ವಿದೇಶ

ಕಾಂಗ್ರೆಸ್ ಗೆಲುವು: ದುಬೈನಲ್ಲಿ ಸಂಭ್ರಮ

ಪುತ್ತೂರು: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ದುಬೈನಲ್ಲಿ ಸಂಭ್ರಮಾಚರಿಸಲಾಯಿತು. ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಪರ ಘೋಷಣೆಗಳನ್ನು ಕೂಗುತ್ತಾ, ಬಾವುಟಗಳನ್ನು ಹಿಡಿದು ಕಾಂಗ್ರೆಸ್ ಜಿಂದಾಬಾದ್ ಘೋಷಣೆ ಕೂಗಿದರು. ಇದೇ ಸಂದರ್ಭ ಅಲ್ಲಿ ಸೇರಿದ್ದ ಭಾರತೀಯರು ಸಿಹಿ ಹಂಚಿ ಸಂಭ್ರಮಿಸಿದರು.

ಕಾಂಗ್ರೆಸ್ ಗೆಲುವು: ದುಬೈನಲ್ಲಿ ಸಂಭ್ರಮ Read More »

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ

ತೃಶೂರ್ : ಎಂಟು ವರ್ಷದ ಬಾಲಕಿ ಮೊಬೈಲ್ ಫೋನ್ ಸ್ಫೋಟಗೊಂಡು ಮೃತಪಟ್ಟಿರುವ ದಾರುಣ ಘಟನೆ ಕೇರಳದಲ್ಲಿ ಸಂಭವಿಸಿದೆ. ಮೂರನೇ ತರಗತಿ ಬಾಲಕಿ ಆದಿತ್ಯಶ್ರೀ ರಾತ್ರಿ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಅದು ಸ್ಫೋಟಗೊಂಡಿದೆ. ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಸುಟ್ಟ ಗಾಯವಾಗಿದ್ದ ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯಿದರೂ ಪ್ರಯೋಜನವಾಗಲಿಲ್ಲ. ತಶೂರು ಸಮೀಪದ ತಿರುವಿಲಾಮಲದ ಪಟ್ಟಿಪರಂಬು ಎಂಬಲ್ಲಿ ಈ ಘಟನೆ ಸಂಭವಿಸಿದೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ Read More »

ಉ. ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮತ್ತೆ ಜೀವ ಬೆದರಿಕೆ ಕರೆ

ಬೆದರಿಕೆಯೊಡ್ಡಿದವನನ್ನು ಗುರುತಿಸಿದ ಪೊಲೀಸರು ಲಖನೌ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. 112 ಟೋಲ್‌ಫ್ರೀ ನಂಬರ್‌ನಿಂದ ಕರೆ ಮಾಡಿ ಬೆದರಿಕೆವೊಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ಪಡೆ ರಂಗಕ್ಕಿಳಿದಿದ್ದು, ಕರೆ ಮಾಡಿದ ವ್ಯಕ್ತಿಯನ್ನು ರಿಹಾನ್‌ ಎಂದು ಗುರುತಿಸಿದೆ. ಅವನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈತ ಕರೆ ಮಾಡಿದ್ದಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಮೆಸೇಜ್‌ ಕೂಡ ಹಾಕಿದ್ದ. ಆತನ ಡಿಪಿಯಲ್ಲಿ ಅಲ್ಲಾವು ಎಂದು ಬರೆದಿರುವ ಫೊಟೊ ಇದೆ.

