ದೇಶ

ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಪಾಕ್ ಹೊಸ ಖ್ಯಾತೆ!!

ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವು ಕಳೆದ ವಾರ ನಡೆದಿದ್ದು, ಇಡೀ ವಿಶ್ವದ ಗಮನ ಸೆಳೆದಿತ್ತು. ಆದರೆ ಭಾರತ ಮತ್ತು ಭಾರತೀಯರ ಸಂತೋಷವನ್ನು ಸಹಿಸದ ಪಾಕಿಸ್ತಾನವು ಹೊಸ ವರಸೆ ಶುರು ಮಾಡಿದೆ. ಅಯೋಧ್ಯೆಯಲ್ಲಿ ದಶಕಗಳ ನಂತರ ದೇವಾಲಯ ಮತ್ತು ಮಸೀದಿಯ ವಿವಾದವು ಕೊನೆಗೊಂಡು ದೇವಾಲಯ ನಿರ್ಮಾಣವಾಗಿದೆ. ಆದರೆ ಪಾಕಿಸ್ತಾನವು ಮಂದಿರದ ಬಗ್ಗೆ ದೂರು ನೀಡಲು ವಿಶ್ವಸಂಸ್ಥೆಗೆ ಔಪಚಾರಿಕವಾಗಿ ಪತ್ರ ಬರೆದಿದೆ. ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ […]

ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಪಾಕ್ ಹೊಸ ಖ್ಯಾತೆ!! Read More »

ಅಯೋಧ್ಯೆಯಿಂದ ರಾಜ್ಯಕ್ಕೆ ಬರಲಿದೆಯೇ ರಾಮನ ಮೂರ್ತಿ?? | ರಾಘವೇಶ್ವರ ಶ್ರೀಗಳಿಂದ ಗೋಕರ್ಣದಲ್ಲಿ ಪ್ರತಿಷ್ಠಾಪನೆಗೆ ಚಿಂತನೆ?!

ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ನೂತನ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೆಂದು ಅಂತಿಮಗೊಂಡ ಮೂರು ಮೂರ್ತಿಗಳಲ್ಲೊಂದನ್ನು ರಾಜ್ಯಕ್ಕೆ ತರಲು ರಾಘವೇಶ್ವರ ಶ್ರೀ ಉತ್ಸಾಹಿತರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಶಿಲ್ಪಿ ಗಣೇಶ್‌ ಭಟ್‌ ಅವರು ರಚಿಸಿದ ವಿಗ್ರಹ ಇದಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ಉಳಿದೆರಡು ವಿಗ್ರಹಗಳನ್ನು ಅಯೋಧ್ಯೆಯಲ್ಲಿ ವೀಕ್ಷಣೆಗೆ ಇಡಲಾಗಿದೆ. ಇದನ್ನು ವೀಕ್ಷಿಸಿದ ಬಳಿಕ ರಾಘವೇಶ್ವರ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಚಿಸಿದ ಶ್ರೀರಾಮನ ವಿಗ್ರಹವನ್ನು ರಾಜ್ಯಕ್ಕೆ ತಂದು ಪ್ರತಿಷ್ಠಾಪಿಸಬೇಕೆಂಬ ಅಭಿಲಾಷೆ ನಮಗೂ ಇದೆ.

ಅಯೋಧ್ಯೆಯಿಂದ ರಾಜ್ಯಕ್ಕೆ ಬರಲಿದೆಯೇ ರಾಮನ ಮೂರ್ತಿ?? | ರಾಘವೇಶ್ವರ ಶ್ರೀಗಳಿಂದ ಗೋಕರ್ಣದಲ್ಲಿ ಪ್ರತಿಷ್ಠಾಪನೆಗೆ ಚಿಂತನೆ?! Read More »

ಮದರಸಾಗಳಲ್ಲಿ ಶ್ರೀರಾಮನ ಅಧ್ಯಯನಕ್ಕೆ ಅವಕಾಶ!!

ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ದೇಶಾದ್ಯಂತ ರಾಮನ ಕುರಿತ ವಿಚಾರಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ಅತ್ತ ಉತ್ತರಾಖಂಡದಲ್ಲಿ ಮದರಸಾಗಳಲ್ಲಿ ರಾಮ ದೇವರ ಕುರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವ ಬಗ್ಗೆ ವರದಿಯಾಗಿದೆ. ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಆ ಮೂಲಕ ಇನ್ನು ಮುಸ್ಲಿಂ ವಿದ್ಯಾರ್ಥಿಗಳು ಕೂಡ ರಾಮನ ಕುರಿತು ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಕುರಿತು ಉತ್ತರಾಖಂಡ ವಕ್ಫ್‌ ಬೋರ್ಡ್‌ ಚೇರ್ಮನ್‌ ಆಗಿರುವ ಶಾದಾಬ್‌ ಶಾಮ್ಸ್‌ ಅವರೇ ಮಾಹಿತಿ ನೀಡಿದ್ದು,

ಮದರಸಾಗಳಲ್ಲಿ ಶ್ರೀರಾಮನ ಅಧ್ಯಯನಕ್ಕೆ ಅವಕಾಶ!! Read More »

ಟೀ ಅಂಗಡಿಯಲ್ಲಿ ಕುಳಿತು ಕೇರಳ ರಾಜ್ಯಪಾಲರ ಪ್ರತಿಭಟನೆ!

ರಾಜ್ಯದ ಪ್ರಥಮ ಪ್ರಜೆ ಎಂದೇ ಕರೆಸಿಕೊಳ‍್ಳುವ ರಾಜ್ಯಪಾಲರೇ ಪ್ರತಿಭಟನೆಗೆ ಕುಳಿತರೆ ಹೇಗೆ? ಇಂತಹದ್ದೊಂದು ವಿಚಿತ್ರ ಘಟನೆ ಕೇರಳದಲ್ಲಿ ಶನಿವಾರ ನಡೆದಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಸಂದರ್ಭ, ಎಸ್.ಎಫ್.ಐ. ಪ್ರತಿಭಟನೆ ನಡೆಸಿತು. ಇದರಿಂದ ಖೇದಗೊಂಡ ರಾಜ್ಯಪಾಲರು, ಅಲ್ಲೇ ಇದ್ದ ಟೀ ಅಂಗಡಿ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಮಾತ್ರವಲ್ಲ, ಆಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ, ವಿಚಾರವನ್ನು ತಿಳಿಸಿದರು. ತಾನು ರಾಜ್ಯಪಾಲರಾಗಿದ್ದರೂ ತನಗೆ ಭದ್ರತೆ ಇಲ್ಲದಂತಾಗಿದೆ ಎಂದು

ಟೀ ಅಂಗಡಿಯಲ್ಲಿ ಕುಳಿತು ಕೇರಳ ರಾಜ್ಯಪಾಲರ ಪ್ರತಿಭಟನೆ! Read More »

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ

ಅಯೊಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಕ್ರವಾರ ಸಂಜೆ ಶ್ರೀ ರಾಮನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು, ಉತ್ಸವ ನಡೆಸಲಾಯಿತು. ಶ್ರೀ ರಾಮಲಲ್ಲಾನ ವಿಗ್ರಹವನ್ನು ವಾದ್ಯಘೋಷ, ವಿಷ್ಣುಸಹಸ್ರನಾಮ, ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆವರಣದ ಸುತ್ತ ಒಂದು ಸುತ್ತು ತಂದು, ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನಡೆಸಲಾಯಿತು.

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ Read More »

ಜ್ಞಾನವಾಪಿ ಮಸೀದಿ: ಎಎಸ್ಐ ಸಮೀಕ್ಷೆ ವರದಿ ಬಹಿರಂಗ

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಸಮೀಕ್ಷಾ ವರದಿಯನ್ನು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ಬಹಿರಂಗಪಡಿಸಿದ್ದು, ಮೊದಲೇ ಅಸ್ತಿತ್ವದಲ್ಲಿರುವ ದೇವಾಲಯದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಗುರುವಾರ ಹೇಳಿದ್ದಾರೆ. 839 ಪುಟಗಳ ಸಮೀಕ್ಷಾ ವರದಿಯ ಪ್ರತಿಗಳನ್ನು ಗುರುವಾರ ತಡರಾತ್ರಿ ನ್ಯಾಯಾಲಯವು ಸಂಬಂಧಪಟ್ಟ ಕಕ್ಷಿದಾರರಿಗೆ ನೀಡಿದೆ ಎಂದು ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಿಂದೆ ಇದ್ದ ದೇವಸ್ಥಾನವನ್ನು ಕೆಡವಿದ ಅವಶೇಷಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಸಮೀಕ್ಷೆಯ

