ವಿದೇಶ

ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್‌ ಸೇವಿಸಿ 18 ಮಕ್ಕಳು ಸಾವು

ಗ್ಯಾಂಬಿಯಾ ಬಳಿಕ ಉಜ್ಬೇಕಿಸ್ಥಾನ ಆರೋಪ ತಾಷ್ಕೆಂಟ್: ತನ್ನ ದೇಶದ ಸುಮಾರು 18 ಮಕ್ಕಳ ಸಾವಿನಲ್ಲಿ ಭಾರತದಲ್ಲಿ ತಯಾರಿಸಲಾದ ಕೆಮ್ಮಿನ ಸಿರಪ್‌ನ ಪಾತ್ರವಿದೆ ಎಂದು ಉಜ್ಬೇಕಿಸ್ಥಾನ ಆರೋಪಿಸಿದೆ.ಕೆಲ ತಿಂಗಳ ಹಿಂದೆ ಗ್ಯಾಂಬಿಯಾ ದೇಶದ ಸುಮಾರು 70 ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಕಾರಣ ಎಂದು ಆರೋಪ ಮಾಡಲಾಗಿತ್ತು. ಇದೀಗ ಉಜ್ಬೇಕಿಸ್ಥಾನ ಕೂಡ ಇದೇ ರೀತಿಯ ಆರೋಪ ಮಾಡಿದೆ. ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿ ದೇಶದಲ್ಲಿ ಕನಿಷ್ಠ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ ಹೇಳಿಕೊಂಡಿದೆ. […]

ಭಾರತದಿಂದ ರಫ್ತಾದ ಕೆಮ್ಮಿನ ಸಿರಪ್‌ ಸೇವಿಸಿ 18 ಮಕ್ಕಳು ಸಾವು Read More »

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಸಿದ್ಧ: ಚೀನಾ

ಬೀಜಿಂಗ್‌: ‘ಭಾರತದೊಂದಿಗೆ ‘ಸ್ಥಿರ ಮತ್ತು ಉತ್ತಮ ಬೆಳವಣಿಗೆ’ಯ ದ್ವಿಪಕ್ಷೀಯ ಸಂಬಂಧವನ್ನು ಹೊಂದಲು ಚೀನಾ ಸಿದ್ಧವಿದೆ’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಭಾನುವಾರ ಹೇಳಿದರು. ‘2020ರಿಂದ ಈಚೆಗೆ ಚೀನಾ–ಭಾರತ ಮಧ್ಯೆ ಉಲ್ಬಣಿಸಿರುವ ಗಡಿ ವಿವಾದ ಸಂಬಂಧ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಎರಡೂ ದೇಶಗಳು ಬದ್ಧವಾಗಿದೆ’ ಎಂದೂ ಹೇಳಿದರು. ಅಂತರರಾಷ್ಟ್ರೀಯ ಸ್ಥಿತಿಗತಿ ಮತ್ತು ಚೀನಾದ ವಿದೇಶಾಂಗ ಸಂಬಂಧ 2022 ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಭಾರತ ಹಾಗೂ ಚೀನಾವು ಯಾವಾಗಲೂ ರಾಜತಾಂತ್ರಿಕ ಮತ್ತು ಸೇನಾಮಟ್ಟದ ಸಂಪರ್ಕವನ್ನು

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಕ್ಕೆ ಸಿದ್ಧ: ಚೀನಾ Read More »