ಉ. ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮತ್ತೆ ಜೀವ ಬೆದರಿಕೆ ಕರೆ Read More »

ಅಮೇರಿಕಾದ ರಕ್ಷಣಾ ಖಾತೆಯ ಉಪ ಸಚಿವೆಯಾಗಿ ಭಾರತ ಮೂಲದ ರಾಧಾ ಅಯ್ಯಂಗಾರ್‌ ಆಯ್ಕೆ

ವಾಷಿಂಗ್ಟನ್‌ : ಅಮೇರಿಕಾದ ರಕ್ಷಣಾ ಖಾತೆಯ ಉಪ ಸಚಿವೆಯಾಗಿ ಭಾರತ ಮೂಲದ ರಾಧಾ ಅಯ್ಯಂಗಾರ್‌ ಪ್ಲಂಬ್‌ ಅವರು ಏ. 22 ರಂದು ನೇಮಕಗೊಂಡಿದ್ದಾರೆ.ರಾಧಾ ಅವರು ರಕ್ಷಣಾ ಸಚಿವಾಲಯದ ಸಿಬ್ಬಂದಿ ಮುಖ್ಯಸ್ಥರಾಗಿದ್ದು, ಸೆನೆಟ್‌ನಲ್ಲಿ 68-30 ಮತಗಳೊಂದಿಗೆ ನೇಮಕ ದೃಢಪಟ್ಟಿದೆ. ಇನ್ನು ರಕ್ಷಣಾ ಸಚಿವಾಲಯದ ಹುದ್ದೆಗಳಿಗೂ ಮುನ್ನ ರಾಧಾ ಅವರು ಗೂಗಲ್‌ನಲ್ಲಿ ಭದ್ರತಾ ಸುರಕ್ಷತೆ ವಿಭಾಗ, ಫೇಸ್‌ಬುಕ್‌ನಲ್ಲಿ ನೀತಿ ವಿಶ್ಲೇಷಣೆಯ ಜಾಗತಿಕ ಮುಖ್ಯಸ್ಥರಾಗಿದ್ದರು.

ಅಮೇರಿಕಾದ ರಕ್ಷಣಾ ಖಾತೆಯ ಉಪ ಸಚಿವೆಯಾಗಿ ಭಾರತ ಮೂಲದ ರಾಧಾ ಅಯ್ಯಂಗಾರ್‌ ಆಯ್ಕೆ Read More »

ಪೂಂಚ್ ಭಯೋತ್ಪಾದಕ ದಾಳಿ

ವಾಹನಕ್ಕೆ ಬೆಂಕಿ ಹತ್ತಿಕೊಂಡು ಐವರು ಯೋಧರು ಹುತಾತ್ಮ ಪೂಂಚ್ : ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದು, ಘಟನೆ ಬಳಿಕ ಅಡಗಿ ಕುಳಿತಿರುವ ಉಗ್ರರಿಗಾಗಿ ಸೇನಾಪಡೆಗಳು ಶುಕ್ರವಾರ ಭಾರೀ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.ದಾಳಿ ನಡೆದ ಸ್ಥಳದ ಸುತ್ತಲೂ ಭದ್ರತಾ ಪಡೆಗಳು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಉಗ್ರರ ಪತ್ತೆಗೆ ಡ್ರೋಣ್’ಗಳು, ಸ್ನಿಫ್ಪರ್ ಡಾಗ್ ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಗಡಿ ಜಿಲ್ಲೆಗಳಾದ

ಪೂಂಚ್ ಭಯೋತ್ಪಾದಕ ದಾಳಿ Read More »

ಸನಾದಲ್ಲಿ ಭೀಕರ ಕಾಲ್ತುಳಿತ : 85 ಸಾವು

ದಾನ ಪಡೆಯಲು ಸೇರಿದ ಜನಜಂಗುಳಿಯಿಂದಾಗಿ ನೂಕುನುಗ್ಗಲು ಸನಾ : ಯೆಮೆನ್‌ ದೇಶದ ರಾಜಧಾನಿ ಸನಾದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 85 ಜನರು ಸಾವಿಗೀಡಾಗಿದ್ದಾರೆ. ಶಾಲೆಯಲ್ಲಿ ಏರ್ಪಡಿಸಿದ್ದ ಜಕಾತ್‌ ಕಾರ್ಯಕ್ರಮದಲ್ಲಿ ದಾನ ಪಡೆಯಲು ಸೇರಿದ್ದ ಜನಜಂಗುಳಿಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.85 ಮಂದಿ ಸಾವಿಗೀಡಾಗಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರ್ಘಟನೆ ಅಲ್ಲಿನ ಕಾಲಮಾನ ಪ್ರಕಾರ ಇಂದು ಬೆಳಗ್ಗೆ ಸಂಭವಿಸಿದೆ.

