ಕವಿ ನಾರಾಯಣ ಕುಂಬ್ರ ಅವರ ‘ಸ್ವಪ್ನಗಳ ತೇರು’ ಕೃತಿ ಲೋಕಾರ್ಪಣೆ
ಪುತ್ತೂರು: ಬರಹಗಾರನ ಅನುಭವ ಹೆಚ್ಚಿದಂತೆ ಪ್ರೌಢಿಮೆ ಕಾಣಿಸಬೇಕು. ಹಾಗಾದಾಗ ಬರಹಕ್ಕೂ, ಬರಹಗಾರನಿಗೂ ಗೌರವ ಪ್ರಾಪ್ತಿಸುತ್ತದೆ. ಆರಂಭದ ದಿನಗಳ ಬಾಲಿಶ ಬರಹಗಳಿಂದ ತೊಡಗಿದಂತೆ ನಿರಂತರ ಬರೆದಾಗ ಬರಹ ಪಕ್ವವಾಗುತ್ತಾ ಸಾಗುತ್ತದೆ. ಭಾಷಾಶುದ್ಧಿ ಬರೆಯುವವರಿಗೆ ಅತ್ಯಂತ ಮುಖ್ಯ. ಅದನ್ನು ಒಲಿಸಿಕೊಳ್ಳುವುದು ಒಂದು ಕಲೆ. ಬರಹಗಳು ಹೊಸ ಧ್ವನಿ, ಹೊಸತನಗಳನ್ನು ಹೊಮ್ಮಿಸಬೇಕು ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಹೇಳಿದರು. ಅವರು ನಗರದ ಮಾತೃಛಾಯಾ ಸಭಾಭವನದಲ್ಲಿ ರೂಪಶ್ರೀ ಪ್ರಕಾಶನ ಹಾಗೂ ಪುತ್ತೂರಿನ ಚಿಗುರೆಲೆ ಸಾಹಿತ್ಯ ಬಳಗದ ಆಶ್ರಯದಲ್ಲಿ ಭಾನುವಾರ ನಡೆದ ಕವಿ […]
ಕವಿ ನಾರಾಯಣ ಕುಂಬ್ರ ಅವರ ‘ಸ್ವಪ್ನಗಳ ತೇರು’ ಕೃತಿ ಲೋಕಾರ್ಪಣೆ Read More »









