ವಿದೇಶ

ಕೆನಡಾದಲ್ಲಿ ಖಲಿಸ್ತಾನಿ ಬೆಂಗಲಿಗರಿಂದ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

ಕೆನಡಾದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಖಲಿಸ್ತಾನಿ ಬೆಂಬಲಿಗರು ವಿರೂಪಗೊಳಿಸಿದ್ದಾರೆ. ಇದಲ್ಲದೇ ಭಾರತ ವಿರೋಧಿ ಮತ್ತು ಖಲಿಸ್ತಾನ್ ಪರ ಬರಹಗಳನ್ನು ಬರೆಯಲಾಗಿದೆ. ಕೆನಡಾದ ಒಂಟಾರಿಯೊದ ಹ್ಯಾಮಿಲ್ಟನ್ ನಗರದ ಸಿಟಿ ಹಾಲ್ ಬಳಿ ಈ ಘಟನೆ ನಡೆದಿದ್ದು 2012ರಿಂದ ಇಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಮಹಾತ್ಮ ಗಾಂಧಿಯವರ ಪ್ರತಿಮೆಯು ಆರು ಅಡಿ ಎತ್ತರವಿದೆ. ಇದನ್ನು ಕಂಚಿನಿಂದ ತಯಾರಿಸಲಾಗಿದ್ದು, ಭಾರತ ಸರ್ಕಾರವು ಈ ಪ್ರತಿಮೆಯನ್ನು ಕೆನಡಾಕ್ಕೆ ಉಡುಗೊರೆಯಾಗಿ ನೀಡಿತ್ತು. ವಿಗ್ರಹದ ಸುತ್ತಲೂ ಬಣ್ಣ ಎರಚಲಾಗಿದೆ. ಮಹಾತ್ಮ ಗಾಂಧಿಯವರ ಈ ಪ್ರತಿಮೆಯಲ್ಲಿ […]

ಕೆನಡಾದಲ್ಲಿ ಖಲಿಸ್ತಾನಿ ಬೆಂಗಲಿಗರಿಂದ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ Read More »

ರಷ್ಯಾದ ಜನಪ್ರಿಯ ಪಾಪ್‌ ಸಂಗೀತತಾರೆ ನಿಗೂಢ ಸಾವು

ಮಾಸ್ಕೊ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳನ್ನು ಬರೆದು ಹಾಡಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದ ರಷ್ಯಾದ ಜನಪ್ರಿಯ ಪಾಪ್ ತಾರೆ ಡಿಮಾ ನೋವಾ (35) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಡಿಮಾ ನೋವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಕ್ರೀಮ್ ಸೋಡಾ ಮ್ಯೂಸಿಕ್‌ ಗ್ರೂಪ್‌ ಸ್ಥಾಪಿಸಿದ್ದ ಡಿಮಾ ನೋವಾ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು.

ರಷ್ಯಾದ ಜನಪ್ರಿಯ ಪಾಪ್‌ ಸಂಗೀತತಾರೆ ನಿಗೂಢ ಸಾವು Read More »

ಪಾಕಿಸ್ಥಾನದಲ್ಲಿ ಪ್ರಬಲ ಭೂಕಂಪ : 9 ಸಾವು

ದಿಲ್ಲಿ, ಉತ್ತರ ಪ್ರದೇಶದಲ್ಲೂ ಕಂಪಿಸಿದ ಭೂಮಿ ಇಸ್ಲಾಮಾಬಾದ್ : ಪಾಕಿಸ್ಥಾನ ಮತ್ತು ಅಫ್ಘಾನಿಸ್ತಾನದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿ ಪಾಕಿಸ್ಥಾನದ ವಾಯವ್ಯ ಖೈಬರ್ ಪಖ್ತೂನ್‌ಕ್ವಾ ಪ್ರಾಂತ್ಯದ ಸ್ವಾತ್ ಕಣಿವೆ ಪ್ರದೇಶದಲ್ಲಿ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದಿಲ್ಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಾದ್ಯಂತ ಈ ಭೂಕಂಪದಿಂದ ಅನುಭವವಾಗಿದೆ. ಇಲ್ಲೂ ಪ್ರಬಲವಾದ ಕಂಪನ ಸಂಭವಿಸಿದೆ.ಮಂಗಳವಾರದಂದು 6.6 ತೀವ್ರತೆಯ ಭೂಕಂಪವು ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ಬಹುಭಾಗವನ್ನು ತಲ್ಲಣಗೊಳಿಸಿದೆ. ಭಯಭೀತರಾದ ನಿವಾಸಿಗಳು ಮನೆಗಳು ಮತ್ತು ಕಚೇರಿಗಳಿಂದ