ಸನಾದಲ್ಲಿ ಭೀಕರ ಕಾಲ್ತುಳಿತ : 85 ಸಾವು Read More »

ಅನ್ನಪೂರ್ಣ ಪರ್ವತದಿಂದ 6 ಸಾವಿರ ಕೆಳಗೆ ಬಿದ್ದ ಭಾರತದ ಪರ್ವತಾರೋಹಿ ನಾಪತ್ತೆ

ಹೊಸದಿಲ್ಲಿ : ಭಾರತದ ಪರ್ವತಾರೋಹಿ ಅನುರಾಗ್ ಮಾಲು ನೇಪಾಳದ ಅನ್ನಪೂರ್ಣ ಪರ್ವತದಿಂದ ಬಿದ್ದು ನಾಪತ್ತೆಯಾಗಿದ್ದಾರೆ. ರಾಜಸ್ಥಾನದ ಕಿಶನ್‌ಗಢ್‌ ನಿವಾಸಿ ಅನುರಾಗ್ ಮಾಲು ಅವರು ಮೌಂಟ್ ಅನ್ನಪೂರ್ಣ ಕ್ಯಾಂಪ್ 3ರಿಂದ ಇಳಿಯುತ್ತಿರುವಾಗ ನಾಪತ್ತೆಯಾಗಿದ್ದಾರೆ.ಅನ್ನಪೂರ್ಣ ವಿಶ್ವದ ಹತ್ತನೇ ಅತಿ ಎತ್ತರದ ಪರ್ವತವಾಗಿದ್ದು, ಸಮುದ್ರ ಮಟ್ಟದಿಂದ 8,091 ಮೀಟರ್ ಎತ್ತರದಲ್ಲಿದೆ. ಸುಮಾರು 6 ಸಾವಿರ ಮೀಟರ್ ಕೆಳಗೆ ಬಿದ್ದು ನಾಪತ್ತೆಯಾಗಿದ್ದಾರೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಅಧ್ಯಕ್ಷ ಮಿಂಗ್ಮಾ ಶೆರ್ಪಾ ತಿಳಿಸಿದ್ದಾರೆ.ಮಾಲು ಪರ್ವತಾರೋಹಣಕ್ಕಾಗಿ ಖ್ಯಾತ ಪರ್ವತಾರೋಹಿ ಬಚೇಂದ್ರಿ ಪಾಲ್ ಅವರ ಮಾರ್ಗದರ್ಶನ

ಅನ್ನಪೂರ್ಣ ಪರ್ವತದಿಂದ 6 ಸಾವಿರ ಕೆಳಗೆ ಬಿದ್ದ ಭಾರತದ ಪರ್ವತಾರೋಹಿ ನಾಪತ್ತೆ Read More »

ಸಿಧು ಮೂಸೆವಾಲಾ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲ್‌ನ್ನೇ ಅತೀಕ್, ಅಶ್ರಫ್ ಹತ್ಯೆಗೆ ಬಳಸಲಾಗಿದೆ

ಲಖನೌ : ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಗೆ ಬಳಸಲಾಗಿದ್ದ ಜಿಗಾನಾ ಮೇಡ್ ಪಿಸ್ತೂಲ್ ಅನ್ನೇ ಇಬ್ಬರೂ ಸಹೋದರ ಹತ್ಯೆಗೆ ಬಳಸಲಾಗಿದೆ. ಜಿಗಾನಾ ಮೇಡ್ ಪಿಸ್ತೂಲ್ ಅನ್ನು ಟರ್ಕಿಯಲ್ಲಿ ತಯಾರಿಸಲಾಗುತ್ತದೆ. ಗುಂಡಿನ ದಾಳಿ ನಡೆಸಿದ್ದ ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂಬ ಮೂವರು ದಾಳಿಕೋರರನ್ನು ಬಂಧಿಸಿದ್ದು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ

