ವಿದೇಶ

ಅಫಘಾನಿಸ್ಥಾನದಲ್ಲಿ ಪ್ರಬಲ ಭೂಕಂಪ : 20ಕ್ಕೂ ಅಧಿಕ ಮಂದಿ ಸಾವು

ಅವಶೇಷಗಳಡಿ ಸಿಲುಕಿರುವ ನೂರಾರು ಮಂದಿಯ ರಕ್ಷಣೆಗೆ ಹರಸಾಹಸ ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಗಡಿಯ ಸನಿಹ 6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 115 ಮಂದಿ ಗಾಯಗೊಂಡಿದ್ದಾರೆ. ಭೂಕಂಪ ಬಹಳ ಪ್ರಬಲವಾಗಿದ್ದು ಇನ್ನೂ ಅನೇಕ ಮಂದಿ ಅವೇಷಗಳಡಿ ಸಿಲುಕಿರುವುದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಗಾಯಾಳುಗಳನ್ನು ನಂಗ್ರಾರ್ ಮತ್ತು ಕುನಾರ್ ಪ್ರಾಂತ್ಯದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭಾನುವಾರ ತಡರಾತ್ರಿ ಈ ಭೂಕಂಪ ಸಂಭವಿಸಿದ್ದು, ಆ ಬಳಿಕ ಪಶ್ಚಾತ್‌ಕಂಪನದ […]

ಅಫಘಾನಿಸ್ಥಾನದಲ್ಲಿ ಪ್ರಬಲ ಭೂಕಂಪ : 20ಕ್ಕೂ ಅಧಿಕ ಮಂದಿ ಸಾವು Read More »

ಪ್ರಧಾನಿ ನರೇಂದ್ರ ಮೋದಿಯ ಐತಿಹಾಸಿಕ ಚೀನ ಭೇಟಿ ಪ್ರಾರಂಭ

7 ವರ್ಷಗಳ ಬಳಿಕ ಚೀನಕ್ಕೆ ಹೋದ ಮೋದಿ; ಅಧ್ಯಕ್ಷ ಷಿ ಜಿನ್​​ಪಿಂಗ್ ಜೊತೆ ಮಾತುಕತೆ ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಇಂದು ಚೀನ ಅಧ್ಯಕ್ಷ ಷಿ ಜಿನ್​​ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆ ಮಾತುಕತೆ ನಡೆಸಲಿದ್ದಾರೆ. ಜಪಾನ್ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಚೀನ ತಲುಪಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆ ಸಡ್ಡು ಹೊಡೆದು ಪ್ರಧಾನಿ ಮೋದಿ ಚೀನ ಭೇಟಿ ಕೈಗೊಂಡಿದ್ದು, ಇದನ್ನು ಇಡೀ ಜಗತ್ತು ಕುತೂಹಲದಿಂದ ವೀಕ್ಷಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯ ಐತಿಹಾಸಿಕ ಚೀನ ಭೇಟಿ ಪ್ರಾರಂಭ Read More »