ಪಾಕಿಸ್ಥಾನದಲ್ಲಿ ಪ್ರಬಲ ಭೂಕಂಪ : 9 ಸಾವು Read More »

ಸಿಎಂ ಯೋಗಿ ಆದಿತ್ಯನಾಥ್ 100 ಸಲ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಇತಿಹಾಸ ಸೃಷ್ಟಿ

ಲಖನೌ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರು ತಿಂಗಳಲ್ಲಿ 100 ಸಲ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಬೆಳಗ್ಗೆ 100ನೇ ಬಾರಿಗೆ ದೇವಾಲಯಕ್ಕೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 2017ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸರಾಸರಿ 21 ದಿನಗಳಿಗೊಮ್ಮೆ ದೇವಸ್ಥಾನಕ್ಕೆ ಬಂದು ಬಾಬಾ ವಿಶ್ವನಾಥನ ಆರಾಧನೆ ಹಾಗೂ ಷೋಡಶೋಪಚಾರ ವಿಧಾನದ ಮೂಲಕ ರಾಜ್ಯದ ಹಾಗೂ ದೇಶದ ಜನತೆಯ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಸಿಎಂ ಯೋಗಿ ತಿಂಗಳಿಗೊಮ್ಮೆಯಾದರೂ ಕಾಶಿಗೆ ಭೇಟಿ ನೀಡುತ್ತಿದ್ದು, ಪ್ರತಿ

ಸಿಎಂ ಯೋಗಿ ಆದಿತ್ಯನಾಥ್ 100 ಸಲ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಇತಿಹಾಸ ಸೃಷ್ಟಿ Read More »

ವಿಚಾರಣೆಗೆ ತೆರಳುತ್ತಿದ್ದಾಗ ಇಮ್ರಾನ್ ಖಾನ್ ಬೆಂಗಾವಲು ವಾಹನ ಪಲ್ಟಿ

ಇಸ್ಲಾಮಾಬಾದ್: ತೋಷಖಾನಾ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ವಾಹನ ಪಲ್ಟಿ ಹೊಡೆದ ಘಟನೆ ಶನಿವಾರ ನಡೆದಿದೆ.ಇಮ್ರಾನ್ ಖಾನ್ ಅವರು ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಿಂದ ತಮ್ಮ ಪಕ್ಷದ ಕಾರ್ಯಕರ್ತರ ಬೆಂಗಾವಲು ಪಡೆಯೊಂದಿಗೆ ಹೊರಟಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಇಮ್ರಾನ್ ಖಾನ್, ನನ್ನ ಎಲ್ಲಾ ಪ್ರಕರಣಗಳಲ್ಲಿ ನಾನು

ವಿಚಾರಣೆಗೆ ತೆರಳುತ್ತಿದ್ದಾಗ ಇಮ್ರಾನ್ ಖಾನ್ ಬೆಂಗಾವಲು ವಾಹನ ಪಲ್ಟಿ Read More »

