಿದೆ.

ಕ್ಯಾಪ್ಟನ್ ಪ್ರಾಂಜಲ್ ಅಮರ್ ರಹೇ | ಬೆಂಗಳೂರಿನಲ್ಲಿ ಅಂತಿಮ ನಮನ Read More »

ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್ ವಿರುದ್ಧ ಎಫ್​ಐಆರ್​!

ಉತ್ತರ ಪ್ರದೇಶ: ಏಕದಿನ ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟು ವಿಶ್ರಾಂತಿ ಪಡೆದಿದ್ದ ಆಸ್ಟ್ರೇಲಿಯಾದ ಮಿಚೆಲ್​ ಮಾರ್ಷ್ ವಿರುದ್ಧ ಭಾರತದಲ್ಲಿ ಎಫ್‌ಐಆರ್ ದಾಖಲಾಗಿದೆ. ಉತ್ತರ ಪ್ರದೇಶದ ಅಲಿಘರ್‌ನ ಆರ್‌ಟಿಐ ಕಾರ್ಯಕರ್ತ ಪಂಡಿತ್ ಕೇಶವ್ ನೀಡಿದ ದೂರಿನ ಮೇರೆಗೆ ದೆಹಲಿ ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರ್ಷ್​ ಅವರು ವಿಶ್ವಕಪ್‌ ಗೆದ್ದ ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿ ಟ್ರೋಫಿ ಮೇಲೆ ತಮ್ಮ ಕಾಲುಗಳನ್ನು ಇಟ್ಟು ವಿಶ್ರಾಂತಿ ಪಡೆಯುವ ಶೈಲಿಯಲ್ಲಿ ಕುಳಿತ ಫೋಟೊವೊಂದು ವೈರಲ್​ ಆಗಿತ್ತು. ಈ ಫೋಟೊ ಕಂಡ ಅನೇಕ ಭಾರತೀಯ ಕ್ರಿಕೆಟ್​

ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್ ವಿರುದ್ಧ ಎಫ್​ಐಆರ್​! Read More »

ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರಿಗೆ : ಮಾಹಿತಿ ನೀಡಿದ ರಕ್ಷಣಾ ಮೂಲಗಳು

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಪಾರ್ಥಿವ ಶರೀರ ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಬುಧವಾರ ರಜೌರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 63ನೇ ರಾಷ್ಟ್ರೀಯ ರೈಫಲ್ಸ್‌ನ 29 ವರ್ಷದ ಯೋಧ ಪ್ರಾಂಜಲ್ ಅವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. “ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರ ಇಂದು ರಾತ್ರಿ 8 ಗಂಟೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ನಂತರ ಅವರ ಪಾರ್ಥಿವ ಶರೀರವನ್ನು

ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರಿಗೆ : ಮಾಹಿತಿ ನೀಡಿದ ರಕ್ಷಣಾ ಮೂಲಗಳು Read More »

error: Content is protected !!
Scroll to Top