ವಿದೇಶ

ಹೋಳಿಯ ಬಣ್ಣ ಸೋಕಬಾರದೆಂದು ಮಸೀದಿಗೆ ಟಾರ್ಪಾಲು ಹೊದಿಕೆ

ಇಡೀ ಮಸೀದಿಗೆ ಕಪ್ಪು ಪ್ಲಾಸ್ಟಿಕ್‌ ಕವರ್‌ ಲಖನೌ : ಜನರು ಹೋಳಿ ಆಡುವಾಗ ಬಣ್ಣ ಸೋಕುತ್ತದೆ ಎಂದು ಉತ್ತರ ಪ್ರದೇಶದ ಅಲಿಗಢದ ಮಸೀದಿಯೊಂದಕ್ಕೆ ಟಾರ್ಪಾಲು ಹೊದಿಕೆ ಹಾಕಿ ಮುಚ್ಚಿದ್ದಾರೆ. ಹೋಳಿ ದಿನದಂದು ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಸಮಯದಲ್ಲಿ ಬಣ್ಣಗಳಿಂದ ಕಾಪಾಡಲು ಕಪ್ಪು ಟಾರ್ಪಲಿನ್​ನಿಂದ ಮುಚ್ಚಲಾಗಿದೆ.ವಿಶೇಷವೆಂದರೆ, ಕಳೆದ ಕೆಲವು ವರ್ಷಗಳಿಂದ ಹೋಳಿಯಂದು ಸೂಕ್ಷ್ಮ ಪ್ರದೇಶದಲ್ಲಿರುವ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‌ನಿಂದ […]

ಹೋಳಿಯ ಬಣ್ಣ ಸೋಕಬಾರದೆಂದು ಮಸೀದಿಗೆ ಟಾರ್ಪಾಲು ಹೊದಿಕೆ Read More »

1.5 ಕೋ. ರೂ. ಆಸ್ತಿಯನ್ನು ಸರಕಾರಕ್ಕೆ ಕೊಟ್ಟ ವೃದ್ಧ

ಮಕ್ಕಳು ನೋಡಿಕೊಂಡಿಲ್ಲ ಎಂಬ ಸಿಟ್ಟಿನಲ್ಲಿ ದಾನ ಲಖನೌ : ಹಿರಿಯ ವ್ಯಕ್ತಿಯೊಬ್ಬರು ವೃದ್ಧಾಪ್ಯದಲ್ಲಿ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ಮೇಲಿನ ಸಿಟ್ಟಿನಲ್ಲಿ ಎಲ್ಲ 1.5 ಕೋ. ರೂ. ಆಸ್ತಿಯನ್ನು ಉತ್ತರ ಪ್ರದೇಶ ಸರಕಾರಕ್ಕೆ ಉಯಿಲು ಬರೆದುಕೊಟ್ಟಿದ್ದಾರೆ. ನಾಥು ಸಿಂಗ್ ಎಂಬ 85ರ ಹರೆಯದ ವೃದ್ಧ ತಮ್ಮ ಐವರು ಮಕ್ಕಳಲ್ಲಿ ಯಾರೂ ಕೊನೆಯ ಕಾಲದಲ್ಲಿ ನೋಡಿಕೊಳ್ಳಲು ಮುಂದೆ ಬಾರದಿದ್ದಾಗ 1.5 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರಪ್ರದೇಶದ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ. ಅಲ್ಲದೆ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ.

1.5 ಕೋ. ರೂ. ಆಸ್ತಿಯನ್ನು ಸರಕಾರಕ್ಕೆ ಕೊಟ್ಟ ವೃದ್ಧ Read More »

ಪಾಕಿಸ್ತಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿ

9 ಭದ್ರತಾ ಅಧಿಕಾರಿಗಳ ದುರ್ಮರಣ ಪಾಕಿಸ್ತಾನ : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಎರಡನೇ ಮಾರಣಾಂತಿಕ ದಾಳಿ ನಡೆದಿದ್ದು, 9 ಮಂದಿ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ಭದ್ರತಾ ಪಡೆ ಅಧಿಕಾರಿಗಳು ವಾಪಸ್ ತೆರಳುವ ವೇಳೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಕೃತ್ಯದ ಹೊಣೆಯನ್ನು ಯಾವುದೇ