ಸಂಶೋಧನಾ ವರದಿಯ ಪ್ರಕಾರ ಕೊರೊನಾ ವೈರಸ್‌ಗೆ ಮೂಲ ಕಾರಣ ನಾಯಿ ಮಾಂಸ

ನ್ಯೂಯಾರ್ಕ್ : ಮೂರು ವರ್ಷದಿಂದ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್‌ಗೆ ಕಾರಣ ನಾಯಿ ಮಾಂಸ ಎಂದು ಸಂಶೋಧನಾ ವರದಿಯೊಂದು ಹೇಳುತ್ತಿದೆ. ಚೀನದ ವುಹಾನ್‌ನಲ್ಲಿರುವ ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಈಗ ಅಂತಾರಾಷ್ಟ್ರೀಯ ತಜ್ಞರ ತಂಡ ಚೀನದ ವುಹಾನ್ ಪ್ರಾಂತದ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಸೋಂಕಿತ ರಕೂನ್ ತಳಿಯ ನಾಯಿ ಮಾಂಸದಿಂದ ಕೋವಿಡ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ವುಹಾನ್‌ ಮಾರುಕಟ್ಟೆಯಿಂದ 2020ರ ಜನವರಿಯಲ್ಲಿ ಅನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಹುವಾನನ್

ಸಂಶೋಧನಾ ವರದಿಯ ಪ್ರಕಾರ ಕೊರೊನಾ ವೈರಸ್‌ಗೆ ಮೂಲ ಕಾರಣ ನಾಯಿ ಮಾಂಸ Read More »

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ವಿರುದ್ಧ ಅರೆಸ್ಟ್‌ ವಾರಂಟ್‌

ಉಕ್ರೇನ್‌ನಿಂದ ಮಕ್ಕಳ ಅಪಹರಣದ ಆರೋಪ ಮಾಸ್ಕೊ : ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ಧವೇ ಅರೆಸ್ಟ್‌ ವಾರೆಂಟ್‌ ಹೊರಡಿಸಿದೆ. ಉಕ್ರೇನ್‌ನಿಂದ ಮಕ್ಕಳ ಅಪಹರಣಕ್ಕೆ ಕಾರಣವಾದ ಯುದ್ಧ ಅಪರಾಧಗಳಿಗಾಗಿ ಈ ಬಂಧನ ವಾರೆಂಟ್‌ ಹೊರಡಿಸಲಾಗಿದೆ. ದೇಶವೊಂದರ ಜನರನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡುವ ಯುದ್ಧ ಅಪರಾಧಕ್ಕೆ ಪುಟಿನ್‌ ಕಾರಣ. ಇದರೊಂದಿಗೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ ಜನಸಂಖ್ಯೆಯನ್ನು (ಮಕ್ಕಳನ್ನು) ಕಾನೂನುಬಾಹಿರವಾಗಿ ವರ್ಗಾಯಿಸುವ ಯುದ್ಧ ಅಪರಾಧಕ್ಕೆ ಪುಟಿನ್ ಜವಾಬ್ದಾರರಾಗಿದ್ದಾರೆ ಎಂದು ಐಸಿಸಿ ಕೋರ್ಟ್‌

ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ವಿರುದ್ಧ ಅರೆಸ್ಟ್‌ ವಾರಂಟ್‌ Read More »

ಅಮೇರಿಕಾ ವಾಯುಪಡೆಯ ಸಹಾಯಕ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ರವಿ ಚೌಧರಿ ನೇಮಕ

ವಾಷಿಂಗ್ ಟನ್: ಅಮೇರಿಕಾದ ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಅಮೇರಿಕನ್ ರವಿ ಚೌಧರಿ ಅವರ ನೇಮಕವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದೆ. ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆ ಪೆಂಟಗನ್ ನಲ್ಲಿ ಪ್ರಮುಖ ನಾಯಕತ್ವದ ಹುದ್ದೆಯಾಗಿದೆ. ಈ ವಿಭಾಗದ ಅಧಿಕಾರಿಗಳ ನೇಮಕಕ್ಕೆ ಸೆನೆಟ್ ನಲ್ಲಿ ಮತದಾನ ನಡೆದಿದ್ದು, 65 ಮಂದಿ ವಿರುದ್ಧ29 ಮಂದಿ ಮತ ಚಲಾವಣೆ ಮಾಡಿದ್ದಾರೆ. ರವಿ ಚೌಧರಿ ಈ ಹಿಂದೆ ಅಮೇರಿಕಾದ ಸಾರಿಗೆ ವಿಭಾಗದಲ್ಲಿ ಹಿರಿಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು ಅಲ್ಲಿ ಸುಧಾರಿತ ಕಾರ್ಯಕ್ರಮಗಳು

