ಮಾ.5 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ “ನರ್ತನಾವರ್ತನ-2023” | ರೆಂಜಿತ್ ಹಾಗೂ ವಿಜ್ಞಾ ಚೆನ್ನೈ ಅವರಿಂದ ಭರತನಾಟ್ಯ ಪ್ರಸ್ತುತಿ
ಪುತ್ತೂರು : ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ “ನರ್ತನಾವರ್ತನ-2023” ಮಾ.5 ಭಾನುವಾರ ಸಂಜೆ 5.30 ಕ್ಕೆ ನಗರದ ಜೈನ ಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ನೃತ್ಯಗುರು ವಿದುಷಿ ಪ್ರೀತಿಕಲಾ ತಿಳಿಸಿದ್ದಾರೆ. ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆರು ವರ್ಷಗಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು, ಈ ಬಾರಿ 7ನೇ ವರ್ಷದ ಕಾರ್ಯಕ್ರಮವಾಗಿದೆ. ಈ ಬಾರಿ ನರ್ತನಾವರ್ತನದಲ್ಲಿ ಭರತನಾಟ್ಯ ಪ್ರಸ್ತುತಿಯನ್ನು ರೆಂಜಿತ್ ಮತ್ತು ವಿಜ್ಞಾ ಚೆನ್ನೈ ಮಾಡಲಿದ್ದಾರೆ. ಅವರಿಗೆ ಹಿಮ್ಮೇಳದಲ್ಲಿ ಕೆ.ಎಸ್.ಬಾಲಕೃಷ್ಣನ್ ನಟುವಾಂಗದಲ್ಲಿ, ಬಿನು […]