ರಷ್ಯಾ ಡ್ರೋನ್‌ ದಾಳಿ : ಮುಳುಗಿದ ಉಕ್ರೇನ್‌ನ ಅತಿದೊಡ್ಡ ಸಮರ ನೌಕೆ

ತೀವ್ರಗೊಂಡ ರಷ್ಯಾ-ಉಕ್ರೇನ್‌ ಯುದ್ಧ ಮಾಸ್ಕೊ: ಕಳೆದ ಸುಮಾರು ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧ ಮತ್ತೆ ತೀವ್ರ ಸ್ವರೂಪ ತಾಳಿದ್ದು, ನಿನ್ನೆ ರಾತ್ರಿ ರಷ್ಯಾ ಡ್ರೋನ್‌ ದಾಳಿ ಮಾಡಿ ಉಕ್ರೇನ್‌ನ ನೌಕಾಪಡೆಯ ಪ್ರಮುಖ ಯುದ್ಧನೌಕೆಯೊಂದನ್ನು ಮುಳುಗಿಸಿದೆ. ಉಕ್ರೇನ್‌ನ ಗಸ್ತು ಹಡಗನ್ನು ರಷ್ಯಾ ಡ್ರೋನ್‌ ದಾಳಿ ನಡೆಸಿ ಮುಳುಗಿದೆ ಎಂದು ವರದಿಯಾಗಿದೆ. ಉಕ್ರೇನ್‌ ದೊಡ್ಡ ಗಸ್ತು ಹಡಗು ಸಿಮ್ಫೆರೊಪೋಲ್ ಡ್ಯಾನ್ಯೂಬ್ ನದಿಯಲ್ಲಿ ಸಂಚರಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ರಷ್ಯಾ ಹೇಳಿದೆ. ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್‌ಗಳನ್ನು ಈ ಹಡಗು ಹೊಂದಿತ್ತು.

ರಷ್ಯಾ ಡ್ರೋನ್‌ ದಾಳಿ : ಮುಳುಗಿದ ಉಕ್ರೇನ್‌ನ ಅತಿದೊಡ್ಡ ಸಮರ ನೌಕೆ Read More »

ಮುಂದಿನ ತಿಂಗಳು ಸಂಭವಿಸಲಿದೆ ಎರಡು ಗ್ರಹಣ

ಸೆ.7ಕ್ಕೆ ಚಂದ್ರ ಗ್ರಹಣ; ಸೆ.21ಕ್ಕೆ ಸೂರ್ಯ ಗ್ರಹಣ ಬೆಂಗಳೂರು : ಸೆಪ್ಟೆಂಬರ್ ತಿಂಗಳು ಖಗೋಳ ವಿಜ್ಞಾನ ಆಸಕ್ತರಿಗೆ ಬಹಳ ವಿಶೇಷವಾಗಿರಲಿದೆ. ಒಂದೇ ತಿಂಗಳಲ್ಲಿ ಎರಡು ದೊಡ್ಡ ಗ್ರಹಣಗಳು ಸಂಭವಿಸಲಿವೆ. ಸೆಪ್ಟೆಂಬರ್ 7ರಂದು ಚಂದ್ರ ಗ್ರಹಣ ಮತ್ತು ಸೆಪ್ಟೆಂಬರ್ 21ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಸೆ. 7ರಂದು ಸಂಭವಿಸಲಿರುವ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. 2025ರ ಎರಡನೇ ಸೂರ್ಯ ಗ್ರಹಣ ಸೆಪ್ಟೆಂಬರ್ 21ರ ರಾತ್ರಿ 11 ಗಂಟೆಗೆ ಪ್ರಾರಂಭವಾಗಿ ಸೆಪ್ಟೆಂಬರ್ 22ರ ಬೆಳಗ್ಗೆ 3.24ಕ್ಕೆ ಕೊನೆಗೊಳ್ಳುತ್ತದೆ. ಇದು ಭಾಗಶಃ

ಮುಂದಿನ ತಿಂಗಳು ಸಂಭವಿಸಲಿದೆ ಎರಡು ಗ್ರಹಣ Read More »

