ವಿದೇಶ

ಸಂಸದರನ್ನೇ ಎತ್ತಿ ನೆಲಕ್ಕೆ ಕುಕ್ಕಿದರು: ಮಾಲ್ಡೀವ್ಸ್ ಸಂಸತ್ತಿನ ಫೊಟೋ, ವೀಡಿಯೋ ವೈರಲ್!

ಸಂಸತ್ತಿನಲ್ಲಿ ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಮಾಲ್ಡೀವ್ಸ್‌ನ ಸಂಸತ್ತಿನಲ್ಲಿ ನಡೆದಿರುವ ಘಟನೆಯೇ ಅಚ್ಚರಿ ಮೂಡಿಸಿದೆ. ಇಲ್ಲಿ ಸಂಸತ್ತಿನಲ್ಲಿ ಹೊಡೆದಾಟ, ಬಡಿದಾಟ ನಡೆದಿದ್ದು ಮಾತ್ರವಲ್ಲದೆ ಸಂಸದರು ಒಬ್ಬರನ್ನೊಬ್ಬರು ಎತ್ತಿಕೊಂಡು ನೆಲದ ಮೇಲೆ ಕುಕ್ಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ವಿಡಿಯೋದಲ್ಲಿ ಒಬ್ಬ ಸಂಸದ ಮತ್ತೊಬ್ಬನ ಕಾಲು ಎಳೆಯುತ್ತಿರುವುದು ಕಂಡು ಬರುತ್ತಿದೆ. ಮುಯಿಝು ಕ್ಯಾಬಿನೆಟ್ ಮೇಲಿನ ಮತದಾನಕ್ಕಾಗಿ ಇದೆಲ್ಲ ನಡೆದಿದೆ. ವಾಸ್ತವವಾಗಿ ಇಲ್ಲಿ ಸಚಿವ ಸಂಪುಟಕ್ಕೆ ಮತದಾನ ನಡೆಯಬೇಕಿತ್ತು. ಆದರೆ ವಿರೋಧ ಪಕ್ಷವು ನಾಲ್ವರು ಸಚಿವರ […]

ಸಂಸದರನ್ನೇ ಎತ್ತಿ ನೆಲಕ್ಕೆ ಕುಕ್ಕಿದರು: ಮಾಲ್ಡೀವ್ಸ್ ಸಂಸತ್ತಿನ ಫೊಟೋ, ವೀಡಿಯೋ ವೈರಲ್! Read More »

ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಪಾಕ್ ಹೊಸ ಖ್ಯಾತೆ!!

ಹೊಸದಿಲ್ಲಿ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವು ಕಳೆದ ವಾರ ನಡೆದಿದ್ದು, ಇಡೀ ವಿಶ್ವದ ಗಮನ ಸೆಳೆದಿತ್ತು. ಆದರೆ ಭಾರತ ಮತ್ತು ಭಾರತೀಯರ ಸಂತೋಷವನ್ನು ಸಹಿಸದ ಪಾಕಿಸ್ತಾನವು ಹೊಸ ವರಸೆ ಶುರು ಮಾಡಿದೆ. ಅಯೋಧ್ಯೆಯಲ್ಲಿ ದಶಕಗಳ ನಂತರ ದೇವಾಲಯ ಮತ್ತು ಮಸೀದಿಯ ವಿವಾದವು ಕೊನೆಗೊಂಡು ದೇವಾಲಯ ನಿರ್ಮಾಣವಾಗಿದೆ. ಆದರೆ ಪಾಕಿಸ್ತಾನವು ಮಂದಿರದ ಬಗ್ಗೆ ದೂರು ನೀಡಲು ವಿಶ್ವಸಂಸ್ಥೆಗೆ ಔಪಚಾರಿಕವಾಗಿ ಪತ್ರ ಬರೆದಿದೆ. ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮುನೀರ್ ಅಕ್ರಮ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ

ಅಯೋಧ್ಯೆ ರಾಮ ಮಂದಿರ ವಿಷಯದಲ್ಲಿ ಪಾಕ್ ಹೊಸ ಖ್ಯಾತೆ!! Read More »

ಮಂಗಳನ ಅಂಗಳದಲ್ಲಿ ಹಾರಾಟ ನಿಲ್ಲಿಸಿದ ನಾಸಾದ ನೌಕೆ!

ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿದ್ದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬಾಹ್ಯಾಕಾಶ ನೌಕೆ ‘ಇಂಜೆನ್ಯುಯಿಟಿ’ ತನ್ನ ಹಾರಾಟವನ್ನು ನಿಲ್ಲಿಸಿದೆ. ನಾಸಾದ ಪುಟ್ಟ ಹೆಲಿಕಾಪ್ಟರ್‌ ‘ಇಂಜೆನ್ಯುಯಿಟಿ’ ಮಂಗಳ ಗ್ರಹದಲ್ಲಿ ತನ್ನ ಕಡೆಯ ಹಾರಾಟವನ್ನು ನಡೆಸಿ ಹಾರಾಟ ಸ್ಥಗಿತಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ನಾಸಾ, 1.8 ಕೆ.ಜಿ ತೂಕದ ‘ಇಂಜೆನ್ಯುಯಿಟಿ’ ಮತ್ತೆಂದೂ ಹಾರಾಟ ನಡೆಸುವುದಿಲ್ಲ. ನೌಕೆಯ ರೆಕ್ಕೆಗಳು ಜಖಂಗೊಂಡಿದ್ದು, ಹೀಗಾಗಿ ಇದರ ಕಾರ್ಯ ಸ್ಥಗಿತವಾಗಿದೆ. ಪ್ರಸ್ತುತ ಬಿದ್ದಿರುವ ನೌಕೆ ಮಂಗಳ ಗ್ರಹದಲ್ಲಿಯೇ ಇರಲಿದ್ದು, ನಿಯಂತ್ರಣ ಕೊಠಡಿ ಜೊತೆ ಸಂಪರ್ಕದಲ್ಲಿರಲಿದೆ.

ಮಂಗಳನ ಅಂಗಳದಲ್ಲಿ ಹಾರಾಟ ನಿಲ್ಲಿಸಿದ ನಾಸಾದ ನೌಕೆ! Read More »

ಆಸ್ಟ್ರೇಲಿಯದ ಬೀಚಿನಲ್ಲಿ ದುರಂತ: ನಾಲ್ವರು ಭಾರತೀಯರ ಸಾವು

ಮೆಲ್ಬೋರ್ನ್: ಆಸ್ಟ್ರೇಲಿಯದ ವಿಕ್ಟೋರಿಯಾ ರಾಜ್ಯದ ಬೀಚ್ ಒಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಭಾರತೀಯರು ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ವಿಕ್ಟೋರಿಯಾ ಫಿಲಿಪ್ ಐಲ್ಯಾಂಡ್ನಲ್ಲಿ ಈ ದುರಂತ ಸಂಭವಿಸಿದೆ. ಮಧ್ಯಾಹ್ನ 3:30ರ ಸಮಯ ಸಮುದ್ರದಲ್ಲಿ ಈಜಲು ಹೋದ ಈ ನಾಲ್ವರು ಮುಳುಗಿ ಸಾವನ್ನಪ್ಪಿದ್ದಾರೆ. ಈ ಬೀಚಿನಲ್ಲಿ ಜೀವರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿರಲಿಲ್ಲವೆಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಆನಂತರ ಧಾವಿಸಿದ ಜೀವ ರಕ್ಷಕ ದಳದ ಸಿಬ್ಬಂದಿಗಳು ಈ ನಾಲ್ವರನ್ನು ಸಮುದ್ರದ ತೀರಕ್ಕೆ ತಂದಾಗ ಅವರೆಲ್ಲರೂ ಆಗಲೇ ಸಾವನ್ನಪ್ಪಿದ್ದರು ಎಂದು

ಆಸ್ಟ್ರೇಲಿಯದ ಬೀಚಿನಲ್ಲಿ ದುರಂತ: ನಾಲ್ವರು ಭಾರತೀಯರ ಸಾವು Read More »

ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕನ್ಬೌರ್ ಇನ್ನಿಲ್ಲ!

ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕನ್ಬೌರ್ (78) ನಿಧನರಾಗಿದ್ದಾರೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಪ್ರಕಟಿಸಿದೆ. “ಫ್ರಾಂಜ್ ಬೆಕನ್ಬೌರ್ ಅಗಲಿಕೆ ತೀವ್ರ ದುಃಖದ ವಿಚಾರ” ಎಂದು ಅವರ ಕುಟುಂಬವು ಜರ್ಮನ್ ಸುದ್ದಿ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ. 1974ರಲ್ಲಿ ಜರ್ಮನಿ ತಂಡದ ನಾಯಕರಾಗಿದ್ದಾಗ ಬೆಕನ್ಬೌರ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರು. ನಿವೃತ್ತಿ ಬಳಿಕ ಅವರು ತಂಡದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ 1990ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದಿತ್ತು.

ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕನ್ಬೌರ್ ಇನ್ನಿಲ್ಲ! Read More »

ಮೋದಿ, ಭಾರತ ವಿರೋಧಿಸಿದ್ದ ಮಾಲ್ಡೀವ್ಸ್’ಗೆ ಮರ್ಮಾಘಾತ!! | `ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ!

ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಮೂವರು ಸಚಿವರನ್ನು ಮಾಲ್ಡೀವ್ಸ್‌ ಸರ್ಕಾರ ಅಮಾನತುಗೊಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಡೆಪ್ಯುಟಿ ಮಿನಿಸ್ಟರ್ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರ ವಿರುದ್ಧ ಮಾಲ್ಡೀವ್ಸ್ ಸರ್ಕಾರವು ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಕುರಿತು ಮಾಲ್ಡೀವ್‌ ಸಚಿವ ಮರಿಯಮ್ ಶಿಯುನಾ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಲಕ್ಷದ್ವೀಪ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಸರಿ. ಆದರೆ ನಮ್ಮೊಟ್ಟಿಗೆ ಸ್ಪರ್ಧಿಸಲು ನಿಮಗೆ ಆಗುವುದಿಲ್ಲ ಅದು ಭ್ರಮೆ. ಭಾರತವು ಸಮುದ್ರತೀರದ ಪ್ರವಾಸೋದ್ಯಮದಲ್ಲಿ ಮಾಲ್ಡೀವ್ಸ್‌

ಮೋದಿ, ಭಾರತ ವಿರೋಧಿಸಿದ್ದ ಮಾಲ್ಡೀವ್ಸ್’ಗೆ ಮರ್ಮಾಘಾತ!! | `ಬಾಯ್ಕಾಟ್ ಮಾಲ್ಡೀವ್ಸ್’ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ! Read More »

ಬಾಂಗ್ಲಾ ಪ್ರಧಾನಿಯಾಗಿ ಶೇಖ್ ಹಸೀನಾ ಮರು ಆಯ್ಕೆ

ಢಾಕಾ: ಭಾನುವಾರ ಬಾಂಗ್ಲಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ 300 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಶೇಖ್ ಹಸೀನಾ ಅವರು ಸತತ ಐದನೇ ಬಾರಿಗೆ ಪ್ರಧಾನಿಯಾಗಿ ಮರು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಚುನಾವಣಾ ಫಲಿತಾಂಶದಲ್ಲಿ ಶೇಖ್ ಹಸೀನಾ ಅವರ ಪಕ್ಷ ಅವಾಮಿ ಲೀಗ್ 300 ಸಂಸದೀಯ ಸ್ಥಾನಗಳ ಪೈಕಿ 224 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಾಂಗ್ಲಾದೇಶದ ರಾಷ್ಟ್ರೀಯ ಪಕ್ಷವು ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು 62 ಸ್ಥಾನಗಳಲ್ಲಿ ಗೆಲುವು

ಬಾಂಗ್ಲಾ ಪ್ರಧಾನಿಯಾಗಿ ಶೇಖ್ ಹಸೀನಾ ಮರು ಆಯ್ಕೆ Read More »

ನೌಕಪಡೆಯ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ 15 ಭಾರತೀಯರ ರಕ್ಷಣೆ

ಅರಬ್ಬಿ ಸಮುದ್ರದಲ್ಲಿ ಹೈಜಾಕ್ ಆದ ಹಡಗಿನಲ್ಲಿದ್ದ ಎಲ್ಲಾ 15 ಭಾರತೀಯರನ್ನು ಭಾರತೀಯ ನೌಕಪಡೆಯ ಕಮಾಂಡೋಗಳು ರಕ್ಷಿಸಿದ್ದಾರೆ. ಸರಕು ಹಡಗು ಎಂವಿ ಲೀಲಾ ನಾರ್ಫೋಕ್ ನ್ನು ಗುರುವಾರ ಸಂಜೆ ಸೊಮಾಲಿಯಾ ಕರಾವಳಿಯಲ್ಲಿ ಅಪಹರಿಸಲಾಗಿತ್ತು. ಇದರಲ್ಲಿ 15 ಭಾರತೀಯರಿದ್ದರು. ಹಡಗಿನಲ್ಲಿ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಇದ್ದರು ಎಂದು ತಿಳಿದು ಬಂದಿತ್ತು. ಘಟನೆಯ ಬಗ್ಗೆ ತಿಳಿದ ನಂತರ, ಯುದ್ಧನೌಕೆ ಐಎನ್ಎಸ್ ಚೆನ್ನೈ ಸೊಮಾಲಿ ಕರಾವಳಿಯಲ್ಲಿ ಅಪಹರಣಕ್ಕೊಳಗಾದ ಹಡಗು ಎಂವಿ ಲೀಲಾ ನಾರ್ಫೋಕ್ಷ್ಯ ಸಮೀಪಿಸುತ್ತಿತ್ತು ಮತ್ತು ಅಪಹರಣಕ್ಕೊಳಗಾದ ಹಡಗನ್ನ ಬಿಡುಗಡೆ

