ದೇಶ

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ

ನವದೆಹಲಿ :  ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಮೋದಿ ಸಲ್ಲಿಸಿದರು. ರಾಷ್ಟ್ರಪತಿಗಳು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯಲು ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟವನ್ನು ವಿನಂತಿಸಿದರು ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ Read More »

ಜೂನ್ 8 : ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಜೂನ್ 8 ರಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ನರೇಂದ್ರ ಮೋದಿ ಅವರ ಹೆಸರಿಗೆ ಹೊಸ ದಾಖಲೆ ಸೇರ್ಪಡೆಯಾಗಲಿದೆ. ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾದ ದೇಶದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಜೂನ್ 8 : ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ Read More »

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಜಯಭೇರಿ | 1.52 ಲಕ್ಷ ಮತಗಳ ಅಂತರದಿಂದ ಗೆಲುವು

ನವದೆಹಲಿ : ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ವಿರುದ್ಧ ಸ್ಪರ್ಧಿಸಿದ್ದ ಪ್ರಧಾನಿ ಮೋದಿ ಅವರು ಜಯಭೇರಿ ಬಾರಿಸಿದ್ದಾರೆ. ಮೊದ ಮೊದಲು ಮತ ಎಣಿಕೆ ಆರಂಭವಾದಾಗ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಮುನ್ನಡೆ ಕಾಯ್ದುಕೊಂಡಿದ್ದರು. ಇದಾದ ಬಳಿಕ ಸುಮಾರು 4998 ಮತಗಳ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ನಂತರ ಹಿನ್ನಡೆ ಅನುಭವಿಸಿದರು. ಕೊನೇ ಹಂತದ ಮತ ಎಣಿಕೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ

ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಜಯಭೇರಿ | 1.52 ಲಕ್ಷ ಮತಗಳ ಅಂತರದಿಂದ ಗೆಲುವು Read More »

ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಕಮಿಷನರ್ ಆಫೀಸರ್ ಆಗಿ ಭವ್ಯ ನರಸಿಂಹ ಮೂರ್ತಿ ನೇಮಕ | ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಮಹಿಳಾ ಪ್ರಾದೇಶಿಕ ಸೇವಾ ಅಧಿಕಾರಿ

ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಕಮಿಷನರ್ ಆಫೀಸರ್ ಆಗಿ ನಿಯೋಜನೆಗೊಂಡಿದ್ದಾರೆ. ಅವರು ಕಾಶ್ಮೀರದಲ್ಲಿ ಭಾರತ ಪಾಕಿಸ್ಥಾನ ಗಡಿಯ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನಂಟ್ ಆಗಿ ಇದೀಗ ಯೋಜನೆಗೊಂಡಿದ್ದಾರೆ. ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಹಾಗೂ 2022 ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದೇನೆ ಎಂದು ಹೆಮ್ಮೆಯಾಗುತ್ತಿದೆ. ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ

ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಕಮಿಷನರ್ ಆಫೀಸರ್ ಆಗಿ ಭವ್ಯ ನರಸಿಂಹ ಮೂರ್ತಿ ನೇಮಕ | ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಮಹಿಳಾ ಪ್ರಾದೇಶಿಕ ಸೇವಾ ಅಧಿಕಾರಿ Read More »

ಬ್ರಿಟನ್ ನಿಂದ 100 ಟನ್ ಚಿನ್ನ ತಂದ ಆರ್.ಬಿ.ಐ. | ದೇಶದ ಇತಿಹಾಸದಲ್ಲೇ ಮೊದಲು

1991 ರಲ್ಲಿ ದೇಶದ ಆರ್ಥಿಕ  ಬಿಕ್ಕಟ್ಟಿಗಾಗಿ ಬ್ರಿಟನ್ ನಲ್ಲಿ ಚಿನ್ನ ಅಡವಿಟ್ಟಿದ್ದ ಭಾರತ 2024 ರಲ್ಲಿ ಇಂಗ್ಲೆಂಡ್‌ನಲ್ಲಿದ್ದ ತನ್ನ 100 ಟನ್‌ಗೂ ಅಧಿಕ ಚಿನ್ನವನ್ನು ದೇಶಿಯ ಖಜಾನೆಗಳಿಗೆ ರವಾನಿಸಿದೆ. ಭಾರತ ಬದಲಾಗಿದೆ, ಆರ್ಥಿಕತೇ ಸದೃಢವಾಗಿದೆ. ಮೋದಿ ಇದ್ದರೆ ಎಲ್ಲವೂ ಸಾಧ್ಯ. ಹಿಂದೆ ಮನೆಯ ಯಜಮಾನನ ಅಡ್ಡಾದಿಡ್ಡಿಯ ಆಡಳಿತದಿಂದ ಬಡವಾದ ಮನೆಯ ಮಾನವಾದ ಚಿನ್ನವನ್ನು ಬ್ಯಾಂಕಿನಲ್ಲಿ ಅಡವಿಟ್ಟು ವರ್ಷ ವರ್ಷ ಬಡ್ಡಿ ಕಟ್ಟುತ್ತಿದ್ದ. ಈಗಿನ ಯಜಮಾನ ಆಡಳಿತ ಬಿಗಿಯಾಗಿಸಿ ಭ್ರಷ್ಟಾಚಾರಿಗಳನ್ನು ಬಗ್ಗು ಬಡಿದು ಸೋರಿಕೆಯನ್ನು ತಡೆಗಟ್ಟಿ ಮನೆಯ ಆರ್ಥಿಕ