ಪಾಕಿಸ್ತಾನದ ಬಲೂಚಿಸ್ಥಾನ್‌ ಪ್ರಾಂತ್ಯದಲ್ಲಿ ಉಗ್ರರ ಆತ್ಮಾಹುತಿ ಬಾಂಬ್ ದಾಳಿ Read More »

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ

ಕರಾಚಿ: ಪಾಕಿಸ್ಥಾನದಲ್ಲಿ 1 ಕೆಜಿ ಚಹಾಪುಡಿ ಬೆಲೆ 1600 ರೂ! ಆರ್ಥಿಕವಾಗಿ ದಿವಾಳಿಯಾಗಿ ತತ್ತರಿಸುತ್ತಿರುವ ಪಾಕ್‌ನಲ್ಲೀಗ ಜನರಿಗೆ ನಿತ್ಯ ಬಳಕೆಯ ಆಹಾರ ವಸ್ತುಗಳು ಕೂಡ ಬೆಲೆ ಏರಿಕೆಯಿಂದಾಗಿ ಐಷರಾಮಿ ವಸ್ತುಗಳಾಗಿವೆ. 15 ದಿನಗಳ ಹಿಂದೆ ಕೆಜಿಗೆ 1,100 ರೂ. ಇದ್ದ ಚಹಾಪುಡಿ ಬೆಲೆ ಇದೀಗ 1600 ರೂ. ದಾಟಿದೆ. ಕಳೆದ ಡಿಸೆಂಬರ್‌ನಿಂದಲೂ ಬಂದರಿನಲ್ಲೇ ಉಳಿದುಕೊಂಡಿರುವ ಆಮದಾದ ಚಹಾಪುಡಿ ಶೀಘ್ರವೇ ಮಾರುಕಟ್ಟೆಗೆ ಬರದೇ ಇದ್ದರೆ ರಮ್ಜಾನ್‌ ವೇಳೆಗೆ ಬೆಲೆ 2,500 ರೂ. ದಾಟಬಹುದು ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಚಹಾಪುಡಿ 1,600 ರೂ.; ಗೋದಿಹಿಟ್ಟು 1,000 ರೂ. | ದಿವಾಳಿಯಾಗಿರುವ ಪಾಕಿಸ್ಥಾನದಲ್ಲಿ ಆಹಾರಕ್ಕೂ ಅಭಾವ Read More »

ಕಳ್ಳತನ ಆರೋಪಿಗಳ ಕೈ ಕಟ್‌

ಸಾರ್ವಜನಿಕವಾಗಿ ಕೈ ಕತ್ತರಿಸಿ ಕ್ರೂರ ಶಿಕ್ಷೆ ವಿಧಿಸಿದ ತಾಲಿಬಾನ್‌ ಕಾಬೂಲ್‌ : ಅಫಘಾನಿಸ್ಥಾನದ ತಾಲಿಬಾನ್‌ ಸರಕಾರ ಕಳ್ಳತನ ಆರೋಪ ಎದುರಿಸುತ್ತಿದ್ದ ನಾಲ್ಕು ಮಂದಿಯ ಕೈಗಳನ್ನು ಸಾರ್ವಜನಿಕವಾಗಿ ಕತ್ತರಿಸಿ ಎಸೆವ ಶಿಕ್ಷೆ ವಿಧಿಸಿದೆ.ಕಳ್ಳತನ ಆರೋಪದಲ್ಲಿ 9 ಮಂದಿ ಸೆರೆಯಾಗಿದ್ದರು. ಈ ಪೈಕಿ ನಾಲ್ಕು ಮಂದಿಗೆ ಕೈ ಕಟ್‌ ಶಿಕ್ಷೆ ಹಾಗೂ ಉಳಿದವರಿಗೆ ಸಾರ್ವಜನಿಕೆವಾಗಿ ಛಡಿಯೇಟು ವಿಧಿಸುವ ಶಿಕ್ಷೆ ವಿಧಿಸಲಾಗಿತ್ತು. ಕಂದಹಾರ್‌ನ ಅಹ್ಮದ್‌ ಶಾಹಿ ಫುಟ್ಬಾಲ್‌ ಸ್ಟೇಡಿಯಂನಲ್ಲಿ ಮಂಗಳವಾರ ಬಹಿರಂಗವಾಗಿ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಎಲ್ಲ ಒಂಬತ್ತು ಆರೋಪಿಗಳಿಗೆ 39