ಭಾರತದ ಅಭಿವೃದ್ಧಿಯನ್ನು ಅಮೆರಿಕಾಗೆ ‌ಸಹಿಸಲು ಆಗುತ್ತಿಲ್ಲ: ರಾಜನಾಥ್ ಸಿಂಗ್ ಟಾಂಗ್

ನವದೆಹಲಿ: ಭಾರತದ ಆರ್ಥಿಕ ಅಭಿವೃದ್ಧಿ ಕ್ರಿಯಾತ್ಮಕ ಮತ್ತು ವೇಗವಾದ ಬೆಳವಣಿಗೆ ಕಾಣುತ್ತಿದೆ. ಈ ಅಂಶ ಜಗತ್ತಿನ ಬಾಸ್ ಎಂದು ಕರೆಸಿಕೊಳ್ಳುವ ದೊಡ್ಡಣ್ಣನಿಗೆ ಸಹಿಸುವುದಕ್ಕೆ ‌ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕಾ ವಿರುದ್ಧ ರಕ್ಷಣಾ ಸಚಿವ ರಾಜ ನಾಥ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಭಾರತದ ಮೇಲೆ ಸುಂಕ ಯುದ್ಧ ಹೇರಿದ ಅಮೆರಿಕಾ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ ‌ನಡೆಸಿದ ಅವರು, ಭಾರತದ ಆರ್ಥಿಕ‌ ಬೆಳವಣಿಗೆಯ ವೇಗ ಗಮನಿಸಿದರೆ ಜಗತ್ತಿನ ಮಹಾಶಕ್ತಿಯಾಗಿ ಹೊಮ್ಮುವುದನ್ನು ತಡೆಯಲು ಯಾವ ಜಾಗತಿಕ ಶಕ್ತಿಗೂ ‌ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಾರತದ ಅಭಿವೃದ್ಧಿಯನ್ನು ಅಮೆರಿಕಾಗೆ ‌ಸಹಿಸಲು ಆಗುತ್ತಿಲ್ಲ: ರಾಜನಾಥ್ ಸಿಂಗ್ ಟಾಂಗ್ Read More »

ಇಸ್ರೇಲ್‌ ಕ್ಷಿಪಣಿ ದಾಳಿಯಲ್ಲಿ ಅಲ್‌ ಜಜೀರಾದ ಐವರು ಪತ್ರಕರ್ತರು ಸಾವು

ಪತ್ರಕರ್ತರ ಸೋಗಿನಲ್ಲಿದ್ದ ಹಮಾಸ್‌ ಉಗ್ರರು ಎಂದು ದಾಳೀಗೆ ವಿವರಣೆ ನೀಡಿದ ಇಸ್ರೇಲ್‌ ಟೆಲ್‌ ಅವೀವ್‌ : ಗಾಜಾ ನಗರದ ಮೇಲೆ ಇಸ್ರೇಲ್ ಭಾನುವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಲ್‌ ಜಜೀರಾ ಸುದ್ದಿ ವಾಹಿನಿಯ ಒಬ್ಬ ಪ್ರಮುಖ ವರದಿಗಾರ ಸೇರಿದಂತೆ ಇಬ್ಬರು ವರದಿಗಾರರು ಮತ್ತು ಮೂವರು ಕ್ಯಾಮೆರಾಮೆನ್‌ಗಳು ಸಾವನ್ನಪ್ಪಿದ್ದಾರೆ. ಗಾಜಾ ನಗರದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಪರಿಣಾಮ ಅಲ್ ಜಜೀರಾದ ಪತ್ರಕರ್ತ ಅನಾಸ್ ಅಲ್-ಶರೀಫ್ ಜೊತೆಗೆ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆಂದು ವರದಿಗಳು

ಇಸ್ರೇಲ್‌ ಕ್ಷಿಪಣಿ ದಾಳಿಯಲ್ಲಿ ಅಲ್‌ ಜಜೀರಾದ ಐವರು ಪತ್ರಕರ್ತರು ಸಾವು Read More »

ಟ್ರಂಪ್‌ ಸುಂಕ ಡಬ್ಬಲ್‌

ಭಾರತದ ಮೇಲೆ ಮತ್ತೆ ಶೇ.25 ಸುಂಖ ವಿಧಿಸಿದ ಅಮೆರಿಕ ಅಧ್ಯಕ್ಷ ನವದೆಹಲಿ : ರಷ್ಯಾದಿಂದ ತೈಲ ಖರೀದಿಸುತ್ತಿರುವುದರ ವಿರುದ್ದ ಭಾರತದ ಮೇಲೆ ಕೆಂಡ ಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಮತ್ತೆ ಶೇ.25 ವ್ಯಾಪಾರ ಸುಂಕ ವಿಧಿಸಿದ್ದಾರೆ. ಇದರೊಂದಿಗೆ ಭಾರತದ ಮೇಲೆ ಟ್ರಂಪ್‌ ಶುಲ್ಕ ಶೇ.50ಕ್ಕೇರಿದಂತಾಗಿದೆ.ಮಂಗಳವಾರವಷ್ಟೇ 24 ಗಂಟೆಯೊಳಗೆ ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಟ್ರಂಪ್‌ ಹೇಳಿದಂತೆ ಮಾಡಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸಿದ್ದಾರೆ. ಈ ಮೂಲಕ