ಬ್ರಿಟನ್ ನಿಂದ 100 ಟನ್ ಚಿನ್ನ ತಂದ ಆರ್.ಬಿ.ಐ. | ದೇಶದ ಇತಿಹಾಸದಲ್ಲೇ ಮೊದಲು Read More »

ದೇಶದ ಜಿಡಿಪಿ ನಿರೀಕ್ಷೆ ಮೀರಿ ಪ್ರಗತಿ | ಶೇ.8.2% ಪ್ರಗತಿ

ಪ್ರಸ್ತುತ ಸಾಲಿನಲ್ಲಿ ಶೇ.7.7ರಷ್ಟು ಜಿಡಿಪಿ ಏರಿಕೆಯಾಗಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿತ್ತು. ಆದರೆ ಎಲ್ಲರ ನಿರೀಕ್ಷೆ ತಲೆಕೆಳಗೆ ಮಾಡಿ ಶೇ.8.2ರಷ್ಟು ಜಿಡಿಪಿ ದಾಖಲಾಗಿದೆ. 2024ರ ಮೊದಲ 3 ತ್ರೈಮಾಸಿಕದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ಕೇವಲ ಶೇ.5.3ರಷ್ಟು ಏರಿಕೆ ಕಂಡಿದೆ. ಅದಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಜಿಡಿಪಿ ಪ್ರಗತಿ ನಮ್ಮ ಆರ್ಥಿಕತೆಯ ಶಕ್ತಿ ತೋರಿಸುತ್ತಿದೆ. ಕಷ್ಟಪಟ್ಟು ದುಡಿವ ಜನರಿಗೆ ಧನ್ಯವಾದ. ಇದು ಟ್ರೇಲರ್ ಮಾತ್ರ.

ದೇಶದ ಜಿಡಿಪಿ ನಿರೀಕ್ಷೆ ಮೀರಿ ಪ್ರಗತಿ | ಶೇ.8.2% ಪ್ರಗತಿ Read More »

ವ್ಯಕ್ತಿಯಿಂದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ನ್ಯಾಯವಾದಿಗಳು

ಇಂದೋರ್: ನ್ಯಾಯಾಧೀಶರ ಮೇಲೆ ಚಪ್ಪಲಿ ಹಾರ ಎಸೆದ ವ್ಯಕ್ತಿಯೊಬ್ಬನನ್ನು ನ್ಯಾಯವಾದಿಗಳು ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದೋರ್ ನಲ್ಲಿ ನಡೆದಿದೆ. ಮಹಮ್ಮದ್ ನಲಿಂ ಎಂಬಾತ  ನ್ಯಾಯಾಧೀಶರ ಮೇಲೆ ಚಪ್ಪಲಿಯ ಹಾರ ಎಸೆದವನು. ಈ ಘಟನೆಯ ನಂತರ ನ್ಯಾಯಾಲಯದ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಯಿತು. ವಿಚಿತ್ರವೆಂದರೆ ಈ ನ್ಯಾಯಾಲಯದಲ್ಲಿ ಈ ಹಿಂದೆಯು ಕೂಡ ಈ ರೀತಿಯ ಘಟನೆಗಳು ನಡೆದಿದ್ದವು. ಪೊಲೀಸರು ಕೂಡಾ ಯಾಕೆ ಜಾಗರೂಕರಾಗುತ್ತಿಲ್ಲ ಎಂಬುದು ಪ್ರಶ್ನೆ ಉದ್ಭವಿಸಿದೆ. ಈ ನ್ಯಾಯಾಲಯದಲ್ಲಿ ಇಬ್ಬರು ಮೌಲ್ವಿಗಳ  ವಿರುದ್ಧದ

ವ್ಯಕ್ತಿಯಿಂದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ | ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ನ್ಯಾಯವಾದಿಗಳು Read More »