ಕಳ್ಳತನ ಆರೋಪಿಗಳ ಕೈ ಕಟ್‌ Read More »

ಚೀನದಲ್ಲಿ ಕೋವಿಡ್‌ಗೆ ಒಂದು ತಿಂಗಳಲ್ಲಿ 60 ಸಾವಿರ ಜನ ಬಲಿ

ಮನೆಗಳಲ್ಲಿ ಸತ್ತವರ ಲೆಕ್ಕ ಸಿಕ್ಕಿಲ್ಲ ಬೀಜಿಂಗ್: ಕೋವಿಡ್ ಸಾಂಕ್ರಾಮಿಕ ರೋಗದ ಸ್ಥಿತಿಗತಿಯ ಬಗ್ಗೆ ಅಂಕಿಅಂಶ ಬಿಡುಗಡೆ ಮಾಡದೆ ಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಿದ್ದ ಚೀನದ ಕರಾಳ ಪರಿಸ್ಥಿತಿ ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಡಿಸೆಂಬರ್ ತಿಂಗಳೊಂದರಲ್ಲೇ ಚೀನದಲ್ಲಿ ಮಾರಕ ಸೋಂಕಿಗೆ ಸುಮಾರು 60 ಸಾವಿರ ಮಂದಿ ಬಲಿಯಾಗಿರುವುದು ಈಗ ಬೆಳಕಿಗೆ ಬಂದಿದೆ.ಈ ಎಲ್ಲ ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಇದಲ್ಲದೆ ಕೋವಿಡ್‌ನಿಂದ ಇನ್ನೂ ಹೆಚ್ಚಿನ ಜನ ಮನೆಯಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇರುವುದರಿಂದ ಸಾವಿನ

ಚೀನದಲ್ಲಿ ಕೋವಿಡ್‌ಗೆ ಒಂದು ತಿಂಗಳಲ್ಲಿ 60 ಸಾವಿರ ಜನ ಬಲಿ Read More »

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ನೌಕರಿಯಿಂದ ವಜಾ

ದೂರು ಕೊಡಬೇಡಿ, ಹೆಂಡತಿ ಮಕ್ಕಳಿದ್ದಾರೆ ಎಂದು ಕ್ಷಮೆ ಯಾಚಿಸಿದ್ದ ಹೊಸದಿಲ್ಲಿ : ನ್ಯೂಯಾರ್ಕ್‌-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾ ಎಂಬಾತನನ್ನು ಅಮೆರಿಕದ ಕಂಪನಿ ನೌಕರಿಯಿಂದ ಕೆಲಸದಿಂದ ವಜಾಗೊಳಿಸಿದೆ. ಯುನೈಟೆಡ್ ಸ್ಟೇಟ್ಸ್ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದಲ್ಲಿ ಆತ ಉದ್ಯೋಗಿಯಾಗಿದ್ದ.ಶಂಕರ್ ಮಿಶ್ರಾ ವಿರುದ್ಧದ ಆರೋಪ ತುಂಬ ‘ಗಾಢವಾಗಿ ಮನಸ್ಸನ್ನು ಕಲಕಿದೆ’. ಈ ವ್ಯಕ್ತಿಯನ್ನು ವೆಲ್ ಫಾರ್ಗೋದಿಂದ ವಜಾಗೊಳಿಸಲಾಗಿದೆ ಎಂದು ಅಮೆರಿಕದ ವೆಲ್ಸ್ ಫಾರ್ಗೋ ಕಂಪನಿ ಹೇಳಿದೆ.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ ನೌಕರಿಯಿಂದ ವಜಾ Read More »

