KGF ಸ್ಟಾರ್ ಯಶ್ ಹೊಸ ಸಿನಿಮಾ! | ನಿಗದಿಯಾಗಿದೆ ಸಿನಿಮಾ ಹೆಸರು ಘೋಷಣೆಯ ದಿನಾಂಕ | ಐತಿಹಾಸಿಕ ಚಿತ್ರವೊಂದಕ್ಕೂ ಕಮಿಟ್ ಆಗಿದ್ದಾರೆಯೇ ಯಶ್?
ಬೆಂಗಳೂರು: ಕೆಜಿಎಫ್ ಸಿನಿಮಾದ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಸ್ಯಾಂಡಲ್’ವುಡ್ ಸ್ಟಾರ್ ನಟ ಯಶ್ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಗಣೇಶೋತ್ಸವದಂದು ಯಶ್ ಅವರ ಹೊಸ ಸಿನಿಮಾದ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಮಲಯಾಳಂ ಫಿಲ್ಮ್ ಮೇಕರ್ ಗೀತು ಮೋಹನ್’ದಾಸ್ ಹಾಗೂ ನಟ ಯಶ್ ಅವರ ಸಂಯೋಜನೆ ಸಿನಿಮಾದ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಮುಂದಿನ ವರ್ಷ ಅಥವಾ ಡಿಸೆಂಬರ್ ವೇಳೆಗೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಓಡಾಡುತ್ತಿವೆ. […]










