ವಿದೇಶ

ಸುನಿತಾ ವಿಲ್ಲಿಯಮ್ಸ್‌ ಪುನರಾಗಮನ : ಜಗತ್ತಿನಾದ್ಯಂತ ಮುಗಿಲು ಮುಟ್ಟಿದ ಹರ್ಷೋದ್ಗಾರ

45 ದಿನಗಳ ಚಿಕಿತ್ಸೆ ಬಳಿಕ ಹೊರ ಜಗತ್ತಿಗೆ ಕಾಲಿಡಲಿದ್ದಾರೆ ಗಗನಯಾತ್ರಿಗಳು ನ್ಯೂಯಾರ್ಕ್‌: ಅಂತರಿಕ್ಷದಲ್ಲಿ 9 ತಿಂಗಳು ಕಳೆದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ವಾಪಸು ಕರೆತರುವ ಕಾರ್ಯಾಚರಣೆ ಕೊನೆಗೂ ಯಶ್ವಿಯಾಗಿ ಮುಗಿದಿದೆ. ನಾಸಾದ ಗಗನಯಾನಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಅಲೆಕ್ಸಾಂಡರ್ ಗೊರ್ಶನೋವ್ ಜೊತೆಗೂಡಿ ಸುನಿತಾ ಮತ್ತು ವಿಲ್ಮೋರ್ ಭಾರತೀಯ ಕಾಲಮಾನದ ಪ್ರಕಾರ ಇಂದು ನಸುಕಿನ ಹೊತ್ತು ಯಶಸ್ವಿಯಾಗಿ ಭೂಮಿಗೆ ಬಂದಿದ್ದಾರೆ.ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸರಿಯಾಗಿ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ […]

ಸುನಿತಾ ವಿಲ್ಲಿಯಮ್ಸ್‌ ಪುನರಾಗಮನ : ಜಗತ್ತಿನಾದ್ಯಂತ ಮುಗಿಲು ಮುಟ್ಟಿದ ಹರ್ಷೋದ್ಗಾರ Read More »

9 ತಿಂಗಳ ಅಂತರಿಕ್ಷ ವಾಸದ ಬಳಿಕ ಭೂಮಿ ತಾಯಿಯ ಮಡಿಲಿಗೆ ಸುನಿತಾ ವಿಲ್ಲಿಯಮ್ಸ್‌

ಗಗನಯಾತ್ರಿಗಳನ್ನು ಕರೆತರುವ ಮಿಷನ್‌ ಯಶಸ್ವಿ ಸಂಪನ್ನ ಫ್ಲೋರಿಡಾ: ಭಾರತೀಯ ಸಂಜಾತೆ ಗಗನಯಾತ್ರಿ ಸುನಿತಾ ವಿಲ್ಲಿಯಮ್ಸ್‌ ಬರೋಬ್ಬರಿ 9 ತಿಂಗಳ ಕಾಲ ಅಂತರಿಕ್ಷ ವಾಸ ಮುಗಿಸಿ ಇಂದು ಮುಂಜಾನೆ ವೇಳೆ ಭೂಸ್ಪರ್ಶ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನ ಬಾಕಿಯಾಗಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುವ ಮಿಷನ್‌ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ. ಇಬ್ಬರನ್ನು ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು

9 ತಿಂಗಳ ಅಂತರಿಕ್ಷ ವಾಸದ ಬಳಿಕ ಭೂಮಿ ತಾಯಿಯ ಮಡಿಲಿಗೆ ಸುನಿತಾ ವಿಲ್ಲಿಯಮ್ಸ್‌ Read More »

ಸುಳ್ಯ ಮೂಲದ ಯುವಕ ಬ್ಯಾಂಕಾಕ್‍ ನಲ್ಲಿ ಮೃತ್ಯು

ಈಜಿಪ್ಟ್ ದೇಶದಲ್ಲಿ ಶಿಪ್‌ ಒಂದಕ್ಕೆ ಕೆಲಸಕ್ಕೆ ನೇಮಕಗೊಂಡಿದ್ದ ಸುಳ್ಯ ಮೂಲದ ಯುವಕ ಬ್ಯಾಂಕಾಕ್ ನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಸುಳ್ಯದ ಪಂಬೆತ್ತಾಡಿಯ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಲಿಖಿನ್‍ (26) ಎಂದು ಗುರುತಿಸಲಾಗಿದೆ. ಈಜಿಪ್ಟ್ ನಲ್ಲಿ ಶಿಪ್‍ ನಲ್ಲಿ ಉದ್ಯೋಗಕ್ಕೆ ನೇಮಕ ಗೊಂಡು ಅಲ್ಲಿಗೆ ತೆರಳಲು ವಿಮಾನ ಪ್ರಯಾಣಕ್ಕಾಗಿ ಬ್ಯಾಂಕಾಕ್‌ ನಲ್ಲಿ ರೂಮ್ ಮಾಡಿ ತಂಗಿದ್ದರು. ಅಲ್ಲಿ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಾಯಿ, ಸಹೋದರನನ್ನು