ಅಮೇರಿಕಾ ವಾಯುಪಡೆಯ ಸಹಾಯಕ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ರವಿ ಚೌಧರಿ ನೇಮಕ Read More »

ಮೆಕ್ ಮಹೊನ್ ರೇಖೆಯೇ ಚೀನಾ-ಅರುಣಾಚಲ ಪ್ರದೇಶದ ನಡುವಿನ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕಾ

ವಾಷಿಂಗ್ಟನ್: ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಮೆಕ್ ಮಹೊನ್ ರೇಖೆಯೇ ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತಾರಾಷ್ಟ್ರೀಯ ಗಡಿ ಎಂದು ಅಮೆರಿಕಾ ಹೇಳಿದೆ. ಅಮೆರಿಕದ ಉಭಯ ಪಕ್ಷೀಯ ಸೆನೆಟ್ ನಲ್ಲಿ ಸೆನೆಟರ್ ಜೆಫ್ ಮರ್ಕ್ಲಿ ಈ ನಿರ್ಣಯವನ್ನು ಪರಿಚಯಿಸಿದ್ದು ಸೆನೆಟರ್ ಜಾನ್ ಕಾರ್ನಿನ್ ನಿರ್ಣಯವನ್ನು ಸಹ ಪ್ರಾಯೋಜಿಸಿದರು. ಈ ವೇಳೆ ಇಂಡೋ-ಪೆಸಿಫಿಕ್‌ಗೆ ಚೀನಾ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿದೆ. ಅಂತಹ ಸಮಯದಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರ ದೇಶಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಭಾರತದೊಂದಿಗೆ ಒಗ್ಗಟ್ಟಾಗಿ ನಿಲ್ಲುವುದು ನಿರ್ಣಾಯಕವಾಗಿದೆ

ಮೆಕ್ ಮಹೊನ್ ರೇಖೆಯೇ ಚೀನಾ-ಅರುಣಾಚಲ ಪ್ರದೇಶದ ನಡುವಿನ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕಾ Read More »

ಕಪ್ಪು ಸಮುದ್ರದ ಮೇಲೆ ಅಮೆರಿಕಾದ ಡ್ರೋನ್‌ ಹೊಡೆದುರುಳಿಸಿದ ರಷ್ಯಾದ ಯುದ್ಧವಿಮಾನ

ಕೀವ್: ರಷ್ಯಾದ ಫೈಟರ್ ಜೆಟ್ ಕಪ್ಪು ಸಮುದ್ರದ ಮೇಲೆ ಅಮೆರಿಕಾದ ಕಣ್ಗಾವಲು ಡ್ರೋನ್‌ನ ಪ್ರೊಪೆಲ್ಲರ್ ಅನ್ನು ಹೊಡೆದುರುಳಿಸಿದ್ದು ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಅಮೆರಿಕಾ ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ರಷ್ಯಾ ತನ್ನ ಯುದ್ಧವಿಮಾನ ಅಮೆರಿಕಾದ ಡ್ರೋನ್ ಅನ್ನು ಹೊಡೆದುರುಳಿಸಿಲ್ಲ. ಬದಲಾಗಿ, ಡ್ರೋನ್ ಅನ್ನು ತಡೆಯಲು ಯತ್ನಿಸಿತ್ತು. ಈ ವೇಳೆ ನಿಯಂತ್ರಣ ಕಳೆದುಕೊಂಡ ಡ್ರೋನ್ ಸಮುದ್ರಕ್ಕೆ ಬಿದ್ದಿದೆ ಎಂದು ರಷ್ಯಾ ಹೇಳುತ್ತಿದೆ. ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಇದನ್ನು ಅಂತಾರಾಷ್ಟ್ರೀಯ ಕಾನೂನಿನ

ಕಪ್ಪು ಸಮುದ್ರದ ಮೇಲೆ ಅಮೆರಿಕಾದ ಡ್ರೋನ್‌ ಹೊಡೆದುರುಳಿಸಿದ ರಷ್ಯಾದ ಯುದ್ಧವಿಮಾನ Read More »

error: Content is protected !!
Scroll to Top