ಆ.25 : ಬೀರ್ನಹಿತ್ಲುವಿನಲ್ಲಿ ‘ಕೆಸರ್ಡ್ ಒಂಜಿ ದಿನ’ ವಿವಿಧ ಗ್ರಾಮೀಣ ಕ್ರೀಡಾಕೂಟ | ಗ್ರಾಮ ದೈವಸ್ಥಾನ ಪುಳುವಾರು, ದಾರಂದಕುಕ್ಕು ವೀರ ಮಾರುತಿ ಫ್ರೆಂಡ್ಸ್ ಜಂಟಿ ಆಶ್ರಯ
ಪುತ್ತೂರು: ಗ್ರಾಮ ದೈವಸ್ಥಾನ ಪುಳುವಾರು ಹಾಗೂ ದಾರಂದಕುಕ್ಕು ವೀರ ಮಾರುತಿ ಫ್ರೆಂಡ್ಸ್ ಜಂಟಿ ಆಶ್ರಯದಲ್ಲಿ “ಕೆಸರ್ಡ್ ಒಂಜಿ ದಿನ” ವಿವಿಧ ಗ್ರಾಮೀಣ ಕ್ರೀಡಾಕೂಟ ಆ.25 ಭಾನುವಾರ ಬೀರ್ನಹಿತ್ತಲುನಲ್ಲಿ ನಡೆಯಲಿದೆ. ಬೆಳಿಗ್ಗೆ 8.30 ಕ್ಕೆ ಪುಳುವಾರು ಗ್ರಾಮ ದೈವಸ್ಥಾನದ ಆಡಳಿತ ಮೊಕ್ತೇಸರ ಸುಭಾಶ್ಚಂದ್ರ ರೈ ಕುಂಬುರ್ಗಗುತ್ತು ಸಮಾರಂಭ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪಾಳ್ಗೊಳ್ಳಲಿದ್ದಾರೆ. […]