ನೇಪಾಳದಲ್ಲಿ ಭಾರತದ ವ್ಯಕ್ತಿಯ ಹತ್ಯೆ

ಕಠ್ಮಂಡು: ‘ದಕ್ಷಿಣ ಭಾಗದ ನೇಪಾಳದಲ್ಲಿ ಐವರು ಅನಾಮಧೇಯ ಬಂದೂಕುಧಾರಿಗಳು ಭಾರತದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ’ ಎಂದು ಪೊಲೀಸರು ಶನಿವಾರ ತಿಳಿಸಿದರು. ‘ಶಿವ ಪೂಜನ್‌ ಯಾದವ್‌ (45) ಹತ್ಯೆಯಾದ ವ್ಯಕ್ತಿ. ಮಹಾಗಧಿಮಯಿ ನಗರಸಭೆಯಲ್ಲಿ ಯಾದವ್‌ ಅವರ ಹತ್ಯೆ ಮಾಡಲಾಗಿದೆ. ಎರಡು ಬೈಕ್‌ಗಳಲ್ಲಿ ಬಂದ ಐವರು ಬಂದೂಕುಧಾರಿ ವ್ಯಕ್ತಿಗಳು ಯಾದವ್ ಅವರ ಮೇಲೆ ಗುಂಡು ಹಾರಿಸಿದರು. ಇದರ ಪರಿಣಾಮ ಯಾದವ್‌ ಅವರು ಗಂಭೀರವಾಗಿ ಗಾಯಗೊಂಡರು’ ಎಂದು ಪೊಲೀಸರು ವಿವರಿಸಿದರು. ‘ಘಟನೆ ನಡೆದ ತಕ್ಷಣದಲ್ಲಿ ಯಾದವ್‌ ಅವರನ್ನು ಹತ್ತಿರ

ನೇಪಾಳದಲ್ಲಿ ಭಾರತದ ವ್ಯಕ್ತಿಯ ಹತ್ಯೆ Read More »

ರಶ್ಯ: ವೃದ್ಧಾಶ್ರಮದಲ್ಲಿ ಬೆಂಕಿ ದುರಂತ 20 ಮಂದಿ ಮೃತ್ಯು

ಮಾಸ್ಕೊ: ರಶ್ಯದ ಸೈಬೀರಿಯಾ ಪ್ರಾಂತದ ಕೆಮೆರೊವೊ ನಗರದ ವೃದ್ಧಾಶ್ರಮದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ದುರಂತದಲ್ಲಿ 20 ಮಂದಿ ಮೃತಪಟ್ಟಿರುವುದಾಗಿ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ. ಕಟ್ಟಡದ ಎರಡನೇ ಮಹಡಿ ಬೆಂಕಿಯಿಂದ ಸಂಪೂರ್ಣ ಸುಟ್ಟುಹೋಗಿದೆ. ಅಗ್ನಿಶಾಮಕ ಸಿಬಂದಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ 20 ಮಂದಿ ಮೃತಪಟ್ಟಿದ್ದಾರೆ. ತಾಪಮಾನ ಕನಿಷ್ಟ ಮಟ್ಟಕ್ಕೆ ಇಳಿದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ‘ತಾಸ್’ ವರದಿ ಮಾಡಿದೆ.

ರಶ್ಯ: ವೃದ್ಧಾಶ್ರಮದಲ್ಲಿ ಬೆಂಕಿ ದುರಂತ 20 ಮಂದಿ ಮೃತ್ಯು Read More »

ಅಮೆರಿಕ, ಕೊರಿಯ, ಜಪಾನ್‌ನಲ್ಲೂ ಕೋವಿಡ್ ಉಲ್ಬಣ: ಡಬ್ಲ್ಯೂ.ಎಚ್.ಓ.

ವಾಷಿಂಗ್ಟನ್: ಚೀನಾವಷ್ಟೇ ಅಲ್ಲ, ಅಮೆರಿಕ, ದಕ್ಷಿಣ ಕೊರಿಯಾ, ಬ್ರೆಝಿಲ್ ಮತ್ತು ಜಪಾನ್‌ನಲ್ಲೂ ಕೋವಿಡ್-19 ಸೋಂಕಿನ ಪ್ರಕರಣ ಏಕಾಏಕಿ ಉಲ್ಬಣಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಕೋವಿಡ್ ವಿರುದ್ಧದ ಲಸಿಕೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ. 2020ರಲ್ಲಿ ಕೋವಿಡ್ ಸೋಂಕು ಆರಂಭಗೊಂಡಂದಿನಿಂದ ಇದುವರೆಗೆ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 100 ದಶಲಕ್ಷದ ಗಡಿ ದಾಟಿದೆ. ಅಮೆರಿಕದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 10 ಲಕ್ಷ ದಾಟಿದೆ ಎಂದು ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವಿವಿ ಹೇಳಿದೆ. ಕೋವಿಡ್ ಸೋಂಕಿನಿಂದಾಗಿ ವಿಶ್ವದಲ್ಲಿ ಪ್ರತೀ