ಟ್ರಂಪ್‌ ಸುಂಕ ಡಬ್ಬಲ್‌ Read More »

ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 68 ಮಂದಿ ಸಾವು

74 ಮಂದಿ ನಾಪತ್ತೆ, 10 ಜನರ ರಕ್ಷಣೆ ಸನಾ: ಯೆಮೆನ್ ಕರಾವಳಿಯಲ್ಲಿ ಭಾನುವಾರ 154 ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 68 ಜನರು ಮೃತಪಟ್ಟಿದ್ದಾರೆ. 74 ಮಂದಿ ನಾಪತ್ತೆಯಾಗಿದ್ದು, 10 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ನಡೆಯುತ್ತಿದೆ. ರಕ್ಷಿಸಲ್ಪಟ್ಟ 10 ಜನರಲ್ಲಿ ಒಂಬತ್ತು ಮಂದಿ ಇಥಿಯೋಪಿಯನ್ ಪ್ರಜೆಗಳು ಮತ್ತು ಒಬ್ಬರು ಯೆಮೆನ್ ಪ್ರಜೆ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರಾಂತ್ಯದ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಹೇಳಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ಹುಡುಕಾಟ

ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 68 ಮಂದಿ ಸಾವು Read More »

ಜಗತ್ತಿನ ಅತಿ ದುಬಾರಿ ಉಪಗ್ರಹ ನಿಸಾರ್‌ ಇಂದು ಉಡಾವಣೆ

ಭಾರತ-ಅಮೆರಿಕ ಸಹಭಾಗಿತ್ವದಲ್ಲಿ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಸೆಟಲೈಟ್‌ ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಾಸಾ – ಇಸ್ರೊ ಸಿಂಥೆಟಿಕ್ ಅಪರ್ಚರ್ ರೇಡಾರ್ ನಿಸಾರ್ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5.40ಕ್ಕೆ ಇಸ್ರೋದ GSLV-F16 ರಾಕೆಟ್‌ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ. ಈ ಉಪಗ್ರಹವು ಶ್ರೀಹರಿಕೋಟದಿಂದ ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ

ಜಗತ್ತಿನ ಅತಿ ದುಬಾರಿ ಉಪಗ್ರಹ ನಿಸಾರ್‌ ಇಂದು ಉಡಾವಣೆ Read More »

ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ : ಹಲವು ದೇಶಗಳಿಗೆ ಸುನಾಮಿ ಎಚ್ಚರಿಕೆ

ಜಪಾನ್‌ ಕರಾವಳಿ ತೀರಕ್ಕೆ ಅಪ್ಪಳಿಸಿದ 3 ಮೀಟರ್‌ ಎತ್ತರ ಅಲೆಗಳು ಮಾಸ್ಕೊ: ರಷ್ಯಾದ ಕರಾವಳಿ ಪ್ರದೇಶದಲ್ಲಿ ಇಂದು ನಸುಕಿನ ಹೊತ್ತು 8.8 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಅಮೆರಿಕದ ಅಲಾಸ್ಕಾದ ಭಾಗಗಳು, ಜಪಾನ್‌ ಹಾಗೂ ಶಾಂತಸಾಗರದ ದಡದಲ್ಲಿರುವ ಇತರ ದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ರಷ್ಯಾದ ಪೂರ್ವ ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್‌ನಿಂದ ಸುಮಾರು 136 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. 19 ಕಿಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, 4 ಮೀಟರ್

ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪ : ಹಲವು ದೇಶಗಳಿಗೆ ಸುನಾಮಿ ಎಚ್ಚರಿಕೆ Read More »

error: Content is protected !!
Scroll to Top