ಜ್ಞಾನವಾಪಿ ಮಸೀದಿ: ಎಎಸ್ಐ ಸಮೀಕ್ಷೆ ವರದಿ ಬಹಿರಂಗ Read More »

ಪದ್ಮ ಪ್ರಶಸ್ತಿ ಪುರಸ್ಕೃತ 132 ಸಾಧಕರಿಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ದೇಶಾದ್ಯಂತ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧ್ವಜಾರೋಹಣ ನೆರವೇರಿದೆ. ಈ ಸಂದರ್ಭದಲ್ಲಿ 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವ 132 ಸಾಧಕರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದ 9 ಮಂದಿ ಸೇರಿ ಒಟ್ಟು 132 ಮಂದಿಗೆ ಪ್ರಶಸ್ತಿ ಲಭಿಸಿದ್ದು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ

ಪದ್ಮ ಪ್ರಶಸ್ತಿ ಪುರಸ್ಕೃತ 132 ಸಾಧಕರಿಗೆ ಪ್ರಧಾನಿ ಮೋದಿ ಅಭಿನಂದನೆ Read More »

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠಾ ವಿಧಿವಿಧಾನಗಳಿಗೆ ಚಾಲನೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನಗಳು ಆರಂಭವಾಗಿದ್ದು, ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇಂದು ಮುಂಜಾನೆ ಪ್ರಾಣಪ್ರತಿಷ್ಠೆಗೆ  ವಿಧಿವಿಧಾನ ಆರಂಭವಾಗಿದ್ದು, 114 ಕಲಶಗಳಿಂದ ವಿವಿಧ ಔಷಧೀಯ ನೀರಿನಿಂದ ವಿಗ್ರಹ ಸ್ನಾನ ನಡೆಸಲಾಯಿತು. ಕಲಶ ನೀರಿನಿಂದ ಮೂರ್ತಿಗಳ ಪುಣ್ಯ ಸ್ನಾನದ ಬಳಿ ಪ್ರತಿಷ್ಠಾಪಿಸಲಿರುವ ದೇವತೆಗಳಿಗೆ ನಿತ್ಯ ಪೂಜೆ, ಹವನ, ಪಾರಾಯಣ ನಡೆದಿದೆ. ಪ್ರಾತಃಕಾಲ ಮಾಧ್ವಾಧೀನಗಳು, ಮಹಾಪೂಜೆ, ಉತ್ಸವ ಮೂರ್ತಿ ಪ್ರಸಾದ ಪರಿಕ್ರಮ, ತತ್ತ್ವನ್ಯಾಯ, ಮಹನ್ಯಾಸ, ಅದಿನ್ಯಾಸ, ಅಘೋರ ಹೋಮ, ವ್ಯಾಹೃತಿ ಹೋಮ, ಜಾಗರಣ, ಸಂಜೆಪೂಜೆ ಹಾಗೂ

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠಾ ವಿಧಿವಿಧಾನಗಳಿಗೆ ಚಾಲನೆ Read More »

ಪ್ರಧಾನಿ ನರೇಂದ್ರ ಮೋದಿಯಿಂದ ರಾಮ ಪ್ರತಿಷ್ಠೆ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ | ಆರು ಚಿತ್ರಗಳನ್ನೊಳಗೊಂಡ ಅಂಚೆ ಚೀಟಿ