ಅಮೆರಿಕ, ಕೊರಿಯ, ಜಪಾನ್‌ನಲ್ಲೂ ಕೋವಿಡ್ ಉಲ್ಬಣ: ಡಬ್ಲ್ಯೂ.ಎಚ್.ಓ. Read More »

ಹೆಣ್ಣುಮಕ್ಕಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ತಾಲಿಬಾನ್‌ ತಡೆ

ಅಫ್ಘಾನಿಸ್ಥಾನದಲ್ಲಿ ಹೆಣ್ಣು ಮಕ್ಕಳು ವಿವಿ ಮೆಟ್ಟಿಲು ಹತ್ತದಂತೆ ಆದೇಶ ಕಾಬೂಲ್ : ಅಫ್ಘಾನಿಸ್ಥಾನದ ತಾಲಿಬಾನ್‌ ಆಡಳಿತ ಮಹಿಳೆಯರ ಮೇಲೆ ಇನ್ನಷ್ಟು ನಿರ್ಬಂಧ ವಿಧಿಸಿದೆ. ಈದೀಗ ತಾಲಿಬಾನ್ ಸರ್ಕಾರ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ನಿಷೇಧಿಸುವಂತೆ ಆದೇಶಿಸಿದೆ. ಕಳೆದ ವರ್ಷ ಅಧಿಕಾರವನ್ನು ವಶಪಡಿಸಿಕೊಂಡಾಗ ಸರಳ ಹಾಗೂ ಜನಸ್ನೇಹಿ ಆಡಳಿತದ ಭರವಸೆ ನೀಡಿದ್ದರೂ, ತಾಲಿಬಾನ್ ಅಂತರರಾಷ್ಟ್ರೀಯ ಆಕ್ರೋಶವನ್ನು ನಿರ್ಲಕ್ಷಿಸಿ ಮಹಿಳೆಯರ ಜೀವನದ ಎಲ್ಲಾ ಅಂಶಗಳ ಮೇಲೆ ನಿರ್ಬಂಧಗಳನ್ನು ಹೆಚ್ಚಿಸುತ್ತಿದೆ.ಮಹಿಳಾ ಶಿಕ್ಷಣವನ್ನು ಅಮಾನತುಗೊಳಿಸುವ ಆದೇಶವನ್ನು ತಕ್ಷಣವೇ ಜಾರಿಗೆ ತರಲು ತಿಳಿಸಲಾಗಿದೆ ಎಂದು ಉನ್ನತ

ಹೆಣ್ಣುಮಕ್ಕಳ ವಿಶ್ವವಿದ್ಯಾಲಯ ಶಿಕ್ಷಣಕ್ಕೆ ತಾಲಿಬಾನ್‌ ತಡೆ Read More »

ಮೋದಿ ಕುರಿತು ಪಾಕ್‌ ಸಚಿವ ಭುಟ್ಟೊ ಕೀಳು ಹೇಳಿಕೆ : ಇಂದು ದೇಶಾದ್ಯಂತ ಬಿಜೆಪಿ ಪ್ರತಿಭಟನೆ

ಹೊಸದಿಲ್ಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ನೀಡಿದ ವೈಯಕ್ತಿಕ ಕೀಳು ಹೇಳಿಕೆಗೆ ಬಿಜೆಪಿ ಕೆಂಡಾಮಂಡಲವಾಗಿದ್ದು, ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಪಾಕಿಸ್ಥಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಹೇಳಿಕೆ ಅತ್ಯಂತ ನಾಚಿಕೆಗೇಡಿನ ಮತ್ತು ಅವಹೇಳನಕಾರಿ ಎಂದು ಬಿಜೆಪಿ ಬಣ್ಣಿಸಿದೆ.ಬಿಲಾವಲ್ ಭುಟ್ಟೊ ಅಧಿಕಾರದಲ್ಲಿ ಉಳಿಯಲು ಮತ್ತು ಪಾಕಿಸ್ಥಾನದ ಸರ್ಕಾರವನ್ನು ಉಳಿಸಲು ಇಂಥ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಆ ಸಚಿವರ ಹೇಳಿಕೆಯು ಜಗತ್ತನ್ನು ದಾರಿ ತಪ್ಪಿಸುವ ಗುರಿಯನ್ನು ಹೊಂದಿದೆ.