ಅಯೋಧ್ಯೆ ರಾಮಮಂದಿರ ಸ್ಪೋಟಿಸುವ ಬೆದರಿಕೆ ಹಾಕಿದ ಇಬ್ಬರ ಬಂಧನ

ಲಕ್ನೋ: ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ 14 ವರ್ಷದ ಬಾಲಕ ಹಾಗೂ ಆತನ ಅಜ್ಜಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕ ಮಂಗಳವಾರ ರಾತ್ರಿ ಪೊಲೀಸ್ ಕಂಟ್ರೋಲ್ ರೂಮ್‌ನ ತುರ್ತು ಸಹಾಯವಾಣಿ 112ಕ್ಕೆ ಕರೆಮಾಡಿ, ಮಂದಿರವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಪೊಲೀಸರು ಸೈಬರ್ ಸೆಲ್ ಸಹಾಯದಿಂದ ಆರೋಪಿಗಳಿರುವ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಇದೀಗ ಆರೋಪಿ ಬಾಲಕ ಹಾಗೂ ಆತನ ಅಜ್ಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕ ಬುದ್ದಿಮಾಂದ್ಯತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ

ಅಯೋಧ್ಯೆ ರಾಮಮಂದಿರ ಸ್ಪೋಟಿಸುವ ಬೆದರಿಕೆ ಹಾಕಿದ ಇಬ್ಬರ ಬಂಧನ Read More »

ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ಕನ್ಯಾಕುಮಾರಿಗೆ ತೆರಳಲಿದ್ದಾರೆ ಮೋದಿ| ಎರಡು ದಿನ ಧ್ಯಾನಾಸ್ಥರಾಗಲಿದ್ದಾರೆ ಮೋದಿ

ಹೊಸದಿಲ್ಲಿ : ಲೋಕಸಭಾ ಚುನಾವಣೆ ಪ್ರಚಾರ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದ ಕನ್ಯಾಕುಮಾರಿಯ ಧ್ಯಾನ ಮಂದಿರದಲ್ಲಿ ಮೋದಿ ಮೇ 30ರ ಸಂಜೆಯಿಂದ ಜೂನ್ 1ರ ಸಂಜೆವರೆಗೆ ಧ್ಯಾನ ಮಾಡಲಿದ್ದಾರೆ. ತಿರುನಲ್ವೇಲಿ ಡಿಐಜಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದ್ದು ಈಗಾಗಲೇ ಸ್ಥಳದಲ್ಲಿ ಮೋದಿಗೆ ಭದ್ರತೆ ನೀಡುವ ಎಸ್‌ಪಿಜಿ ತಂಡ ಬಿಡುಬಿಟ್ಟಿದೆ. ಈ ಸ್ಥಳದ ಭದ್ರತೆಗೆ 2000 ಪೊಲೀಸರನ್ನು ನಿಯೋಜಿಸಲಾಗುತ್ತದೆ. ಜೂನ್ 30ರ ಸಂಜೆ 4.45ಕ್ಕೆ ಪ್ರಧಾನಿ ಮೋದಿ ಧ್ಯಾನ

ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆ ಕನ್ಯಾಕುಮಾರಿಗೆ ತೆರಳಲಿದ್ದಾರೆ ಮೋದಿ| ಎರಡು ದಿನ ಧ್ಯಾನಾಸ್ಥರಾಗಲಿದ್ದಾರೆ ಮೋದಿ Read More »

3ನೇ ಮಗು ಹುಟ್ಟಿದ್ದಕ್ಕೆ ಬಿಜೆಪಿ ಸದಸ್ಯತ್ವ ಕಳೆದುಕೊಂಡ ಇಬ್ಬರು ನಗರಪಾಲಿಕೆ ಸದಸ್ಯರು

ಅಹಮದಾಬಾದ್: 3ನೇ ಮಗು ಹುಟ್ಟಿದಕ್ಕಾಗಿ ಇಬ್ಬರು ಬಿಜೆಪಿ ಸದಸ್ಯರು ತಮ್ಮ ಸದಸ್ಯತನ ಕಳೆದುಕೊಂಡಿದ್ದಾರೆ. ಗುಜರಾತ್‌ನ ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು ತಮ್ಮ ಸದಸ್ಯತ್ವ ಕಳೆದುಕೊಂಡಿರುವುದು. ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅವರೇ ಅನರ್ಹಗೊಂಡ ಬಿಜೆಪಿ ಸದಸ್ಯರು. ಅನರ್ಹರಾದರೂ ನಗರಪಾಲಿಕೆ ಬಿಜೆಪಿ ತೆಕ್ಕೆಯಲ್ಲೇ ಇರಲಿದೆ. ಏಕೆಂದರೆ ಅಷ್ಟು ಬಹುಮತ ಬಿಜೆಪಿಗೆ ಇದೆ. 2005-06 ರಲ್ಲಿ ಆಗಿನ ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ 1963ರ ಮುನ್ಸಿಪಲ್ ಕಾಯಿದೆಗೆ ತಿದ್ದುಪಡಿ ಮಾಡಿ ಎರಡಕ್ಕಿಂತ ಹೆಚ್ಚು

3ನೇ ಮಗು ಹುಟ್ಟಿದ್ದಕ್ಕೆ ಬಿಜೆಪಿ ಸದಸ್ಯತ್ವ ಕಳೆದುಕೊಂಡ ಇಬ್ಬರು ನಗರಪಾಲಿಕೆ ಸದಸ್ಯರು Read More »

error: Content is protected !!
Scroll to Top