ಫುಟ್ಬಾಲ್‌ ದಂತಕಥೆ ಪೀಲೆ ನಿಧನ

ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರೆಸಿಲಿಯಾ : ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಬ್ರೆಜಿಲ್‌ಗೆ 3 ವಿಶ್ವಕಪ್‌ಗಳನ್ನು ತಂದುಕೊಟ್ಟಿದ್ದ ಖ್ಯಾತ ಆಟಗಾರ ಪೀಲೆ (82) ಅನಾರೋಗ್ಯ ಕಾರಣದಿಂದ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೀಲೆ ಅವರು 2021ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಕಾಯಿಲೆಗಳ ಕಾರಣದಿಂದಾಗಿ ಅವರನ್ನು ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಫುಟ್‌ಬಾಲ್‌ ಇತಿಹಾಸದಲ್ಲಿ ದಂಥಕತೆಯಾಗಿದ್ದ ಪೀಲೆ ಬ್ರೆಜಿಲಿಯಾ ಫುಟ್‌ಬಾಲ್‌ ಕ್ಲಬ್‌ ಸ್ಯಾಂಟೋಸ್‌ ಮತ್ತು ಬ್ರೆಜಿಲ್‌ ರಾಷ್ಟ್ರೀಯ ತಂಡದೊಂದಿಗೆ ಸುಮಾರು 2 ದಶಕಗಳ ಕಾಲ ಆಡಿದ್ದರು. ಮೈದಾನದಲ್ಲಿ ತಮ್ಮ ವೇಗದ

ಫುಟ್ಬಾಲ್‌ ದಂತಕಥೆ ಪೀಲೆ ನಿಧನ Read More »

ಇಸ್ರೇಲ್ ಪ್ರಧಾನಿಯಾಗಿ‌ ಬೆಂಜಮಿನ್ ನೆಥನ್ಯಾಹು ಪ್ರಮಾಣವಚನ

ಟೆಲ್ಅವೀವ್: ಇಸ್ರೇಲ್ನ ನೂತನ ಪ್ರಧಾನಿಯಾಗಿ ಬೆಂಜಮಿನ್ ನೆಥನ್ಯಾಹು ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ಇದರೊಂದಿಗೆ ಇಸ್ರೇಲ್ ಇತಿಹಾಸದಲ್ಲೇ ಕಟ್ಟಾ ಬಲಪಂಥೀಯ ಸರಕಾರದ ನೇತೃತ್ವವನ್ನು 73 ವರ್ಷದ ನೆಥನ್ಯಾಹು ವಹಿಸಿದಂತಾಗಿದೆ. 1996ರಿಂದ 1999ರ ನಡುವಿನ ಅವಧಿ ಹಾಗೂ 2009ರಿಂದ 2021ರ ಅವಧಿಯಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.   ಗುರುವಾರ ಇಸ್ರೇಲ್ ನ ಸಂಸತ್ತು ನೆಥನ್ಯಾಹು ಅವರ ಸರಕಾರದ ಪರ ವಿಶ್ವಾಸ ವ್ಯಕ್ತಪಡಿಸಿದ ಬಳಿಕ ನೆಥನ್ಯಾಹು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 120 ಸದಸ್ಯ ಬಲದ ಸಂಸತ್ತಿನಲ್ಲಿ 63 ಸದಸ್ಯರು

ಇಸ್ರೇಲ್ ಪ್ರಧಾನಿಯಾಗಿ‌ ಬೆಂಜಮಿನ್ ನೆಥನ್ಯಾಹು ಪ್ರಮಾಣವಚನ Read More »

ಫುಟ್ಬಾಲ್ ದಂತಕಥೆ ಪೀಲೆ ನಿಧನ

ಸಾವೊಪಾಲೊ: ಕ್ಯಾನ್ಸರ್ ಜೊತೆಗೆ ಮೂತ್ರಪಿಂಡ ಹಾಗೂ ಹೃದಯದ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ, ಬ್ರೆಝಿಲ್ ನ ಫುಟ್ಬಾಲ್ ದಂತಕತೆ ಪೀಲೆ (Pele) ನಿಧನರಾಗಿದ್ದಾರೆ. ಪೀಲೆ ಅವರಿಗೆ 82 ವರ್ಷ ವಯಸ್ಸಾಗಿತ್ತು.  ಮೂರು ಬಾರಿ ವಿಶ್ವಕಪ್ ವಿಜೇತ ಪೀಲೆ ಅವರು ನ.29ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಪೀಲೆಗೆ ಇತ್ತೀಚೆಗೆ ಕೋವಿಡ್-19 ಸೋಂಕು ತಗಲಿತ್ತು.  ತನ್ನ 16ನೇ ವಯಸ್ಸಿನಲ್ಲಿ ಬ್ರೆಝಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದ ಪೀಲೆ 1958, 1962 ಹಾಗೂ 1970ರಲ್ಲಿ ಬ್ರೆಝಿಲ್ ಫಿಫಾ ವಿಶ್ವಕಪ್

ಫುಟ್ಬಾಲ್ ದಂತಕಥೆ ಪೀಲೆ ನಿಧನ Read More »

error: Content is protected !!
Scroll to Top