ಮೋದಿ ಕುರಿತು ಪಾಕ್‌ ಸಚಿವ ಭುಟ್ಟೊ ಕೀಳು ಹೇಳಿಕೆ : ಇಂದು ದೇಶಾದ್ಯಂತ ಬಿಜೆಪಿ ಪ್ರತಿಭಟನೆ Read More »

ಭೀಕರ ಭೂಕುಸಿತ : 8 ಸಾವು

50ಕ್ಕೂ ಅಧಿಕ ಮಂದಿ ಅವಶೇಷದಡಿ ಕೌಲಾಲಂಪುರ್‌: ಮಲೇಷ್ಯಾದಲ್ಲಿ ಭೀಕರ ಭೂಕುಸಿತ ಸಂಭವಿಸಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಕೌಲಾಲಂಪುರದ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.ಸಾವಿನ ಸಂಖ್ಯೆ ಏರಬಹುದು ಎನ್ನಲಾಗಿದೆ.ಭೂಕುಸಿತದಿಂದ ಹಲವು ಮಂದಿ ಗಾಯಗೊಂಡಿದ್ದಾರೆ 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ.ಇದುವರೆಗೆ 31 ಮಂದಿಯನ್ನು ರಕ್ಷಿಸಲಾಗಿದೆ. ಕ್ಯಾಂಪ್‌ಸೈಟ್‌ನಿಂದ ಸುಮಾರು 30 ಮೀಟರ್ ಎತ್ತರದಿಂದ ಭೂಕುಸಿತ ಸಂಭವಿಸಿದೆ. ಇದರಿಂದ ಸುಮಾರು

ಭೀಕರ ಭೂಕುಸಿತ : 8 ಸಾವು Read More »

ಯುಎಇ ದೇಶದ ಪಾಸ್‌ಪೋರ್ಟ್ ಅತ್ಯುತ್ತಮ: ವರದಿ

ದುಬೈ: ಜಗತ್ತಿನಲ್ಲಿಯೇ ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ದೇಶ ಯುಎಇಯದ್ದು ಎಂದು ವರದಿಯೊಂದು ತಿಳಿಸಿದೆ.ಆರ್ಟನ್ ಕ್ಯಾಪಿಟಲ್ ಸಂಸ್ಥೆ ಪ್ರಕಟಿಸಿದ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಜಗತ್ತಿನಲ್ಲಿಯೇ ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ದೇಶ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆಗಿವೆ. ಅತ್ಯುತ್ತಮ ಪಾಸ್‌ಪೋರ್ಟ್ ಹೊಂದಿದ ಟಾಪ್ ೧೦ ದೇಶಗಳ ಪಟ್ಟಿಯಲ್ಲಿ ಯುರೋಪಿಯನ್ ದೇಶಗಳ ಪಾರಮ್ಯದ ನಡುವೆ ಯುಎಇ ಅಗ್ರ ಸ್ಥಾನ ಗಳಿಸಿದೆ.ಯುಎಇ ಪಾಸ್‌ಪೋರ್ಟ್ ಹೊಂದಿದವರು ಯಾವುದೇ ಸಮಸ್ಯೆಯಿಲ್ಲದೆ ೧೮೦ ದೇಶಗಳನ್ನು ಪ್ರವೇಶಿಸಬಹುದಾಗಿದೆ. ಜರ್ಮನಿ ಮತ್ತು ಸ್ವೀಡನ್ ದೇಶಗಳ ಪಾಸ್‌ಪೋರ್ಟ್ಗಳನ್ನು ಬಳಸಿ ಪ್ರಯಾಣಿಸಬಹುದಾದ

ಯುಎಇ ದೇಶದ ಪಾಸ್‌ಪೋರ್ಟ್ ಅತ್ಯುತ್ತಮ: ವರದಿ Read More »

error: Content is protected !!
Scroll to Top