ಸುಳ್ಯ ಮೂಲದ ಯುವಕ ಬ್ಯಾಂಕಾಕ್‍ ನಲ್ಲಿ ಮೃತ್ಯು Read More »

ಭಯೋತ್ಪಾದಕರ ದಾಳಿಗೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು

ಒಂದೇ ವಾರದಲ್ಲಿ 2500 ಸೈನಿಕರ ರಾಜೀನಾಮೆ ಇಸ್ಲಾಮಾಬಾದ್‌: ಬಲೂಚಿಸ್ಥಾನ ಪ್ರತ್ಯೇಕವಾದಿ ಹೋರಾಟಗಾರರು ಇತ್ತೀಚೆಗೆ ಬೆನ್ನುಬೆನ್ನಿಗೆ ನಡೆಸಿದ ಎರಡು ದಾಳಿಗಳಿಂದ ಕಂಗೆಟ್ಟಿರುವ ಪಾಕಿಸ್ಥಾನದ ಸೈನಿಕರು ಈಗ ಸೈನ್ಯವನ್ನೇ ಬಿಟ್ಟು ಹೋಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಂಡುಕೋರರು ಒಂದಿಡೀ ರೈಲನ್ನೇ ಅಪಹರಿಸಿ ಒತ್ತೆಸೆರೆಯಲ್ಲಿಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಪ್ರಯಾಣಿಕರ ಜೊತೆ ಅನೇಕ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಎರಡೇ ದಿನದಲ್ಲಿ ಸೇನೆಯ ವಾಹನಗಳ ಮೇಲೆ ದಾಳಿ ಮಾಡಿ 90 ಯೋಧರನ್ನು ಕೊಂದಿದ್ದರು. ಈ ಎರಡು ಘಟನೆಗಳು ಪಾಕಿಸ್ಥಾನ ಸೇನೆಯ ಜಂಘಾಬಲವನ್ನು

ಭಯೋತ್ಪಾದಕರ ದಾಳಿಗೆ ಹೆದರಿ ಸೇನೆ ತೊರೆಯುತ್ತಿರುವ ಪಾಕ್‌ ಯೋಧರು Read More »

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು

ಭಾರತದ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಭೂಸ್ಪರ್ಶ ನ್ಯೂಯಾರ್ಕ್‌: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರ ಭೂಮಿಗೆ ಮರಳುವ ಪ್ರಯಾಣ ಶುರುವಾಗಿದ್ದು, ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ. ಅಮೆರಿಕ ಕಾಲಮಾನ ಪ್ರಕಾರ ಮಂಗಳವಾರ ಸಂಜೆ ಸುನೀತಾ ವಿಲ್ಲಿಯಮ್ಸ್‌ ಹೊತ್ತ ಗಗನನೌಕೆ ಭೂಸ್ಪರ್ಶ ಮಾಡಲಿದೆ. ಈ ಇಬ್ಬರು ಗಗನಯಾತ್ರಿಗಳು ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದು, ಈ ಅಪರೂಪದ ಕ್ಷಣಗಳನ್ನು ನಾಸಾ ನೇರಪ್ರಸಾರ

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು Read More »