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ರಾಮಮಂದಿರದ ಸ್ಮರಣಾರ್ಥ ಆರು ಅಂಚೆ ಚೀಟಿಗಳನ್ನು ಇಂದು ಬಿಡುಗಡೆ ಮಾಡಿದರು. ಅಂಚೆಚೀಟಿಗಳನ್ನು ಹೊಂದಿರುವ ಆಲ್ಬಂ ತೆರೆಯುವ ಮೂಲಕ ಬಿಡುಗಡೆ ಮಾಡಿದ್ದಾರೆ. ಅಂಚೆಚೀಟಿಗಳ ವಿನ್ಯಾಸವು ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಸಂಬಂಧಿಸಿದ ಚಿತ್ರ ಹಾಗೂ ವಿಷಯಗಳನ್ನೊಳಗೊಂಡಿದ್ದು, ದೇವಾಲಯ, ‘ಮಂಗಳ್ ಭಾವನ್ ಅಮಂಗಳ್ ಹಾರಿ, ಸೂರ್ಯ, ಸರಯು ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳು ಕಾಣಸಿಗುತ್ತದೆ. ಅಂಚೆಚೀಟಿ ಸಂಗ್ರಹವು ಆರು ರೀತಿಯಲ್ಲಿದೆ. ರಾಮ ಮಂದಿರ, ಗಣೇಶ, ಹನುಮಾನ್‌, ಜಟಾಯು, ಕೇವತ್ರಾಜ್ ಮತ್ತು ಶಬರಿಯ ಚಿತ್ರಣಗಳನ್ನು

ಪ್ರಧಾನಿ ನರೇಂದ್ರ ಮೋದಿಯಿಂದ ರಾಮ ಪ್ರತಿಷ್ಠೆ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ | ಆರು ಚಿತ್ರಗಳನ್ನೊಳಗೊಂಡ ಅಂಚೆ ಚೀಟಿ Read More »

ಭಕ್ತರೊಬ್ಬರಿಂದ ನಿರ್ಮಾಣವಾಯಿತು ಪಾರ್ಲೆ-ಜಿ ಬಿಸ್ಕೆಟ್‍ ನಿಂದ ರಾಮ ಮಂದಿರ ಪ್ರತಿಕೃತಿ | 20 ಕೆ.ಜಿ. ಬಿಸ್ಕೆಟ್ ಬಳಕೆ

20 ಕೆ.ಜಿ.ಪಾರ್ಲೆ-ಜಿ ಬಿಸ್ಕೆಟ್ ಬಳಸಿ ಅಯೋಧ್ಯೆ ರಾಮ ಮಂದಿರದ ಪ್ರತಿಕೃತಿ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ರಾಮಭಕ್ತಿ ತೋರಿಸಿದ್ದಾರೆ. ಪಶ್ಚಿಮ ಬಂಗಾಳದ ದುರ್ಗಾಪುರ ಜಿಲ್ಲೆಯ ಛೋಟಾನ್ ಘೋಷ್ ಎಂಬವರು ಪಾರ್ಲೆ- ಜಿ ಬಿಸ್ಕೆಟ್ ಬಳಸಿ ನಾಲ್ಕು ಅಡಿ ಎತ್ತರದ ರಾಮಮಂದಿರ ಪ್ರತಿಕೃತಿ ರಚಿಸಿದ್ದಾರೆ. ಐದು ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸಿದ್ದು, ನಿರ್ಮಾಣಕ್ಕೆ ಪ್ಲೈವುಡ್, ಅಂಟು ಬಳಸಲಾಗಿದೆ.  ಸ್ನೇಹಿತರು ಸಹಾಯ ಮಾಡಿದ್ದಾರೆ ಎಂದಿದ್ದಾರೆ ಛೋಟಾನ್ ಘೋಷ್

ಭಕ್ತರೊಬ್ಬರಿಂದ ನಿರ್ಮಾಣವಾಯಿತು ಪಾರ್ಲೆ-ಜಿ ಬಿಸ್ಕೆಟ್‍ ನಿಂದ ರಾಮ ಮಂದಿರ ಪ್ರತಿಕೃತಿ | 20 ಕೆ.ಜಿ. ಬಿಸ್ಕೆಟ್ ಬಳಕೆ Read More »

error: Content is protected !!
Scroll to Top