ನೌಕಪಡೆಯ ಯಶಸ್ವಿ ಕಾರ್ಯಾಚರಣೆ: ಅಪಹರಣಕ್ಕೊಳಗಾದ 15 ಭಾರತೀಯರ ರಕ್ಷಣೆ Read More »

ಸೊಮಾಲಿಯಾ: ಭಾರತೀಯರಿದ್ದ ಹಡಗು ಹೈಜಾಕ್!! | ರಕ್ಷಣೆಗೆ ತೆರಳಿದ ಯುದ್ಧನೌಕೆ INS ಚೆನ್ನೈ!

ಭಾರತೀಯರಿದ್ದ ಲೈಬೀರಿಯನ್ ಧ್ವಜದ ಹಡಗನ್ನು ಸೊಮಾಲಿಯಾ ಕರಾವಳಿಯ ಬಳಿ ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಲೈಬೀರಿಯನ್ ಧ್ವಜದ ಹಡಗು ‘ಎಂವಿ ಲೀಲಾ ನಾರ್ಫೋಕ್’ ಎಂದು ಗುರುತಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಹಡಗನ್ನು ಭಾರತೀಯ ನೌಕಾಪಡೆ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿದುಬಂದಿದೆ. ಅಪಹರಣಕ್ಕೊಳಗಾದ ಹಡಗಿನ ಚಲನವಲನಗಳ ಮೇಲೆ ಜಾಗರೂಕ ನಿಗಾ ಇಡಲು ಭಾರತೀಯ ನೌಕಾಪಡೆಯ ವಿಮಾನಗಳನ್ನು ನಿಯೋಜಿಸಲಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈಯಿಂದ ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ ಎಂದು

ಸೊಮಾಲಿಯಾ: ಭಾರತೀಯರಿದ್ದ ಹಡಗು ಹೈಜಾಕ್!! | ರಕ್ಷಣೆಗೆ ತೆರಳಿದ ಯುದ್ಧನೌಕೆ INS ಚೆನ್ನೈ! Read More »

5 ಲಕ್ಷ ವಲಸಿಗರನ್ನು ದೇಶದಿಂದ ಹೊರ ಹಾಕಿದ ಪಾಕ್: ವರದಿ

ಲಾಹೋರ್: ಪಾಕಿಸ್ತಾನ ಸರ್ಕಾರದ ಗಡಿಪಾರು ಕಾರ್ಯಾಚರಣೆಯ ಭಾಗವಾಗಿ ಈಗಾಗಲೇ ಸುಮಾರು 5,00,000ಕ್ಕೂ ಅಧಿಕ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪಾಕಿಸ್ತಾನ ಸರ್ಕಾರ ಸಂಸತ್ ನಲ್ಲಿ ಮಾಹಿತಿ ನೀಡಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯ ಸೆನೆಟ್ ಅಥವಾ ಸಂಸತ್ತಿನ ಮೇಲ್ಮನೆಗೆ ಗಡಿಪಾರು ಕಾರ್ಯಾಚರಣೆಯ ಮಾಹಿತಿ ನೀಡಿದ್ದು, ಅದರಂತೆ ಪಾಕಿಸ್ತಾನದಲ್ಲಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ವಲಸಿಗರನ್ನು ದೇಶದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದೆ. ವಾಪಸಾತಿ ಮತ್ತು ಗಡೀಪಾರು ಅಭಿಯಾನದ

5 ಲಕ್ಷ ವಲಸಿಗರನ್ನು ದೇಶದಿಂದ ಹೊರ ಹಾಕಿದ ಪಾಕ್: ವರದಿ Read More »

error: Content is protected !!
Scroll to Top