ನಾಳೆಯೇ ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಮರಳುವ ಸಾಧ್ಯತೆ

9 ತಿಂಗಳ ಅಂತರಿಕ್ಷ ವಾಸಕ್ಕೆ ಕೊನೆಗೂ ಮುಕ್ತಿ ಸನ್ನಿಹಿತ ನ್ಯೂಯಾರ್ಕ್‌ : ಒಂಬತ್ತು ತಿಂಗಳಿಂದ ಅಂತರಿಕ್ಷದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲ್ಲಿಯಮ್ಸ್‌ ಅವರನ್ನು ಭೂಮಿಗೆ ಕರೆತರಲು ಕ್ಷಣಗಣನೆ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಂಗಳವಾರ ಸಂಜೆಗಾಗುವಾಗ ಸುನೀತಾ ವಿಲ್ಲಿಯಮ್ಸ್‌ ಇರುವ ಗಗನನೌಕೆ ಭೂಮಿ ಸ್ಪರ್ಶ ಮಾಡಲಿದೆ. ಆ ಮೂಲಕ ಸುದೀರ್ಘ 9 ತಿಂಗಳ ಅಂತರಿಕ್ಷ ವಾಸ ಅಂತ್ಯಗೊಳ್ಳಲಿದೆ. ಆರಂಭದಲ್ಲಿ ಬುಧವಾರ ಅಥವಾ ಗುರುವಾರ ಇಬ್ಬರು ಗಗನಯಾತ್ರಿಗಳನ್ನು ವಾಪಸ್‌ ಕರೆತರಲು ಯೋಜನೆ ರಚಿಸಲಾಗಿತ್ತು. ಆದರೆ ಈ

ನಾಳೆಯೇ ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಮರಳುವ ಸಾಧ್ಯತೆ Read More »

ಕಾಫಿ ಮೈಮೇಲೆ ಚೆಲ್ಲಿದ್ದಕ್ಕೆ 415 ಕೋ. ರೂ. ದಂಡ!

ಸ್ಟಾರ್‌ಬಕ್ಸ್‌ ಕಂಪನಿ ವಿರುದ್ಧ ತೀರ್ಪು ನೀಡಿದ ನ್ಯಾಯಾಲಯ ಕ್ಯಾಲಿಫೋರ್ನಿಯಾ : ಕಾಫಿ ಮೈಮೇಲೆ ಚೆಲ್ಲಿದ್ದಕ್ಕೆ ಸ್ಟಾರ್‌ಬಕ್ಸ್‌ ಭಾರಿ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ಸ್ಟಾರ್‌ಬಕ್ಸ್‌ನ ಬಿಸಿ ಕಾಫಿ ತೊಡೆ ಭಾಗದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಗೆ 50 ಮಿಲಿಯನ್‌ ಡಾಲರ್‌ ಅಂದರೆ ಸುಮಾರು 415 ಕೋಟಿ ರೂ. ಪರಿಹಾರ ನೀಡಬೇಕೆಂದು ಸ್ಟಾರ್‌ಬಕ್ಸ್‌ಗೆ ಕೋರ್ಟ್ ಆದೇಶ ನೀಡಿದೆ. ಕಾಫಿ ಮುಚ್ಚಳವನ್ನು ಸರಿಯಾಗಿ ಮುಚ್ಚದೆ ಕೊಟ್ಟಿದ್ದರಿಂದ ಬಿಸಿ ಕಾಫಿ ತೊಡೆ ಮೇಲೆ ಬಿದ್ದಿದ್ದು, ಪರಿಣಾಮ ಆ ವ್ಯಕ್ತಿಯ ಜನನಾಂಗಕ್ಕೂ ಗಾಯಗಳಾಗಿದ್ದವು.

ಕಾಫಿ ಮೈಮೇಲೆ ಚೆಲ್ಲಿದ್ದಕ್ಕೆ 415 ಕೋ. ರೂ. ದಂಡ! Read More »

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ

ರಾತ್ರಿ ಅಜ್ಞಾತ ವ್ಯಕ್ತಿಗಳ ಗುಂಡಿಗೆ ಬಲಿಯಾದ ಉಗ್ರ ಸಂಘಟನೆಯ ಕಮಾಂಡರ್‌ ಇಸ್ಲಾಮಾಬಾದ್‌ : ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌ ಇ ತಯ್ಯಬದ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಲಿಸ್ಟ್‌ನಲ್ಲಿದ್ದ ಉಗ್ರನೊಬ್ಬನನ್ನು ಅಜ್ಞಾತ ವ್ಯಕ್ತಿಗಳು ನಿನ್ನೆ ರಾತ್ರಿ ಸಾಯಿಸಿದ್ದಾರೆ. ಕೊಲೆಯಾಗಿರುವ ಅಬ್ದುಲ್‌ ಖತಲ್‌ ಜಮ್ಮು-ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ. ಭಾರತದ ಪಾಲಿಗೆ ಅವನು ತಲೆನೋವಾಗಿದ್ದ. ಶನಿವಾರ ರಾತ್ರಿ ಅವನನ್ನು ಅಜ್ಞಾತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ವರದಿಯಾಗಿದೆ.ಲಷ್ಕರ್‌ನ ಸ್ಥಾಪಕ ಹಾಗೂ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ Read More »