ಸಿಧು ಮೂಸೆವಾಲಾ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲ್‌ನ್ನೇ ಅತೀಕ್, ಅಶ್ರಫ್ ಹತ್ಯೆಗೆ ಬಳಸಲಾಗಿದೆ Read More »

ಪೊಲೀಸ್, ಪತ್ರಕರ್ತರ ಎದುರೇ ಕುಖ್ಯಾತ ಪಾತಕಿ, ಬಿಎಸ್‌ಪಿ ನಾಯಕ ಅತೀಕ್‌ ಅಹ್ಮದ್‌ ಹತ್ಯೆ

ಮಗ ಎನ್‌ಕೌಂಟರ್‌ಗೆ ಬಲಿಯಾದ ಎರಡೇ ದಿನದಲ್ಲಿ ತಂದೆಯ ಹತ್ಯೆ ಲಖನೌ : ನೂರಕ್ಕೂ ಅಧಿಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಉತ್ತರ ಪ್ರದೇಶದ ದರೋಡೆಕೋರ ಅತೀಕ್ ಅಹ್ಮದ್ ಮತ್ತು ಅವನ ಸಹೋದರ ಅಶ್ರಫ್ ಅಹ್ಮದ್‌ನನ್ನು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯುತ್ತಿದ್ದಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಬಂದ ಹಂತಕರು ಅಹ್ಮದ್‌ ಸಹೋದರರನ್ನು ಪೊಲೀಸರು ಮತ್ತು ಪತ್ರಕರ್ತರ ಎದುರೇ ಅತಿ ಸಮೀಪದಿಂದ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿ ಕೊಂದಿದ್ದಾರೆ. ಇಡೀ ಹತ್ಯೆ ಕೃತ್ಯ

ಪೊಲೀಸ್, ಪತ್ರಕರ್ತರ ಎದುರೇ ಕುಖ್ಯಾತ ಪಾತಕಿ, ಬಿಎಸ್‌ಪಿ ನಾಯಕ ಅತೀಕ್‌ ಅಹ್ಮದ್‌ ಹತ್ಯೆ Read More »

ಉಕ್ರೇನ್‌ಗೆ ಹೆಚ್ಚುವರಿ ನೆರವು ನೀಡುವಂತೆ ಕೋರಿ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಪ್ರಧಾನಿ ಮೋದಿಗೆ ಪತ್ರ

ದೆಹಲಿ : ರಷ್ಯಾ- ಉಕ್ರೇನ್ ಕದನದಲ್ಲಿ ಮಧ್ಯಪ್ರವೇಶ ಮಾಡುವಂತೆ ಹಾಗೂ ಯುದ್ಧದಿಂದ ತತ್ತರಿಸಿರುವ ಉಕ್ರೇನ್‌ಗೆ ಹೆಚ್ಚುವರಿ ಮಾನವೀಯ ನೆರವು ನೀಡುವಂತೆ ಕೋರಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಉಕ್ರೇನ್‌ ಉಪ ವಿದೇಶಾಂಗ ಸಚಿವೆ ಎಮಿನೆ ಜಪರೊವಾ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಖಾತೆ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಈ ಪತ್ರವನ್ನು ಹಸ್ತಾಂತರಿಸಿದ್ದಾರೆ. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ

ಉಕ್ರೇನ್‌ಗೆ ಹೆಚ್ಚುವರಿ ನೆರವು ನೀಡುವಂತೆ ಕೋರಿ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಪ್ರಧಾನಿ ಮೋದಿಗೆ ಪತ್ರ Read More »

error: Content is protected !!
Scroll to Top