ಗಗನ ಯಾತ್ರಿ ಸುನೀತಾ ವಿಲ್ಲಿಯಮ್ಸ್‌ರನ್ನು ಭೂಮಿಗೆ ಕರೆತರುವ ಕಾರ್ಯಾಚರಣೆ ಶುರು

ಒಂಬತ್ತು ತಿಂಗಳಿಂದ ಅಂತರಿಕ್ಷದಲ್ಲಿ ಬಾಕಿಯಾಗಿರುವ ಭಾರತೀಯ ಮೂಲದ ಖಗೋಲ ವಿಜ್ಞಾನಿ ವಾಷಿಂಗ್ಟನ್: ಗಗನಯಾತ್ರಿ ಸುನೀತಾ ವಿಲ್ಲಿಯಮ್ಸ್‌ ಅವರ ಅಂತರಿಕ್ಷ ವಾಸಕ್ಕೆ ಕೊನೆಗೂ ಮುಕ್ತಿ ಸಿಗುವ ಗಳಿಗೆ ಸನ್ನಿಹಿತವಾಗಿದೆ. ತಾಂತ್ರಿಕ ಅಡಚಣೆಗಳಿಂದಾಗಿ ಸುಮಾರು 9 ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಅವರನ್ನು ಭೂಮಿಗೆ ವಾಪಸ್ ಕರೆತರುವ ಕಾರ್ಯಾಚರಣೆಯನ್ನು ನಾಸಾ ಮರಳಿ ಪ್ರಾರಂಭಿಸಿದೆ.ಅಮೆರಿಕ ಬ್ಯಾಹ್ಯಾಕಾಶ ಸಂಸ್ಥೆ (ನಾಸಾ) ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್

ಗಗನ ಯಾತ್ರಿ ಸುನೀತಾ ವಿಲ್ಲಿಯಮ್ಸ್‌ರನ್ನು ಭೂಮಿಗೆ ಕರೆತರುವ ಕಾರ್ಯಾಚರಣೆ ಶುರು Read More »

ಹೈಜಾಕ್‌ ಮಾಡಿದ ರೈಲಿನಲ್ಲಿದ್ದ 214 ಪ್ರಯಾಣಿಕರ ಹತ್ಯೆ : ಬಂಡುಕೋರರ ಹೇಳಿಕೆ

ಪಾಕ್‌ ಸೇನೆ ಸುಳ್ಳು ಹೇಳಿ ಜಗತ್ತಿನ ದಿಕ್ಕುತಪ್ಪಿಸಿದೆ ಎಂದು ಆರೋಪ ಇಸ್ಲಾಮಾಬಾದ್: ಜಾಫರ್‌ ಎಕ್ಸ್‌ಪ್ರೆಸ್‌ ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲ 214 ಪ್ರಯಾಣಿಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚ್‌ ಲಿಬರೇಶನ್‌ ಆರ್ಮಿ (ಬಿಎಲ್‌ಎ) ಹೇಳಿಕೊಂಡಿದೆ.ನಮ್ಮ ಹೋರಾಟಗಾರರಿಂದ ಒತ್ತೆಯಾಳುಗಳಾಗಿದ್ದ ಎಲ್ಲ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಪಾಕಿಸ್ಥಾನಿ ಭದ್ರತಾ ಪಡೆಗಳೊಂದಿಗೆ ಇನ್ನೂ ಎನ್‌ಕೌಂಟರ್ ನಡೆಯುತ್ತಿದೆ ಎಂದು ತಿಳಿಸಿದೆ. ಬಿಎಲ್‌ಎ ಪ್ರತ್ಯೇಕತಾವಾದಿಗಳನ್ನು ಸದೆಬಡಿದು ಜನರ ರಕ್ಷಣೆ ಮಾಡಿರುವುದಾಗಿ ಪಾಕಿಸ್ಥಾನ ಹೇಳಿಕೆ ನೀಡಿತ್ತು. ಆದರೆ, ಈ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆಯನ್ನು ಬಿಎಲ್‌ಎ ನೀಡಿದೆ.

ಹೈಜಾಕ್‌ ಮಾಡಿದ ರೈಲಿನಲ್ಲಿದ್ದ 214 ಪ್ರಯಾಣಿಕರ ಹತ್ಯೆ : ಬಂಡುಕೋರರ ಹೇಳಿಕೆ Read More »

error: Content is protected !!
Scroll to Top